logo
ಕನ್ನಡ ಸುದ್ದಿ  /  ಕರ್ನಾಟಕ  /  Covid 19 Karnataka Guidelines: ಆಟ ಆಡುವಾಗ ಮಕ್ಕಳು ಮಾಸ್ಕ್‌ ಧರಿಸಬೇಕಾಗಿಲ್ಲ; ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಸ್ಪಷ್ಟೀಕರಣ

Covid 19 Karnataka guidelines: ಆಟ ಆಡುವಾಗ ಮಕ್ಕಳು ಮಾಸ್ಕ್‌ ಧರಿಸಬೇಕಾಗಿಲ್ಲ; ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಸ್ಪಷ್ಟೀಕರಣ

HT Kannada Desk HT Kannada

Jan 04, 2023 02:50 PM IST

ಆಟ ಆಡುವಾಗ ಮಕ್ಕಳು ಮಾಸ್ಕ್‌ ಧರಿಸಬೇಕಾಗಿಲ್ಲ

  • Covid 19 Karnataka Guidelines: ಶಾಲಾ ತರಗತಿ ಮತ್ತು ಒಳಾಂಗಣದಲ್ಲಿ ಮಕ್ಕಳು ಮಾಸ್ಕ್‌ ಧರಿಸಬೇಕು ಎಂದು ಖಾಸಗಿ ಶಾಲೆಗಳು ಪಾಲಕರಿಗೆ ಸೂಚನೆ ಕಳುಹಿಸಿವೆ. ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹೆ ಮೇರೆಗೆ ಈ ಸೂಚನೆ ರವಾನೆ ಆಗಿದೆ. ಆದರೆ, ಆಟ ಆಡುವಾಗ ಮಕ್ಕಳು ಮಾಸ್ಕ್‌ ಧರಿಸಬೇಕಾಗಿಲ್ಲ ಎಂದು ಅಧಿಕಾರಿಗಳು ಈಗ ಸ್ಪಷ್ಟೀಕರಣ ನೀಡಿದ್ದಾರೆ.

ಆಟ ಆಡುವಾಗ ಮಕ್ಕಳು ಮಾಸ್ಕ್‌ ಧರಿಸಬೇಕಾಗಿಲ್ಲ
ಆಟ ಆಡುವಾಗ ಮಕ್ಕಳು ಮಾಸ್ಕ್‌ ಧರಿಸಬೇಕಾಗಿಲ್ಲ

ಬೆಂಗಳೂರು: ಶಾಲಾ ತರಗತಿ ಮತ್ತು ಒಳಾಂಗಣದಲ್ಲಿ ಮಕ್ಕಳು ಮಾಸ್ಕ್‌ ಧರಿಸಬೇಕು ಎಂದು ಖಾಸಗಿ ಶಾಲೆಗಳು ಪಾಲಕರಿಗೆ ಸೂಚನೆ ಕಳುಹಿಸಿವೆ. ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹೆ ಮೇರೆಗೆ ಈ ಸೂಚನೆ ರವಾನೆ ಆಗಿದೆ. ಆದರೆ, ಆಟ ಆಡುವಾಗ ಮಕ್ಕಳು ಮಾಸ್ಕ್‌ ಧರಿಸಬೇಕಾಗಿಲ್ಲ ಎಂದು ಅಧಿಕಾರಿಗಳು ಈಗ ಸ್ಪಷ್ಟೀಕರಣ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಜಲ ಮಂಡಳಿ ಫೋನ್ ಇನ್ ಕಾರ್ಯಕ್ರಮ ಇಂದು ಬೆಳಗ್ಗೆ 9.30ಕ್ಕೆ, ಕುಂದುಕೊರತೆ, ಅಹವಾಲು ಸಲ್ಲಿಸಲು ಫೋನ್ ನಂಬರ್ ಇಲ್ಲಿದೆ..

