logo
ಕನ್ನಡ ಸುದ್ದಿ  /  ಕರ್ನಾಟಕ  /  ಝೀರೋ ಬ್ಯಾಕ್ಟೀರಿಯಲ್‌ ಸಂಸ್ಕರಿಸಿದ ನೀರು ಉತ್ಪಾದನೆಯಲ್ಲಿ ಪ್ರಗತಿ, ಐಐಎಸ್‌ಸಿ ಸಹಭಾಗಿತ್ವದಲ್ಲಿ ಬೆಂಗಳೂರು ಜಲಮಂಡಳಿ ಕ್ರಾಂತಿ

ಝೀರೋ ಬ್ಯಾಕ್ಟೀರಿಯಲ್‌ ಸಂಸ್ಕರಿಸಿದ ನೀರು ಉತ್ಪಾದನೆಯಲ್ಲಿ ಪ್ರಗತಿ, ಐಐಎಸ್‌ಸಿ ಸಹಭಾಗಿತ್ವದಲ್ಲಿ ಬೆಂಗಳೂರು ಜಲಮಂಡಳಿ ಕ್ರಾಂತಿ

Umesh Kumar S HT Kannada

May 01, 2024 12:00 PM IST

ಬೆಂಗಳೂರಿನಲ್ಲಿ ಜಲಮಂಡಳಿಯ ಹಳೆಯ ಘಟಕದಲ್ಲಿ ಝೀರೋ ಬ್ಯಾಕ್ಟೀರಿಯಲ್‌ ಸಂಸ್ಕರಿಸಿದ ನೀರು ಉತ್ಪಾದನೆಯಲ್ಲಿ ಪ್ರಗತಿ ಉಂಟಾಗಿದ್ದು, ಐಐಎಸ್‌ಸಿ ಸಹಭಾಗಿತ್ವದಲ್ಲಿ ಬೆಂಗಳೂರು ಜಲಮಂಡಳಿ ಕ್ರಾಂತಿ ಮಾಡಿದೆ.

  • ಝೀರೋ ಬ್ಯಾಕ್ಟೀರಿಯಲ್‌ ಸಂಸ್ಕರಿಸಿದ ನೀರು ಉತ್ಪಾದನೆಯಲ್ಲಿ ಪ್ರಗತಿಯಾಗಿದ್ದು, ಐಐಎಸ್‌ಸಿ ಸಹಭಾಗಿತ್ವದಲ್ಲಿ ಬೆಂಗಳೂರು ಜಲಮಂಡಳಿ ಕ್ರಾಂತಿ ಮಾಡಿದೆ. ಈ ನೀರನ್ನು ಕುಡಿಯುವುದಕ್ಕೆ ಹೊರತುಪಡಿಸಿ ಉಳಿದೆಲ್ಲ ಕೆಲಸಗಳಿಗೆ ಬಳಸಲು ಯೋಗ್ಯ ಎಂದು ಹೇಳಲಾಗುತ್ತಿದೆ.(ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರಿನಲ್ಲಿ ಜಲಮಂಡಳಿಯ ಹಳೆಯ ಘಟಕದಲ್ಲಿ ಝೀರೋ ಬ್ಯಾಕ್ಟೀರಿಯಲ್‌ ಸಂಸ್ಕರಿಸಿದ ನೀರು ಉತ್ಪಾದನೆಯಲ್ಲಿ ಪ್ರಗತಿ ಉಂಟಾಗಿದ್ದು, ಐಐಎಸ್‌ಸಿ ಸಹಭಾಗಿತ್ವದಲ್ಲಿ ಬೆಂಗಳೂರು ಜಲಮಂಡಳಿ ಕ್ರಾಂತಿ ಮಾಡಿದೆ.
ಬೆಂಗಳೂರಿನಲ್ಲಿ ಜಲಮಂಡಳಿಯ ಹಳೆಯ ಘಟಕದಲ್ಲಿ ಝೀರೋ ಬ್ಯಾಕ್ಟೀರಿಯಲ್‌ ಸಂಸ್ಕರಿಸಿದ ನೀರು ಉತ್ಪಾದನೆಯಲ್ಲಿ ಪ್ರಗತಿ ಉಂಟಾಗಿದ್ದು, ಐಐಎಸ್‌ಸಿ ಸಹಭಾಗಿತ್ವದಲ್ಲಿ ಬೆಂಗಳೂರು ಜಲಮಂಡಳಿ ಕ್ರಾಂತಿ ಮಾಡಿದೆ. (BWSSB)

