logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Cabinet: ಮಕ್ಕಳಿಗೆ ಮೊಟ್ಟೆ ವಿತರಣೆಗೆ 297 ಕೋಟಿ ರೂ. ಅನುದಾನ ನೀಡಿದ ಕರ್ನಾಟಕ ಕ್ಯಾಬಿನೆಟ್‌; ಇನ್ನೂ ಕೆಲವು ನಿರ್ಧಾರಗಳ ವಿವರ

Karnataka Cabinet: ಮಕ್ಕಳಿಗೆ ಮೊಟ್ಟೆ ವಿತರಣೆಗೆ 297 ಕೋಟಿ ರೂ. ಅನುದಾನ ನೀಡಿದ ಕರ್ನಾಟಕ ಕ್ಯಾಬಿನೆಟ್‌; ಇನ್ನೂ ಕೆಲವು ನಿರ್ಧಾರಗಳ ವಿವರ

HT Kannada Desk HT Kannada

Jul 27, 2023 10:17 PM IST

ಸಚಿವ ಹೆಚ್‌ ಕೆ ಪಾಟೀಲ್‌ (ಕಡತ ಚಿತ್ರ)

  • Karnataka Cabinet Decisions: ಮಕ್ಕಳಿಗೆ ಮತ್ತು ಮಾತೃಪೂರ್ಣ ಯೋಜನೆ ಫಲಾನುಭವಿಗಳಿಗೆ ಮೊಟ್ಟೆ ವಿತರಣೆ ಮಾಡುವುದಕ್ಕಾಗಿ 297 ಕೋಟಿ ರೂಪಾಯಿ ಅನುದಾನ ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಇದೂ ಸೇರಿ 15 ಪ್ರಮುಖ ಪ್ರಸ್ತಾವನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ಸಚಿವ ಸಂಪುಟ ಸಭೆ ಅಂಗೀಕರಿಸಿದೆ.

ಸಚಿವ ಹೆಚ್‌ ಕೆ ಪಾಟೀಲ್‌ (ಕಡತ ಚಿತ್ರ)
ಸಚಿವ ಹೆಚ್‌ ಕೆ ಪಾಟೀಲ್‌ (ಕಡತ ಚಿತ್ರ) (HK Patil)

ಬೆಂಗಳೂರು: ಆರು ತಿಂಗಳಿಂದ ಆರು ವರ್ಷ ತನಕ ಮಕ್ಕಳಿಗೆ ಹಾಗೂ ಮಾತೃಪೂರ್ಣ ಯೋಜನೆಯ ಫಲಾನುಭವಿಗಳಿಗೆ ಮೊಟ್ಟೆ ನೀಡುವುದಕ್ಕೆ 297.19 ಕೋಟಿ ರೂಪಾಯಿ ಅನುದಾನ ನೀಡಲು ಕರ್ನಾಟಕ ಸಚಿವ ಸಂಪುಟ ತೀರ್ಮಾನ ಮಾಡಿದೆ ಎಂದು ಸಚಿವ ಹೆಚ್‌. ಕೆ.ಪಾಟೀಲ್‌ ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

Environment day: ವಿಶ್ವ ಪರಿಸರ ದಿನಕ್ಕೆ ಜಾಗತಿಕ ತಾಪಮಾನದ ಮೇಲೆ ಪ್ರಬಂಧ ಬರೆಯಿರಿ, 5000 ರೂ. ಬಹುಮಾನ ಪಡೆಯಿರಿ

Vijayapura News: ವಿಜಯಪುರ ಬಿಎಲ್‌ಡಿಇಯಲ್ಲಿ ಕೌಶಲ್ಯಗಳ ಸಂಗಮ, ತಾಂತ್ರಿಕ ಹಬ್ಬದ ಸಡಗರ

Museums Day 2024: ಬೆಂಗಳೂರು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ಮೈಸೂರು ಮ್ಯೂಸಿಯಂಗಳಿಗೆ ಹೊಸ ರೂಪ, ಏನಿದರ ವಿಶೇಷ

Bangalore Mysore Expressway: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮೊಬೈಲ್ ನಲ್ಲಿ ಮಾತಾಡಿಕೊಂಡು ಡ್ರೈವ್ ಮಾಡಿದರೆ ದಂಡ ಗ್ಯಾರಂಟಿ

