ಕನ್ನಡ ಸುದ್ದಿ  /  ಕರ್ನಾಟಕ  /  Covid-19 Mangalore Airport Travel Update: ಕೋವಿಡ್-19 ಮಾರ್ಗಸೂಚಿ ಪಾಲಿಸಲು ಜಿಲ್ಲಾಧಿಕಾರಿ ಕರೆ; ಏನಿದೆ ಮಾರ್ಗಸೂಚಿಯಲ್ಲಿ?

Covid-19 Mangalore airport Travel Update: ಕೋವಿಡ್-19 ಮಾರ್ಗಸೂಚಿ ಪಾಲಿಸಲು ಜಿಲ್ಲಾಧಿಕಾರಿ ಕರೆ; ಏನಿದೆ ಮಾರ್ಗಸೂಚಿಯಲ್ಲಿ?

Covid-19 Mangalore airport Travel Update: ನೀವು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವವರೇ? ಹಾಗಿದ್ದರೆ ಕೋವಿಡ್‌ 19 ಸಂಬಂಧಿಸಿದ ಈ ಮಾರ್ಗಸೂಚಿಗಳು ನಿಮ್ಮ ಗಮನದಲ್ಲಿರಲಿ.

ಮಂಗಳೂರು ವಿಮಾನ ನಿಲ್ದಾಣ
ಮಂಗಳೂರು ವಿಮಾನ ನಿಲ್ದಾಣ

ಮಂಗಳೂರು: ನೀವು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವವರೇ? ಹಾಗಿದ್ದರೆ ಕೋವಿಡ್‌ 19 ಸಂಬಂಧಿಸಿದ ಈ ಮಾರ್ಗಸೂಚಿಗಳು ನಿಮ್ಮ ಗಮನದಲ್ಲಿರಲಿ.

ಟ್ರೆಂಡಿಂಗ್​ ಸುದ್ದಿ

ರಾಜ್ಯದಲ್ಲಿ ಕೋವಿಡ್-19ರ ಪ್ರಸ್ತುತ ಸನ್ನಿವೇಶವನ್ನು ಪರಿಗಣಿಸಿ ಮತ್ತು ಕೆಲವು ದೇಶಗಳಲ್ಲಿ ಜಾಗತಿಕವಾಗಿ ಹೆಚ್ಚುತ್ತಿರುವ ಪ್ರಕರಣಗಳಿಂದ ಆಗುವ ಅಪಾಯದ ಮೌಲ್ಯಮಾನವನ್ನು ಅನುಸರಿಸಿ, ಸರ್ಕಾರ ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ.

ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಂದರ್ಭದಲ್ಲಿ ವಿಮಾನ ಪ್ರಯಾಣಿಕರು ಎಲ್ಲರೂ ಅಸ್ತಿತ್ವದಲ್ಲಿರುವ ಕೋವಿಡ್ ಶಿಷ್ಟಾಚಾರದ ಪ್ರಕಾರ ಕಾರ್ಯನಿರ್ವಹಿಸುವುದು ಅಗತ್ಯ. ರೋಗ ಲಕ್ಷಣಗಳು ಹೊಂದಿರುವವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದರೆ, ಅಂತಹ ಸಂದರ್ಭದಲ್ಲಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿ ಇರಬೇಕು. ಅಥವಾ ರೋಗಲಕ್ಷಣಗಳನ್ನು ಹೊಂದಿರುವ ಪ್ರಯಾಣಿಕರು ಕ್ವಾರಂಟೈನ್‍ಗಾಗಿ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿ ಹತ್ತಿರದ ಅರ್ಹ ಖಾಸಗಿ ಆಸ್ಪತ್ರೆಯನ್ನು ಆಯ್ಕೆ ಮಾಡಬಹುದು ಮತ್ತು ಇದರ ವೆಚ್ಚವನ್ನು ಸಂಬಂಧಿಸಿದ ವ್ಯಕ್ತಿಯೇ ಸ್ವತಃ ಭರಿಸಬೇಕು.