ಕರ್ನಾಟಕ ಹವಾಮಾನ ಮೇ 17; ದಕ್ಷಿಣ ಕನ್ನಡ, ಮೈಸೂರು, ಮಂಡ್ಯ ಸೇರಿ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಉಳಿದೆಡೆ ಮಳೆ ಮುನ್ಸೂಚನೆ

Belagavi News: ಚಾಲುಕ್ಯ ರೈಲಿನಲ್ಲಿ ಟಿಕೆಟ್‌ ತಪಾಸಣೆ ವೇಳೆ ಇರಿದ ಪ್ರಯಾಣಿಕ. ಸಿಬ್ಬಂದಿ ಸಾವು, ಆರೋಪಿ ಪರಾರಿ

Bangalore Crime: ಗೃಹ ಸಚಿವರ ಆಪ್ತ ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ 1 ಕೋಟಿ ರೂ. ವಂಚಿಸಿದ್ದ ಯುವಕ ಬಂಧನ

ಕರ್ನಾಟಕ ಸರ್ಕಾರದ ಸುತ್ತೋಲೆ ಆಧಾರಿಸಿ ಶಾಲೆಗಳು ನೀಡಿದ ಸೂಚನೆ ಮೇರೆಗೆ ಶಾಲಾ ಮಕ್ಕಳು ಈಗ ಮಾಸ್ಕ್ ಧರಿಸುತ್ತಿದ್ದಾರೆ. ಈ ನಿಯಮ ಶಾಲಾ ತರಗತಿಗಳು, ವಿದ್ಯಾರ್ಥಿಗಳ ಹಾಜರಾತಿ ಅಥವಾ ಪಠ್ಯೇತರ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿಲ್ಲ ಎಂದು ಹೇಳಲಾಗುತ್ತಿದೆ.

ಕೋವಿಡ್‌ನ ಹೊಸ ರೂಪಾಂತರ ತಳಿ ಹರಡುತ್ತಿರುವ ಕಾರಣ, ಕಾಳಜಿಯಿಂದ ಈ ಸೂಚನೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್‌ ಧರಿಸುವಂತೆ ಮಕ್ಕಳಿಗೆ ಸೂಚಿಸಲಾಗಿದೆ. ಇದಲ್ಲದೆ, ಚಳಿಗಾಲದ ಈ ಅವಧಿಯಲ್ಲಿ ಶೀತ ಮತ್ತು ಜ್ವರದ ಪ್ರಮಾಣ ಹೆಚ್ಚಾಗುತ್ತದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಮಾಸ್ಕ್‌ ಧರಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕೆಲವು ಖಾಸಗಿ ಶಾಲೆಗಳಲ್ಲಿ ಈ ಪ್ರಕ್ರಿಯೆಗೂ ಮೊದಲೇ 8ರಿಂದ 12ನೇ ತರಗತಿ ತನಕದ ಮಕ್ಕಳು ಮಾಸ್ಕ್‌ ಧರಿಸುವುದನ್ನು ಮಾಡುತ್ತಿದ್ದರು. ಈಗ ಸುತ್ತೋಲೆಯ ಬಳಿಕ ಬಹುತೇಕ ಮಕ್ಕಳು ಮಾಸ್ಕ್‌ ಧರಿಸಿಕೊಂಡು ಶಾಲೆಗೆ ಹಾಜರಾಗುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರದ ಸಲಹೆಯ ಪ್ರಕಾರ, ಮಕ್ಕಳಿಗೆ ಮಾಸ್ಕ್‌ ತೊಡಿಸಿ ಕಳುಹಿಸುವಂತೆ ಪಾಲಕರಿಗೆ ಪತ್ರ ರವಾನಿಸಿರುವುದಾಗಿ ಶಾಲಾ ಆಡಳಿತ ಮಂಡಳಿಗಳು ತಿಳಿಸಿವೆ.

ಮಕ್ಕಳಲ್ಲಿ ಏನಾದರೂ ಕಾಯಿಲೆ ಲಕ್ಷಣ, ಮತ್ತು ಅಸ್ವಸ್ಥತೆ ಕಂಡು ಬಂದರೆ ಅಂತಹ ಸಂದರ್ಭದಲ್ಲಿ ಅವರನ್ನು ಪ್ರತ್ಯೇಕಿಸಲಾಗುವುದು. ನಂತರ ಪಾಲಕರಿಗೆ ತಿಳಿಸಲಾಗುವುದು. ಈ ಮೊದಲೇ ತಿಳಿಸಿದಂತೆ ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳು ತರಗತಿಗಳಿಗೆ ಹಾಜರಾಗದಂತೆ ತಿಳಿಸಲಾಗಿದೆ ಎಂದು ಆಡಳಿತ ಮಂಡಳಿಗಳು ತಿಳಿಸಿವೆ.