ಅವರು ಇಂದು (ಜು.27) ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಚಿವ ಸಂಪುಟ ಸಭೆ ನಡೆದ ಬಳಿಕ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದರು. ಸಚಿವ ಸಂಪುಟ ಸಭೆಯಲ್ಲಿ ಒಟ್ಟು 15 ವಿಷಯಗಳು ಚರ್ಚೆಗೆ ಬಂದಿದ್ದವು. ಅವುಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಅಂಗನವಾಡಿಗಳಲ್ಲಿ ಆರು ತಿಂಗಳಿಂದ ಆರು ವರ್ಷ ತನಕದ ಮಕ್ಕಳಿಗೆ ಹಾಗೂ ಮಾತೃಪೂರ್ಣ ಯೋಜನೆಯ ಫಲಾನುಭವಿಗಳಿಗೆ ಮೊಟ್ಟೆ ನೀಡುವ ಕಾರ್ಯಕ್ರಮಕ್ಕೆ 297.19 ಕೋಟಿ ರೂಪಾಯಿ ಅನುದಾನ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ. ಮೊಟ್ಟೆ ನೀಡುವ ವಿಚಾರಕ್ಕೆ ಸಂಬಂಧಿಸಿ ಚರ್ಚೆ ನಡೆದಿದ್ದು, ವಿಭಾಗವಾರು ಮೊಟ್ಟೆ ಖರೀದಿಸಿ ವಿತರಿಸುವ ನಿರ್ಣಯ ಕೈಗೊಳ್ಳಲಾಗಿದೆ.

ಪ್ರತಿ ಮೊಟ್ಟೆಯನ್ನು ಗರಿಷ್ಠ 6 ರೂಪಾಯಿ ಮೀರದಂತೆ ಖರೀದಿಸಲು ಅವಕಾಶ ಒದಗಿಸಲಾಗುತ್ತಿದೆ. ಇದುವರೆಗೆ ಬಾಲವಿಕಾಸ ಸಮಿತಿಯ ಖಾತೆಗೆ ಹಣ ವರ್ಗಾಯಿಸಿ ಮೊಟ್ಟೆ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಅಂಗನವಾಡಿ ಕಾರ್ಯಕರ್ತೆಯರು ಕೈಯಿಂದ ದುಡ್ಡು ಹಾಕಿ ಮೊಟ್ಟೆ ಖರೀದಿ ಮಾಡಿ ಬಳಿಕ ಈ ಹಣವನ್ನು ಪಡೆಯಬೇಕಾಗಿತ್ತು. ಈ ಕುರಿತು ಅಹವಾಲು ಕೇಳಿಬಂದ ಕಾರಣ ಟೆಂಡರ್‌ ಮೂಲಕ ಮೊಟ್ಟೆ ಖರೀದಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಸಚಿವ ಪಾಟೀಲ್‌ ವಿವರಿಸಿದರು.

ಎಪಿಎಂಸಿ ರಸ್ತೆ, ಮೂಲಸೌಕರ್ಯ ಅಭಿವೃದ್ಧಿಗೆ 130.40 ಕೋಟಿ ರೂಪಾಯಿ

ಸಹಕಾರ ಇಲಾಖೆ ಮೂಲಕ ಎಪಿಎಂಸಿಗಳಿಗೆ ರಸ್ತೆ ನಿರ್ಮಾಣ ಮಾಡಲು, ಮೂಲಭೂತ ಸೌಲಭ್ಯ ಒದಗಿಸಿಕೊಡಲು 130.40 ಕೋಟಿ ಮಂಜೂರು ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಹೆಚ್​.ಕೆ. ಪಾಟೀಲ್ ತಿಳಿಸಿದರು.

ಎಪಿಎಂಸಿಗಳಲ್ಲಿ ರಸ್ತೆ ಸೌಕರ್ಯ ಹದಗೆಟ್ಟಿರುವ ದೂರು ಇದೆ. ಅದೇ ರೀತಿ ಇನ್ನೂ ಕೆಲವು ಮೂಲಸೌಕರ್ಯ ಆಗಬೇಕಾದ್ದು ಇರುವ ಕಾರಣ ಈ ಅನುದಾನದ ಮೂಲಕ ಈ ಕೆಲಸಗಳನ್ನು ಈಡೇರಿಸಬಹುದು ಎಂದು ಸಚಿವರು ವಿವರಿಸಿದರು.

ಆದಾಯ ಹೆಚ್ಚಿಸಲು ಕಲ್ಲುಗಣಿಗಾರಿಕೆ ದಂಡ, ರಾಯಲ್ಟಿ ಬಳಕೆಗೆ ಸಚಿವ ಸಂಪುಟ ತೀರ್ಮಾನ

ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಜಾಗದಲ್ಲಿ ಅದನ್ನು ಅಕ್ರಮವಾಗಿ ನಡೆಸುತ್ತಾ ಇದ್ದರೆ ಅದರ ಆಡಿಟ್ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಅಕ್ರಮ ಸಾಗಾಣಿಕೆ ಗಮನಕ್ಕೆ ಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು.

ಅಂದಾಜು 8 ವರ್ಷಗಳಿಂದ ಬಾಕಿ ಇರುವ 6,105 ಕೋಟಿ ರೂಪಾಯಿ ದಂಡ ಮತ್ತು ರಾಯಲ್ಟಿ ವಸೂಲಿ ಮಾಡಲು ತೀರ್ಮಾನಿಸಲಾಗಿದೆ. ಈ ಹಣವನ್ನು ಏಕ ಕಂತಿನ ಸೆಟಲ್‌ಮೆಂಟ್‌ ಮೂಲಕ ವಸೂಲಿ ಮಾಡಲು ಯೋಜನೆ ರೂಪಿಸಲಾಘುವುದು. ಬಳಿಕ ಹಣವನ್ನು ಸರ್ಕಾರ ಉಪಯೋಗ ಮಾಡಿಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಪಾಟೀಲ್ ತಿಳಿಸಿದರು.