ವಿಮಾನ ನಿಲ್ದಾಣದಲ್ಲಿ ಇಳಿದ ನಂತರ:

ಆರ್‍ಟಿ-ಪಿಸಿಆರ್ ಮಾದರಿ ಪರೀಕ್ಷೆ ಮಾಡಿಸಿಕೊಂಡು ವಿಮಾನ ನಿಲ್ದಾಣದಿಂದ ಹೊರಡುವವರು, ಆರ್‍ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯಬೇಕು. ಈ ಅವಧಿಯಲ್ಲಿ, ಅವರು ಹೋಮ್ ಕ್ಯಾರಂಟೈನ್‍ನಲ್ಲಿದ್ದು, ಕೋವಿಡ್ ರೋಗಲಕ್ಷಣಗಳ ಬಗ್ಗೆ ತಮ್ಮ ಆರೋಗ್ಯವನ್ನು ಸ್ವಯಂ-ಮೇಲ್ವಿಚಾರಣೆ ಮಾಡುವುದು ಮತ್ತು ಮುಂದಿನ 7 ದಿನಗಳವರೆಗೆ ಕೋವಿಡ್ ಸಮುಚಿತ ವರ್ತನೆಗಳಾದ (ಸಿಎಬಿ) ಫೇಸ್ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಉಸಿರಾಟದ ವ್ಯಾಯಾಮ ಮತ್ತು ಕೈ, ನೈರ್ಮಲ್ಯ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು, ಈ ಮಧ್ಯೆ, ಜ್ವರ, ಕೆಮ್ಮು, ನೆಗಡಿ, ದೇಹ ನೋವು, ತಲೆ ನೋವು, ರುಚಿ ಮತ್ತು ವಾಸನೆಯ ನಷ್ಟ, ಭೇದಿ, ಉಸಿರಾಟದ ತೊಂದರೆ ಇತ್ಯಾದಿ ಲಕ್ಷಣಗಳು ಕಂಡುಬಂದಲ್ಲಿ, ಅಂತಹವರು ತಕ್ಷಣ ಸ್ಥಳೀಯ ಕಣ್ಣಾವಲು / ಆರೋಗ್ಯ ತಂಡಕ್ಕೆ ವರದಿ ಮಾಡಬೇಕು ಮತ್ತು ನಿರ್ವಹಣೆ ಮತ್ತು ಚಿಕಿತ್ಸೆಗಾಗಿ ವೈದ್ಯಕೀಯ ಸೌಲಭ್ಯ, ಗುರುತಿಸಿಕೊಂಡಿರುವ (ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕು.

ಆರ್‍ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶ ಪಾಸಿಟಿವ್ (ಸಿಟಿ ಮೌಲ್ಯ 25 ಆಗಿದ್ದರೆ) ಆಗಿದ್ದಲ್ಲಿ ಮಾದರಿಯನ್ನು ಡಬ್ಲ್ಯೂಜಿಎಸ್ ಕಳುಹಿಸಲಾಗುತ್ತದೆ. ವ್ಯಕ್ತಿಯು ರೋಗಲಕ್ಷಣರಹಿತ ಅಥವಾ ಸ್ವಲ್ಪ ರೋಗಲಕ್ಷಣಗಳನ್ನು ಹೊಂದಿದ್ದರೆ, ಶಿಷ್ಟಾಚಾರದ ಅನುಸಾರ, ಸಾಮಾನ್ಯವಾಗಿ 7 ದಿನಗಳವರೆಗೆ ಅಥವಾ ಡಬ್ಲ್ಯೂಜಿಎಸ್ ವರದಿ ಬರುವವರೆಗೆ (ಯಾವುದು ಮೊದಲೋ ಅದು) ಕಟ್ಟುನಿಟ್ಟಾದ ಹೋಮ್ ಐಸೋಲೇಶನ್‍ (ಸೋಂಕಿತ ವ್ಯಕ್ತಿಯ ಹೋಮ್ ಐಸೋಲೇಶನ್ ನಲ್ಲಿ ಸೌಲಭ್ಯಗಳ ಅನುಸರಣೆಗಾಗಿ ಸೌಲಭ್ಯಗಳ ಸೂಕ್ತತೆಯ ಬಗ್ಗೆ ಕಣ್ಣಾವಲು ತಂಡದ ಮೌಲ್ಯಮಾಪನಕ್ಕೆ ಒಳಪಟ್ಟು) ನಲ್ಲಿ ಇರುವುದು.

