ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal; ಹಾಸನ ಹಗರಣದ ಸಂತ್ರಸ್ತೆ ನಾಪತ್ತೆ ಆತಂಕಕಾರಿ, ಪ್ರಜ್ವಲ್‌ ರೇವಣ್ಣ ಬಂಧನ ಯಾವಾಗ, ಫೇಸ್‌ಬುಕ್ ಪೋಸ್ಟಲ್ಲಿ ವಾಸು ಎಚ್‌ವಿ ಕಳವಳ

Hassan Scandal; ಹಾಸನ ಹಗರಣದ ಸಂತ್ರಸ್ತೆ ನಾಪತ್ತೆ ಆತಂಕಕಾರಿ, ಪ್ರಜ್ವಲ್‌ ರೇವಣ್ಣ ಬಂಧನ ಯಾವಾಗ, ಫೇಸ್‌ಬುಕ್ ಪೋಸ್ಟಲ್ಲಿ ವಾಸು ಎಚ್‌ವಿ ಕಳವಳ

Hassan Scandal; ಹಾಸನ ಲೈಂಗಿಕ ಹಗರಣದ ಸಂತ್ರಸ್ತೆ ನಾಪತ್ತೆ ಪ್ರಕರಣ ಆತಂಕಕಾರಿ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದ್ದು, ಪ್ರಜ್ವಲ್‌ ರೇವಣ್ಣ ಬಂಧನ ಯಾವಾಗ ಎಂಬ ಮಾತು ಕೇಳಿಬಂದಿದೆ. ವಾಸು ಎಚ್‌ವಿ ಅವರ ಸಾಮಾಜಿಕ ಕಳಕಳಿಯ, ಕಳವಳದ ಫೇಸ್‌ಬುಕ್ ಪೋಸ್ಟ್‌ ಹೀಗಿದೆ.

ಹಾಸನ ಹಗರಣದ ಸಂತ್ರಸ್ತೆ ನಾಪತ್ತೆ ಆತಂಕಕಾರಿ, ಪ್ರಜ್ವಲ್‌ ರೇವಣ್ಣ ಬಂಧನ ಯಾವಾಗ ಎಂಬ ಕಳವಳದೊಂದಿಗೆ ವಸು ಎಚ್‌ ವಿ ಅವರ ಫೇಸ್‌ಬುಕ್ ಪೋಸ್ಟ್ ಮತ್ತು ಎಫ್‌ಐಅರ್ ಪ್ರತಿ.
ಹಾಸನ ಹಗರಣದ ಸಂತ್ರಸ್ತೆ ನಾಪತ್ತೆ ಆತಂಕಕಾರಿ, ಪ್ರಜ್ವಲ್‌ ರೇವಣ್ಣ ಬಂಧನ ಯಾವಾಗ ಎಂಬ ಕಳವಳದೊಂದಿಗೆ ವಸು ಎಚ್‌ ವಿ ಅವರ ಫೇಸ್‌ಬುಕ್ ಪೋಸ್ಟ್ ಮತ್ತು ಎಫ್‌ಐಅರ್ ಪ್ರತಿ.

ಬೆಂಗಳೂರು: ಹಾಸನ ಲೈಂಗಿಕ ಹಗರಣ (Hassan Sex Scandal), ಅಶ್ಲೀಲ ವಿಡಿಯೋ ಹಗರಣ ಪ್ರಕರಣಗಳು ರಾಜಕೀಯವಾಗಿ ಮಾತ್ರವಲ್ಲದೇ ಸಾಮಾಜಿಕವಾಗಿ ಕೂಡ ಸಂಚಲನಕ್ಕೆ ಸೃಷ್ಟಿಸಿವೆ. ಈ ನಡುವೆ, ಮಾಜಿ ಸಚಿವ ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಅವರ ವಿರುದ್ದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯನ್ನು ಅಪಹರಿಸಿದ ಕೇಸ್ ಕೂಡ ದಾಖಲಾಗಿದೆ. ರೇವಣ್ಣ ಅವರ ಮನೆಗೆಲಸಕ್ಕಿದ್ದ ಮಹಿಳೆ ನಾಪತ್ತೆಯಾಗಿರುವುದಾಗಿ ಆಕೆಯ ಪುತ್ರ ದೂರು ದಾಖಲಿಸಿದ್ದಾನೆ. ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್‌ ಈ ಮಹಿಳೆಯ ಮೇಲೂ ಲೈಂಗಿಕ ದೌರ್ಜನ್ಯವೆಸಗಿರುವ ವಿಡಿಯೋ ಬಹಿರಂಗವಾದ ಬಳಿಕ, ಈ ಮಹಿಳೆಯನ್ನು ಬೆದರಿಸುವ ಕೆಲಸ ಮಾಡಿದ್ದಾರೆ ಎಂದು ಪುತ್ರ ದೂರಿನಲ್ಲಿ ತಿಳಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಈ ಪ್ರಕರಣದಲ್ಲಿ ಎಚ್ ಡಿ ರೇವಣ್ಣ ನಂಬರ್ 1 ಆರೋಪಿಯಾದರೆ, ರೇವಣ್ಣ ಪತ್ನಿಯ ಸಂಬಂಧಿಕ ಸತೀಶ್‌ ಬಾಬು 2ನೇ ಆರೋಪಿ. ಈ ನಡುವೆ, ಪ್ರಜ್ವಲ್ ರೇವಣ್ಣ ವಿರುದ್ಧವೂ ಅತ್ಯಾಚಾರ ಕೇಸ್ ದಾಖಲಾಗಿದೆ. ಪ್ರಜ್ವಲ್ ರೇವಣ್ಣ ಷೆನ್‌ಜೆನ್ ವೀಸಾ ಪಡೆದು ಯುರೋಪ್ ಹೋಗಿದ್ದಾನೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಇವೆಲ್ಲದರ ನಡುವೆ, ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅವರ ಅಪ್ಪ ಎಚ್‌ ಡಿ ರೇವಣ್ಣ ಅವರ ಬಗ್ಗೆ ಅಸಹ್ಯ ಮತ್ತು ಆಕ್ರೋಶ ಭರಿತ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿವೆ. ಅದರಲ್ಲಿ ವಾಸು ಎಚ್‌ವಿ ಅವರು ಬರೆದ ಫೇಸ್‌ಬುಕ್‌ ಪೋಸ್ಟ್ ಗಮನಸೆಳೆದಿದೆ.

