logo
ಕನ್ನಡ ಸುದ್ದಿ  /  ಕರ್ನಾಟಕ  /  Evm Warehouse: ಇವಿಎಂ ಮತ್ತು ವಿವಿಪ್ಯಾಟ್ ಉಗ್ರಾಣದ ಉದ್ಘಾಟನೆ; ಬೆಂಗಳೂರು ನಗರ ಜಿಲ್ಲೆ ಉಗ್ರಾಣದ ವಿಶೇಷತೆಗಳು ಏನು?

EVM Warehouse: ಇವಿಎಂ ಮತ್ತು ವಿವಿಪ್ಯಾಟ್ ಉಗ್ರಾಣದ ಉದ್ಘಾಟನೆ; ಬೆಂಗಳೂರು ನಗರ ಜಿಲ್ಲೆ ಉಗ್ರಾಣದ ವಿಶೇಷತೆಗಳು ಏನು?

HT Kannada Desk HT Kannada

Feb 02, 2023 06:12 PM IST

ಬೆಂಗಳೂರು ನಗರ ಜಿಲ್ಲೆಯ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್‌ಗಳ ಉಗ್ರಾಣ ಗುರುವಾರ ಉದ್ಘಾಟನೆಗೊಂಡಿದೆ.

  • EVM Warehouse: ಬೆಂಗಳೂರು ನಗರ ಜಿಲ್ಲೆಯ ವಿದ್ಯುನ್ಮಾನ ಮತಯಂತ್ರಗಳು (Electronic voting machine) ಮತ್ತು ವಿವಿಪ್ಯಾಟ್‌ (Voter-verified paper audit trail) ಗಳ ಉಗ್ರಾಣ ಗುರುವಾರ ಉದ್ಘಾಟನೆ ಆಗಿದೆ. 

ಬೆಂಗಳೂರು ನಗರ ಜಿಲ್ಲೆಯ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್‌ಗಳ ಉಗ್ರಾಣ ಗುರುವಾರ ಉದ್ಘಾಟನೆಗೊಂಡಿದೆ.
ಬೆಂಗಳೂರು ನಗರ ಜಿಲ್ಲೆಯ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್‌ಗಳ ಉಗ್ರಾಣ ಗುರುವಾರ ಉದ್ಘಾಟನೆಗೊಂಡಿದೆ.

ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ಮುಂಚಿತವಾಗಿ, ಬೆಂಗಳೂರು ನಗರ ಜಿಲ್ಲೆಯ ವಿದ್ಯುನ್ಮಾನ ಮತಯಂತ್ರಗಳು (Electronic voting machine) ಮತ್ತು ವಿವಿಪ್ಯಾಟ್‌ (Voter-verified paper audit trail) ಗಳ ಉಗ್ರಾಣ ಗುರುವಾರ ಉದ್ಘಾಟನೆ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಬರದ ನಡುವೆ ಗ್ಯಾರಂಟಿ ಜಾರಿ, ಪರಿಹಾರದ ಚೊಂಬು; ಸಿದ್ದರಾಮಯ್ಯ- ಡಿಕೆಶಿ ಜೋಡಿ ಸರ್ಕಾರಕ್ಕೆ ವರ್ಷ, ಹೇಗಿತ್ತು ಈ ಹಾದಿ, 10 ಅಂಶಗಳು

