logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲೂ ಶುರುವಾಗಲಿದೆ ಎನ್‌ಆರ್‌ಐ ಕನ್ನಡಿಗರ ಸಚಿವಾಲಯ; ಮಹತ್ವದ ಘೋ‍ಷಣೆ ಮಾಡಿದ ಗೃಹಸಚಿವ

ಕರ್ನಾಟಕದಲ್ಲೂ ಶುರುವಾಗಲಿದೆ ಎನ್‌ಆರ್‌ಐ ಕನ್ನಡಿಗರ ಸಚಿವಾಲಯ; ಮಹತ್ವದ ಘೋ‍ಷಣೆ ಮಾಡಿದ ಗೃಹಸಚಿವ

Umesh Kumar S HT Kannada

Feb 23, 2024 09:08 AM IST

ಕರ್ನಾಟಕದಲ್ಲೂ ಎನ್‌ಆರ್‌ಐ ಕನ್ನಡಿಗರ ಸಚಿವಾಲಯ ಶುರುವಾಗಲಿದೆ ಎಂದು ಮಹತ್ವದ ಘೋ‍ಷಣೆ ಮಾಡಿದ ಗೃಹಸಚಿವ ಜಿ.ಪರಮೇಶ್ವರ್.

  • ಕರ್ನಾಟಕದಲ್ಲೂ ಶುರುವಾಗಲಿದೆ ಎನ್‌ಆರ್‌ಐ ಕನ್ನಡಿಗರ ಸಚಿವಾಲಯ. ಅನಿವಾಸಿ ಕನ್ನಡಿಗರ ವ್ಯವಹಾರಗಳನ್ನು ಸುಲಭ ಮಾಡಿಕೊಡುವುದಕ್ಕಾಗಿ ಕರ್ನಾಟಕ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಗೃಹಸಚಿವ ಜಿ ಪರಮೇಶ್ವರ ಅವರು ಈ ಮಹತ್ವದ ಘೋ‍ಷಣೆ ಮಾಡಿದರು.

ಕರ್ನಾಟಕದಲ್ಲೂ ಎನ್‌ಆರ್‌ಐ ಕನ್ನಡಿಗರ ಸಚಿವಾಲಯ ಶುರುವಾಗಲಿದೆ ಎಂದು ಮಹತ್ವದ ಘೋ‍ಷಣೆ ಮಾಡಿದ ಗೃಹಸಚಿವ ಜಿ.ಪರಮೇಶ್ವರ್.
ಕರ್ನಾಟಕದಲ್ಲೂ ಎನ್‌ಆರ್‌ಐ ಕನ್ನಡಿಗರ ಸಚಿವಾಲಯ ಶುರುವಾಗಲಿದೆ ಎಂದು ಮಹತ್ವದ ಘೋ‍ಷಣೆ ಮಾಡಿದ ಗೃಹಸಚಿವ ಜಿ.ಪರಮೇಶ್ವರ್.

ಬೆಂಗಳೂರು: ಕರ್ನಾಟಕದಲ್ಲೂ ಅನಿವಾಸಿ ಕನ್ನಡಿಗರ ವ್ಯವಹಾರಗಳನ್ನು ಗಮನಿಸುವುದಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ಸರ್ಕಾರ ಶೀಘ್ರವೇ ಪ್ರಾರಂಭಿಸಲಿದೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ, ಬೆಂಗಳೂರು ವಿಮಾನನಿಲ್ದಾಣದಲ್ಲಿ ತುರ್ತುಭೂಸ್ಪರ್ಶ, 150 ಪ್ರಯಾಣಿಕರು ಸೇಫ್

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ಕರ್ನಾಟಕ ಹವಾಮಾನ ಮೇ 19; ರಾಜ್ಯದಲ್ಲಿ ಮಳೆ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಲ್ಲಿ ಆರೆಂಜ್ ಅಲರ್ಟ್‌, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

2023ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಅನಿವಾಸಿ ಕನ್ನಡಿಗರ ವ್ಯವಹಾರಗಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯವನ್ನು ರಚಿಸಲಿದೆ ಎಂದು ಜಿ.ಪರಮೇಶ್ವರ್ ಬುಧವಾರ ವಿಧಾನಸಭೆಗೆ ತಿಳಿಸಿದರು. ಸ್ಪೀಕರ್ ಯು.ಟಿ.ಖಾದರ್ ಅವರ ಆಹ್ವಾನದ ಮೇರೆಗೆ ವಿಧಾನಸಭೆಯ ಕಲಾಪಗಳನ್ನು ವೀಕ್ಷಿಸಲು ವಿಧಾನಸೌಧಕ್ಕೆ ಆಗಮಿಸಿದ ಅನಿವಾಸಿ ಭಾರತೀಯರನ್ನು ಸ್ವಾಗತಿಸಿದ ಸಚಿವರು ಈ ಘೋಷಣೆ ಮಾಡಿದರು. ವಿಧಾನ ಮಂಡಲ ಕಲಾಪ ವೀಕ್ಷಿಸಲು ಆಗಮಿಸಿದ ಅನಿವಾಸಿ ಭಾರತೀಯರ ಪೈಕಿ ಕೆನಡಾ, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಆಸ್ಟ್ರೇಲಿಯಾ, ಸಿಂಗಾಪುರ್ ಮತ್ತು ಪಶ್ಚಿಮ ಏಷ್ಯಾದ ದೇಶಗಳಿಂದ ಬಂದವರು ಇದ್ದರು.

