logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಬಜೆಟ್ 2024; ಪ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ ಬದುಕಿಗೆ ಭದ್ರತೆ; ಕಾರ್ಮಿಕ ಕ್ಷೇತ್ರಕ್ಕೆ ಹಲವು ಕೊಡುಗೆ

ಕರ್ನಾಟಕ ಬಜೆಟ್ 2024; ಪ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ ಬದುಕಿಗೆ ಭದ್ರತೆ; ಕಾರ್ಮಿಕ ಕ್ಷೇತ್ರಕ್ಕೆ ಹಲವು ಕೊಡುಗೆ

Umesh Kumar S HT Kannada

Feb 16, 2024 12:12 PM IST

ಕರ್ನಾಟಕ ಬಜೆಟ್ 2024; ಪ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸುವ ಕ್ರಮವನ್ನು ಹಾಗೂ ಕಾರ್ಮಿಕ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಫೆ.16) ಘೋಷಣೆ ಮಾಡಿದರು.

  • ಕರ್ನಾಟಕ ಬಜೆಟ್ 2024; ಪ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ ಬದುಕಿಗೆ ಭದ್ರತೆಗೆ ಸಂಬಂಧಿಸಿದ ಉಪಕ್ರಮ ಮತ್ತು ಕಾರ್ಮಿಕ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದರು. 

ಕರ್ನಾಟಕ ಬಜೆಟ್ 2024; ಪ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸುವ ಕ್ರಮವನ್ನು ಹಾಗೂ ಕಾರ್ಮಿಕ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಫೆ.16) ಘೋಷಣೆ ಮಾಡಿದರು.
ಕರ್ನಾಟಕ ಬಜೆಟ್ 2024; ಪ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸುವ ಕ್ರಮವನ್ನು ಹಾಗೂ ಕಾರ್ಮಿಕ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಫೆ.16) ಘೋಷಣೆ ಮಾಡಿದರು.

ಬೆಂಗಳೂರು: ಕರ್ನಾಟಕದಲ್ಲಿ ಪ್ಲಾಟ್‌ಫಾರಂ ಆಧಾರಿತ ಗಿಗ್‌ ಕಾರ್ಮಿಕರ (Gig Workers) ಬದುಕಿಗೆ ಭದ್ರತೆ ಒದಗಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಫೆ.16) ರಾಜ್ಯ ಬಜೆಟ್ (ಕರ್ನಾಟಕ ಬಜೆಟ್ 2024) ಮಂಡನೆ ವೇಳೆ ಘೋಷಿಸಿದರು.

ಟ್ರೆಂಡಿಂಗ್​ ಸುದ್ದಿ

Davangere News: ಬಿಲ್‌ ಬಾಕಿ ಬಾರದೇ ದಾವಣಗೆರೆ ಜಿಲ್ಲೆ ಗುತ್ತಿಗೆದಾರ ಆತ್ಮಹತ್ಯೆ, ಇಲಾಖಾ ವಿಚಾರಣೆಗೆ ಆದೇಶಿಸಿದ ಸಚಿವ

Prajwal Revenna: 6 ದಿನ ಎಸ್‌ಐಟಿ ಕಸ್ಟಡಿಗೆ ಪ್ರಜ್ವಲ್‌ ರೇವಣ್ಣ, ಹಾಸನಕ್ಕೆ ಕರೆದೊಯ್ಯುವ ಸಾಧ್ಯತೆ

ವಾಲ್ಮೀಕಿ ನಿಗಮ ಹಗರಣ; ರಾಜೀನಾಮೆ ನೀಡಲು ಸಚಿವ ಬಿ ನಾಗೇಂದ್ರಗೆ ಸಿಎಂ ಸಿದ್ದರಾಮಯ್ಯ ಸೂಚನೆ-ವರದಿ

ಜಮ್ಮು-ಕಾಶ್ಮೀರದ ಅಮರನಾಥ ದೇವಾಲಯಕ್ಕೆ ಕೃಷ್ಣಶಿಲೆಯ ನಂದಿವಿಗ್ರಹ, ಮೈಸೂರು ಶೈಲಿ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್‌

ಕಾರ್ಮಿಕ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಮ್ಮ ಸರ್ಕಾರವು ಪ್ಲಾಟ್ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಬದುಕಿನ ಭದ್ರತೆಗಾಗಿ ಪ್ಲಾಟ್‌ಫಾರಂ ಆಧಾರಿತ ಗಿಗ್‌ ಕಾರ್ಮಿಕರ ನಿಧಿ ಮತ್ತು ಕಲ್ಯಾಣ ಶುಲ್ಕ ಮಸೂದೆ (Platform-Based Gig Workers Fund and Welfare Fee Bill) ಎಂಬ ಹೊಸ ವಿಧೇಯಕವನ್ನು ಜಾರಿಗೆ ತರಲಿದೆ. ತನ್ಮೂಲಕ ಅರ್ಹ ಆನ್-ಲೈನ್ ವಹಿವಾಟುಗಳ ಮೇಲೆ ಸೆಸ್ ವಿಧಿಸಿ ಗಿಗ್ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಹೇಳಿದರು.

ಈ ಕೊಡುಗೆಯು ಆಪ್‌ ಆಧಾರಿತ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಹೆಚ್ಚು ಅನುಕೂಲ ಉಂಟುಮಾಡಿಕೊಡಲಿದೆ. ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರು ಇವರು.

