logo
ಕನ್ನಡ ಸುದ್ದಿ  /  ಕರ್ನಾಟಕ  /  ಸಿಇಟಿ, ನೀಟ್ ಕುರಿತು ಆಟೊ ಚಾಲಕನೊಂದಿಗೆ ಮಹಿಳೆ ಚರ್ಚೆ; ಪ್ರಯಾಣದಲ್ಲಿನ ಸಂಭಾಷಣೆ ಪೋಸ್ಟ್‌ ವೈರಲ್, ಭಾರಿ ಮೆಚ್ಚುಗೆ

ಸಿಇಟಿ, ನೀಟ್ ಕುರಿತು ಆಟೊ ಚಾಲಕನೊಂದಿಗೆ ಮಹಿಳೆ ಚರ್ಚೆ; ಪ್ರಯಾಣದಲ್ಲಿನ ಸಂಭಾಷಣೆ ಪೋಸ್ಟ್‌ ವೈರಲ್, ಭಾರಿ ಮೆಚ್ಚುಗೆ

Raghavendra M Y HT Kannada

May 05, 2024 03:13 PM IST

ಮಹಿಳೆಯೊಬ್ಬರು ಆಟೋ ಚಾಲಕರೊಬ್ಬರೊಂದಿಗೆ ಸಿಇಟಿ, ನೀಟ್ ಪರೀಕ್ಷೆಗಳ ಬಗ್ಗೆ ಚರ್ಚೆ ಮಾಡಿರುವ ಪೋಸ್ಟ್ ಅವನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

  • ನಮ್ರತಾ ಎಸ್ ರಾವ್ ಎಂಬುವರು ಬೆಂಗಳೂರಿನ ಆಟೋ ಚಾಲಕನೊಂದಿಗೆ ನಡೆಸಿರುವ ಹೃದಯಸ್ಪರ್ಶಿ ಸಂಭಾಷಣೆ ನಿಜವಾದ ಮಾನವ ಸಂಪರ್ಕಕ್ಕೆ ಸಾಕ್ಷಿ ಎಂದು ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 

ಮಹಿಳೆಯೊಬ್ಬರು ಆಟೋ ಚಾಲಕರೊಬ್ಬರೊಂದಿಗೆ ಸಿಇಟಿ, ನೀಟ್ ಪರೀಕ್ಷೆಗಳ ಬಗ್ಗೆ ಚರ್ಚೆ ಮಾಡಿರುವ ಪೋಸ್ಟ್ ಅವನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಮಹಿಳೆಯೊಬ್ಬರು ಆಟೋ ಚಾಲಕರೊಬ್ಬರೊಂದಿಗೆ ಸಿಇಟಿ, ನೀಟ್ ಪರೀಕ್ಷೆಗಳ ಬಗ್ಗೆ ಚರ್ಚೆ ಮಾಡಿರುವ ಪೋಸ್ಟ್ ಅವನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. (@NamrataSRao/X)

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru News) ಕೆಲವೊಮ್ಮೆ ಆಟೊ ಚಾಲಕರ (Bengaluru Auto Drivers) ವರ್ತನೆ ಬಗ್ಗೆ ಜನರು ಬೇಸರ ವ್ಯಕ್ತಪಡಿಸಿರುವ ನಿದರ್ಶನಗಳಿವೆ. ಆದರೆ ಅದೇ ಆಟೊ ಚಾಲಕರು ಪ್ರಯಾಣಿಕರಿಗೆ ನೆರವಾಗಿದ್ದಾರೆ. ಪ್ರಯಾಣಿಕರೂ ಚಾಲಕರ ಸಂಕಷ್ಟಕ್ಕೆ ಮಿಡಿದಿದ್ದಾರೆ. ಚಾಲಕರ ಕುಟುಂಬದ ಕಷ್ಟಗಳನ್ನು ಕೇಳಿ ಪ್ರಯಾಣಿಕರು ನೆರವಾಗಿದ್ದಾರೆ. ಇಂತಹದ್ದೇ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆದರೆ ಸ್ವಲ್ಪ ಭಿನ್ನವಾಗಿದೆ.

