logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಆಪರೇಷನ್ ಡೈಮಂಡ್ ಚಾಕೊಲೇಟ್ ಯಶಸ್ವಿ: 8 ಕೋಟಿ ರೂ. ಮೌಲ್ಯದ ವಜ್ರ ವಶ, ಚಿಕ್ಕಬಳ್ಳಾಪುರದ ಇಬ್ಬರು ಅರೆಸ್ಟ್​

ಬೆಂಗಳೂರಲ್ಲಿ ಆಪರೇಷನ್ ಡೈಮಂಡ್ ಚಾಕೊಲೇಟ್ ಯಶಸ್ವಿ: 8 ಕೋಟಿ ರೂ. ಮೌಲ್ಯದ ವಜ್ರ ವಶ, ಚಿಕ್ಕಬಳ್ಳಾಪುರದ ಇಬ್ಬರು ಅರೆಸ್ಟ್​

Meghana B HT Kannada

Jan 14, 2024 09:00 AM IST

ಚಾಕೊಲೇಟ್ ಪ್ಯಾಕೆಟ್​​ಗಳ ಒಳಗಿಟ್ಟಿದ್ದ ವಜ್ರ ವಶಕ್ಕೆ

  • ದುಬೈಗೆ ಕಳ್ಳ ಸಾಗಾಣೆ ಮಾಡುತ್ತಿದ್ದ 8 ಕೋಟಿ ರೂ ಮೌಲ್ಯದ ಡೈಮಂಡ್ ಅನ್ನು ಬೆಂಗಳೂರು ಏರ್​ಪೋರ್ಟ್​ನಲ್ಲಿ ವಶಪಡಿಸಿಕೊಂಡು ಚಿಕ್ಕಬಳ್ಳಾಪುರದ ಇಬ್ಬರನ್ನು ಬಂಧಿಸಲಾಗಿದೆ. ಹೈದರಾಬಾದ್​​ನಲ್ಲೂ ಈ ಜೋಡಿಯ ಸಹವರ್ತಿಗಳಿಂದ 6 ಕೋಟಿ ರೂ. ಮೌಲ್ಯದ ವಜ್ರ ವಶಪಡಿಸಿಕೊಳ್ಳಲಾಗಿದೆ. ಏಕ ಕಾಲದ ಕಾರ್ಯಾಚರಣೆಯ ರಹಸ್ಯ ಏನು? (ವರದಿ: ಎಚ್​ ಮಾರುತಿ)

ಚಾಕೊಲೇಟ್ ಪ್ಯಾಕೆಟ್​​ಗಳ ಒಳಗಿಟ್ಟಿದ್ದ ವಜ್ರ ವಶಕ್ಕೆ
ಚಾಕೊಲೇಟ್ ಪ್ಯಾಕೆಟ್​​ಗಳ ಒಳಗಿಟ್ಟಿದ್ದ ವಜ್ರ ವಶಕ್ಕೆ

ಬೆಂಗಳೂರಿನಿಂದ ದುಬೈಗೆ ಕಳ್ಳ ಸಾಗಾಣೆ ಮಾಡಲಾಗುತ್ತಿದ್ದ ಸುಮಾರು 8 ಕೋಟಿ ರೂಪಾಯಿ ಮೌಲ್ಯದ ಡೈಮಂಡ್ ಅನ್ನು ಪತ್ತೆ ಹಚ್ಚುವಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್​​ಐ) ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇಬ್ಬರು ವ್ಯಕ್ತಿಗಳು ಈ ಡೈಮಂಡ್ ಅನ್ನು ದುಬೈಗೆ ಕಳ್ಳ ಸಾಗಾಣೆ ಮಾಡಲು ಸಂಚು ರೂಪಿಸಿದ್ದರು.

ಟ್ರೆಂಡಿಂಗ್​ ಸುದ್ದಿ

Raghunandan Kamath Death: ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ

ಪ್ರಜ್ವಲ್‌ ರೇವಣ್ಣ ಕೇಸ್‌; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ; ಕಾನೂನು ಕ್ರಮಕ್ಕೆ ತಕರಾರು ಇಲ್ಲ

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ

ಕರ್ನಾಟಕ ಹವಾಮಾನ ಮೇ 18; ಉತ್ತರ ಕನ್ನಡ, ತುಮಕೂರು, ಬೆಂಗಳೂರು ಸೇರಿ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಉತ್ತರ ಒಳನಾಡಲ್ಲಿ ಹಲವೆಡೆ ಮಳೆ

ಇವರು ನೈಸರ್ಗಿಕ ಮತ್ತು ಪ್ರಯೋಗಾಲಯಗಳಲ್ಲಿ ತಯಾರಿಸಲಾದ ಡೈಮಂಡ್ ಅನ್ನು ದುಬೈಗೆ ಕಳ್ಳ ಸಾಗಾಣೆ ಮಾಡಲು ಪ್ರಯತ್ನ ನಡೆಸಿದ್ದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದಲ್ಲಿ ದುಬೈಗೆ ಪ್ರಯಾಣ ಮಾಡಲು ಸಿದ್ದತೆ ನಡೆಸಿದ್ದರು. ಆರೋಪಿಗಳು ಚಿಕ್ಕಬಳ್ಳಾಪುರ ಮೂಲದದವರಾಗಿದ್ದು, 36 ಮತ್ತು 37 ವರ್ಷದ ಪುರುಷರು ಎಂದು ತಿಳಿದು ಬಂದಿದೆ.