ಕೇರಳದಲ್ಲೂ ಇದೆ ಎನ್‌ಆರ್‌ಐ ಸಚಿವಾಲಯ

"ಕೇರಳದಲ್ಲಿ ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಎನ್ಆರ್‌ಐ ಸಚಿವಾಲಯವಿದೆ. ಕೇರಳದ ಅನೇಕ ಜನರು ವಿದೇಶಕ್ಕೆ ಹೋಗುವುದರಿಂದ, ಅವರು ಅಲ್ಲಿ ಸಂಪಾದಿಸುತ್ತಾರೆ ಮತ್ತು ಹಣವನ್ನು ಕೇರಳಕ್ಕೆ ವಾಪಸ್ ಕಳುಹಿಸುತ್ತಾರೆ. ವಿದೇಶದಲ್ಲಿ ಸಂಭವಿಸಿದ ಸಾವುಗಳಂತಹ ಅವರ ಹಲವಾರು ಸಮಸ್ಯೆಗಳನ್ನು ಪರಿಹರಿಸಲು - ಶವಗಳನ್ನು ಮರಳಿ ತರುವುದು ಸೇರಿ ಅನೇಕ ಕಾರ್ಯಗಳಲ್ಲಿ ಎನ್‌ಆರ್‌ಐ ಸಚಿವಾಲಯ ನೆರವು ನೀಡುತ್ತದೆ. ಆದ್ದರಿಂದ ಕೇರಳದ ಮಾದರಿಯಲ್ಲೇ ಕರ್ನಾಟಕದಲ್ಲೂ ಅನಿವಾಸಿ ಭಾರತೀಯರಿಗಾಗಿ ಸಚಿವಾಲಯವನ್ನು ರಚಿಸುತ್ತೇವೆ ಎಂದು ನಾವು ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ" ಎಂಬುದನ್ನು ಜಿ. ಪರಮೇಶ್ವರ್ ನೆನಪಿಸಿಕೊಂಡರು.

“ಮುಂಬರುವ ದಿನಗಳಲ್ಲಿ, ನಮ್ಮ ಸರ್ಕಾರ ಎನ್‌ಆರ್‌ಐ ಸಚಿವಾಲಯವನ್ನು ರಚಿಸುತ್ತದೆ ಎಂದು ನಾನು ಹೇಳಲು ಬಯಸುತ್ತೇನೆ. ರಾಜ್ಯ ಸರ್ಕಾರವು ಅವರಿಗೆ (ಎನ್ಆರ್‌ಐ) ಕಾನೂನಿನ ಪ್ರಕಾರ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತದೆ. ಅವರು ಕೆಲವು ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಪೂರೈಸಲಾಗುವುದು” ಎಂದು ಸಚಿವ ಜಿ ಪರಮೇಶ್ವರ್ ಭರವಸೆ ನೀಡಿದರು.

ಕರ್ನಾಟಕದ ಅಭಿವೃದ್ಧಿಗೆ ಎನ್‌ಆರ್‌ಐ ಕನ್ನಡಿಗರ ಕೊಡುಗೆ ಮುಖ್ಯ

ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ನೇತೃತ್ವವನ್ನು ಪರಮೇಶ್ವರ್ ವಹಿಸಿದ್ದರು. ಅನಿವಾಸಿ ಭಾರತೀಯರಲ್ಲಿ ಭಾರತಕ್ಕೆ ಮರಳಲು ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಹೆಚ್ಚುತ್ತಿರುವ ಪ್ರವೃತ್ತಿಯ ಬಗ್ಗೆ ಮಾತನಾಡಿದ ಸಚಿವರು, ಅವರು ಇಲ್ಲಿ ಹೂಡಿಕೆ ಮಾಡಲು ಸಿದ್ಧರಿದ್ದಾರೆ ಮತ್ತು ಅವರ ವ್ಯವಹಾರಗಳಿಂದ ಸಿಎಸ್ಆರ್ ಹಣವನ್ನು ಸಹ ಒದಗಿಸುತ್ತಾರೆ ಎಂದು ಹೇಳಿದರು.

ಕರ್ನಾಟಕ ಸರ್ಕಾರವು 2008ರಲ್ಲಿಯೇ ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಪರಿಹರಿಸಲು ಅನಿವಾಸಿ ಭಾರತೀಯರ ವೇದಿಕೆಯನ್ನು ಸ್ಥಾಪಿಸಿತ್ತು ಮತ್ತು ಪ್ರಸ್ತುತ ಸರ್ಕಾರವು ಡಾ.ಆರತಿ ಕೃಷ್ಣ ಅವರನ್ನು ವೇದಿಕೆಯ ಉಪಾಧ್ಯಕ್ಷರನ್ನಾಗಿ ನೇಮಿಸಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರು ರಾಜ್ಯದ ಅನಿವಾಸಿ ಭಾರತೀಯರ ಕಲ್ಯಾಣಕ್ಕಾಗಿ ಪ್ರತ್ಯೇಕ ಮಂಡಳಿಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದ್ದರು.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