logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Politics: ಪ್ರತಿಪಕ್ಷ ನಾಯಕರಾಗಿ ಯತ್ನಾಳ್‌, ಪೂಜಾರಿಗೆ ಸ್ಥಾನ: ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಸಿಟಿ ರವಿ ನೇಮಕ ಸಾಧ್ಯತೆ

Karnataka politics: ಪ್ರತಿಪಕ್ಷ ನಾಯಕರಾಗಿ ಯತ್ನಾಳ್‌, ಪೂಜಾರಿಗೆ ಸ್ಥಾನ: ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಸಿಟಿ ರವಿ ನೇಮಕ ಸಾಧ್ಯತೆ

Umesha Bhatta P H HT Kannada

Jul 30, 2023 05:45 PM IST

ಈ ವಾರದಲ್ಲಿಯೇ ಪ್ರತಿಪಕ್ಷ ನಾಯಕ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹೆಸರು ಈ ವಾರದಲ್ಲಿಯೇ ಅಂತಿಮಗೊಳಿಸುವ ಸಾಧ್ಯತೆಯಿದೆ.

    • BJP Politics ಕರ್ನಾಟಕ ಬಿಜೆಪಿಗೆ ನೂತನ ಸಾರಥಿ, ಕರ್ನಾಟಕದ ವಿಧಾನಸಭೆ ಹಾಗೂ  ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ, ಉಪನಾಯಕ, ಮುಖ್ಯ ಸಚೇತಕರ ನೇಮಕ ಪ್ರಕ್ರಿಯೆ ಕೊನೆ ಹಂತಕ್ಕೆ ಬಂದಿದ್ದು, ಆಗಸ್ಟ್‌ ಮೊದಲ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಯಾರನ್ನು ನೇಮಿಸಬಹುದು. ಯಾರಿಗೆ ಹುದ್ದೆ ಒಲಿಯಬಹುದು ಎನ್ನುವ ಪ್ರಶ್ನೆಗೆ ಇಲ್ಲಿದೆ ವಿವರ..
ಈ ವಾರದಲ್ಲಿಯೇ ಪ್ರತಿಪಕ್ಷ ನಾಯಕ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹೆಸರು ಈ ವಾರದಲ್ಲಿಯೇ ಅಂತಿಮಗೊಳಿಸುವ ಸಾಧ್ಯತೆಯಿದೆ.
ಈ ವಾರದಲ್ಲಿಯೇ ಪ್ರತಿಪಕ್ಷ ನಾಯಕ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹೆಸರು ಈ ವಾರದಲ್ಲಿಯೇ ಅಂತಿಮಗೊಳಿಸುವ ಸಾಧ್ಯತೆಯಿದೆ.

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷರ ಬದಲಾವಣೆ ಹಾಗೂ ಕರ್ನಾಟಕ ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕರ ನೇಮಕ ಪ್ರಕ್ರಿಯೆ ಈ ವಾರದಲ್ಲಿಯೇ ಆಗಬಹುದು ಎನ್ನುವುದು ದಟ್ಟವಾಗಿದೆ.

ಟ್ರೆಂಡಿಂಗ್​ ಸುದ್ದಿ

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

ಈಗಾಗಲೇ ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದು ಮೂರು ತಿಂಗಳಾಗುತ್ತಾ ಬರುತ್ತಿದೆ. ಎರಡು ಅಧಿವೇಶನಗಳೂ ಮುಗಿದಿವೆ. ಆದರೂ ಪ್ರತಿಪಕ್ಷ ನಾಯಕನ ನೇಮಕವಾಗಿಲ್ಲ. ಅಲ್ಲದೇ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಅವರ ಅವಧಿಯೂ ಮುಗಿದು ಅಲ್ಲಿಯೂ ಹೊಸಬರ ನೇಮಕ ಬಾಕಿಯಿದೆ. ಈಗಾಗಲೇ ಎರಡು ತಿಂಗಳಿನಿಂದಲೂ ಈ ಜೋಡಿ ಹುದ್ದೆಯನ್ನು ಪ್ರಾದೇಶಿಕ. ಜಾತಿ ಲೆಕ್ಕಾಚಾರದೊಂದಿಗೆ ನೇಮಿಸಲು ಹೈಕಮಾಂಡ್‌ ಯೋಜಿಸಿದೆ. ಅದರಲ್ಲೂ ಈಗಾಗಲೇ ಹೊಂದಾಣಿಕೆ, ಗುಂಪು ರಾಜಕಾರಣದಿಂದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತಿಂದ ಹೊಡೆತದ ಅನುಭವ ಲೋಕಸಭೆ ಚುನಾವಣೆಯಲ್ಲಿ ಆಗದಿರಲಿ ಎಂದು ಹೈಕಮಾಂಡ್‌ ಅಳೆದು ತೂಗಿ ಹುದ್ದೆಗಳ ನೇಮಕಕ್ಕೆ ಮುಂದಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಪಾಠವನ್ನು ಈ ರೂಪದಲ್ಲಿ ತೀರಿಸಿಕೊಳ್ಳಲು ವಿಳಂಬ ನೀತಿಯನ್ನು ಅನುಸರಿಸಿದ್ದು, ಇನ್ನು ಇದನ್ನು ಮುಂದುವರೆಸದೇ ಆಗಸ್ಟ್‌ ಮೊದಲ ವಾರದಲ್ಲಿ ಪ್ರಕ್ರಿಯೆ ಮುಗಿಸಲಿದ್ದಾರೆ.ಇದರ ಮೊದಲ ಬೆಳವಣಿಗೆಯಾಗಿಯೇ ಸಿ.ಟಿ.ರವಿ ಅವರ ಬದಲಾವಣೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಯತ್ನಾಳ್‌ ವಿಧಾನಸಭೆ ಪ್ರತಿಪಕ್ಷ ನಾಯಕ

