logo
ಕನ್ನಡ ಸುದ್ದಿ  /  ಕರ್ನಾಟಕ  /  Hd Kumaraswamy On Ramadevara Betta: ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ; ಬಿಜೆಪಿ ವಿರುದ್ಧ ಮಾಜಿ ಸಿಎಂ ಕಿಡಿ

HD Kumaraswamy on ramadevara betta: ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ; ಬಿಜೆಪಿ ವಿರುದ್ಧ ಮಾಜಿ ಸಿಎಂ ಕಿಡಿ

Raghavendra M Y HT Kannada

Dec 29, 2022 10:36 AM IST

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

  • ಇವರದೆ ಸರ್ಕಾರ ಇದೆ. ಮೂರುವರೆ ವರ್ಷದಿಂದ ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣ ಮಾಡದವರು ಇವಾಗ ಮಾಡ್ತಾರಾ? ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು/ತುಮಕೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳು ಅಭಿವೃದ್ದಿ ಕೆಲಸಗಳಿಗಿಂತ ಧಾರ್ಮಿಕ ವಿಚಾರಗಳನ್ನು ಇಟ್ಟುಕೊಂಡು ವೋಟ್ ಕೇಳುವುದು ಸಾಮಾನ್ಯವಾಗಿದೆ. ಇದು ರಾಷ್ಟ್ರಮಟ್ಟದಿಂದ ರಾಜ್ಯಗಳ ವರೆಗೆ ಕಾಣಬಹುದು.

ಟ್ರೆಂಡಿಂಗ್​ ಸುದ್ದಿ

Bangalore Crime: ಗೃಹ ಸಚಿವರ ಆಪ್ತ ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ 1 ಕೋಟಿ ರೂ. ವಂಚಿಸಿದ್ದ ಯುವಕ ಬಂಧನ

Hassan Scandal: ರೇವಣ್ಣಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲೂ ಒಂದು ದಿನಕ್ಕೆ ಮಾತ್ರ ಜಾಮೀನು

Forest Tales: ಮಳೆಗಾಲ ಬಂತು ಒಂದಾದರೂ ಸಸಿ ನೆಡೋಣ, ಬಿಸಿಲು ಬರದ ಬವಣೆಗೆ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸೋಣ ಬನ್ನಿ

Karnataka Rains: ಬೆಂಗಳೂರು, ಮೈಸೂರು, ಕೊಡಗು ಸಹಿತ ಹಲವೆಡೆ ಒಂದು ವಾರ ಭಾರೀ ಮಳೆ, ಆರೆಂಜ್‌ ಅಲರ್ಟ್‌

ಕರ್ನಾಟಕದಲ್ಲಿ 2023ರ ಮೊದಲಾರ್ಧದ ಆರಂಭದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಹಲವು ವಿಚಾರಗಳನ್ನು ರಾಜಕೀಯ ಪಕ್ಷಗಳು ಮುನ್ನೆಲೆಗೆ ತಂದಿವೆ. ಅದರಲ್ಲಿ ರಾಮನಗರದಲ್ಲಿ ಇರುವ ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಚಾರವೂ ಕೂಡ ಒಂದಾಗಿದೆ. ಇದೇ ವಿಚಾರದಲ್ಲಿ ಇದೀಗ ಬಿಜೆಪಿ ಹಾಗೂ ಜೆಡಿಎಸ್ ನಡುವೆ ವಾಗ್ವಾದ ಶುರುವಾಗಿದೆ.

ಅಯೋಧ್ಯೆ ಮಾದರಿಯಲ್ಲೇ ರಾಮದೇವರ ಬೆಟ್ಟ ಕೂಡ ಅಭಿವೃದ್ಧಿ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ್​ ನಾರಾಯಣ ಪತ್ರ ಬರೆದಿದ್ದಾರೆ.

