logo
ಕನ್ನಡ ಸುದ್ದಿ  /  ಕರ್ನಾಟಕ  /  Cooperative Bank: ನ್ಯಾಷನಲ್‌ ಕೋ ಆಪರೇಟಿವ್‌ ಬ್ಯಾಂಕ್‌ ಗ್ರಾಹಕರೇ ಆತುರದ ನಿರ್ಧಾರ ಬೇಡ, ಬಸನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಮನವಿ

Cooperative Bank: ನ್ಯಾಷನಲ್‌ ಕೋ ಆಪರೇಟಿವ್‌ ಬ್ಯಾಂಕ್‌ ಗ್ರಾಹಕರೇ ಆತುರದ ನಿರ್ಧಾರ ಬೇಡ, ಬಸನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಮನವಿ

Praveen Chandra B HT Kannada

Jul 27, 2023 05:35 PM IST

Cooperative Bank: ನ್ಯಾಷನಲ್‌ ಕೋ ಆಪರೇಟಿವ್‌ ಬ್ಯಾಂಕ್‌ ಗ್ರಾಹಕರೇ ಆತುರದ ನಿರ್ಧಾರ ಬೇಡ, ಬಸನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಮನವಿ

    • National co operative bank: ಇತ್ತೀಚೆಗೆ ಆರ್‌ಬಿಐ ನ್ಯಾಷನಲ್‌ ಕೋಆಪರೇಟಿವ್‌ ಬ್ಯಾಂಕ್‌ನ ವಹಿವಾಟಿಗೆ ನಿರ್ಬಂಧ ಹೇರಿದೆ. ಈ ಸಮಯದಲ್ಲಿ ಗಾಬರಿಯಲ್ಲಿರುವ ಗ್ರಾಹಕರಿಗೆ ಸಮಧಾನದ ಮಾತುಗಳನ್ನು ಬಸವನಗುಡಿ ಶಾಸಕರಾದ ಎಲ್‌.ಎ. ರವಿ ಸುಬ್ರಹ್ಮಣ್ಯ ಹೇಳಿದ್ದಾರೆ. ಇದಕ್ಕೆ ಫೇಸ್‌ಬುಕ್‌ನಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
Cooperative Bank: ನ್ಯಾಷನಲ್‌ ಕೋ ಆಪರೇಟಿವ್‌ ಬ್ಯಾಂಕ್‌ ಗ್ರಾಹಕರೇ ಆತುರದ ನಿರ್ಧಾರ ಬೇಡ, ಬಸನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಮನವಿ
Cooperative Bank: ನ್ಯಾಷನಲ್‌ ಕೋ ಆಪರೇಟಿವ್‌ ಬ್ಯಾಂಕ್‌ ಗ್ರಾಹಕರೇ ಆತುರದ ನಿರ್ಧಾರ ಬೇಡ, ಬಸನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಮನವಿ

