logo
ಕನ್ನಡ ಸುದ್ದಿ  /  ಕರ್ನಾಟಕ  /  Cabinet Decisions: ವಿಜಯಪುರ ಜಿಲ್ಲೆಗೆ ಬೃಹತ್ ಕುಡಿಯುವ ನೀರಿನ ಯೊಜನೆಗೆ ಸಂಪುಟ ಒಪ್ಪಿಗೆ

Cabinet Decisions: ವಿಜಯಪುರ ಜಿಲ್ಲೆಗೆ ಬೃಹತ್ ಕುಡಿಯುವ ನೀರಿನ ಯೊಜನೆಗೆ ಸಂಪುಟ ಒಪ್ಪಿಗೆ

HT Kannada Desk HT Kannada

Aug 12, 2022 08:29 PM IST

ಸಚಿವ ಗೋವಿಂದ ಕಾರಜೋಳ (ಕಡತ ಚಿತ್ರ)

    • Cabinet Decisions: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇಂದು ವಿಜಯಪುರ ಜಿಲ್ಲೆಗೆ ಬೃಹತ್ ಕುಡಿಯುವ ನೀರಿನ ಯೊಜನೆಗೆ ಒಪ್ಪಿಗೆ ಸಿಕ್ಕಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. 
ಸಚಿವ ಗೋವಿಂದ ಕಾರಜೋಳ (ಕಡತ ಚಿತ್ರ)
ಸಚಿವ ಗೋವಿಂದ ಕಾರಜೋಳ (ಕಡತ ಚಿತ್ರ) (Govind Karjol )

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇಂದು ವಿಜಯಪುರ ಜಿಲ್ಲೆಗೆ ಬೃಹತ್ ಕುಡಿಯುವ ನೀರಿನ ಯೊಜನೆಗೆ ಒಪ್ಪಿಗೆ ನೀಡಲು ಕ್ಯಾಬಿನೆಟ್‌ ತೀರ್ಮಾನ (Cabinet Decisions) ಮಾಡಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದೊಡ್ಡಬಳ್ಳಾಪುರ: ಹೇಮಂತಗೌಡ ಹತ್ಯೆ ಪ್ರಕರಣದ 2ನೇ ಆರೋಪಿ ಬಂಧನ, ಪೊಲೀಸರ ಮೇಲೆ ಹಲ್ಲೆಗೆತ್ನಿಸಿದ್ದ ಕಾರಣ ಕಾಲಿಗೆ ಗುಂಡೇಟು

ಮಂಗಳೂರು ವಿಮಾನ ನಿಲ್ಧಾಣಕ್ಕೆ ಬಂದು ಗೊಂದಲಕ್ಕೆ ಒಳಗಾದ ಮಹಿಳೆ, ನೆರವಾದ ಭದ್ರತಾ ಸಿಬ್ಬಂದಿ, ನಾಪತ್ತೆ ಪ್ರಕರಣ ಸುಖಾಂತ್ಯ

ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರಲ್ಲಿ ಹಲಸು, ಮಾವು ಸೇರಿ ವಿವಿಧ ಹಣ್ಣುಗಳ ಮೇಳ, ದಿನಾಂಕ ಮತ್ತು ಇತರೆ ವಿವರ

ಬೆಂಗಳೂರು: ಕೊನೆಗೂ ತೆರಿಗೆ ಕಟ್ಟಲು ಒಪ್ಪಿಕೊಂಡ ಮಂತ್ರಿ ಮಾಲ್; ಬೀಗ ತೆಗೆಯುವಂತೆ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