ರಾಮದೇವರ ಬೆಟ್ಟ ಮುಜರಾಯಿ ಇಲಾಖೆ ಅಧೀನದಲ್ಲಿದೆ. ಹೀಗಾಗಿ 19 ಎಕರೆ ಪ್ರದೇಶದಲ್ಲಿ ಅಯೋಧ್ಯೆಯ ರಾಮ ಮಂದಿರದಂತೆಯೇ, ರಾಮದೇವರ ಬೆಟ್ಟದಲ್ಲಿ ದೇವಸ್ಥಾನ ನಿರ್ಮಿಸಲು ತ್ವರಿತವಾಗಿ ಅಭಿವೃದ್ಧಿ ಸಮಿತಿ ರಚಿಸಬೇಕು ಎಂದು ಸಿಎಂ ಬೊಮ್ಮಾಯಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಬಿಜೆಪಿ ನಾಯಕರ ಈ ನಿರ್ಧಾರಕ್ಕೆ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಈ ಬಗ್ಗೆ ತುಮಕೂರಿನ ಚಿಕ್ಕನಾಯಕನಹಳ್ಳಿ ಪಂಚರತ್ನಯಾತ್ರೆ ವೇಳೆ ಮಾತನಾಡಿರುವ ಹೆಚ್ ಡಿ ಕುಮಾರಸ್ವಾಮಿ, ಇವರದೆ ಸರ್ಕಾರ ಇದೆ. ಮೂರುವರೆ ವರ್ಷದಿಂದ ಮಾಡದೆ ಇದ್ದವರು, ಇವಾಗ ಮಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಮೂರು ತಿಂಗಳಿಗೆ ಚುನಾವಣೆ ಬರ್ತಾ ಇದೆ. ಇವಾಗ ದಕ್ಷಿಣ ಭಾರತದಲ್ಲಿ ರಾಮಮಂದಿರ ನಿರ್ಮಾಣ ಮಾಡ್ತಿವಿ ಎಂದು ಘೋಷಣೆ ಮಾಡ್ತಾರೆ. ಇವಾಗ ಇವರನ್ನ ಜನ ಹೊರಗೆ ಇಡೋ ಪ್ರಯತ್ನ ಮಾಡ್ತಾವರೆ. ಈಗ ರಾಮ ನಗರದಲ್ಲಿ ಮಂದಿರ ಕಟ್ಟುವ ಕೆಲಸ ಮಾಡ್ಲಿಕ್ಕೆ ಇವರು ಹೊರಟಿದ್ದಾರೆ. ನಮ್ಮ ರಾಜ್ಯ ದರಿದ್ರ ರಾಜ್ಯ ಅಲ್ಲ. ಯುಪಿ ಸಿಎಂ ಕರೆತಂದು ಇಲ್ಲಿ ಫೌಂಡೇಶನ್ ಹಾಕುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ನಾಯಕರ ವಿರುದ್ದು ಆಕ್ರೋಶ ವ್ಯಕ್ತಪಡಿಸಿದರು.

ಇವರೇನು ನನ್ನ ಕ್ಷೇತ್ರಕ್ಕೆ ಬಂದು ಮಾಡೊದು ಬೇಕಾಗಿಲ್ಲ

ನಮ್ಮ ಸುತ್ತೂರು ಮಠಾಧಿಶರನ್ನು ಕರೆತಂದು ಆದಿಚುಂಚನಗಿರಿ ಶ್ರೀಗಳನ್ನು ಕರೆತಂದು ನಾನೆ ಮಾಡುತ್ತೇನೆ. ಇವರೇನು ನನ್ನ ಕ್ಷೇತ್ರಕ್ಕೆ ಬಂದು ಮಾಡೊದು ಬೇಕಾಗಿಲ್ಲ. ಒಕ್ಕಲಿಗ ಸ್ವಾಮೀಜಿಗಳನ್ನು ಕರೆತಂದು ನಾನೆ ಮಂದಿರ ನಿರ್ಮಾಣ ಮಾಡಿಸುತ್ತೇನೆ. ನನ್ನ ಕ್ಷೇತ್ರದಲ್ಲಿ ಇವರೇನು ಬಂದು ಕಟ್ಟೊದು ಬೇಕಾಗಿಲ್ಲ. ನಂಗೆ ದೇವರು ಇನ್ನು ಶಕ್ತಿ ಕೊಟ್ಟಿದ್ದಾನೆ. ಬೇರೆ ರಾಜ್ಯದಿಂದ ಯಾರನ್ನೊ ಕರೆತಂದು ಚುನಾವಣೆ ಸಮಯದಲ್ಲಿ ಇದೆಲ್ಲ ಮಾಡೋದು ಬೇಡ. ಇವರ ಆಟ ಮುಗಿತಾ ಬಂತು, ಇದು ಇವರ ಕೊನೆಯ ಅಧ್ಯಾಯವಾಗಿದೆ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.

ಐದು ವರ್ಷ ಸರ್ಕಾರ ಇದ್ದಾಗ ಮಾಡ ಬಹುದಿತ್ತು. ಆದರೆ ಆಗ ಮಾಡಲಿಲ್ಲ. ಜನರ ಹಣ ಲೂಟಿ ಹೊಡೆದು ಅದರಿಂದ ನಿರ್ಮಾಣ ಮಾಡ್ತಾರೆ. ರಾಮನಗರದಲ್ಲಿ ಬಿಜೆಪಿಯ ಆಟ ನಡಿಯಲ್ಲ ಎಂದಿದ್ದಾರೆ.

ಇಲ್ಲಿ ನಮ್ಮ ಜನರ ಸಂಬಂಧ ಹೇಗಿದೆ ಗೊತ್ತಾ? ತಾಯಿ ಮಕ್ಕಳ ಸಂಬಂಧ ಇದ್ದ ಹಾಗೆ ಇದೆ. ನಾನು ಯಾವುದೇ ವಿರೋದ ಮಾಡಲ್ಲ, ಕಟ್ಟ ಬೇಕು ಅಂದ್ರೆ ನಾನೆ ಕಟ್ಟುತ್ತೇನೆ. ಚುನಾವಣೆ ಹತ್ತಿರ ಬಂದಾಗ ಇವರ ಆಟ ಏನು ನಡಿಯೊದಿಲ್ಲ. ಜನ ಇವರಿಗೆ ಚುನಾವಣೆಯಲ್ಲಿ ಉತ್ತರ ಕೊಡ್ತಾರೆ ಎಂದು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