ಡೈಮಂಡ್ ಅನ್ನು ಚಾಕೊಲೇಟ್ ಪ್ಯಾಕೆಟ್​​ಗಳ ಒಳಗಿಟ್ಟು ಸೂಟ್ ಕೇಸ್​​​ನ ಒಳಗೆ ಬಚ್ಚಿಡಲಾಗಿತ್ತು. ಇವು ಮೇಲ್ನೋಟಕ್ಕೆ ಚಾಕೊಲೇಟ್ ಪ್ಯಾಕೆಟ್​​ಗಳಂತೆ ಕಂಡು ಬರುತ್ತಿದ್ದವು. ಇಬ್ಬರು ವ್ಯಕ್ತಿಗಳು ಡೈಮಂಡ್ ಅನ್ನು ದುಬೈಗೆ ಕಳ್ಳ ಸಾಗಾಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ಡಿಆರ್​​ಐ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಹದ್ದಿನ ಕಣ್ಣಿಟ್ಟಿದ್ದರು. ಇವರಿಬ್ಬರನ್ನು ವಿಮಾನ ಹತ್ತುವುದಕ್ಕೂ ಮುನ್ನವೇ ಬಂಧಿಸಲಾಗಿದೆ.

ತನಿಖೆಯ ವೇಳೆಯಲ್ಲಿ ಇವರು 7.7 ಕೋಟಿ ರೂ ಮೌಲ್ಯದ ಡೈಮಂಡ್ ಅನ್ನು ಕಳ್ಳ ಸಾಗಾಣೆ ಮಾಡುತ್ತಿರುವುದು ಪತ್ತೆಯಾಗಿದೆ. ಇವರ ಸೂಟ್ ಕೇಸ್ ಆಗಲೇ ವಿಮಾನವನ್ನು ಏರಿತ್ತು. ಅಧಿಕಾರಿಗಳು ಮತ್ತೆ ಇವರ ಸೂಟ್ ಕೇಸ್ ಗಳನ್ನು ವಾಪಸ್ ತರಿಸಿ ತಪಾಸಣೆ ನಡೆಸಿದ್ದಾರೆ. ಚಾಕೊಲೇಟ್ ಪಾಕೆಟ್​​ಗಳ ಒಳಗೆ ಇವುಗಳನ್ನು ಅಡಗಿಸಿಡಲಾಗಿತ್ತು. ಇವರು ಕಳ್ಳ ಸಾಗಾಣೆ ಮಾಡುತ್ತಿದ್ದ ಡೈಮಂಡ್ ತೂಕ 8053 ಕ್ಯಾರೆಟ್ ಎಂದು ಗೊತ್ತಾಗಿದೆ. ಜೊತೆಗೆ ಈ ಕಳ್ಳ ಸಾಗಾಣೆದಾರರಿಂದ 4.62 ಲಕ್ಷ ರೂ. ಮೌಲ್ಯದ ಡಾಲರ್ ಮತ್ತು ದುಬೈ ಕರೆನ್ಸಿಯಾದ ದಿರ್ಹಮ್ಸ್ ಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ತನಿಖೆಯ ಸಂದರ್ಭದಲ್ಲಿ ಇವರು ಈ ಡೈಮಂಡ್ ಅನ್ನು ಪ್ರಯೋಗಾಲಯಗಳಲ್ಲಿ ತಯಾರಿಸಲಾಗಿದೆ. ಇವುಗಳನ್ನು ಮುಂಬೈನ ಡೀಲರ್​​ಗಳಿಂದ ಪಡೆದುಕೊಂಡಿದ್ದು, ದುಬೈಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಜೋಡಿ ನೀಡಿದ ಮಾಹಿತಿಯನ್ನಾಧರಿಸಿ ಮತ್ತಿಬ್ಬರು ಕಳ್ಳ ಸಾಗಣೆದಾರರನ್ನು ಹೈದರಾಬಾದ್​​ನ ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇವರಿಂದ 6.03 ಕೋಟಿ ರೂ. ಬೆಲೆ ಬಾಳುವ ಡೈಮಂಡ್ ಮತ್ತು ಅಮೆರಿಕಾದ ಡಾಲರ್ ಸೇರಿದಂತೆ 9.83 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.

ಇವರಿಂದ ವಶಪಡಿಸಿಕೊಳ್ಳಲಾದ ಡೈಮಂಡ್​​ಗಳ ತೂಕ 5,569 ಕ್ಯಾರೆಟ್ ಎಂದು ತಿಳಿದು ಬಂದಿದೆ. ಇವರೂ ಸಹ ಚಾಕೊಲೇಟ್ ಪಾಕೆ್​​​ಗಳಲ್ಲಿ ಡೈಮಂಡ್​​ಗಳನ್ನು ಅಡಗಿಸಿಟ್ಟಿದ್ದರು. ಈ ಕಾರ್ಯಾಚರಣೆಯನ್ನು ಬೆಂಗಳೂರು ಮತ್ತು ಹೈದರಾಬಾದ್​​ನಲ್ಲಿ ಏಕಕಾಲಕ್ಕೆ ನಡೆಸಿರುವುದು ವಿಶೇಷವಾಗಿದೆ.

ವರದಿ: ಎಚ್​ ಮಾರುತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