logo
ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: ಹಾಸನ ಸಂತ್ರಸ್ತೆಯ ಅಪಹರಣ, ಮೇ 14ರ ತನಕ ಹೆಚ್ ಡಿ ರೇವಣ್ಣಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್‌

Hassan Scandal: ಹಾಸನ ಸಂತ್ರಸ್ತೆಯ ಅಪಹರಣ, ಮೇ 14ರ ತನಕ ಹೆಚ್ ಡಿ ರೇವಣ್ಣಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್‌

Umesh Kumar S HT Kannada

May 08, 2024 04:44 PM IST

google News

ಹಾಸನ ಅತ್ಯಾಚಾರ ಸಂತ್ರಸ್ತೆಯ ಅಪಹರಣ, ಮೇ 14ರ ತನಕ ಹೆಚ್ ಡಿ ರೇವಣ್ಣಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್‌

  • ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಹೆಚ್ ಡಿ ರೇವಣ್ಣಗೆ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ಅವರನ್ನು ಎಸ್‌ಐಟಿ ಕಸ್ಟಡಿಯಿಂದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುತ್ತಿದೆ. 

ಹಾಸನ ಅತ್ಯಾಚಾರ ಸಂತ್ರಸ್ತೆಯ ಅಪಹರಣ, ಮೇ 14ರ ತನಕ ಹೆಚ್ ಡಿ ರೇವಣ್ಣಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್‌
ಹಾಸನ ಅತ್ಯಾಚಾರ ಸಂತ್ರಸ್ತೆಯ ಅಪಹರಣ, ಮೇ 14ರ ತನಕ ಹೆಚ್ ಡಿ ರೇವಣ್ಣಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್‌

ಬೆಂಗಳೂರು: ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಕರ್ನಾಟಕ ಶಾಸಕ ಎಚ್‌ಡಿ ರೇವಣ್ಣ ಅವರನ್ನು ಮೇ 14ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ. ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯ ಅಪಹರಣ ಕೇಸ್‌ನಲ್ಲಿ ಶನಿವಾರ ಅವರನ್ನು ಪದ್ಮನಾಭ ನಗರದಲ್ಲಿ ಎಸ್‌ಐಟಿ ತಂಡ ಬಂಧಿಸಿತ್ತು. ಭಾನುವಾರ ಸಂಜೆ ನ್ಯಾಯಾಧೀಶರ ಎದುರು ಹಾಜರುಪಡಿಸಿದಾಗ, ಅವರನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿತ್ತು. ಅದು ಇಂದು (ಮೇ 8) ಕೊನೆಗೊಂಡಿತು.

ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಹೆಚ್ ಡಿ ರೇವಣ್ಣ ಅವರನ್ನು ಈಗ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುತ್ತಿದೆ. ರೇವಣ್ಣ ಮತ್ತು ಅವರ ಆಪ್ತ ಸತೀಶ್ ಬಾಬು ವಿರುದ್ಧ ಏಪ್ರಿಲ್ 29ರಂದು ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣ ದಾಖಲಾಗಿತ್ತು.

ಕೋರ್ಟ್‌ನಲ್ಲಿ ಹೆಚ್ ಡಿ ರೇವಣ್ಣ ಏನು ಹೇಳಿದ್ರು

ಇಂದು ನ್ಯಾಯಾಲಯದ ವಿಚಾರಣೆ ವೇಳೆ ಹೆಚ್.ಡಿ.ರೇವಣ್ಣ ಅವರಿಗೆ ಪೊಲೀಸ್ ಕಸ್ಟಡಿ ಅವಧಿಯಲ್ಲಿ ಏನಾದರೂ ತೊಂದರೆಯಾಗಿದೆಯೇ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ಹೊಟ್ಟೆ ನೋವು ಇದ್ದ ಕಾರಣ ಮೂರು ದಿನದಿಂದ ನಿದ್ದೆ ಮಾಡಿಲ್ಲ. ಎಲ್ಲೂ ಹೋಗಿಲ್ಲ. ನನಗೆ ಎದೆ ನೋವು ಮತ್ತು ಎದೆಯುರಿ ಇದೆ. ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಏನು ಹೇಳಬೇಕೆಂದು ನನಗೆ ತಿಳಿದಿದೆ ಎಂದು ಹೇಳಿದ್ದಾಗಿ ವರದಿ ಹೇಳಿದೆ.