ಕೇಂದ್ರದ ಮಾಜಿ ಸಚಿವರೂ ಆಗಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷ ನಾಯಕ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಆಕಾಂಕ್ಷಿ. ಇವರೊಟ್ಟಿಗೆ ಮಾಜಿ ಸಚಿವ ವಿ.ಸುನೀಲ್‌ ಕುಮಾರ್‌, ಶಾಸಕ ಅರವಿಂದ ಬೆಲ್ಲದ ಅವರ ಹೆಸರುಗಳೂ ಇವೆ. ವಿಧಾನಸಭೆಯಲ್ಲೂ ಸಿದ್ದರಾಮಯ್ಯ ಅವರನ್ನು ಪ್ರಬಲವಾಗಿ ಎದುರಿಸಲು ನಾಯಕ ಬೇಕು ಎನ್ನುವ ಕಾರಣಕ್ಕೆ ಪಕ್ಷ ಸಾಕಷ್ಟು ಹುಡುಕಾಟ ನಡೆಸಿದೆ. ಜಾ.ದಳ ಕೈ ಜೋಡಿಸುವುದಾದರೆ ಪ್ರತಿಪಕ್ಷ ನಾಯಕ ಸ್ಥಾನ ಬಿಟ್ಟುಕೊಡುವಾಗಿ ಬಿಜೆಪಿ ಹೈಕಮಾಂಡ್‌ ಆಫರ್‌ ಕೂಡ ನೀಡಿದೆ. ಆದರೆ ಬಿಜೆಪಿಯೊಂದಿಗೆ ನೇರವಾಗಿ ಸೇರುವುದು ಬೇಡ ಎನ್ನುವ ದೇವೇಗೌಡರ ಸೂಚನೆ ಹಿನ್ನೆಲೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಅದೂ ಅಲ್ಲದೇ ಈ ಬಾರಿ ಸದನದಲ್ಲಿ ಗಟ್ಟಿ ದನಿ, ಶಕ್ತಿ ತೋರಿದ ಯತ್ನಾಳ್‌ ಆಸ್ಪತ್ರೆಗೂ ಸೇರಿದ್ದರು. ಇನ್ನೂ ವಿಜಯಪುರಕ್ಕೆ ಕಡೆಗೆ ಈವರೆಗೂ ಬಂದಿಲ್ಲ. ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕನ ಹುದ್ದೆ ತೆಗೆದುಕೊಂಡೇ ಕ್ಷೇತ್ರಕ್ಕೆ ಬರುತ್ತೇನೆ ಎನ್ನುವ ಮಾತನ್ನು ಅವರ ಬೆಂಬಲಿಗರ ಎದುರು ಹೇಳಿರುವುದು ಕುತೂಹಲಕ್ಕೆ ಎಡೆ ಮಾಡಿದೆ. ಪ್ರತಿಪಕ್ಷ ನಾಯಕ ಹಾಗೂ ಪಕ್ಷದ ಅಧ್ಯಕ್ಷರ ಎರಡೂ ಕಡೆಯೂ ಹೆಸರು ಕೇಳಿ ಬಂದಿರುವ ಯುವ ನಾಯಕ ವಿ.ಸುನೀಲ್‌ಕುಮಾರ್‌ಗೆ ಪ್ರತಿಪಕ್ಷ ಉಪನಾಯಕ ಹುದ್ದೆ ಒಲಿಯಬಹುದು ಎನ್ನಲಾಗುತ್ತಿದೆ.

