ಬಾಗಲಕೋಟೆ-ಮುಗಳೊಳ್ಳಿ ಮತ್ತು ಆಲಮಟ್ಟಿ-ಜಡ್ರಾಮಕುಂಟಿ ನಿಲ್ದಾಣಗಳ ನಡುವೆ ಅಗತ್ಯ ಕಾಮಗಾರಿ, ರೈಲು ಸಂಚಾರ ವಿಳಂಬ
Apr 11, 2024 10:26 AM IST
ಬಾಗಲಕೋಟೆ-ಮುಗಳೊಳ್ಳಿ ಮತ್ತು ಆಲಮಟ್ಟಿ-ಜಡ್ರಾಮಕುಂಟಿ ನಿಲ್ದಾಣಗಳ ನಡುವೆ ಅಗತ್ಯ ಕಾಮಗಾರಿ ಕೈಗೊಂಡಿರುವ ರೈಲು ಸಂಚಾರ ವಿಳಂಬವಾಗಬಹುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ. (ಸಾಂಕೇತಿಕ ಚಿತ್ರ)
ನೈಋತ್ಯ ರೈಲ್ವೆ, ಮಧ್ಯ ರೈಲ್ವೆ ವಿಭಾಗಗಳಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಪೈಕಿ, ಬಾಗಲಕೋಟೆ-ಮುಗಳೊಳ್ಳಿ ಮತ್ತು ಆಲಮಟ್ಟಿ-ಜಡ್ರಾಮಕುಂಟಿ ನಿಲ್ದಾಣಗಳ ನಡುವೆ ಅಗತ್ಯ ಕಾಮಗಾರಿ ಕೈಗೊಂಡಿರುವ ಕಾರಣ ರೈಲು ಸಂಚಾರ ವಿಳಂಬವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಅಗತ್ಯ ಕಾಮಗಾರಿಗಳು ನಡೆಯುತ್ತಿರುವ ಕಾರಣ ಈ ತಿಂಗಳಲ್ಲಿ ಕೆಲವು ರೈಲುಗಳ ಪ್ರಯಾಣ ತಡವಾಗಲಿದೆ. ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಅದೇ ರೀತಿ ಕೆಲವು ರೈಲುಗಳ ಪ್ರಯಾಣದ ಅವಧಿಯನ್ನು ನಿಯಂತ್ರಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಬುಧವಾರ (ಏಪ್ರಿಲ್ 10) ತಿಳಿಸಿದೆ.
ಇದರಂತೆ, ಬಾಗಲಕೋಟೆ-ಮುಗಳೊಳ್ಳಿ ಮತ್ತು ಆಲಮಟ್ಟಿ-ಜಡ್ರಾಮಕುಂಟಿ ನಿಲ್ದಾಣಗಳ ನಡುವೆ ಅಗತ್ಯ ಎಂಜಿನಿಯರಿಂಗ್ ಕಾಮಗಾರಿ ಇರುವುದರಿಂದ ಈ ಕೆಳಗಿನ ರೈಲುಗಳು ತಡವಾಗಿ ಪ್ರಯಾಣ ಶುರುಮಾಡುತ್ತವೆ.
1) ವಿಜಯಪುರದಿಂದ ಹೊರಡುವ ರೈಲು ಸಂಖ್ಯೆ 06920 ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಏಪ್ರಿಲ್ 12 ರಿಂದ 14 ರವರೆಗೆ 45 ನಿಮಿಷ ತಡವಾಗಿ ಹೊರಡಲಿದೆ.
2) ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 17330 ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 12 ರಿಂದ 14 ರವರೆಗೆ 60 ನಿಮಿಷ ತಡವಾಗಿ ಹೊರಡಲಿದೆ.
ರೈಲುಗಳ ಮಾರ್ಗ ಬದಲಾವಣೆ
ತಿರುಪತಿ ನಿಲ್ದಾಣದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವುದರಿಂದ ಈ ಕೆಳಗಿನ ರೈಲುಗಳು ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ.
1) ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಏಪ್ರಿಲ್ 22 ರಂದು ಹೊರಡುವ ರೈಲು ಸಂಖ್ಯೆ 12890 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಟಾಟಾನಗರ ಎಕ್ಸ್ ಪ್ರೆಸ್ ರೈಲು ಕಟಪಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ತಿರುಪತಿ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.
2) ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಏಪ್ರಿಲ್ 16, 18 ಮತ್ತು 23 ರಂದು ಹೊರಡುವ ರೈಲು ಸಂಖ್ಯೆ 12836 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಹಟಿಯಾ ಎಕ್ಸ್ ಪ್ರೆಸ್ ರೈಲು ಕಟಪಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಚಿತ್ರರು ಮತ್ತು ತಿರುಪತಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ರೈಲುಗಳ ಪ್ರಯಾಣ ಅವಧಿ ನಿಯಂತ್ರಣ
ಜಲಗಾಂವ್-ಮನ್ಮಾಡ್ ಭಾಗದ ನಡುವಿನ 3 ನೇ ಮಾರ್ಗಕ್ಕೆ ಸಂಬಂಧಿಸಿ ಚಾಲಿಸಗಾಂವ್ ಯಾರ್ಡ್ ಕಾಮಗಾರಿ ಸಲುವಾಗಿ ಏಪ್ರಿಲ್ 10 ರಿಂದ 16 ರವರೆಗೆ ಈ ಕೆಳಗಿನ ರೈಲುಗಳನ್ನು ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತಿದೆ ಎಂದು ಮಧ್ಯ ರೈಲ್ವೆಯು ಸೂಚಿಸಿದೆ.
1)ವಾಸ್ಕೋ ಡ ಗಾಮಾ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12779 ವಾಸ್ಕೋ ಡ ಗಾಮಾ-ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 15 ರಂದು ಮಾರ್ಗ ಮಧ್ಯದಲ್ಲಿ 90 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.
2) ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್- ವಾಸ್ಕೋ ಡ ಗಾಮಾ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 15 ರಂದು ಮಾರ್ಗ ಮಧ್ಯದಲ್ಲಿ 145 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.
ರೈಲ್ವೆ ಪ್ರಯಾಣಿಕರು ಮುಂಚಿತವಾಗಿ ರೈಲು ಪ್ರಯಾಣ ಅವಧಿ ನಿಯಂತ್ರಣ, ಮಾರ್ಗ ಬದಲಾವಣೆ, ನಿಲುಗಡೆ ಇಲ್ಲದಿರುವುದು, ವಿಳಂಬವಾಗಿ ಹೊರಡುವ ರೈಲುಗಳ ವಿಚಾರ ಗಮನಿಸಬೇಕು ಎಂದು ನೈಋತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.