ಟ್ರೆಂಡಿಂಗ್​ ಸುದ್ದಿ

Environment day: ವಿಶ್ವ ಪರಿಸರ ದಿನಕ್ಕೆ ಜಾಗತಿಕ ತಾಪಮಾನದ ಮೇಲೆ ಪ್ರಬಂಧ ಬರೆಯಿರಿ, 5000 ರೂ. ಬಹುಮಾನ ಪಡೆಯಿರಿ

Vijayapura News: ವಿಜಯಪುರ ಬಿಎಲ್‌ಡಿಇಯಲ್ಲಿ ಕೌಶಲ್ಯಗಳ ಸಂಗಮ, ತಾಂತ್ರಿಕ ಹಬ್ಬದ ಸಡಗರ

Museums Day 2024: ಬೆಂಗಳೂರು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ಮೈಸೂರು ಮ್ಯೂಸಿಯಂಗಳಿಗೆ ಹೊಸ ರೂಪ, ಏನಿದರ ವಿಶೇಷ

Bangalore Mysore Expressway: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮೊಬೈಲ್ ನಲ್ಲಿ ಮಾತಾಡಿಕೊಂಡು ಡ್ರೈವ್ ಮಾಡಿದರೆ ದಂಡ ಗ್ಯಾರಂಟಿ

ಬೆಂಗಳೂರಿನ ನಿವಾಸಿ ಮತ್ತು ಆಟೋ ಚಾಲಕನ ನಡುವಿನ ಹೃದಯಸ್ಪರ್ಶಿ ಸಂಭಾಷಣೆಯ ಪೋಸ್ಟ್ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ನಮ್ರತಾ ಎಸ್ ರಾವ್ ಎಂಬುವರು ಹಂಚಿಕೊಂಡಿರುವ ಈ ಪೋಸ್ಟ್ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಆಟೊ ಪ್ರಯಾಣ ಸಮಯದಲ್ಲಿ ತೆರೆದುಕೊಂಡ "ಮುದ್ದಾದ ಬೆಂಗಳೂರು ಕ್ಷಣ" ಎಂದು ಎಂದು ರಾವ್ ಅವರು ಪೋಸ್ಟ್ ಮೂಲಕ ಬಣ್ಣಿಸಿದ್ದಾರೆ.

ನಮ್ರತಾ ರಾವ್ ಮತ್ತು ಆಟೊ ಚಾಲಕನ ನಡುವಿನ ಸಂಭಾಷಣೆಯು ಸುಡುವ ಹವಾಮಾನದ ಬಗ್ಗೆ ಸಾಮಾನ್ಯ ಚರ್ಚೆದಿಗೆ ಆರಂಭವಾಗಿದೆ. ನಮ್ರತಾ ಅವರು ಆಟೊದಲ್ಲಿ ಪ್ರಯಾಣಿಸುತ್ತಿದ್ದಾಗ ಚಾಲಕನನ್ನು ಮಾತಿಗೆ ಆಹ್ವಾನಿಸಿದ್ದಾರೆ. ಅದು ಕೂಡ ತುಂಬಾ ಸೆಕೆ ಅಲ್ವಾ ಎಂದು ಹೇಳುವ ಮೂಲಕ. ಆಗ ಚಾಲ ಓ ಕನ್ನಡ ಬರುತ್ತಾ ಎಂದು ಮಾತು ಶುರು ಮಾಡಿದ್ದಾರೆ. ಸರಳ ಮಾತಿನೊಂದಿಗೆ ಆರಂಭವಾದ ಇಬ್ಬರ ನಡುವೆ ಚರ್ಚೆ ಪ್ರವೇಶ ಪರೀಕ್ಷೆಗಳಾದ ಸಿಇಟಿ, ನೀಟ್ ಕುರಿತು ಮಾತನಾಡುವ ಮಟ್ಟಕ್ಕೆ ಹೋಗಿದೆ. ಅಷ್ಟೇ ಅಲ್ಲ ಪ್ರಸ್ತುತ 11ನೇ ತರಗತಿಯಲ್ಲಿ ಓದುತ್ತಿರುವ ಆಟೊ ಚಾಲಕನ ಮಗಳ ಪರೀಕ್ಷೆಗಳ ಬಗ್ಗೆಯೂ ಚರ್ಚಿಸಿದ್ದಾರೆ.