ಬೆಂಗಳೂರು: ಇತ್ತೀಚೆಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ನ್ಯಾಶನಲ್ ಕೋ-ಆಪರೇಟಿವ್ ಬ್ಯಾಂಕ್‌ನ ವಹಿವಾಟನ್ನು ಸ್ಥಗಿತಗೊಳಿಸಿದೆ. ಇದು ಅತ್ಯಂತ ದುರಾದೃಷ್ಟಕರ ಮತ್ತು ನೋವಿನ ಸಂಗತಿ ಎಂದು ನಾನು ಭಾವಿಸುತ್ತೇನೆ. ಹಿರಿಯ ನಾಗರಿಕರು ತಮ್ಮ ಠೇವಣಿ ಹಣ ತೆಗೆದುಕೊಳ್ಳಲು ಬಯಸಿದ್ದರು. ಇದೇ ಠೇವಣಿ ಹಣದಿಂದ ಬರುವ ಬಡ್ಡಿದರದಲ್ಲಿ ಜೀವನ ನಡೆಸುತ್ತಿರುವುದು ನಮಗೆ ಗೊತ್ತಿರುವಂತಹ ವಿಷಯಗಳು. ಏಕಾಏಕಿ ಬ್ಯಾಂಕ್‌ ತನ್ನ ವಹಿವಾಟನ್ನು ಸ್ಥಗಿತಗೊಳಿಸಿದಾಗ ಸಾಕಷ್ಟು ಜನರು ಗಾಬರಿಯಾಗಿದ್ದಾರೆ, ಮುಂದೆ ಏನು ಎಂದು ಯೋಚನೆಯಲ್ಲಿದ್ದಾರೆ. ನಾನು ಎಲ್ಲರಿಗೂ ಮನವಿ ಮಾಡುವುದು ಇಷ್ಟೇ. ಈ ಕುರಿತು ಎಲ್ಲ ಗ್ರಾಹಕರು ಸಂಘಟಿತವಾಗಿ ಪ್ರಯತ್ನ ಮಾಡೋಣ ಮತ್ತು ಈ ಸಂದರ್ಭದಲ್ಲಿ ಬ್ಯಾಂಕ್ ನ ಗ್ರಾಹಕರು ಯಾವುದೇ ರೀತಿಯ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಬಸವನಗುಡಿ ಶಾಸಕರಾದ ಎಲ್‌.ಎ. ರವಿ ಸುಬ್ರಹ್ಮಣ್ಯ ಅವರು ಮನವಿ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Hubli News: ಅಂಜಲಿ ಹತ್ಯೆ, ಹುಬ್ಬಳ್ಳಿಯಲ್ಲಿ ಇಂದು ಪರಮೇಶ್ವರ್‌ ಸಭೆ, ಸಿಬಿಐ ತನಿಖೆಗೆ ಜೋಶಿ ಆಗ್ರಹ

CET Results2024: ಕರ್ನಾಟಕ ಸಿಇಟಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ, ನಿಮ್ಮ ಅಂಕ ನೋಡುವುದು ಹೀಗೆ

Bangalore News: ತಮಿಳುನಾಡಿನಲ್ಲಿ ಗುಂಡು ತಗುಲಿ ಬೆಂಗಳೂರಿನ ಯೋಧ ಸಾವು

Hassan Scandal: ಗೃಹ ಇಲಾಖೆ ಬೇರೆಯವರಿಂದ ಹೈಜಾಕ್‌‌, ಪ್ರಜ್ವಲ್‌ ರೇವಣ್ಣ ಪ್ರಕರಣ ಮುಚ್ಚಿಹಾಕಲು ಎಸ್‌ಐಟಿ ಸಿದ್ಧತೆ, ಅಶೋಕ ಆರೋಪ

