logo
ಕನ್ನಡ ಸುದ್ದಿ  /  ಕರ್ನಾಟಕ  /  Davangere News: ಲಂಚ ಪಡೆಯುವಾಗ ಸಿಕ್ಕಿಬಿದ್ದು ಸಸ್ಪೆಂಡ್‌ ಆದವರು ಅದೇ ಹುದ್ದೆಗೆ ಬಂದರು: ಇದು ಅಬಕಾರಿ ಇಲಾಖೆ ಮಹಿಮೆ !

Davangere news: ಲಂಚ ಪಡೆಯುವಾಗ ಸಿಕ್ಕಿಬಿದ್ದು ಸಸ್ಪೆಂಡ್‌ ಆದವರು ಅದೇ ಹುದ್ದೆಗೆ ಬಂದರು: ಇದು ಅಬಕಾರಿ ಇಲಾಖೆ ಮಹಿಮೆ !

HT Kannada Desk HT Kannada

Dec 15, 2023 03:35 PM IST

ಹರಿಹರದ ಅಬಕಾರಿ ಲೈಸೆನ್ಸ್‌ ವಿಚಾರವಾಗಿ ಲಂಚದ ಕಾರಣಕ್ಕೆ ಸಿಕ್ಕಿಬಿದಿದ್ದ ಮೂವರನ್ನು ಅದೇ ಹುದ್ದೆಗೆ ನೇಮಿಸಲಾಗಿದೆ.

    • Karnataka excise department ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಅಬಕಾರಿ ಲೈಸೆನ್ಸ್‌ ನೀಡುವ ವಿಚಾರದಲ್ಲಿ ಲಂಚದ ಬೇಡಿಕೆಯಿಟ್ಟು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದು, ಅಮಾನತುಗೊಂಡಿದ್ದವರು ಮತ್ತೆ ಹಿಂದಿನ  ಹುದ್ದೆಗೆ ನಿಯೋಜನೆಗೊಂಡಿದ್ದಾರೆ. ಇದು ದೂರುದಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಹರಿಹರದ ಅಬಕಾರಿ ಲೈಸೆನ್ಸ್‌ ವಿಚಾರವಾಗಿ ಲಂಚದ ಕಾರಣಕ್ಕೆ ಸಿಕ್ಕಿಬಿದಿದ್ದ ಮೂವರನ್ನು ಅದೇ ಹುದ್ದೆಗೆ ನೇಮಿಸಲಾಗಿದೆ.
ಹರಿಹರದ ಅಬಕಾರಿ ಲೈಸೆನ್ಸ್‌ ವಿಚಾರವಾಗಿ ಲಂಚದ ಕಾರಣಕ್ಕೆ ಸಿಕ್ಕಿಬಿದಿದ್ದ ಮೂವರನ್ನು ಅದೇ ಹುದ್ದೆಗೆ ನೇಮಿಸಲಾಗಿದೆ.

ದಾವಣಗೆರೆ: ಅವರು ಕಳೆದ ತಿಂಗಳು ಅಬಕಾರಿ ಲೈಸೆನ್ಸ್‌ ನೀಡಲು ಲಂಚ ಪಡೆಯುವಾಗ ಲೋಕಾಯುಕಕ್ಕೆ ಸಿಕ್ಕಿಬಿದ್ದುಅಮಾನತುಗೊಂಡಿದ್ದರು. ತಿಂಗಳಂತರದಲ್ಲಿಯೇ ಅವರ ಅಮಾನತು ತೆರವಾಗಿಮತ್ತೆ ಹಿಂದೆ ಇದ್ದ ಹುದ್ದೆಗೆ ಬಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಹವಾಮಾನ ಮೇ 18; ಉತ್ತರ ಕನ್ನಡ, ತುಮಕೂರು, ಬೆಂಗಳೂರು ಸೇರಿ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಉತ್ತರ ಒಳನಾಡಲ್ಲಿ ಹಲವೆಡೆ ಮಳೆ

ಬೆಂಗಳೂರಿನಲ್ಲಿ ಮೇ 18, 19ಕ್ಕೆ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ; ಆರೆಂಜ್ ಅಲರ್ಟ್ ಘೋಷಣೆ -Bengaluru Rain

ಎಸ್‌ಎಸ್‌ಎಲ್‌ಸಿ ಕಡಿಮೆ ಫಲಿತಾಂಶ ಬಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ; ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ರದ್ದು, ಮಹತ್ವದ ತೀರ್ಮಾನ

ಲೈಂಗಿಕ ದೌರ್ಜನ್ಯಕ್ಕೊಳದ ಮಹಿಳೆ ಅಪಹರಣ ಆರೋಪ ಪ್ರಕರಣ; ಮೇ 20ಕ್ಕೆ ಹೆಚ್‌ಡಿ ರೇವಣ್ಣ ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್

ಇದು ಅಬಕಾರಿ ಇಲಾಖೆಯ ಮಹಿಮೆ. ದಾವಣಗೆರೆ ಜಿಲ್ಲೆ ಹರಿಹರದಲ್ಲಿ ನಡೆದ ಘಟನಾವಳಿ. ದೂರು ಕೊಟ್ಟವರಿಗೂ ಈ ಬೆಳವಣಿಗೆ ಅಚ್ಚರಿ ಮೂಡಿಸಿದೆ.