ಬೆಂಗಳೂರು: ದೇಶಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತ್ಯಾಜ್ಯ ನೀರನ್ನು ಶುದ್ದೀಕರಣ ಮಾಡುವ ಮೂಲಕ ಝೀರೋ ಬ್ಯಾಕ್ಟೀರಿಯಲ್‌ ಸಂಸ್ಕರಿಸಿದ ನೀರು ಉತ್ಪಾದಿಸುವಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಯಶಸ್ವಿಯಾಗಿದೆ. ಕೇವಲ 2 ವಾರಗಳ ಸಮಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಗಳ ಸಹಯೋಗದಲ್ಲಿ ಝೀರೋ ಬ್ಯಾಕ್ಟೀರಿಯಲ್‌ ಗುಣಮಟ್ಟದ ಸಂಸ್ಕರಣೆಯ ಸಾಮರ್ಥ್ಯದ ದೇಶೀಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಜಲ ಮಂಡಳಿ ಪ್ರಗತಿ ಸಾಧಿಸಿದೆ.

ಟ್ರೆಂಡಿಂಗ್​ ಸುದ್ದಿ

Hubli News: ಹುಬ್ಬಳ್ಳಿ ಅಂಜಲಿ ಅಂಬಿಗೇರ ಪ್ರಕರಣ, ಎಸಿಪಿ ಸಸ್ಪೆಂಡ್‌, ನೂತನ ಡಿಸಿಪಿ ನೇಮಕ

Mangalore News: ಪದ್ಮಶ್ರೀ ಹರೇಕಳ ಹಾಜಬ್ಬರ ಶಾಲೆಯಲ್ಲಿ ದುರಂತ, ಮಳೆಗೆ ಶಿಥಿಲಗೊಂಡ ಆವರಣಗೋಡೆ, ಗೇಟು ಕುಸಿದು ಬಾಲಕಿ ದುರ್ಮರಣ

Puc Exam-2 Results: ಕರ್ನಾಟಕ ದ್ವಿತೀಯ ಪರೀಕ್ಷೆ- 2 ಫಲಿತಾಂಶ ಮಂಗಳವಾರ ಪ್ರಕಟ, ನೋಡೋದು ಹೇಗೆ

Hubli News: ಹುಬ್ಬಳ್ಳಿ ಅಂಜಲಿ‌ ಅಂಬಿಗೇರ ಹತ್ಯೆ ಪ್ರಕರಣ ತನಿಖೆ ಸಿಐಡಿಗೆ, ತಪ್ಪಿತಸ್ಥ ಪೊಲೀಸರ ವಿರುದ್ದ ಕಠಿಣ ಕ್ರಮ: ಗೃಹ ಸಚಿವ ಪರಮೇಶ್ವರ

ಈ ಮೂಲಕ ಪರಿಸರ ಸ್ನೇಹಿ ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಯಲ್ಲಿ ಬೆಂಗಳೂರು ಜಲಮಂಡಳಿ ಇಡೀ ದೇಶದಲ್ಲೇ ಮುಂಚೂಣಿಯಲ್ಲಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ವಿಜ್ಞಾನಿಗಳ ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ಬೆಂಗಳೂರು ಜಲಮಂಡಳಿ ಇಂಜಿನಿಯರ್‌ಗಳು ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ದೇಶೀಯ ತಂತ್ರಜ್ಞಾನವನ್ನು ರೂಪಿಸಿದ್ದಾರೆ. ಜಲಮಂಡಳಿಯ ವ್ಯಾಪ್ತಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ತ್ಯಾಜ್ಯ ನೀರು ನಿರ್ವಹಣಾ ಘಟಕಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಝೀರೋ ಬ್ಯಾಕ್ಟೀರಿಯಲ್‌ ಸಂಸ್ಕರಿಸಿದ ನೀರನ್ನು ಉತ್ಪಾದಿಸಲಾಗುತ್ತಿದೆ.