ಸಂತ್ರಸ್ತೆಯೊಬ್ಬರು ಕಾಣೆಯಾಗಿದ್ದಾರೆ ಎಂಬುದು ಕಳವಳಕಾರಿ

ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿರುದ್ಧ ಸಂತ್ರಸ್ತೆಯೊಬ್ಬರ ಪುತ್ರ ನೀಡಿದ ದೂರು ನಿಜವಾಗಿಯೂ ಗಮನಸೆಳೆಯುವಂಥದ್ದು. ಆತನ ತಾಯಿ ರೇವಣ್ಣ ಅವರ ಮನೆಗೆಲಸಕ್ಕೆ ಹೋಗುತ್ತಿದ್ದು, ಸದ್ಯ ನಾಪತ್ತೆಯಾಗಿದ್ದಾರೆ ಎಂದು ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪುತ್ರ ದೂರು ದಾಖಲಿಸಿದ್ದಾನೆ. ಈ ವಿದ್ಯಮಾನಕ್ಕೆ ಸ್ಪಂದಿಸಿರುವ ವಾಸು ಎಚ್‌ವಿ ಅವರ ಫೇಸ್‌ಬುಕ್ ಪೋಸ್ಟ್ ಈ ರೀತಿ ಇದೆ.

"ಎಲ್ಲಾ ಸ್ನೇಹಿತರಲ್ಲಿ ಒಂದು ಮನವಿ... ದಯವಿಟ್ಟು ಎರಡು ನಿಮಿಷ ಕೊಟ್ಟು ಇದನ್ನು ಓದಬೇಕೆಂದು ಕೋರುತ್ತೇನೆ.

ಅಧಿಕಾರದ ದುರುಪಯೋಗ ಮಾಡಿಕೊಂಡು ಒಬ್ಬಾತ ಕ್ರೂರವಾದ ಅಪರಾಧ ಎಸಗಿದನೆಂಬ ಆರೋಪವಿದೆ. ಆತ ದೇಶ ಬಿಟ್ಟು ಹೊರಗೆ ಹೋಗಿದ್ದಾನೆ. ಆತನ ತಂದೆ (ಅಧಿಕಾರಸ್ಥ, ಪ್ರಭಾವಿ)ಯ ಮೇಲೂ ಎಫ್‌ಐಆರ್ ಆಗಿದೆ. ಆತ ಇಲ್ಲೇ ಹೋಮ, ಹವನ ಮಾಡಿಕೊಂಡು ಓಡಾಡಿಕೊಂಡಿದ್ದಾನೆ.