Hassan Scandal: ರೇವಣ್ಣಗೆ ಎರಡನೇ ಪ್ರಕರಣದಲ್ಲೂ ಜಾಮೀನು, ನ್ಯಾಯಾಧೀಶರ ಸೂಚನೆ ಏನು

ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲೊಲ್ಲ, ಅದು ಬಿಜೆಪಿ ಅಪಪ್ರಚಾರವಷ್ಟೇ: ಸಿಎಂ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಪೂರ್ವ ಮುಂಗಾರು; 18 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ಇತ್ತೀಚಿನ 10 ಸುದ್ದಿ ಮುಖ್ಯಾಂಶ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬರುವ 7 ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್ ಗಳ ಉಗ್ರಾಣಕ್ಕಾಗಿ ಸುಸಜ್ಜಿತ ಕಟ್ಟಡವನ್ನು ಪಿಲ್ಲಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರವರು ತಿಳಿಸಿದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬರುವ 7 ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್‌ಗಳ ಉಗ್ರಾಣಕ್ಕಾಗಿ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಪಿಲ್ಲಹಳ್ಳಿ ಗ್ರಾಮದಲ್ಲಿ 2 ಎಕರೆ ಪ್ರದೇಶದಲ್ಲಿ ಸ್ಥಾಪಿಸಿರುವ ಕಟ್ಟಡದ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಚುನಾವಣಾ ಅಧಿಕಾರಿ-ಬೆಂಗಳೂರು ಅವರ ವ್ಯಾಪ್ತಿಯಲ್ಲಿ 4 ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳು(ಬೆಂಗಳೂರು ನಗರ, ಕೇಂದ್ರ, ಉತ್ತರ ಹಾಗೂ ದಕ್ಷಿಣ) ಬರಲಿದ್ದು, 4 ಉಗ್ರಾಣಗಳ ಪೈಕಿ ಪಿಲ್ಲಹಳ್ಳಿ ಗ್ರಾಮದಲ್ಲಿ ಹೊಸದಾಗಿ ಬೆಂಗಳೂರು ನಗರ ಜಿಲ್ಲೆಯ ಉಗ್ರಾಣವನ್ನು ಸ್ಥಾಪಿಸಲಾಗಿದೆ ಎಂದು ಅವರು ವಿವರಿಸಿದರು.

ಈ ಹಿಂದೆ ನಗರದಲ್ಲೇ ಉಗ್ರಾಣಗಳ ವ್ಯವಸ್ಥೆಯಿತ್ತು. ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ ಹಾಗೂ ನಿರ್ದೇಶನದಂತೆ ಇವಿಎಂ ಹಾಗೂ ವಿವಿಪ್ಯಾಟ್‌ಗಳ ಉಗ್ರಾಣಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗುತ್ತಿದೆ. ಅದರ ಸಲುವಾಗಿ ಮೊದಲ ಹಂತದಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಉಗ್ರಾಣವನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಇದೇ ಸ್ಥಳದಲ್ಲಿ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣದ ಉಗ್ರಾಣಗಳ ಕಟ್ಟಡ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಉಗ್ರಾಣಗಳ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿ ಸೇವೆಗೆ ಬಳಸಿಕೊಳ್ಳಲಾಗುವುದೆಂದು ತಿಳಿಸಿದರು.

ಮುಂಬರುವ ಸಾರ್ವತ್ರಿಕ ಚುನಾವಣೆಯ ಸಂಬಂಧ ಈಗಾಗಲೇ ಇವಿಎಂಗಳು ಬಂದಿದ್ದು, ಉಗ್ರಾಣದಲ್ಲಿ ಶೇಖರಿಸಿ ಇಡಲಾಗಿದೆ. ವಿವಿಪ್ಯಾಟ್ ಗಳು ಬರಬೇಕಿದ್ದು, ಅವು ಬಂದ ನಂತರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಫೆ. 10 ರಿಂದ 19 ರೊಳಗಾಗಿ ದಿನಾಂಕವನ್ನು ನಿಗದಿಪಡಿಸಿಕೊಂಡು ಫಸ್ಟ್ ಲೆವೆಲ್ ಚೆಕ್ಕಿಂಗ್ ಮಾಡಲಾಗುವುದು ಎಂದು ಹೇಳಿದರು.