ಝೀರೋ ಬ್ಯಾಕ್ಟೀರಿಯಲ್‌ ನೀರು ಹೇಗಿರುತ್ತದೆ?

ಝೀರೋ ಬ್ಯಾಕ್ಟೀರಿಯಲ್‌ ಸಂಸ್ಕರಿಸಿದ ನೀರಿನಲ್ಲಿ ಯಾವುದೇ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುವುದಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡ ಪ್ರಕಾರ, ಅನ್ಯ ತಂತ್ರಜ್ಞಾನದ ಮೂಲಕ ಸಂಸ್ಕರಣೆಯಾಗುವ ನೀರಿನಲ್ಲಿ ಕೆಲವು ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳು ಇರುತ್ತವೆ. ಆದರೆ, ಝೀರೋ ಬ್ಯಾಕ್ಟೀರಿಯಲ್‌ ನೀರಿನಲ್ಲಿ ಯಾವುದೇ ಬ್ಯಾಕ್ಟೀರಿಯಾಗಳು ಇರುವುದಿಲ್ಲ. ಹೀಗಾಗಿ ಇದನ್ನು ಕುಡಿಯುವುದಕ್ಕೆ ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಯಾವುದೇ ಹಿಂಜರಿಕೆ ಇಲ್ಲದೆ ಬಳಸಬಹುದು ಎಂದು ಜಲ ಮಂಡಳಿ ತಿಳಿಸಿದೆ.

ಕೇವಲ ಎರಡು ವಾರಗಳ ಹಿಂದೆ ಪ್ರಾರಂಭಿಸಲಾದ ಈ ಯೋಜನೆಯ ಮೂಲಕ ಇಂದು ಪ್ರತಿ ದಿನ ಸುಮಾರು 1 ಕೋಟಿ ಲೀಟರ್‌ ನಷ್ಟು ಝೀರೋ ಬ್ಯಾಕ್ಟೀರಿಯಲ್‌ ಸಂಸ್ಕರಿಸಿದ ನೀರು ಉತ್ಪಾದನೆಯಾಗುತ್ತಿದೆ. ಬೆಂಗಳೂರಿನ ಅಗರ, ಕೆಸಿ ವ್ಯಾಲಿ ಮತ್ತು ಬೆಳ್ಳಂದೂರು ಎಸ್‌ಟಿಪಿಗಳಲ್ಲಿ ಈ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬಳಸಲಾಗುತ್ತಿದೆ.

ಝೀರೋ ಬ್ಯಾಕ್ಟೀರಿಯಲ್‌ ನೀರಿನ ಗುಣಮಟ್ಟ ಕುರಿತು ಜಲ ಮಂಡಳಿ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಧೃಢೀಕರಣ ಪತ್ರವನ್ನು ಪಡೆದುಕೊಂಡಿದೆ. ಐಐಎಸ್‌ ಸಿ ವಿಜ್ಞಾನಿಗಳು ಎಸ್‌ಟಿಪಿ ಟ್ರೀಟ್‌ಮೆಂಟ್‌ ಟ್ಯಾಂಕರ್‌ಗಳಿಂದ ಹೊರಬರುವ ನೀರಿನಲ್ಲಿ ಹಾಗೂ ತಮ್ಮ ಪ್ರಯೋಗ ಶಾಲೆಗಳಲ್ಲಿ ಪರೀಕ್ಷೆಯನ್ನು ನಡೆಸಿದ್ದಾರೆ. ಪರೀಕ್ಷೆಯ ನಂತರವೇ ಝೀರೋ ಬ್ಯಾಕ್ಟೀರಿಯಲ್‌ ಗುಣಮಟ್ಟವನ್ನು ಪ್ರಮಾಣೀಕರಿಸಲಾಗಿದೆ.