ಈ ತೊಂದರೆಯಿಂದ ಪಾರಾಗಲು ಎಲ್ಲರೂ ಸೇರಿ ಕಲೆಕ್ಟಿವ್‌ ಆಗಿ ಕೆಲಸ ಮಾಡೋಣ. ತಮಗೆ ಗೊತ್ತಿರುವಂತೆ, ಈ ಹಿಂದೆ ಗುರು ರಾಘವೇಂದ್ರ ಬ್ಯಾಂಕ್‌ನಲ್ಲಿ ಇದೇ ಸಮಸ್ಯೆಯಾದಗ ಎಂಪಿ ತೇಜಸ್ವಿ ಸೂರ್ಯ ವಿಶೇಷ ಪ್ರಯತ್ನ ಮಾಡಿದ್ದರು ಮತ್ತು ಕೇಂದ್ರ ಸರಕಾರ ಹೊಸ ನೀತಿ ತಂದಿತ್ತು. ಈ ರೀತಿ ಯಾವುದೇ ಸಹಕಾರಿ ಬ್ಯಾಂಕ್‌ ಸಂಕಷ್ಟಕ್ಕೆ ಸಿಲುಕಿಕೊಂಡರೆ ಐದು ಲಕ್ಷ ರೂಪಾಯಿಯನ್ನು ಡಿಎಸ್ಸಿಜಿ ಮುಖಾಂತರವಾಗಿ ವಿಮೆ ನೀಡುವಂತಹ ಹೊಸ ಕಾನೂನು ತರಲಾಗಿತ್ತು. ಹೀಗಾಗಿ, ನ್ಯಾಷನಲ್‌ ಕೋ ಆಪರೇಟಿವ್‌ ಬ್ಯಾಂಕ್‌ನ ಶೇಕಡ 80ರಷ್ಟು ಗ್ರಾಹಕರಿಗೆ ಸಂಪೂರ್ಣ ಹಣ ದೊರಕುತ್ತದೆ. ಉಳಿದವರಿಗೆ ಕೊಂಚ ಹಣ ದೊರಕುತ್ತದೆ. ಈಗಾಗಲೇ 50 ಸಾವಿರ ರೂಪಾಯಿ ವಿತ್‌ಡ್ರಾ ಮಾಡಲು ಅನುಮತಿ ಇದೆ. ಇದಲ್ಲದೆ ಐದು ಲಕ್ಷ ರೂಪಾಯಿ ವಿಮಾ ಹಣ ದೊರಕಲಿದೆ ಎಂದು ಅವರು ಫೇಸ್‌ಬುಕ್‌ ವಿಡಿಯೋದಲ್ಲಿ ಹೇಳಿದ್ದಾರೆ.

ಐದು ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತವನ್ನು ಠೇವಣಿ ಇಟ್ಟವರಿಗೆ ಆ ಹಣವನ್ನು ವಾಪಸ್‌ ನೀಡುವ ಪ್ರಯತ್ನವನ್ನು ಆಡಳಿತ ಮಂಡಳಿ ಮುಖಾಂತರ ಮಾಡಬೇಕು. ಸಾಲ ಪಡೆದುಕೊಂಡವರಿಂದ ನಿರ್ದಾಕ್ಷಿಣವಾಗಿ ಹಣ ಪಡೆದು ಈ ರೀತಿ ಹೆಚ್ಚು ಠೇವಣಿ ಇಟ್ಟವರಿಗೆ ನೀಡುವಂತಹ ಪ್ರಯತ್ನ ಮಾಡಬೇಕು. ನಾನು ಈಗಾಗಲೇ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದೇನೆ. ನನ್ನ ಕಡೆಯಿಂದ ಯಾವುದೇ ಸಹಕಾರ ಬೇಕಿದ್ದರೂ ನೀಡುತ್ತೇನೆ ಎಂದು ಭರವಸೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಜನರ ಪ್ರತಿಕ್ರಿಯೆ ಏನು?

ಬಸವನಗುಡಿ ಶಾಸಕರಾದ ಎಲ್‌.ಎ. ರವಿ ಸುಬ್ರಹ್ಮಣ್ಯ ಅವರ ಫೇಸ್‌ಬುಕ್‌ ಪೋಸ್ಟ್‌ಗೆ ಹಲವು ಕಾಮೆಂಟ್‌ಗಳು ಬಂದಿವೆ.

ರಮೇಶ್‌ ಮಯ್ಯ ಎಂಬ ಬಳಕೆದಾರರು "ಇದಕ್ಕೆ ತಮ್ಮಲ್ಲಿ ಪರಿಹಾರ ಏನಿದೆ ಎಂಬುದನ್ನು ತಿಳಿಸಿ,ತಾವು ಆಡಳಿತ ಮಂಡಳಿಯೊಡನೆ ಮಾತನಾಡಿದ್ರೆ ಆರ್ ಬಿ ಐ ನಿಬಂಧನೆಗಳನ್ನು ಸಡಿಲಗೊಳಿಸಬಹುದೇ, ಊರು ಸೂರೆ ಹೋದಮೇಲೆ ಕೋಟೆಬಾಗಿಲು ಹಾಕೋ ಪ್ರಯತ್ನ ಮಾಡ್ತಾಇದ್ದೀರ . ಅದು ಬಿಟ್ಟು ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಲಾಭಾಂಶ ಹಂಚಿಕೆ ಮಾಡದಿರುವ ಇನ್ನೂಅನೇಕ ಸಹಕಾರಿ ಬ್ಯಾಂಕುಗಳಿವೆ ,ಕಾಲ ಮೀರುವ ಮುನ್ನ ಅತ್ತ ಗಮನಹರಿಸಿ" ಎಂದು ಕಾಮೆಂಟ್‌ ಮಾಡಿದ್ದಾರೆ.

