logo
ಕನ್ನಡ ಸುದ್ದಿ  /  ಕರ್ನಾಟಕ  /  ಎಸ್‌ಎಸ್‌ಎಲ್‌ಸಿ ರಿಸಲ್ಟ್; 5ನೇ ಸ್ಥಾನಕ್ಕೆ ಉತ್ತರ ಕನ್ನಡ ಜಿಲ್ಲೆ, ಶಿರಸಿಯ ಚಿನ್ಮಯಿ, ಶ್ರೀರಾಮ್, ದರ್ಶನ್, ತೃಪ್ತಿ ಸ್ಟೇಟ್ ಟಾಪರ್‌ಗಳು

ಎಸ್‌ಎಸ್‌ಎಲ್‌ಸಿ ರಿಸಲ್ಟ್; 5ನೇ ಸ್ಥಾನಕ್ಕೆ ಉತ್ತರ ಕನ್ನಡ ಜಿಲ್ಲೆ, ಶಿರಸಿಯ ಚಿನ್ಮಯಿ, ಶ್ರೀರಾಮ್, ದರ್ಶನ್, ತೃಪ್ತಿ ಸ್ಟೇಟ್ ಟಾಪರ್‌ಗಳು

Umesh Kumar S HT Kannada

May 09, 2024 03:13 PM IST

ಎಸ್‌ಎಸ್‌ಎಲ್‌ಸಿ ರಿಸಲ್ಟ್; 5ನೇ ಸ್ಥಾನಕ್ಕೆ ಉತ್ತರ ಕನ್ನಡ ಜಿಲ್ಲೆ, ಶಿರಸಿಯ ಚಿನ್ಮಯಿ (ಮೊದಲನೇಯವರು), ಶ್ರೀರಾಮ್ (ಎರಡನೇಯವರು), ದರ್ಶನ್ (ಮೂರನೇಯವರು), ತೃಪ್ತಿ (ನಾಲ್ಕನೇಯವರು) ಸ್ಟೇಟ್ ಟಾಪರ್‌ಗಳು.

  • ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಪ್ರಕಟವಾಗಿದ್ದು, ಜಿಲ್ಲಾವಾರು ಫಲಿತಾಂಶದಲ್ಲಿ 5 ನೇ ಸ್ಥಾನಕ್ಕೆ ಜಿಗಿದ ಉತ್ತರ ಕನ್ನಡ ಜಿಲ್ಲೆ ಕಳೆದ ಬಾರಿಗಿಂತ ಉತ್ತಮ ಸಾಧನೆ ತೋರಿದೆ. ಈ ಸಲ ಶಿರಸಿಯ ಚಿನ್ಮಯಿ, ಶ್ರೀರಾಮ್, ದರ್ಶನ್, ತೃಪ್ತಿ ಸ್ಟೇಟ್‌ ಟಾಪರ್‌ಗಳು ಎಂಬುದು ಗಮನಾರ್ಹ ವಿಚಾರ. (ವರದಿ - ಹರೀಶ ಮಾಂಬಾಡಿ, ಮಂಗಳೂರು) 

ಎಸ್‌ಎಸ್‌ಎಲ್‌ಸಿ ರಿಸಲ್ಟ್; 5ನೇ ಸ್ಥಾನಕ್ಕೆ ಉತ್ತರ ಕನ್ನಡ ಜಿಲ್ಲೆ, ಶಿರಸಿಯ ಚಿನ್ಮಯಿ (ಮೊದಲನೇಯವರು), ಶ್ರೀರಾಮ್ (ಎರಡನೇಯವರು), ದರ್ಶನ್ (ಮೂರನೇಯವರು), ತೃಪ್ತಿ (ನಾಲ್ಕನೇಯವರು) ಸ್ಟೇಟ್ ಟಾಪರ್‌ಗಳು.
ಎಸ್‌ಎಸ್‌ಎಲ್‌ಸಿ ರಿಸಲ್ಟ್; 5ನೇ ಸ್ಥಾನಕ್ಕೆ ಉತ್ತರ ಕನ್ನಡ ಜಿಲ್ಲೆ, ಶಿರಸಿಯ ಚಿನ್ಮಯಿ (ಮೊದಲನೇಯವರು), ಶ್ರೀರಾಮ್ (ಎರಡನೇಯವರು), ದರ್ಶನ್ (ಮೂರನೇಯವರು), ತೃಪ್ತಿ (ನಾಲ್ಕನೇಯವರು) ಸ್ಟೇಟ್ ಟಾಪರ್‌ಗಳು.