60ಲಕ್ಷ ರೂ.ಗೆ ಬೇಡಿಕೆ ಆರೋಪ

ಅಬಕಾರಿ ಇಲಾಖೆಯಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ, ಹಣ ಕೊಡುವುದಿಲ್ಲ ಅಂತಂದ್ರೆ ನಿಮಗೆ ಯಾವುದೇ ಲೈಸೆನ್ಸ್ ಸಿಗುವುದಿಲ್ಲ. ಬಾರ್ ಲೈಸೆನ್ಸ್ ಪಡೆಯಲು ಹೋದ ವ್ಯಕ್ತಿಯೊಬ್ಬನಿಗೆ ಅಬಕಾರಿ ಡಿಸಿಯೇ 60ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತು.

ದಾವಣಗೆರೆ ಜಿಲ್ಲೆಯ ಹರಿಹರದ ಅಮ್ಯೂಸ್ಮೆಂಟ್ ಪಾರ್ಕ್ ಮಾಲೀಕ ಡಿ ಜಿ ರಘುನಾಥ್ ಎಂಬುವರು ಬಾರ್ ಲೈಸೆನ್ಸ್ ಪಡೆಯಲು ಹೋಗಿದ್ದು, ಈ ವೇಳೆ ದಾವಣಗೆರೆ ಅಬಕಾರಿ ಡಿಸಿ ಸ್ವಪ್ನ್ ನಿಮಗೆ ಲೈಸೆನ್ಸ್ ಬೇಕಾದರೆ 60 ಲಕ್ಷ ರೂ. ಕೊಡಬೇಕು. ನಾವೇ ಎಲ್ಲವನ್ನು ಮಾಡಿಕೊಡುತ್ತೇವೆ ಎಂದು ಬೇಡಿಕೆ ಇಟ್ಟಿದ್ದಾಗಿ ರಘುನಾಥ್ ಆರೋಪ ಮಾಡಿದ್ದಾರೆ. ಆದರೆ, ಇದಕ್ಕೆ ಒಪ್ಪಿಕೊಳ್ಳದ ರಘುನಾಥ್ , ನಾನು ಹಣ ಕೊಡುತ್ತೇನೆ. ಆದ್ರೆ, ನೀವು ಹೇಳಿದಷ್ಟು ಕೊಡುವುದಿಲ್ಲ ಎಂದಿದ್ದಾರೆ. ಅದಕ್ಕೆ ಅಧಿಕಾರಿಗಳು ಒಪ್ಪಿಲ್ಲ. ಹೀಗಾಗಿ, ರಘುನಾಥ್ ಹಣ ನೀಡಲು ಒಪ್ಪಿಕೊಂಡಿದ್ದಾರೆ. ಬಳಿಕ, ಅಬಕಾರಿ ಏಜೆಂಟ್ ವೊಬ್ಬ ತಮ್ಮ ಕಚೇರಿಗೆ ರಘುನಾಥ್ ರನ್ನ ಕರೆದು ಡೀಲ್ ಕುದುರಿದಲು ಪ್ರಯತ್ನ ಮಾಡಿದ್ಧಾರೆ. ಆಗ 40 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ನಾವು ಇದರಲ್ಲಿ ಎಲ್ಲ ಅಧಿಕಾರಿಗಳಿಗೆ ನೀಡಬೇಕು ಎಂದು ಹೇಳಿರುವುದು ಕೂಡ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ಹಣ ಪಡೆಯಲು ಬಂದರವೇ ಬೇರೆ

ರಘುನಾಥ್ ಹಣ ನೀಡಲು ಒಪ್ಪಿಕೊಂಡ ಬಳಿಕ ಅಬಕಾರಿ ಇಲಾಖೆಯ ಹರಿಹರ ರೇಂಜ್ ನ ಇನ್ಸಪೆಕ್ಟರ್ ಶೀಲಾ ಮತ್ತು ಅಸಿಸ್ಟಂಟ್ ಬಾರ್ ತೆರೆಯುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಎಲ್ಲ ಸರಿ ಇದ್ದು, ಅರ್ಜಿ ಸಲ್ಲಿಸೋಕೆ ಹೇಳಿದ್ದಾರೆ. ಆದರೆ, ನಂತರ ಕೇಳಿದ್ದ ಹಣ ಬಂದಿಲ್ಲ ಎಂದು ತಮಗೆ ಸಮಸ್ಯೆ ಮಾಢಿದರು ಎನ್ನುವುದು ರಘುನಾಥ್ ಅವರ ದೂರಿನ ಪ್ರಮುಖಾಂಶ.