"ರಾಘವೇಂದ್ರ ಬ್ಯಾಂಕ್ ಪುನಶ್ಚೇತನಕ್ಕೆ ತಾವು ಏನು ಮಾಡಿದ್ದೀರಿ? ಬ್ಯಾಂಕ್ ಗಳು ಈ ಸ್ಥಿತಿಗೆ ಬರೋದಿಕ್ಕೆ ಕಾರಣರಾದವರ ಮೇಲೆ ಯಾವ ಕ್ರಮವಾಗಿದೆ ಹೇಳಿ ಸ್ವಾಮಿ.... ಗ್ರಾಹಕರ ಹಣ ನುಂಗಿದರೂ...ತಮ್ಮಂತಹವರ ಕೃಪಾದೃಷ್ಟಿಯಿಂದ ಆರಾಮಾಗಿ ಇರಬಹುದು ಎನ್ನುವ ವಿಶ್ವಾಸದಲ್ಲೇ ತಮ್ಮ ಕ್ಷೇತ್ರದಲ್ಲಿ ಇಂತಹ ಘಟನೆಗಳು ಆಗುತ್ತಿರಬಹುದೇ? ನಿಮಗೆ ಮತ ಹಾಕಿದವರ ಯೋಗ ಕ್ಷೇಮ ನಿಮ್ಮ ಜವಾಬ್ದಾರಿಯಲ್ಲವೇ?" ಎಂದು ಅಶೋಕ್‌ ಬಿಎ ಎಂಬ ಫೇಸ್‌ಬುಕ್‌ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.

"ಬಸವನಗುಡಿ ನಲ್ಲೇ ಯಾಕೆ ಹಿಂಗೆ ಆಗತ್ತೆ...ಗುರು ರಾಘವೇಂದ್ರ, ವಸಿಷ್ಠ ಈಗ ನ್ಯಾಷನಲ್ cooperative ಬ್ಯಾಂಕ್....ಏನೋ ಇದೆ...ನಿಮಗೆ ಏನು ತೊಂದ್ರೆ ಆಗಲ್ಲ ಬಿಡಿ...ನಿಮಗೆ ಮತ ಹಾಕಿದವರು ತಾನೇ ನಷ್ಟ ಅನುಭವಿಸೋದು....ನೀವು ಹಿಂಗೆ ವಿಡಿಯೋ ಮಾಡಿ ಸುಮ್ನೆ ಕಣ್ಣು ಒರೆಸಿ ಸಾಕು..." ಎಂದು ಮುಕುಂದ ತೇಜಸ್ವಿ ಕಾಮೆಂಟ್‌ ಮಾಡಿದ್ದಾರೆ. "ಹೆಚ್ಚಿನ ಬಡ್ಡಿಗೆ ಆಸೆ ಪಟ್ಟು ಅಸಲಿಗೆ ದೋಖಾ.‌ ಯಾವತ್ತೇ ಇದ್ದರೂ ಕಡಿಮೆ ಬಡ್ಡಿ ಬಂದರು ರಾಷ್ಟ್ರೀಕೃತ ಬ್ಯಾಂಕುಗಳು ಕ್ಷೇಮ" ಎಂದು ಶ್ರೀನಿವಾಸ ಕಗ್ಗಲಿಪುರ ಪ್ರತಿಕ್ರಿಯೆ ನೀಡಿದ್ದಾರೆ.