ಕಳೆದ 25 ವರ್ಷಗಳ ಅವಧಿಯಲ್ಲ ಶಾಸಕನಾಗಿರುವ ತನ್ನ ವಿರುದ್ಧ ಇದುವರೆಗೂ ಯಾವುದೇ ಕೇಸ್‌ಗಳಿರಲಿಲ್ಲ. ಕಪ್ಪು ಚುಕ್ಕೆ ಇರಲಿಲ್ಲ ಎಂದು ಹೇಳಿಕೊಂಡ ರೇವಣ್ಣ, ನನಗೆ ಆರೋಗ್ಯ ಸರಿ ಇಲ್ಲ. ನನಗೆ ನಿರಂತರವಾಗಿ ಹೊಟ್ಟೆ ನೋವು ಇದೆ ಎಂದು ಹೇಳಿದರೂ ಪೊಲೀಸರು ಆಸ್ಪತ್ರೆಗೆ ಕರೆದೊಯ್ಯಲಿಲ್ಲ ಎಂದು ದೂರಿದರು.

"ರಾಜಕೀಯ ಷಡ್ಯಂತ್ರ ನಡೆದಿದೆ. ವಾರಂಟ್ ಇಲ್ಲದೆ ನನ್ನನ್ನು ಬಂಧಿಸಲಾಯಿತು. ನಾನು ಯಾವುದೇ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿಲ್ಲ. ನಾನು ಸುದ್ದಿಗೋಷ್ಠಿ ಮಾಡಿದ್ದರೆ, ನಾನು ಅದನ್ನು ಬಂಧಿಸುವ ಮೊದಲು ಮಾಡಿದ್ದೇನೆ" ಎಂದು ಎಚ್‌ ಡಿ ರೇವಣ್ಣ ನ್ಯಾಯಪೀಠಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದರು.

ಮಂಗಳವಾರ ತನಿಖೆ ಮುಗಿದಿದೆ ಎಂದು ಎಸ್‌ಐಟಿ ತಂಡದವರು ತಿಳಿಸಿದ್ದರೂ, ಇಂದು (ಬುಧವಾರ ಮೇ 8) ಬೆಳಿಗ್ಗೆ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು ಎಂದು ಎಚ್ ಡಿ ರೇವಣ್ಣ ಕೋರ್ಟ್‌ಗೆ ತಿಳಿಸಿದರು.

ಎಚ್ ಡಿ ರೇವಣ್ಣ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಎಸ್‌ಐಟಿ ತಂಡ

ಎಚ್ ಡಿ ರೇವಣ್ಣ ಅವರು ಆರೋಗ್ಯ ಸರಿ ಇಲ್ಲ ಎಂದು ಹೇಳಿದ ನಂತರ ಅವರನ್ನು ಬೆಂಗಳೂರಿನ ಬೌರಿಂಗ್ ಮತ್ತು ಅದಾಗಿ ಅಲ್ಲಿಂದ ಲೇಡಿ ಕರ್ಜನ್ ಆಸ್ಪತ್ರೆಗೆ ಮತ್ತು ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಎಸ್‌ಐಟಿ ತಂಡ ಕರೆದೊಯ್ದಿತ್ತು. ಅಲ್ಲಿ ರೇವಣ್ಣ ಅವರಿಗೆ ಪ್ರಾಥಮಿಕ ಗ್ಯಾಸ್ಟ್ರಿಕ್ ಚಿಕಿತ್ಸೆ ನೀಡಲಾಗಿದ್ದು, ಆಸ್ಪತ್ರೆಯಿಂದ ಅವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಕಚೇರಿಗೆ ವಾಪಸ್ ಕಳುಹಿಸಿದ್ದರು.

ರೇವಣ್ಣ ಅವರ ವಿರುದ್ಧ ದಾಖಲಾಗಿದ್ದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್‌ನ ವಿಶೇಷ ತನಿಖಾ ತಂಡ (ಎಸ್‌ಐಟಿ) ಇತ್ತೀಚೆಗೆ ಅವರನ್ನು ಬಂಧಿಸಿತ್ತು. ಜೆಡಿಎಸ್ ಶಾಸಕರನ್ನು ಪದ್ಮನಾಭನಗರದಲ್ಲಿ ಬಂಧಿಸಲಾಗಿದೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