ಕಾರವಾರ: ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಉತ್ತರ ಕನ್ನಡ ಮತ್ತು ಶಿರಸಿಯ ಶೈಕ್ಷಣಿಕ ಜಿಲ್ಲೆಗಳು ಉತ್ತಮ ಪ್ರಗತಿಯನ್ನು ತೋರಿಸಿವೆ. ಫಲಿತಾಂಶದಲ್ಲಿ ಶಿರಸಿಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದರೆ, ಮತ್ತೋರ್ವ ವಿದ್ಯಾರ್ಥಿನಿ ಮೂರನೇ ಸ್ಥಾನ ಪಡೆದಿದ್ದಾಳೆ.

ಟ್ರೆಂಡಿಂಗ್​ ಸುದ್ದಿ

ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲೊಲ್ಲ, ಅದು ಬಿಜೆಪಿ ಅಪಪ್ರಚಾರವಷ್ಟೇ: ಸಿಎಂ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಪೂರ್ವ ಮುಂಗಾರು; 18 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ಇತ್ತೀಚಿನ 10 ಸುದ್ದಿ ಮುಖ್ಯಾಂಶ

ಬೆಳ್ತಂಗಡಿ ಅಕ್ರಮ ಕಲ್ಲುಗಣಿಗಾರಿಕೆ ಕೇಸ್; ಆರೋಪಿಗಳ ಬಂಧನ, ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್‌, 10 ವಿದ್ಯಮಾನಗಳಿವು

ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ ಪೂರೈಸುತ್ತಿದ್ದ ನಾರಾ ಶ್ರೀನಿವಾಸ್ ರಾವ್ ಬಂಧನ; ಗೋವಾ ಮಹಿಳೆಯ ಬ್ಲಾಕ್ ಮೇಲ್, ಬೆಂಗಳೂರಿನ ವ್ಯಕ್ತಿ ಸೆರೆ

ಸಮಗ್ರ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಎರಡು ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳ ಪೈಕಿ ಎರಡೂ ಜಿಲ್ಲೆಗಳೂ ಉತ್ತಮ ಫಲಿತಾಂಶವನ್ನು ದಾಖಲಿಸಿವೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉತ್ತರಕನ್ನಡ ಶೈಕ್ಷಣಿಕ ಜಿಲ್ಲೆ 5 ನೇ ಸ್ಥಾನ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆ 8ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಉತ್ತರಕನ್ನಡ ಶೈಕ್ಷಣಿಕ ಜಿಲ್ಲೆ 12ನೇ ಸ್ಥಾನ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆ 23 ನೇ ಸ್ಥಾನದಲ್ಲಿತ್ತು. ಈ ಬಾರಿ ಉತ್ತಮ ಫಲಿತಾಂಶ ಲಭಿಸಲು ಸತತ ಪರಿಶ್ರಮ, ಯೋಜಿತ ಬೋಧನಾ ಕ್ರಮ ಕಾರಣವಾಗಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ; ಶಿರಸಿಯಿಂದ 4 ಟಾಪರ್‌ಗಳು

625ಕ್ಕೆ 624 ಅಂಕಗಳನ್ನು ಶಿರಸಿಯ ಮಾರಿಕಾಂಬಾ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿ ದರ್ಶನ ಭಟ್, ಶಿರಸಿ ತಾಲೂಕಿನ ಗೋಳಿಯ ಸಿದ್ಧಿವಿನಾಯಕ ಹೈಸ್ಕೂಲ್‌ನ ಚಿನ್ಮಯಿ ಹೆಗಡೆ ಹಾಗೂ ಶಿರಸಿಯ ಭೈರುಂಬೆಯ ಶ್ರೀ ಶಾರದಾಂಬಾ ಇಂಗ್ಲೀಷ್ ಮಾಧ್ಯಮ ಶಾಲೆಯ ಶ್ರೀರಾಮ ಕೆ.ಎಂ ಪಡೆದಿದ್ದಾರೆ. ಗೋಳಿಯ ಸಿದ್ಧಿವಿನಾಯಕ ಹೈಸ್ಕೂಲ್‌ನ ತೃಪ್ತಿ ರಾಮಚಂದ್ರ ಗೌಡ 623 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದ್ದಾಳೆ. ಒಟ್ಟಾರೆಯಾಗಿ ಶಿರಸಿಯ ನಾಲ್ವರು ರಾಜ್ಯದ ಟಾಪ್ ಸ್ಥಾನಗಳನ್ನು ಅಲಂಕರಿಸಿಕೊಂಡಿರುವುದಕ್ಕೆ ಜಿಲ್ಲೆಯ ಜನತೆ ಸಂತಸಪಟ್ಟಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಪಾಲಕರು, ಶಾಲಾ ಶಿಕ್ಷಕರು ಸಂತಸ ವ್ಯಕ್ತಪಡಿಸಿ ಶುಭಾಶಯ ಕೋರುತ್ತಿದ್ದಾರೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ರಿಸಲ್ಟ್, ಶಿರಸಿಗೆ ಕೀರ್ತಿ ತಂದವರು