ವ್ಯಕ್ತಿಯು ರೋಗಲಕ್ಷಣವನ್ನು ಹೊಂದಿದ್ದರೆ (ಮಧ್ಯಮದಿಂದ ತೀವ್ರವಾಗಿ), ಅಂತಹವರನ್ನು ತಕ್ಷಣವೇ ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯ ಗುರುತಿಸಿಕೊಂಡಿರುವ (ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮುಂದುವರೆದು, ಡಬ್ಲ್ಯೂಜಿಎಸ್ ವರದಿಯು (ಸಾಮಾನ್ಯವಾಗಿ ಏಳು ದಿನಗಳ ನಂತರ ಸ್ವೀಕೃತವಾಗುವ) ಬಿಎಫ್7 ಅಥವಾ ಹೊಸ ಉಪ ರೂಪಾಂತರ ವೇರಿಯಂಟ್ ಬಹಿರಂಗವಾದರೆ, ಮತ್ತೊಂದು ಆರ್‍ಟಿ-ಪಿಸಿಆರ್ ಮಾದರಿ ಪರೀಕ್ಷೆಯನ್ನು ಮಾಡುವುದು ಮತ್ತು ಅದರ ಫಲಿತಾಂಶಗಳು ತಿಳಿಯುವವರೆಗೂ ಅಂತಹ ವ್ಯಕ್ತಿಯು ಕೋವಿಡ್ ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಅಗತ್ಯ.

ಪರೀಕ್ಷೆಯ ಫಲಿತಾಂತವು ನಕಾರಾತ್ಮಕವಾಗಿದ್ದಲ್ಲಿ, ಅವರು ಕೋವಿಡ್ ರೋಗಲಕ್ಷಣಗಳ ಬಗ್ಗೆ ತಮ್ಮ ಆರೋಗ್ಯದ ಸ್ವಯಂ-ಮೇಲ್ವಿಚಾರಣೆಯನ್ನು ಮುಂದುವರೆಸುವುದು ಮತ್ತು ಮುಂದಿನ ಏಳು ದಿನಗಳವರೆಗೆ ಕೋವಿಡ್ ಸಮುಚಿತ ವರ್ತನೆಗಳಾದ ಫೇಸ್ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಉಸಿರಾಟದ ವ್ಯಾಯಾಮ ಮತ್ತು ಕೈ ನೈರ್ಮಲ್ಯ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.

ವಿಮಾನ ನಿಲ್ದಾಣಕ್ಕೆ 12 ವರ್ಷದೊಳಗಿನ ಮಕ್ಕಳು ಆಗಮಿಸಿದ್ದಲ್ಲಿ

ಅವರು ವಯಸ್ಕರಿಗೆ ಇರುವ ಕೋವಿಡ್-19 ಶಿಷ್ಟಾಚಾರವನ್ನು ಪಾಲಿಸುವುದು. ಸೂಕ್ಷ್ಮ ಆರೋಗ್ಯವಂತ ಹೆತ್ತವರು, ಪೋಷಕರನ್ನು ಹೊರತು ಪಡಿಸಿ ಕೇವಲ ಆರೋಗ್ಯವಂತ ಹೆತ್ತವರು ಪೋಷಕರು ಮಗುವಿನೊಂದಿಗೆ ವೈದ್ಯಕೀಯ ಸೌಲಭ್ಯ ಗುರುತಿಸಿಕೊಂಡಿರುವ ಆಸ್ಪತ್ರೆಗೆ ಹೋಗಬೇಕು ಅಥವಾ ಮಗುವನ್ನು ಲಕ್ಷಣ ರಹಿತ ಸ್ವಲ್ಪ ರೋಗಲಕ್ಷಣದ ಕಾರಣಕ್ಕಾಗಿ ಹೋಮ್ ಐಸೋಲೇಷನ್ ಇರಿಸಿದಲ್ಲಿ ಆರೈಕೆ ನೀಡುವವರಾಗಿರಬೇಕು. ಅಲ್ಲದೇ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರ ಶೇ.2 ರ್ಯಾಂಡಮ್ ಪರೀಕ್ಷೆಯನ್ನು ಮುಂದುವರೆಸುವುದು ಮತ್ತು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊರಡಿಸುವ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಬೇಕು.

IPL_Entry_Point