ಕೊಡಗರು ಅಲ್ಲ ಕೊಡವರು ಎಂದು ಪರಿಷ್ಕರಣೆ

ಹಿಂದುಳಿದ ಆಯೋಗದ ಸಲಹೆಯಂತೆ ಹಾಗೂ ನ್ಯಾಯಾಲಯದ ಸಲಹೆಯಂತೆ ಹಿಂದುಳಿದ ವರ್ಗದ ಜಾತಿ ಪಟ್ಟಿಯ 3ಎ ಯಲ್ಲಿ ಇರುವ ಕೊಡಗರು ಎಂಬುದರ ಬದಲಾಗಿ ಕೊಡವ / ಕೊಡವರು ಅಂತ ಬದಲಾವಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಹೆಚ್‌.ಕೆ.ಪಾಟೀಲ್‌ ವಿವರಿಸಿದರು.

ಶಿವಾಜಿನಗರದ ಅಟಲ್ ವೈದ್ಯಕೀಯ ಕಾಲೇಜಿನಲ್ಲಿ ಚರಕ ಸೂಪರ್ ಅಸ್ಪತ್ರೆ

ಶಿವಾಜಿನಗರದ ಅಟಲ್ ವೈದ್ಯಕೀಯ ಕಾಲೇಜಿನಲ್ಲಿ ಚರಕ ಸೂಪರ್ ಅಸ್ಪತ್ರೆ ನಿರ್ಮಾಣ ಮಾಡಲು ಸಮ್ಮತಿಸಲಾಗಿದೆ. 22.70 ಕೋಟಿ ರೂಪಾಯಿ ಅಂದಾಜು ಮೊತ್ತದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಪಾಟೀಲ್ ಮಾಹಿತಿ ನೀಡಿದರು. ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ 26 ಕೋಟಿ ರೂಪಾಯಿ ಅಂದಾಜು ಮೊತ್ತದಲ್ಲಿ ನೆಫ್ರೋ ಯೂರಾಲಜಿಯಲ್ಲಿ ಅನೆಕ್ಸ್ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಪುಟ ಅನುಮೋದನೆ ನೀಡಿದೆ. ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಧಾಮಗಳ ಸುತ್ತಮುತ್ತಲಿನ ಪ್ರದೇಶ ಪರಿಸರ ಸೂಕ್ಷ ವಲಯವೆಂದು ಘೋಷಣೆ ಮಾಡಲು ಅಧ್ಯಯನಕ್ಕೆ ಸಚಿವ ಸಂಪುಟ ಉಪ ಸಮಿತಿಯ ರಚನೆಗೆ ಹಸಿರು ನಿಶಾನೆ ತೋರಲಾಗಿದೆ.

ಸಚಿವರ ವಿರುದ್ಧ ಶಾಸಕರ ಪತ್ರ ಚರ್ಚೆ ಆಗಿಲ್ಲ

ಸಚಿವರ ವಿರುದ್ಧ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚ ಆಗಿಲ್ಲ. ಅದೇ ರೀತಿ ತನ್ವೀರ್ ಸೇಠ್ ಪತ್ರದ ಬಗ್ಗೆಯೂ ಚರ್ಚೆಆಗಲಿಲ್ಲ ಎಂದು ಅವರು ತಿಳಿಸಿದರು.

67 ಕೈದಿಗಳ ಬಿಡುಗಡೆಗೆ ಒಪ್ಪಿಗೆ

ಸನ್ನಡತೆ ಆಧಾರದಲ್ಲಿ 67 ಕೈದಿಗಳ ಬಿಡುಗಡೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಭಾರತ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಸನ್ನಡೆತೆಯ ಆಧಾರದಲ್ಲಿ 67 ಕೈದಿಗಳ ಬಿಡುಗಡೆಗೆ ನಿರ್ಣಯ ಕೈಗೊಳ್ಳಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಕೈದಿಗಳ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು. ಬೆಂಗಳೂರು ಸೆಂಟ್ರಲ್ ಜೈಲ್ನಿಂದ 24, ಮೈಸೂರಿನಲ್ಲಿ 8, ಬೆಳಗಾವಿ 2, ಕಲಬುರ್ಗಿ 5, ಶಿವಮೊಗ್ಗ 6, ಬಳ್ಳಾರಿ 8, ಧಾರವಾಡ 2 ಮಂದಿ ಕೈದಿಗಳ ಬಿಡುಗಡೆಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವರು ವಿವರ ನೀಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