ದರ್ಶನ್ ಸುಬ್ರಾಯ ಭಟ್ (624) ತಂದೆ: ಸುಬ್ರಾಯ ದತ್ತಾತ್ರೇಯ ಭಟ್, ತಾಯಿ: ವಿಜಯಲಕ್ಷ್ಮೀ ಸುಬ್ರಾಯ ಭಟ್ ಶಾಲೆ: ಸರಕಾರಿ ಮಾರಿಕಾಂಬಾ ಪಿಯು ಕಾಲೇಜು, ಶಿರಸಿ.

ಶ್ರೀರಾಮ್ ಕೆ.ಎಂ. (624 ಅಂಕ) ತಂದೆ: ಮಹಾಬಲೇಶ್ವರ ಹೆಗಡೆ, ತಾಯಿ: ಮಹಾಲಕ್ಷ್ಮೀ ಹೆಗಡೆ, ಶಾರದಾಂಬಾ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಶಿರಸಿ ತಾಲೂಕು.

ಚಿನ್ಮಯಿ ಶ್ರೀಪಾದ ಹೆಗಡೆ (624 ಅಂಕ) ತಂದೆ: ಶ್ರೀಪಾದ ವಿಶ್ವನಾಥ ಹೆಗಡೆ, ತಾಯಿ: ಸುಮಾ ಶ್ರೀಪಾದ ಹೆಗಡೆ.. ಸಿದ್ಧಿವಿನಾಯಕ ಹೈಸ್ಕೂಲ್, ಗೋಳಿ, ಶಿರಸಿ ತಾಲೂಕು.

ತೃಪ್ತಿ ರಾಮಚಂದ್ರ ಗೌಡ (623 ಅಂಕ) ತಂದೆ: ರಾಮಚಂದ್ರ ಮಹಾಬಲ ಗೌಡ, ತಾಯಿ: ಮಹಾಲಕ್ಷ್ಮೀ ರಾಮಚಂದ್ರ ಗೌಡ. ಶಾಲೆ: ಸಿದ್ಧಿವಿನಾಯಕ ಹೈಸ್ಕೂಲು, ಗೋಳಿ, ಶಿರಸಿ ತಾಲೂಕು. ಇದೇ ಶಾಲೆಯ ಚೈತನ್ಯ ಗಣಪತಿ ಹೆಗಡೆ 619 ಅಂಕ ಗಳಿಸಿದ್ದಾರೆ.

ನಮ್ಮಲ್ಲಿ ನಾಲ್ವರು ಟಾಪರ್ ಗಳಾಗುತ್ತಾರೆ ಎಂದು ನಿರೀಕ್ಷಿಸಿದ್ದೆವು. ಕೆಲವೇ ಅಂಕಗಳಲ್ಲಿ ತಪ್ಪಿಹೋಯಿತು. ಪೇಟೆಗಿಂತ ಹತ್ತು ಕಿ.ಮೀ. ದೂರದ ಹಳ್ಳಿಯ ಶಾಲೆಗೆ ಆಗಮಿಸಿ ಶ್ರದ್ಧೆಯಿಂದ ಕಲಿತು ರಾಜ್ಯದ ಗಮನ ಸೆಳೆದಿರುವ ವಿದ್ಯಾರ್ಥಿಗಳ ಸಾಧನೆ ಹೆಮ್ಮೆ ತಂದಿದೆ ಎಂದು ಎಚ್.ಟಿ. ಕನ್ನಡದೊಂದಿಗೆ ಸಿದ್ಧಿವಿನಾಯಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಾರಾಯಣ ನಾಗಪ್ಪ ದೈಮನೆ ಪ್ರತಿಕ್ರಿಯಿಸಿದರು.

(ವರದಿ - ಹರೀಶ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