ಕೋವಿಡ್‌ ನಿಯಮಗಳು ಹಿಂದಿಗಿಂತ ಈ ವರ್ಷ ಭಿನ್ನವಾಗಿವೆ. ಹೀಗಾಗಿ ಶಾಲಾ ತರಗತಿ, ಪಠ್ಯೇತರ ಚಟುವಟಿಕೆಗಳನ್ನು ರದ್ದುಗೊಳಿಸಿಲ್ಲ. ಶುಚಿತ್ವ ಕಾಪಾಡಲು ಸೂಚನೆ ಇದೆ. ಆಟದ ಮೈದಾನದಲ್ಲಿ ಆಟ ಆಡುವ ಸಂದರ್ಭದಲ್ಲಿ ಮಕ್ಕಳು ಮಾಸ್ಕ್‌ ತೆಗೆದಿಟ್ಟು ಆಟ ಆಡಬಹುದು. ಶಾಲಾ ಸಿಬ್ಬಂದಿ ಕೂಡ ಮಾಸ್ಕ್ ಧರಿಸುತ್ತಿದ್ದಾರೆ. ಸ್ವಚ್ಛತೆ, ಉತ್ತಮ ಆಹಾರ ಸೇವನೆ, ಬಿಸಿ ನೀರು ಕುಡಿಯುವುದು ಸೇರಿ ಇತರೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Karnataka mandates quarantine: ಹೈ ರಿಸ್ಕ್‌ ದೇಶಗಳಿಂದ ಬಂದ್ರೆ 7 ದಿನ ಕ್ವಾರಂಟೈನ್‌ ಕಡ್ಡಾಯ; ರಾಜ್ಯದಲ್ಲಿ ಕೋವಿಡ್‌ ಅಲರ್ಟ್‌!

Karnataka mandates quarantine: ಹೈ ರಿಸ್ಕ್‌ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ 7 ದಿನ ಕ್ವಾರಂಟೈನ್‌ ಕೂರಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಚೀನಾ, ಜಪಾನ್‌, ದಕ್ಷಿಣ ಕೊರಿಯಾ, ಸಿಂಗಾಪುರ, ಥಾಯ್ಲೆಂಡ್‌ ಮತ್ತು ಹಾಂಕಾಂಗ್‌ಗಳಿಂದ ಬರುವ ಪ್ರಯಾಣಿಕರಿಗೆ ಇದು ಅನ್ವಯ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಕೋವಿಡ್-19 ಮಾರ್ಗಸೂಚಿ ಪಾಲಿಸಲು ಜಿಲ್ಲಾಧಿಕಾರಿ ಕರೆ; ಏನಿದೆ ಮಾರ್ಗಸೂಚಿಯಲ್ಲಿ?

Covid-19 Mangalore airport Travel Update: ರಾಜ್ಯದಲ್ಲಿ ಕೋವಿಡ್-19ರ ಪ್ರಸ್ತುತ ಸನ್ನಿವೇಶವನ್ನು ಪರಿಗಣಿಸಿ ಮತ್ತು ಕೆಲವು ದೇಶಗಳಲ್ಲಿ ಜಾಗತಿಕವಾಗಿ ಹೆಚ್ಚುತ್ತಿರುವ ಪ್ರಕರಣಗಳಿಂದ ಆಗುವ ಅಪಾಯದ ಮೌಲ್ಯಮಾನವನ್ನು ಅನುಸರಿಸಿ, ಸರ್ಕಾರ ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ. ನೀವು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವವರೇ? ಹಾಗಿದ್ದರೆ ಕೋವಿಡ್‌ 19 ಸಂಬಂಧಿಸಿದ ಈ ಮಾರ್ಗಸೂಚಿಗಳು ನಿಮ್ಮ ಗಮನದಲ್ಲಿರಲಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