ಜಲ ಜೀವನ್ ಮಿಷನ್ ಯೋಜನೆಯಡಿ, NABARD Infrastructure Development Assistance (NIDA) ನ ನೆರವಿನಲ್ಲಿ ವಿಜಯಪುರ ಜಿಲ್ಲೆಯ, ವಿಜಯಪುರ, ಬಸವನ ಬಾಗೇವಾಡಿ ಮತ್ತು ಇಂಡಿ ತಾಲ್ಲೂಕುಗಳಲ್ಲಿನ ಗ್ರಾಮೀಣ ಜನವಸತಿಗಳು ಹಾಗೂ ಇಂಡಿ ಟೌನ್ ಮತ್ತು ಇತರೆ 4 ನಗರ ಸ್ಥಳೀಯ ಸಂಸ್ಥೆಗಳಾದ ಚಡಚಣ್, ಮನಗೂಲಿ, ನಿಡಗುಂದಿ ಮತ್ತು ಕೊಲ್ಹಾರ್ (ಯೋಜನೆ-1) ಒಳಗೊಂಡಂತೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಪರಿಷ್ಕೃತ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಇಂದು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಜಲ ಜೀವನ್ ಮಿಷನ್ ನಿಧಿ ಅಡಿಯಲ್ಲಿ ವಿಜಯಪುರ ಜಿಲ್ಲೆಯ, ವಿಜಯಪುರ, ಬಸವನ ಬಾಗೇವಾಡಿ ಮತ್ತು ಇಂಡಿ ತಾಲ್ಲೂಕುಗಳಲ್ಲಿನ ಗ್ರಾಮೀಣ ಜನವಸತಿಗಳು ಹಾಗೂ ಇಂಡಿ ಟೌನ್ ಮತ್ತು ಇತರೆ ೪ ನಗರ ಸ್ಥಳೀಯ ಸಂಸ್ಥೆಗಳಾದ ಚಡಚಣ್, ಮನಗೂಲಿ, ನಿಡಗುಂದಿ ಮತ್ತು ಕೊಲ್ಹಾರ್ (ಯೋಜನೆ-1) ಒಳಗೊಂಡಂತೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ PSRನ್ನು ತಯಾರಿಸಿ 2020ರ ಜುಲೈ 3ರಂದು ನಡೆದ ರಾಜ್ಯಮಟ್ಟದ ಯೋಜನಾ ಅನುಮೋದನಾ ಸಮಿತಿ ಸಭೆಯಲ್ಲಿ (SLSSC) ತಾತ್ವಿಕ ಅನುಮೋದನೆ ಪಡೆಯಲಾಗಿತ್ತು. ಬಳಿಕ ಅದೇ ವರ್ಷ ನವೆಂಬರ್‌ 11ರಂದು ರಾಜ್ಯ ತಾಂತ್ರಿಕ ಸಮಿತಿ (STA) ಸಭೆಯಲ್ಲಿ ಮಂಡಿಸಿ ತಾಂತ್ರಿಕವಾಗಿ ಅನುಮೋದನೆ ಪಡೆಯಲಾಗಿತ್ತು ಎಂದು ಸಚಿವರು ತಿಳಿಸಿದರು.

ಆಲಮಟ್ಟಿ ಜಲಾಶಯದ ಎಡದಂಡೆಯಲ್ಲಿ ಈ ಯೋಜನೆಗೆ ನೀರು ಎತ್ತುವಳಿಯನ್ನು ಪ್ರಸ್ತಾಪಿಸಲಾಗಿದೆ. ಈ ಯೋಜನೆಗಾಗಿ ಆಲಮಟ್ಟಿ ಜಲಾಶಯದಿಂದ 1.457 ಟಿಎಂಸಿ ನೀರನ್ನು ಈ ನಗರಗಳ ಮತ್ತು 702 ಗ್ರಾಮೀಣ ಜನವಸತಿ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಮಂಡಿಸಲಾಗಿತ್ತು. ಇದಕ್ಕಾಗಿ 1547.22 ಕೋಟಿ ರೂಪಾಯಿ ವೆಚ್ಚದಲ್ಲಿ ವಿಜಯಪುರ ಜಿಲ್ಲೆಯ ಈ ಎಲ್ಲ ಗ್ರಾಮಗಳಿಗೆ ಮತ್ತು ನಗರ ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ಕೊಟ್ಟಿದೆ.

ವಿಜಯಪುರ ಜಿಲ್ಲೆಯ ವಿಜಯಪುರ, ಬಸವನ ಬಾಗೇವಾಡಿ ಮತ್ತು ಇಂಡಿ ತಾಲ್ಲೂಕುಗಳಲ್ಲಿನ ಗ್ರಾಮೀಣ ಜನವಸತಿಗಳು ಹಾಗೂ ಇಂಡಿ ಟೌನ್ ಮತ್ತು ಇತರೆ 4 ನಗರ ಸ್ಥಳೀಯ ಸಂಸ್ಥೆಗಳಾದ ಚಡಚಣ, ಮನಗೂಳಿ, ನಿಡಗುಂದಿ ಮತ್ತು ಕೊಲ್ಹಾರ್ (ಯೋಜನೆ-1) ಒಳಗೊಂಡಂತೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಜಲ ಜೀವನ್ ಮಿಷನ್ ಯೋಜನೆಯಡಿ NIDA ಅಡಿಯಲ್ಲಿ NABARD ನಿಂದ ಪಡೆದ ಹಾಗೂ ಸಾಲದಡಿ ಹಾಗೂ UDD ಇಂದ ಅನುದಾನದ ನೆರವಿನೊಂದಿಗೆ ಇದನ್ನು ಪೂರೈಸಲಾಗುತ್ತದೆ. ಇದರ ಸಂಯೋಜಿತ ಪರಿಷ್ಕೃತ ಅಂದಾಜು ಮೊತ್ತ 2077.63 ಕೋಟಿ ರೂಪಾಯಿ ಎಂದು ಅನುಮೋದನೆಗೊಂಡಿರುವ ಪ್ರಸ್ತಾವನೆ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