ವಿಧಾನಪರಿಷತ್‌ನಲ್ಲಿ ಪೂಜಾರಿ

ವಿಧಾನಪರಿಷತ್‌ನಲ್ಲೂ ಪ್ರತಿ ಪಕ್ಷ ನಾಯಕನ ಆಯ್ಕೆಯೂ ಇದೇ ವೇಳೆ ಆಗಲಿದೆ. ಪಕ್ಷದಲ್ಲಿ ಹಿರಿಯರಾದ, ಈಗಾಗಲೇ ಪ್ರತಿಪಕ್ಷ ನಾಯಕರಾಗಿದ್ದ ಕೋಟಾ ಶ್ರೀನಿವಾಸಪೂಜಾರಿ ಹೆಸರು ಪ್ರಬಲವಾಗಿದೆ. ಅವರೊಟ್ಟಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಎನ್‌.ರವಿಕುಮಾರ್‌ ಹೆಸರು ಇದೆ. ಮೊದಲ ಬಾರಿಗೆ ಆಯ್ಕೆಯಾಗಿರುವ ಪ್ರತಿಪಕ್ಷ ನಾಯಕ ಸ್ಥಾನ ಬೇಡ. ಅವರನ್ನು ಪಕ್ಷ ಸಂಘಟನೆಯಲ್ಲಿ ಮುಂದುವರೆಸುವ ಸಲಹೆ ಕೇಳಿ ಬಂದಿದೆ. ಇದರಿಂದ ಪೂಜಾರಿ ಅವರೇ ಪ್ರತಿಪಕ್ಷ ನಾಯಕರಾಗಬಹುದು ಎಂದು ಹೇಳಲಾಗುತ್ತಿದೆ.

ಅಧ್ಯಕ್ಷ ಸ್ಥಾನಕ್ಕೆ ಹಲವು ಹೆಸರು

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಡಿಸಿಎಂ ಆರ್‌. ಅಶೋಕ, ಮಾಜಿ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸಿ.ಟಿ.ರವಿ, ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌, ಮಾಜಿ ಸಚಿವ ವಿ.ಸುನೀಲ್‌ ಕುಮಾರ್‌ ಸಹಿತ ಹಲವು ಹೆಸರುಗಳಿದ್ದವು. ಇವರಲ್ಲಿ ಶೋಭಾ ಕರಂದ್ಲಾಜೆ ಅವರ ನೇಮಕಕ್ಕೆ ಹೈಕಮಾಂಡ್‌ ಒಲವು ತೋರಿತ್ತು. ವರ್ಷದ ಹಿಂದೆಯೇ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಬದಲಾಯಿಸಿ ಶೋಭಾ ಕರಂದ್ಲಾಜೆ ನೇಮಕವಾಗಲಿದೆ ಎನ್ನುವ ಚರ್ಚೆಗಳೂ ಇದ್ದವು. ರಾಜಕೀಯ ಕಾರಣಗಳಿಂದ ಅದು ಹಾಗೆಯೇ ಉಳಿಯಿತು. ಆಗ ಅವಕಾಶ ಸಿಗದೇ ಪಕ್ಷಾಧ್ಯಕ್ಷೆ ನೇಮಕ ಮಾಡಿದರೆ ಒಳಿತಾಗಲಿದೆ ಎನ್ನುವ ಚರ್ಚೆಗಳು ನಡೆದವು. ಆದರೆ ಶೋಭಾ ಕರಂದ್ಲಾಜೆಗೆ ಪಕ್ಷದ ಅಧ್ಯಕ್ಷೆಯಾಗುವ ಆಸಕ್ತಿ ಇದ್ದ ಹಾಗಿಲ್ಲ. ಚುನಾವಣೆ ಇನ್ನೂ ದೂರವಿದೆ. ಪಕ್ಷದಲ್ಲಿ ಹಿರಿಯ ನಾಯಕರ ಬಣಗಳು ಸೃಷ್ಟಿಯಾಗಿರುವುದು ಸಂಘಟನೆಗೆ ತೊಡಕಾಗಬಹುದು. ಈಗ ಇರುವ ಹುದ್ದೆ ಬಿಟ್ಟು ತೊಂದರೆಗೆ ಸಿಲುಕುವುದು ಬೇಡ ಎನ್ನುವ ಕಾರಣಕ್ಕೆ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.

