National Co-operative Bank: ಬೆಂಗಳೂರು ಮೂಲದ ನ್ಯಾಷನಲ್‌ ಕೋ ಆಪರೇಟಿವ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ, ಠೇವಣಿದಾರರಿಗೆ ಆತಂಕ
ಕನ್ನಡ ಸುದ್ದಿ  /  ಕರ್ನಾಟಕ  /  National Co-operative Bank: ಬೆಂಗಳೂರು ಮೂಲದ ನ್ಯಾಷನಲ್‌ ಕೋ ಆಪರೇಟಿವ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ, ಠೇವಣಿದಾರರಿಗೆ ಆತಂಕ

National Co-operative Bank: ಬೆಂಗಳೂರು ಮೂಲದ ನ್ಯಾಷನಲ್‌ ಕೋ ಆಪರೇಟಿವ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ, ಠೇವಣಿದಾರರಿಗೆ ಆತಂಕ

ನ್ಯಾಷನಲ್‌ ಕೋ-ಆಪಪೇಟಿವ್‌ ಬ್ಯಾಂಕ್‌ ಲಿಮಿಟೆಡ್‌ಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ವಹಿವಾಟು ನಿರ್ಬಂಧಗಳನ್ನು ವಿಧಿಸಿದೆ. ಠೇವಣಿದಾರರು ಬ್ಯಾಂಕ್‌ನಲ್ಲಿರುವ ತಮ್ಮ ಖಾತೆಯಿಂದ 50 ಸಾವಿರ ರೂ.ಗಿಂತ ಹೆಚ್ಚು ಹಣ ವಿತ್‌ಡ್ರಾ ಮಾಡುವಂತೆ ಇಲ್ಲ. ಬೆಂಗಳೂರು ಮೈಸೂರಿನಲ್ಲಿ 13 ಶಾಖೆಗಳನ್ನು ಹೊಂದಿರುವ ಬ್ಯಾಂಕ್‌ನ ಹೂಡಿಕೆದಾರರು ಇದರಿಂದ ಆತಂಕಕ್ಕೆ ಒಳಗಾಗಿದ್ದಾರೆ.

National Co-operative Bank: ಬೆಂಗಳೂರು ಮೂಲದ ನ್ಯಾಷನಲ್‌ ಕೋ ಆಪರೇಟಿವ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ, ಠೇವಣಿದಾರರಿಗೆ ಆತಂಕ
National Co-operative Bank: ಬೆಂಗಳೂರು ಮೂಲದ ನ್ಯಾಷನಲ್‌ ಕೋ ಆಪರೇಟಿವ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ, ಠೇವಣಿದಾರರಿಗೆ ಆತಂಕ

ಬೆಂಗಳೂರು: ಬೆಂಗಳೂರು ಮೂಲದ ನ್ಯಾಷನಲ್‌ ಕೋ-ಆಪಪೇಟಿವ್‌ ಬ್ಯಾಂಕ್‌ ಲಿಮಿಟೆಡ್‌ಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ವಹಿವಾಟು ನಿರ್ಬಂಧಗಳನ್ನು ವಿಧಿಸಿದೆ. ಬ್ಯಾಂಕ್‌ನ ಹಣಕಾಸು ಸ್ಥಿತಿ ದುರ್ಬಲವಾಗಿರುವುದರಿಂದ ಠೇವಣಿದಾರರು ಗರಿಷ್ಠ 50 ಸಾವಿರ ರೂಪಾಯಿವರೆಗೆ ಮಾತ್ರ ವಿತ್‌ಡ್ರಾ ಮಾಡಿಕೊಳ್ಳುವ ಮಿತಿಯನ್ನು ಆರ್‌ಬಿಐ ವಿಧಿಸಿದೆ ಎಂದು ಮನಿಕಂಟ್ರೋಲ್‌ ವರದಿ ಮಾಡಿದೆ. ಇದರಿಂದ ಕರ್ನಾಟಕದ ಸುಮಾರು 13 ಶಾಖೆಗಳಲ್ಲಿ ಹಣ ಠೇವಣಿಯಿಟ್ಟವರು ಆತಂಕಕ್ಕೆ ಒಳಗಾಗಿದ್ದಾರೆ.