ಇಎಸ್‌ಐ ಯೋಜನೆಯಲ್ಲಿ 311 ಕೋಟಿ ರೂಪಾಯಿಯ 6 ಪ್ರಮುಖ ಉಪಕ್ರಮಗಳು

ಇಎಸ್‌ಐ ಯೋಜನೆ ವಿಚಾರ ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದರಲ್ಲಿ 311 ಕೋಟಿ ರೂಪಾಯಿ ವೆಚ್ಚದಲ್ಲಿ ಒದಗಿಸುವ ಹಲವು ಉಪಕ್ರಮಗಳನ್ನು ಘೋಷಿಸಿದರು. ಅವುಗಳ ವಿವರ ಹೀಗಿದೆ.

1) ಸೂಪರ್ ಸ್ಪೆಷಾಲಿಟಿ ಸೇವೆಗಳು

2) ಪಾಯಿಂಟ್ ಆಫ್ ಕೇರ್ ಮೊಬೈಲ್ ಡಿಜಿಟಲ್ ಡಯಾಗ್ನಾಸ್ಟಿಕ್ ಕಿಯಾಸ್ಕ್‌

3) ಮೊಬೈಲ್ ಹೆಲ್ತ್ ಯುನಿಟ್‌

4) 40 ವರ್ಷ ಮೇಲ್ಪಟ್ಟ ಎಲ್ಲ ಕಾರ್ಮಿಕರಿಗೆ ಸಮಗ್ರ ಆರೋಗ್ಯ ತಪಾಸಣೆ

5) ಎಲ್ಲ ವಿಮಾದಾರರಿಗೆ ಟೆಟನಸ್‌ (Tetanus) ಮತ್ತು ಹೆಪಟೈಟಿಸ್‌ (Hepatitis) ಲಸಿಕೆ ಕಾರ್ಯಕ್ರಮ

6) ಅತ್ಯಾಧುನಿಕ ರೋಗಪತ್ತೆ ಹಚ್ಚುವ ಕೇಂದ್ರ ಸ್ಥಾಪನೆ

ವಾಹನ ಕಾರ್ಮಿಕರಿಗೂ ಭದ್ರತಾ, ಕಲ್ಯಾಣ ಕಾರ್ಯಕ್ರಮ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಹನ ಕಾರ್ಮಿಕರ ಭದ್ರತಾ ಮತ್ತು ಕಲ್ಯಾಣ ಕಾರ್ಯಕ್ರಮಗಳ ವಿವರವನ್ನು ರಾಜ್ಯ ಬಜೆಟ್‌ನಲ್ಲಿ ಘೋಷಿಸಿದರು.

ವಾಣಿಜ್ಯ ಸಾರಿಗೆ ವಾಹನಗಳ ನೋಂದಣಿಯ ಮೇಲೆ ಸುಂಕವನ್ನು ವಿಧಿಸುವ ಮೂಲಕ ಸಾರಿಗೆ ವಾಹನಗಳ ಕಾರ್ಮಿಕರಿಗೆ ಭದ್ರತಾ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ರೂಪಿಸಲಾಗುವುದು. ಅಲ್ಲದೇ, ವಾಹನ ಚಾಲಕರಿಗೆ ನಿಲ್ದಾಣ/ಹೆದ್ದಾರಿ ಬದಿಯಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮವಹಿಸಲಾಗುವುದು ಎಂದು ಅವರು ವಿವರಿಸಿದರು.

ಕಾರ್ಮಿಕ ಕ್ಷೇತ್ರಕ್ಕೆ ಘೋಷಣೆಯಾಗಿರುವ ಇತರೆ 5 ಉಪಕ್ರಮಗಳು

1) ಪ್ರಸ್ತುತ ಆಶಾದೀಪ ಯೋಜನೆಯಡಿ ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನೀಡುವ ಸೌಲಭ್ಯವನ್ನು ವಿಸ್ತರಿಸಲು ವಿವಿಧ ಕ್ರಮಗಳು

2) ಮಾಲೀಕರಿಗೆ ವರ್ಗಾಯಿಸುವ ಶಿಷ್ಯವೇತನದ ಅವಧಿಯನ್ನು ಆರು ತಿಂಗಳಿನಿಂದ ಒಂದು ವರ್ಷಕ್ಕೆ ವಿಸ್ತರಣೆ

3) ಅಪ್ರೆಂಟಿಸ್ ತರಬೇತಿ ಪಡೆದವರನ್ನು ಅದೇ ಮಾಲೀಕರು ಖಾಯಂ ಆಗಿ ನೇಮಕಾತಿ ಮಾಡಿಕೊಂಡಲ್ಲಿ ಮಾಲೀಕರಿಗೆ ವೇತನ ಮರುಪಾವತಿ ಮಾಡುವ ಅವಧಿಯನ್ನು ಒಂದು ವರ್ಷದಿಂದ ಎರಡು ವರ್ಷಗಳ ಅವಧಿಗೆ ಹೆಚ್ಚಿಸಲಾಗುವುದು ಹಾಗೂ ವೇತನದ ಗರಿಷ್ಠ ಮಿತಿಯನ್ನು 6,500 ರೂಪಾಯಿಯಿಂದ 7,000 ರೂಪಾಯಿಗೆ ಹೆಚ್ಚಳ.

4) ಹೊಸದಾಗಿ ಖಾಯಂ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳ ಮಾಸಿಕ 6,000 ರೂಪಾಯಿ ಗರಿಷ್ಠ ವೇತನವನ್ನು ಎರಡು ವರ್ಷಗಳವರೆಗೆ ಮಾಲೀಕರಿಗೆ ಮರುಪಾವತಿ ಮಾಡಲಾಗುವುದು.

5) ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ವಲಸೆ ಹೋದ ಸಂದರ್ಭದಲ್ಲಿ ಅವರಿಗೆ ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸಲು ಆಯ್ದ 10 ಜಿಲ್ಲೆಗಳಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ತಾತ್ಕಾಲಿಕ ವಸತಿ ಸಮುಚ್ಛಯಗಳ ನಿರ್ಮಾಣ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