"ಕರ್ನಾಟಕ ದಲ್ಲಿ ಸರಿ ಸುಮಾರು 250 ಕೋ ಆಪರೇಟಿವ್ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿವೆ. ಇದೇ ಮಾನದಂಡವನ್ನು ಅನಿಸರಿಸಿದರೆ 10 ರಿಂದ 15 ಬ್ಯಾಂಕು ಗಳನ್ನು ಬಿಟ್ಟು ಮಿಕ್ಕ ಎಲ್ಲವನ್ನೂ ಆರ್.ಬಿ.ಐ ನಿಬಂಧನೆಗೆ ಏಕೆ ಓಳಪಡಿಸುತ್ತಿಲ್ಲ ಎನ್ನುವುದೇ ಒಂದು ಅತಿ ದೊಡ್ಡ ವಿಪರ್ಯಾಸ" ಎಂದು ಸತೀಶ್‌ ಎಂಬವರು ಪ್ರತಿಕ್ರಿಯೆ ನೀಡಿದ್ದಾರೆ. "ಎಲ್ಲಾ ಕೋಪರೇಟಿವ್ ಬ್ಯಾಂಕುಗಳು ಸೊಸೈಟಿ ಗಳು ಗೋಲ್ ಮಾಲ್ ಮಾಡುವುದಕ್ಕೆ ಇರುವುದು. ಒಂದು ಸೊಸೈಟಿ ಕೋ ಆಪರೇಟಿವ್ ಪ್ರೆಸಿಡೆಂಟ ಅಪಾಯಿಂಟ್ ಮಾಡುವುದಕ್ಕೆ ಎಷ್ಟು ಕೋಟಿ ಲಂಚ ಕೊಡುತ್ತಾರೆ ಗೊತ್ತಾ ನಿಮಗೆ. ಆಮೇಲೆ ಅಪಾಯಿಂಟ್ ಆದ ಮೇಲೆ ನಿಮ್ಮ ಕಡೆಯವರಿಗೆ ಯಾವುದೇ ಡಾಕ್ಯುಮೆಂಟ್ ಇಲ್ಲದೆ ಲೋನ್ ಕೊಟ್ಟು ಅದನ್ನು ನಾನು ಪರ್ಫಾರ್ಮಿಂಗ್ ಅಸೆಟ್ ಅಂತ ಡಿಕ್ಲೇರ್ ಮಾಡ್ತೀರಾ. ಸಾಮಾನ್ಯ ಜನರು ಪಾಪ ಇದೆಲ್ಲಾ ಗೊತ್ತಿಲ್ಲದೆ ಒಂದು ಪರ್ಸೆಂಟ್ ಜಾಸ್ತಿ ಸಿಗುತ್ತೆ ಅಂತ ಆಪರೇಟಿವ್ ಬ್ಯಾಂಕ್ ನಲ್ಲಿ ಹೋಗುತ್ತಾರೆ ಅವರು ಅಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ದಯವಿಟ್ಟು ಯಾವುದೇ ಕೋ ಆಪರೇಟಿವ್ ಬ್ಯಾಂಕಲ್ಲಿ ದುಡ್ಡನ್ನು ಇಡುವುದಕ್ಕೆ ಹೋಗಬೇಡಿ. ಆರ್ ಬಿ ಎ ರೂಲ್ಸ್ ಅನ್ನು ನೋಡಿ ಒಂದು ಸರಿ. ಯಾರಾದರೂ ದುಡ್ಡು ಇಟ್ಟಿದ್ದರೆ ತಕ್ಷಣ ತೆಗೆದುಬಿಡಿ ಮತ್ತು ನ್ಯಾಷನಲ್ ಬ್ಯಾಂಕ್ ಅಥವಾ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ನಲ್ಲಿ ಇಡೀ . ಅಥವಾ ಎಲ್ಲಿಯಾದರೂ ಇನ್ವೆಸ್ಟ್ಮೆಂಟ್ ಮಾಡಿ ಇನ್ಸುರೆನ್ಸಲ್ಲಿ. ಯೂನಿಟ್ ಲಿಂಕ್ ಇನ್ವೆಸ್ಟ್ಮೆಂಟ್ ಪ್ಲಾನ್ ನಲ್ಲಿ. ಮ್ಯೂಚುಯಲ್ ಫಂಡ್ ಅಲ್ಲಿ ಇನ್ವೆಸ್ಟ್ಮೆಂಟ್ ಮಾಡಿ" ಎಂದು ಮಹೇಶ್‌ ಎಚ್‌ಜೆ ಎಂಬ ಬಳಕೆದಾರರು ಸಲಹೆ ನೀಡಿದ್ದಾರೆ.