ಬೆಂಗಳೂರು ಮತ್ತು ಮೈಸೂರಿನಲ್ಲಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌ನ 13 ಶಾಖೆಗಳಿವೆ. ಬೆಂಗಳೂರಿನ ಗಾಂಧಿ ಬಜಾರ್, ಜಯನಗರ 5ನೇ ಬ್ಲಾಕ್, ಬನಶಂಕರಿ 2ನೇ ಹಂತ, ಕೋರಮಂಗಲ, ಸದಾಶಿವನಗರ, ಅಗ್ರಹಾರ ದಾಸರಹಳ್ಳಿ, ಬನಶಂಕರಿ 3ನೇ ಹಂತ (ಶ್ರೀ ವಿದ್ಯಾ ನಗರ), ಇಂದಿರಾನಗರ, ಯಶವಂತಪುರ, ರಾಜರಾಜೇಶ್ವರಿನಗರ, ಬಾಣಸವಾಡಿ ಪ್ರದೇಶಗಳಲ್ಲಿ ನ್ಯಾಷನಲ್ ಕೋ ಆಪರೇಟಿವ್‌ ಬ್ಯಾಂಕ್ ಶಾಖೆ ಹೊಂದಿದೆ. ಮೈಸೂರಿನ ಕುವೆಂಪು ನಗರದಲ್ಲಿ ಬ್ಯಾಂಕ್ ಶಾಖೆ ಇದೆ. ಹತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್‌ನಲ್ಲಿ ಕರ್ನಾಟಕದ ಸಾಕಷ್ಟು ಜನರು ವಹಿವಾಟು ನಡೆಸುತ್ತಿದ್ದಾರೆ. ಇದೀಗ ರಿಸರ್ವ್ ಬ್ಯಾಂಕ್ ವಿಧಿಸಿರುವ ನಿರ್ಬಂಧದಿಂದ ಇವರಲ್ಲಿ ಆತಂಕ ಮೂಡಿದೆ.

ಆರ್‌ಬಿಐನಿಂದ ಏನೆಲ್ಲ ನಿರ್ಬಂಧ?

ಠೇವಣಿದಾರರು ಬ್ಯಾಂಕ್‌ನಲ್ಲಿರುವ ತಮ್ಮ ಖಾತೆಯಿಂದ 50 ಸಾವಿರ ರೂ.ಗಿಂತ ಹೆಚ್ಚು ಹಣ ವಿತ್‌ಡ್ರಾ ಮಾಡುವಂತೆ ಇಲ್ಲ. ಇಷ್ಟು ಮಾತ್ರವಲ್ಲದೆ ಪೂರ್ವಾನುಮತಿಯಿಲ್ಲದೆ ಹೊಸ ಸಾಲಗಳನ್ನು ಬ್ಯಾಂಕ್‌ ಯಾರಿಗೂ ನೀಡಬಾರದು. ಹೊಸ ಠೇವಣಿಗಳನ್ನು ಸ್ವೀಕರಿಸಲು ಕೂಡ ಬ್ಯಾಂಕ್‌ಗೆ ಅನುಮತಿಸಲಾಗುವುದಿಲ್ಲ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ನ್ಯಾಷನಲ್‌ ಕೋ-ಆಪರೇಟಿವ್‌ ಬ್ಯಾಂಕ್‌ನ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ 5 ಲಕ್ಷ ರೂ.ವರೆಗಿನ ಠೇವಣಿ ವಿಮಾ ಕ್ಲೈಮ್ ಮೊತ್ತವನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ ಎಂದು ಆರ್‌ಬಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಆದರೆ, ವ್ಯಾಪಾರ, ವಹಿವಾಟು ನಿರ್ಬಂಧ ಮಾತ್ರ ಹೇರಲಾಗಿದ್ದು, ಬ್ಯಾಂಕಿಂಗ್‌ ಪರವಾನಗಿಯನ್ನು ರದ್ದುಗೊಳಿಸುವುದಿಲ್ಲ ಎಂದು ಆರ್‌ಬಿಐ ಉಲ್ಲೇಖಿಸಿದೆ. ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ ಸುಧಾರಿಸುವವರೆಗೆ ನಿರ್ಬಂಧ ಮುಂದುವರೆಯುತ್ತದೆ. ಈ ಸಮಯದಲ್ಲಿ ಬ್ಯಾಂಕ್‌ ತನ್ನ ಬ್ಯಾಂಕಿಂಗ್‌ ವ್ಯವಹಾರ ಮುಂದುವರೆಸುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಪರಿಸ್ಥಿತಿಗೆ ತಕ್ಕಂತೆ ಈ ನಿರ್ದೇಶನಗಳನ್ನು ಆರ್‌ಬಿಐ ಮಾರ್ಪಾಡು ಮಾಡಬಹುದು. ಈ ನಿರ್ಬಂಧವು ಜುಲೈ 24, 2023ರಿಂದ ಆರು ತಿಂಗಳ ಅವಧಿಗೆ ಇರಲಿದೆ. ಈ ಸಮಯದಲ್ಲಿ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಆರ್‌ಬಿಐ ತಿಳಿಸಿದೆ.