ಇದೇ ರೀತಿ ಆರ್.‌ ಅಶೋಕ ಅವರ ಹೆಸರಿದ್ದರೂ ಹೊಂದಾಣಿಕೆ ರಾಜಕಾರಣದ ಅಪವಾದಗಳಿಂದ ಅವರು ಹೊರಬಂದಿಲ್ಲ. ಪಕ್ಷ ಸಂಘಟನೆಗೆ ಇದು ಒಳಿತಾಗುವುದಿಲ್ಲ ಎನ್ನುವ ಅಂಶ ಅವರ ಹೆಸರು ಹಿಂದೆ ಸರಿಯಲು ಕಾರಣವಾಗಿದೆ. ಅದೇ ರೀತಿ ಮಾಜಿ ಡಿಸಿಎಂ ಡಾ.ಅಶ್ವಥ್‌ ನಾರಾಯಣ್‌ ಹೆಸರೂ ಪ್ರಬಲವಾಗಿದೆ.

ಇವರೆಲ್ಲರ ನಡುವೆ ಸಂಘಟನೆಯಲ್ಲಿ ತಮ್ನನ್ನು ತೊಡಗಿಸಿಕೊಂಡಿರುವ ಪಕ್ಷದ ಕಟ್ಟಾ ಕಾರ್ಯಕರ್ತರೂ ಆಗಿರುವ ಸಿಟಿ ರವಿ ಫೈರ್‌ಬ್ರಾಂಡ್‌ ರೂಪದಲ್ಲಿ ಹೈಕಮಾಂಡ್‌ ಗುರುತಿಸಿ ಹೆಸರು ಅಂತಿಮಗೊಳಿಸುವುದು ನಿಕ್ಕಿಯಾಗಿದೆ. ಈ ಕುರಿತು ಯಡಿಯೂರಪ್ಪ ಅಭಿಪ್ರಾಯವನ್ನೂ ಪಡೆಯಲಾಗಿದೆ ಎನ್ನಲಾಗುತ್ತಿದೆ.

ಬಿವಿವೈ ಪಾತ್ರವೇನು

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಈಗಾಗಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಕ್ಷದ ಉಪಾಧ್ಯಕ್ಷರೂ ಆಗಿದ್ದಾರೆ. ಅವರನ್ನು ಇದೇ ಹುದ್ದೆಯಲ್ಲಿ ಮುಂದುವರೆಸಿ ಇನ್ನಷ್ಟು ಜವಾಬ್ದಾರಿ ನೀಡುವ ಸಾಧ್ಯತೆಯಿದೆ ಎನ್ನುತ್ತವೆ ಬಿಜೆಪಿ ಮೂಲಗಳು.

ಸಿಟಿ ರವಿ ಹೇಳಿದ್ದೇನು?

ಈ ಎಲ್ಲಾ ಬೆಳವಣಿಗೆಗಳ ನಡುವೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಟಿ ರವಿ, ನಾನೀಗ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಲ್ಲ. ನನ್ನ ಕಚೇರಿ ಖಾಲಿಮಾಡಿಕೊಂಡು ಬಂದಿದ್ದೇನೆ. ರಾಜ್ಯಾಧ್ಯಕ್ಷನಾಗುತ್ತೇನೆ ಎನ್ನುವುದು ಈಗಿನ ಮಟ್ಟಿಗೆ ಊಹೆಯಷ್ಟೇ. ಮುಂದೆ ಏನಾಗುತ್ತದೋ ಗೊತ್ತಿಲ್ಲ. ಪಕ್ಷ ನೀಡಿರುವ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಈಗಲೂ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರೇ ಸಿಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಾರೆ ಎಂದು ಹೇಳಿರುವ ಬಗ್ಗೆ, ಅಂತಿಮ ಆಗಿರುವುದು ಯಾರಿಗೂ ಗೊತ್ತಿಲ್ಲ. ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ. ಏನಾಗುತ್ತದೋ ನೋಡೋಣ. ನಮ್ಮ ನಾಯಕರಾಗಿರುವ ಬಿ.ಎಸ್‌.ಯಡಿಯೂರಪ್ಪ ಅವರ ಆಶಿರ್ವಾದವನ್ನು ಪಡೆದಿದ್ದೇನೆ. ಹಿಂದೆಯೂ ಹಲವು ಪಡೆದಿದ್ದು ಅದರಲ್ಲಿ ವಿಶೇಷವೇನೂ ಇಲ್ಲ ಎಂದು ರವಿ ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