ಬೆಂಗಳೂರು ನಗರ ಅಪರ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಮಾತನಾಡಿ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ 7 ವಿಧಾನ ಸಭಾ ಕ್ಷೇತ್ರಗಳಿದ್ದು, ಒಟ್ಟು 3083 ಮತಗಟ್ಟೆಗಳಿವೆ. ಈ ಪೈಕಿ ಶೇ. 125 ಇವಿಎಂ ಈಗಾಗಲೇ ಸ್ವೀಕೃತವಾಗಿದ್ದು, ಉಗ್ರಾಣದಲ್ಲಿ ಶೇಖರಿಸಿ ಇಡಲಾಗಿದೆ. ಶೇ. 135 ವಿವಿಪ್ಯಾಟ್ ಸ್ವೀಕೃತವಾಗಬೇಕಿದ್ದು, ಇದೇ ಫೆ.6ರಂದು ಬರಲಿವೆ. ಈ ವೇಳೆಗೆ ಉಗ್ರಾಣದ ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಿಸಲಾಗಿದೆ. ಇದೇ ಸ್ಥಳದಲ್ಲಿ ಫಸ್ಟ್ ಲೆವೆಲ್ ಚೆಕ್ಕಿಂಗ್ ಮಾಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು ನಗರ ವ್ಯಾಪ್ತಿಗೆ ಯಲಹಂಕ, ಯಶವಂತಪುರ, ಬ್ಯಾಟರಾಯನಪುರ, ಮಹದೇವಪುರ, ದಾಸರಹಳ್ಳಿ, ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳು ಬರಲಿವೆ. ಉಗ್ರಾಣದ ಸ್ಥಳದಲ್ಲಿ ಅಗತ್ಯ ಸಿಸಿ ಟಿವಿ, ಪೊಲೀಸ್ ಭದ್ರತಾ ಸಿಬ್ಬಂದಿಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈಗಾಗಲೇ ಬಂದಿರುವ ಇವಿಎಂಗಳನ್ನು ಹಳೆಯ ಉಗ್ರಾಣದಲ್ಲಿ ಶೇಖರಿಸಿಟ್ಟಿದ್ದು, ಅದನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.

ಇವಿಎಂ ಮತ್ತು ವಿವಿಪ್ಯಾಟ್ ಗಳ ಉಗ್ರಾಣಗಳ ಮಾಹಿತಿ:

ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ: ವಲಯ ಜಂಟಿ ಆಯುಕ್ತರ ಕಛೇರಿ(ದಕ್ಷಿಣ), 2ನೇ ಬ್ಲಾಕ್, ಜಯನಗರ.

ಬೆಂಗಳೂರು ಕೇಂದ್ರ: ಅಂಬೇಡ್ಕರ್ ಕ್ರೀಡಾಂಗಣ, ಬಸವೇಶ್ವರ ನಗರ.

ಬೆಂಗಳೂರು ನಗರ ಜಿಲ್ಲೆ: ಪಿಲ್ಲಹಳ್ಳಿ ಗ್ರಾಮ, ದಾಸನಪುರ ಹೋಬಳಿ, ಬೆಂಗಳೂರು ಉತ್ತರ ತಾ.

ಬೆಂಗಳೂರು ನಗರ ಜಿಲ್ಲೆಯ ಉಗ್ರಾಣ ಕಟ್ಟಡದ ವಿವರ

  • ಕಟ್ಟಡದ ವಿಸ್ತೀರ್ಣ: 8731.74ಚ.ಮೀ.
  • ಕಟ್ಟಡದ ಒಟ್ಟು ವೆಚ್ಚ: 5.10 ಕೋಟಿ ರೂ.

ತಳಮಹಡಿ:

  • ಸ್ಟ್ರಾಂಗ್ ರೂಮ್ಸ್ ಗಳ ಸಂಖ್ಯೆ 05, ಫಸ್ಟ್‌ ಲೆವೆಲ್‌ ಚೆಕ್ಕಿಂಗ್‌ ಹಾಲ್‌, ಸಂಗ್ರಹಣಾ ಕೊಠಡಿ

ನೆಲಮಹಡಿ:

  • ಸ್ಟ್ರಾಂಗ್ ರೂಮ್ಸ್ ಗಳ ಸಂಖ್ಯೆ 04, ಫಸ್ಟ್‌ ಲೆವೆಲ್‌ ಚೆಕ್ಕಿಂಗ್‌ ಹಾಲ್‌, ವಿದ್ಯುತ್ ಕೊಠಡಿ, ರೆಕಾರ್ಡ್ ರೂಂ, ಕಚೇರಿ ಕೊಠಡಿ, ಲಿಫ್ಟ್ ವ್ಯವಸ್ಥೆ(ಕೆಲಸ ಪ್ರಗತಿಯಲ್ಲಿದೆ), ಶೌಚಾಲಯ, ರ‍್ಯಾಂಪ್ ವ್ಯವಸ್ಥೆ, ಪೊಲೀಸ್ ಭದ್ರತೆ ಹಾಗೂ ಸಿಸಿ ಕ್ಯಾಮೆರಾ ಕೊಠಡಿ

ಈ ವೇಳೆ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೀವ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