ಇದೇ ಮೇ ತಿಂಗಳಿನಲ್ಲಿ ಕೆಲವು ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ ನ್ಯಾಷನಲ್‌ ಕೋ-ಆಪಪೇಟಿವ್‌ ಬ್ಯಾಂಕ್‌ ಲಿಮಿಟೆಡ್‌ಗೆ ದಂಡ ವಿಧಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಠೇವಣಿದಾರರಿಗೆ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಗೆ ಸಂಬಂಧಪಟ್ಟಂತೆ ನಿರ್ದಿಷ್ಟ ದಂಡವನ್ನು ಬ್ಯಾಂಕ್‌ ವಿಧಿಸುತ್ತಿತ್ತು. ಬ್ಯಾಲೆನ್ಸ್‌ ಕೊರತೆಯ ಪ್ರಮಾಣಕ್ಕೆ ತಕ್ಕಂತೆ ದಂಡ ವಿಧಿಸದೆ ನಿರ್ದಿಷ್ಟ (ಫಿಕ್ಸಡ್‌) ದಂಡ ವಿಧಿಸಿತ್ತು. ಇದಕ್ಕಾಗಿ ಆರ್‌ಬಿಐ ಬ್ಯಾಂಕ್‌ಗೆ ದಂಡ ವಿಧಿಸಿ ಎಚ್ಚರಿಕೆ ನೀಡಿತ್ತು.

2021ರ ಮಾರ್ಚ್‌ 31ರ ಲಭ್ಯವಿರುವ ಬ್ಯಾಂಕ್‌ನ ಕೊನೆಯ ವಾರ್ಷಿಕ ವರದಿಯ ಪ್ರಕಾರ ಒಟ್ಟು ರೂ 1,679 ಕೋಟಿ ಠೇವಣಿ ಮತ್ತು ರೂ 1,128 ಕೋಟಿ ಸಾಲಗಳನ್ನು ಹೊಂದಿದೆ.. ಬಳಿಕದ ಅಂಕಿಅಂಶಗಳು ಲಭ್ಯವಿಲ್ಲ. 2021ರ ಮಾರ್ಚ್‌ 31ರ ಸಮಯದಲ್ಲಿ ಬ್ಯಾಂಕ್‌ನ ಅನುತ್ಪಾದಕ ಸ್ವತ್ತುಗಳು ಶೇಕಡ 27.81ರಷ್ಟಿದೆ. ಇದು ಶೇಕಡ 12.12 ಬಂಡವಾಳದ ಸಮರ್ಪಕತೆಯ ಅನುಪಾತವನ್ನು ಹೊಂದಿದೆ.

Whats_app_banner