"ನಿಮ್ಮಅರ್ಥ ಪೂರ್ಣ ಮಾತುಗಳನ್ನುಕೇಳಿ ಸಂತೋಷವಾಯಿತು ನಾನು ಈಬ್ಯಾಂಕಿನ ಅತ್ಯಂತ ಹಿರಿಯ ಸದಸ್ಯೆ ಈಗ ಎಂಭತ್ತು ವರ್ಷ ದಾಟಿರುವವಳು .ನಿಮ್ಮಲ್ಲಿ ನನ್ನ ಕಳಕಳಿಯ ಮನವಿ ಏನೆಂದರೆ ಬ್ಯಾಂಕ್ ಹಣ ಕಳೆದುಕೊಳ್ಳುತ್ತಿರುವವರಿಗೆ ಐದು ಲಕ್ಷ ಕೊಡುವಾಗ ನಮ್ಮಂತಹ ಹಿರಿಯರಕಡೆ ದಯವಿಟ್ಟು ಮೊದಲು ಗಮನ ಹರಿಸಲಿ" ಎಂದು ಶಾಂತನಾಗರಾಜ್‌ ಎಂಬ ಹಿರಿಯರು ಕಾಮೆಂಟ್‌ ಮಾಡಿದ್ದಾರೆ.

"ಬ್ಯಾಂಕುಗಳನ್ನು ಮಾಡಿಕೊಳ್ಳುವುದು ಅವರ ಅನುಕೂಲಕ್ಕಾಗಿ ಇದರಲ್ಲಿ ನಷ್ಟ ಅನುಭವಿಸುವವರು ಸಾಮಾನ್ಯ ಗ್ರಾಹಕರು ಏಕೆಂದರೆ ಅವರಿಗೆ ಲೋನ್ ಅವಶ್ಯಕತೆ ಇರುತ್ತದೆ ತಮಗೆ ಬೇಕಾದವರಿಗೆ ಒಂದು ಕೋಟಿ ಎರಡು ಕೋಟಿ ಲೋನ್ ಕೊಡುತ್ತಾರೆ ಅದನ್ನು ಮತ್ತೆ ರಿಕವರಿ ಮಾಡುವುದಿಲ್ಲ ಬಡ ಜನರಿಂದ ಡೆಪಾಸಿಟ್ ಎಂದು ಒಂದು ಲಕ್ಷ ಎರಡು ಲಕ್ಷ ಮೂರು ಲಕ್ಷ ತೆಗೆದುಕೊಂಡು ಮೆಚುರಿಟಿ ಆದರೂ ಕೂಡ ಹಣ ಕೊಡುವುದಿಲ್ಲ ಅದಕ್ಕೆ ಈ ಕೋ ಆಪರೇಟಿವ್ ಸೊಸೈಟಿಗಳು ದಿವಾಳಿಯಾಗುವುದು" ಎಂದು ಕೆಜಿ ಬಸವರಾಜ್‌ ಎಂಬ ಫೇಸ್‌ಬುಕ್‌ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