ಝೀರೋ ಬ್ಯಾಕ್ಟೀರಿಯಲ್‌ ನೀರಿಗೆ ಹೆಚ್ಚಿದ ಬೇಡಿಕೆ

ಬೆಂಗಳೂರು ಪೂರ್ವಭಾಗದಲ್ಲಿರುವ ವಿಪ್ರೋ, ಹೆಚ್‌ಎಎಲ್‌ ಸೇರಿದಂತೆ ಹಲವಾರು ಐಟಿ ಕಂಪನಿಗಳು ಈಗಾಗಲೇ ಝೀರೋ ಬ್ಯಾಕ್ಟೀರಿಯಲ್‌ ನೀರಿಗೆ ಬೇಡಿಕೆ ಇಟ್ಟಿದ್ದಾರೆ. ಸ್ವಚ್ಚತೆ, ಏರ್‌ ಕಂಡೀಷನಿಂಗ್‌, ಕೂಲಿಂಗ್ ಸೇರಿದಂತೆ‌ ಹಲವಾರು ಉದ್ದೇಶಗಳಿಗೆ ಈ ನೀರನ್ನು ಬಳಸಬಹುದಾಗಿದೆ. ಬೇಡಿಕೆ ಇಟ್ಟಿರುವ ಸಂಸ್ಥೆಗಳಿಗೆ ಜಲಮಂಡಳಿ ಈ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲಿದೆ.

ಝೀರೋ ಬ್ಯಾಕ್ಟೀರಿಯಲ್‌ ನೀರು ಬಳಸುವುದನ್ನು ಹೆಚ್ಚಿಸುವ ಮೂಲಕ ಕಾವೇರಿ ನೀರು ಬೇಡಿಕೆಯ ಪ್ರಮಾಣವನ್ನು ಬಹಳಷ್ಟು ಕಡಿಮೆ ಮಾಡಬಹುದಾಗಿದೆ. ಬೆಂಗಳೂರು ಜಲಮಂಡಳಿಯ ಇತಿಹಾಸದಲ್ಲಿ ಇದು ಹೊಸ ಮೈಲಿಗಲ್ಲಾಗಿದೆ. ಸಂಸ್ಕರಿಸಿದ ನೀರಿನ ಬಳಕೆ ಕುರಿತಾಗಿ ಜನರ ಮನಃಸ್ಥಿತಿಯನ್ನು ಬದಲಾಯಿಸುವುದಕ್ಕೆ ಇದು ನೆರವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ವಿ ರಾಮ್‌ ಪ್ರಸಾತ್‌ ಮನೋಹರ್‌ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ ಪ್ರತಿ ದಿನ ಸುಮಾರು 1800 ಎಂ.ಎಲ್‌.ಡಿ ಯಷ್ಟು ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಬೆಂಗಳೂರು ಜಲಮಂಡಳಿಯ ತ್ಯಾಜ್ಯ ನೀರು ನಿರ್ವಹಣಾ ಘಟಕಗಳ ಮೂಲಕ ಪ್ರತಿ ದಿನ 1200 ಎಂ.ಎಲ್.ಡಿ ಯಷ್ಟು ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಈ ಸಂಸ್ಕರಣೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಗುಣಮಟ್ಟದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಈ ನೀರಿನಲ್ಲಿರುವಂತಹ ಸೂಕ್ಷ್ಮ ಬ್ಯಾಕ್ಟೀರಿಯಾಗಳು ಮಾನವರ ಸಂಪರ್ಕಕ್ಕೆ ಬಂದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತದೆ. ಆದ್ದರಿಂದ ಈ ನೀರನ್ನು ಗೃಹಪಯೋಗಿ ಬಳಕೆಗೆ ಬಳಸದಂತೆ ಹಾಗೂ ಮಾನವ ಸಂಪರ್ಕವಿಲ್ಲದ ಕೆಲಸ ಅಥವಾ ಉದ್ದೇಶಗಳಿಗೆ ಮಾತ್ರ ಬಳಸಬೇಕು ಎಂದು ಜಲ ಮಂಡಳಿ ಆಗಾಗ್ಗೆ ಎಚ್ಚರಿಕೆ ನೀಡುತ್ತಾ ಬಂದಿದೆ. ಝೀರೋ ಬ್ಯಾಕ್ಟೀರಿಯಲ್‌ ನೀರನ್ನು ಕುಡಿಯುವುದಕ್ಕೆ ಹೊರತುಪಡಿಸಿ ಉಳಿದೆಲ್ಲ ಕೆಲಸಗಳಿಗೆ ಬಳಸಲು ಯೋಗ್ಯವಾಗಿರುತ್ತದೆ.

(ವರದಿ- ಎಚ್. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