ಹೀಗಿರುವಾಗ, ಬಲಿಪಶುಗಳಲ್ಲಿ ಒಬ್ಬರೆಂದು ಹೇಳಲಾದವರು ಅಪಹರಣಕ್ಕೆ ಒಳಗಾಗಿದ್ದಾರೆಂದು ಆಕೆಯ ಮಗ ದೂರು ಕೊಟ್ಟು ಎಫ್‌ಐಆರ್ ಆಗುತ್ತದೆ. ಇಷ್ಟಾದ ಮೇಲೆ ಒಂದು ಗಂಟೆಯೂ ತಡ ಮಾಡದೇ ಆತನನ್ನು (ರೇವಣ್ಣನನ್ನು) ಬಂಧಿಸಬೇಕಾ, ಬೇಡವಾ? ಅಪರಾಧ ನಡೆದಿದೆಯೋ ಇಲ್ಲವೋ ಕೋರ್ಟು ತೀರ್ಮಾನಿಸುತ್ತದೆ. ಆದರೆ ಸರ್ಕಾರವೊಂದು ಎಸ್‌ಐಟಿ ರಚಿಸಬೇಕಾಗಿ ಬಂದ ದೊಡ್ಡ ಪ್ರಕರಣದಲ್ಲಿ ಬಲಿಪಶುವೊಬ್ಬರು ಕಾಣೆಯಾಗುವುದು ಬಹಳ ಬಹಳ ಗಂಭೀರ ವಿದ್ಯಮಾನವಲ್ಲವಾ?

ಈ ಬಂಧನ ಇನ್ನೂ ಆಗದೇ ಇರುವುದಕ್ಕೆ ಕಾರಣವೇನು?

1. ದೇಶವನ್ನಾಳುತ್ತಿರುವ ಬಿಜೆಪಿ ಇನ್ನೂ ಜೆಡಿಎಸ್‌ನಿಂದ ಮೈತ್ರಿ ಕಳಚಿಕೊಂಡಿಲ್ಲದಿರುವುದರಿಂದ ಅಧಿಕಾರಿಗಳು ಹೆದರಿದ್ದಾರೆಯೇ?

2. ಅಧಿಕೃತವಾಗಿ ದೇವೇಗೌಡರ ಕುಟುಂಬ ಪ್ರಜ್ವಲ್‌ನನ್ನು ಪಕ್ಷದಿಂದ ಅಮಾನತು ಮಾಡಿದೆಯೇ ಹೊರತು, ಅದೇ ಪ್ರಕರಣದಲ್ಲಿ A2 ಆಗಿರುವ ರೇವಣ್ಣನನ್ನು ಅಲ್ಲ. ಕುಮಾರಸ್ವಾಮಿ disown ಮಾಡಿ ಮಾತಾಡಿದ್ದು ಪ್ರಜ್ವಲ್‌ನನ್ನು ಮಾತ್ರ. ಜೊತೆಗೆ ಇದೆಲ್ಲಾ ಷಡ್ಯಂತ್ರ ಎಂದು ಬಲವಾಗಿ ವಾದಿಸುತ್ತಾ ಇರೋದು ಇದಕ್ಕೆ ಕಾರಣವೇ?

3. ಅಥವಾ ಕರ್ನಾಟಕದ ಕಾಂಗ್ರೆಸ್ ಸರ್ಕಾರ law of the land ಜಾರಿ ಮಾಡಲು ಹಿಂಜರಿಯುತ್ತಿದೆಯೇ? ಉಳಿದಂತೆ ಸಮಸ್ಯೆಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಅಧಿಕಾರಿಗಳಿಗೆ ಸೂಚಿಸದಷ್ಟು ಅದು ದುರ್ಬಲವಾಗಿದೆಯೇ?

#ArrestRevanna #ArrestPrajwalRevanna

ನಿಮಗೂ ಒಪ್ಪಿಗೆಯಿದ್ದರೆ ಇದನ್ನು ಎಲ್ಲರಿಗೂ ಷೇರ್ ಮಾಡಬೇಕೆಂದು ಕೋರುತ್ತೇನೆ."

ರೇವಣ್ಣ, ಪ್ರಜ್ವಲ್ ಬಂಧನಕ್ಕೆ ಹೆಚ್ಚಿದ ಒತ್ತಡ

ಫೇಸ್‌ಬುಕ್ ಪೋಸ್ಟ್‌ನಲ್ಲಿದ್ದು ವಾಸು ಅವರ ಅಭಿಪ್ರಾಯ ಈಗಾಗಲೇ ವಿವಿಧ ಸೋಷಿಯಲ್ ಮೀಡಿಯಾದಲ್ಲಿ ಕಾಪಿ ಪೇಸ್ಟ್ ಆಗಿ ಹರಿದಾಡತೊಡಗಿದೆ. ಅನೇಕರ ಮನಸ್ಸಿನಲ್ಲಿದ್ದ ಅಭಿಪ್ರಾಯದ ಪ್ರತಿರೂಪವಾಗಿ ವಾಸು ಅವರ ಅಭಿಪ್ರಾಯ ವ್ಯಕ್ತವಾಗಿರುವ ಕಾರಣ, ಈ ಬಗ್ಗೆ ಸಾರ್ವಜನಿಕರು ಚರ್ಚಿಸತೊಡಗಿದ್ದಾರೆ.

IPL_Entry_Point