ಆಟೊ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರೊಂದಿಗೆ ನೀವು ಇಂತಹ ಸಂಭಾಷಣೆ ಮಾಡುತ್ತೀರಾ ಎಂದು ರಾವ್ ಅವರು ಚಾಕನಿಗೆ ಕೇಳಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಚಾಲಕ, "ಇಲ್ಲ ಮೇಡಂ, ನಾವು ಜನರನ್ನು ಅರ್ಥಮಾಡಿಕೊಳ್ಳುತ್ತೇವೆ, ನಮಗೂ ಮನಸ್ಸಿದೆ. ಈ ಬಗ್ಗೆ ಕೇಳಲು ನೀವು ನಿಜವಾದ ವ್ಯಕ್ತಿ ಎಂದು ನಾನು ಭಾವಿಸಬಲ್ಲೆ, ಅದಕ್ಕಾಗಿಯೇ ಹೇಳಿದೆ. ಪ್ರಯಾಣಿಕರು ಇಯರ್ ಫೋನ್‌ಗಳೊಂದಿಗೆ ಇರುತ್ತಾರೆ. ನಾನು ಸಾಮಾನ್ಯವಾಗಿ ರಸ್ತೆ ನೋಡುತ್ತಾ ನಮ್ಮ ಪಾಡಿಗೆ ನಾವು ಆಟೊ ಚಲಾಯಿಸುತ್ತೇವೆ ಎಂದಿದ್ದಾರೆ.

ನಮ್ರತಾ ರಾವ್ ಅವರು ಈ ಸಂಭಾಷಣೆಯ ವಿವರವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಏಪ್ರಿಲ್ 29ರ ಬೆಳಗ್ಗೆ 11.22ಕ್ಕೆ ಫೋಸ್ಟ್ ಮಾಡಿದ್ದು, ಸಾಕಷ್ಟು ಮಂದಿನ್ನು ಆಕರ್ಷಿಸಿದೆ. 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ದೈನಂದಿನ ಜೀವನದಲ್ಲಿ ಸಂವಹನಗಳ ಪ್ರಾಮುಖ್ಯತೆಯ ಬಗ್ಗೆ ಚರ್ಚೆಗಳನ್ನು ಪ್ರೇರೇಪಿಸಿತು. ನಮ್ರತಾ ರಾವ್ ಅವರ ಉಪಕ್ರಮ ಹಾಗೂ ಆಟೊ ಚಾಲಕನ ಬಗ್ಗೆ ಸಹಾನುಭೂತಿಗೆ ಭಾರಿ ಮೆಚ್ಚುಗೆಗೆ ಕಾರಣವಾಗಿದೆ.

"ನಮ್ಮ ಆಟೋ ಚಾಲಕರನ್ನು ಆಶೀರ್ವದಿಸಿ. 38 ಡಿಗ್ರಿ ಶಾಖದಲ್ಲಿಯೂ ಓಡುವ ಪ್ರಯಾಣ. ಅವರನ್ನು ಗೌರವಿಸಿ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. "ಹೌದು, ಟ್ಯಾಕ್ಸಿ ಚಾಲಕ ಅಥವಾ ಆಟೋ ಚಾಲಕ ಬಯಸಿದರೆ ಅವರೊಂದಿಗೆ ಸಂಭಾಷಣೆಯನ್ನು ಪ್ರಾರಂಭಿಸುವುದು ಉತ್ತಮ ಸಂಕೇತವಾಗಿದೆ. ಇಲ್ಲದಿದ್ದರೆ ಜೀವನವು ಅತ್ಯಂತ ವಹಿವಾಟು ಮತ್ತು ಸ್ಪಷ್ಟವಾಗಿ ನೀರಸವಾಗಿರುತ್ತದೆ" ಎಂದು ಇನ್ನೊಬ್ಬರು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