ನಂತರ ದಾವಣಗೆರೆ ಡೆಪ್ಯೂಟಿ ಸುಪರಿಟೆಂಡೆಂಟ್ ರವಿಕುಮಾರ್ ಮರಿಗೌಡರ್ ನನಗೆ 7ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಅಧಿಕಾರಿಗಳ ಕಾಟದಿಂದ ಬೇಸತ್ತು ಅಕ್ಟೋಬರ್ 13 ರಂದು ಲೋಕಾಯುಕ್ತರಿಗೆ ದೂರು ನೀಡಿದ್ದೆ. ನಂತರ ಅಕ್ಟೋಬರ್ 14ರ ಮಹಾಲಯ ಅಮಾವಾಸ್ಯೆ ದಿನ ಸರ್ಕಾರಿ ರಜೆ ಇದ್ದರೂ ಕೂಡ ಎಫ್ ಡಿಎ ಅಶೋಕ್ ಎಂಬುವರು 3 ಲಕ್ಷ ರೂ. ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಈ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ ಅಶೋಕ್ ನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಎಲ್ಲ ಅಧಿಕಾರಿಗಳ ಬಣ್ಣ ಬಯಲಾಗಿದೆ. ಬಳಿಕ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಲ್ಲದೇ, ಇದರಲ್ಲಿ ಅಬಕಾರಿ ಇಲಾಖೆಯ ಡೆಪ್ಯೂಟಿ ಸುಪರಿಟೆಂಡೆಂಟ್ ರವಿಕುಮಾರ್ ಮರಿಗೌಡರ್, ಎಫ್ ಡಿಎ ಅಶೋಕ್, ಎಸ್ ಡಿಎ ಶೈಲಶ್ರೀ, ಹರಿಹರ ಅಬಕಾರಿ ಇನ್ಸ್‌ಪೆಕ್ಟರ್ ಶೀಲಾ, ಹಾಗೂ ದಾವಣಗೆರೆ ಉಪ ಆಯುಕ್ತೆ ಸ್ವಪ್ನ ಸೇರಿದಂತೆ ಪ್ರಕರಣ ದಾಖಲಾಗಿತ್ತುಎನ್ನುತ್ತಾರೆ ರಘುನಾಥ್.

ಮತ್ತೆ ನಿಯೋಜಿಸಿದ್ದೇಕೆ

ಇನ್ನು, ಈ ಪ್ರಕರಣ ದಾಖಲಾಗುತ್ತಿದ್ದಂತೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ರವಿಕುಮಾರ್ ಮರಿಗೌಡರ್ ತಲೆಮರೆಸಿಕೊಂಡಿದ್ದರು. ನಂತರ ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತವಾಗಿದ್ದರಿಂದ ಹೈಕೋರ್ಟ್ ನಲ್ಲಿ ನಾಲ್ವರು ಅಧಿಕಾರಿಗಳು ಜಾಮೀನು ಪಡೆದಿದ್ದಾರೆ. ಅಕ್ಟೋಬರ್ 15 ರಂದು ಕೇಸ್ ದಾಖಲಾಗಿ ಎಲ್ಲ ಅಧಿಕಾರಿಗಳು ಅಮಾನತ್ತಾಗಿದ್ದರೂ ನವೆಂಬರ್ 7ರ ವರೆಗೂ ಆ ಸ್ಥಳಕ್ಕೆ ಇಲಾಖೆ ಬೇರೆ ಅಧಿಕಾರಿಗಳ ನಿಯೋಜನೆ ಮಾಡಿರಲಿಲ್ಲ. ನಂತರ ಕೇಸ್ ನಲ್ಲಿ ಆರೋಪಿತ ಐವರು ಅಧಿಕಾರಿಗಳ ಪೈಕಿ ಎಫ್ ಡಿಎ ಅಶೋಕ್, ಹರಿಹರ ಇನ್ಸ್‌ಪೆಕ್ಟ್ರರ್‌ ಶೀಲಾ ಹಾಗೂ ದಾವಣಗೆರೆ ಉಪ ಆಯುಕ್ತೆ ಸ್ವಪ್ನ್ ಗೆ ಹೈಕೋರ್ಟ್ ಜಾಮೀನು ನೀಡಿದೆ. ಜಾಮೀನು ಸಿಕ್ಕ ಬಳಿಕ ಮೂವರು ತಮ್ಮ ಹಿಂದಿನ ಸ್ಥಳದಲ್ಲಿಯೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಬಂದ ಅಧಿಕಾರಿಗಳು ಅದೇ ಜಿಲ್ಲೆಯಲ್ಲಿ ಅದೇ ಹುದ್ದೆಯಲ್ಲಿ ಹೇಗೆ ಮುಂದುವರಿಯುತ್ತಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದ ಡಿ ಜಿ ರಘುನಾಥ್ ಪ್ರಶ್ನೆ ಮಾಡಿದ್ದಾರೆ. ಇವರ ವಿರುದ್ಧ ಇಲಾಖೆ ಹಾಗೂ ಸರ್ಕಾರ ಸೂಕ್ತ ಕ್ರಮಕೈಗೊಳ್ಳುವಂತೆ ರಘುನಾಥ್ ಆಗ್ರಹಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