logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Medical Seats: ಹೆಚ್ಚು ವೈದ್ಯಕೀಯ ಸೀಟು, ಕರ್ನಾಟಕವೇ ನಂಬರ್‌ 1: ಈ ವರ್ಷದ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಸಿಕ್ಕ ಸೀಟುಗಳೆಷ್ಟು

Karnataka Medical Seats: ಹೆಚ್ಚು ವೈದ್ಯಕೀಯ ಸೀಟು, ಕರ್ನಾಟಕವೇ ನಂಬರ್‌ 1: ಈ ವರ್ಷದ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಸಿಕ್ಕ ಸೀಟುಗಳೆಷ್ಟು

HT Kannada Desk HT Kannada

Dec 19, 2023 06:50 AM IST

ವೈದ್ಯಕೀಯ ಶಿಕ್ಷಣ ಪಡೆಯಲು ಕರ್ನಾಟಕ ಈಗಲೂ ಬೇಡಿಕೆಯ ರಾಜ್ಯದ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.

    • Karnataka in Medical Education ಭಾರತದಲ್ಲೇ ಅತಿ ಹೆಚ್ಚು ವೈದ್ಯಕೀಯ ಸೀಟುಗಳು ಲಭ್ಯವಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಎಷ್ಟು ಮೆಡಿಕಲ್ ಕಾಲೇಜುಗಳಿವೆ ಎಷ್ಟು ವೈದ್ಯಕೀಯ ಸೀಟುಗಳು ಲಭ್ಯ ಎಂಬ ಮಾಹಿತಿ ಇಲ್ಲಿದೆ.
ವೈದ್ಯಕೀಯ ಶಿಕ್ಷಣ ಪಡೆಯಲು ಕರ್ನಾಟಕ ಈಗಲೂ ಬೇಡಿಕೆಯ ರಾಜ್ಯದ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.
ವೈದ್ಯಕೀಯ ಶಿಕ್ಷಣ ಪಡೆಯಲು ಕರ್ನಾಟಕ ಈಗಲೂ ಬೇಡಿಕೆಯ ರಾಜ್ಯದ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.

ಬೆಂಗಳೂರು: ಭಾರತದಲ್ಲೇ 2023-24ರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ವೈದ್ಯಕೀಯ ಸೀಟುಗಳು ಲಭ್ಯವಾಗಿವೆ. ಕಳೆದ 11 ವರ್ಷಗಳಿಂದ ಅಂದರೆ 2013-14ರಿಂದಲೂ ಇದೇ ಸ್ಥಾನವನ್ನು ಕರ್ನಾಟಕ ಉಳಿಸಿಕೊಂಡು ಬಂದಿದೆ.

ಟ್ರೆಂಡಿಂಗ್​ ಸುದ್ದಿ

Indian Railways: ಪ್ರಯಾಣಿಕರ ಸೇವೆಯಲ್ಲಿ ಮಾತ್ರವಲ್ಲ, ಅಪರಾಧ ಪತ್ತೆಯಲ್ಲೂ ಮುಂದೆ ಕರ್ನಾಟಕದ ನೈರುತ್ಯ ರೈಲ್ವೆ, ಭದ್ರತೆಗೂ ಒತ್ತು

Karnataka Reservoirs: ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಳ, ಪೂರ್ವಮುಂಗಾರಿಗೆ ತುಂಬಿತು ಮಂಚನಬೆಲೆ

Bangalore News: ಬೆಂಗಳೂರಿಗೆ ಮತ್ತೆ ಬಾಂಬ್ ಬೆದರಿಕೆಯ ಕಾಟ; ಈ ಬಾರಿ ಸ್ಟಾರ್ ಹೋಟೆಲ್ ಗೆ ಬಾಂಬ್ ಇಟ್ಟಿರುವ ಇ ಮೇಲ್ ಬೆದರಿಕೆ ಸಂದೇಶ

Mysore News: ಬೆಂಗಳೂರಲ್ಲಿ ಜನ ಮೆಚ್ಚಿದ ಜತೆಗಿರುವನು ಚಂದಿರ ಮೈಸೂರಿಗೂ ಬರುತ್ತಿದ್ದಾನೆ, ಮೇ 26ಕ್ಕೆ ನಟನದಲ್ಲಿ ನಾಟಕ ಪ್ರದರ್ಶನ

ಇಡೀ ದೇಶದಲ್ಲೇ ಕರ್ನಾಟಕ ಮೆಡಿಕಲ್ ಹಬ್ ಎಂದೇ ಖ್ಯಾತಿಯನ್ನು ಪಡೆದುಕೊಂಡಿದೆ. ಆದರೆ ಇದೀಗ ಉತ್ತರ ಭಾರತದ ಮೆಡಿಕಲ್ ಕಾಲೇಜುಗಳಿಗೆ ಹೆಚ್ಚಿನ ಎಂಬಿಬಿಎಸ್ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತಿದ್ದು ರಾಜ್ಯಕ್ಕೆ ಆತಂಕ ಎದುರಾಗಿದೆ.

ಕರ್ನಾಟಕದಲ್ಲಿ ಹೆಚ್ಚು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿಅಂಶಗಳ ಪ್ರಕಾರ 2013-14 ರಲ್ಲಿ ಕರ್ನಾಟಕದಲ್ಲಿ 6,755 ವೈದ್ಯಕೀಯ ಸೀಟುಗಳು ಲಭ್ಯವಿದ್ದು, 2023-24 ರಲ್ಲಿ 11,745 ಸೀಟುಗಳಿಗೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ 2013-14ರಲ್ಲಿ 6,215 ಸೀಟುಗಳು ಲಭ್ಯವಿದ್ದರೆ 2023-24ರಲ್ಲಿ 11,650 ಸೀಟುಗಳಿಗೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 10,845, ಉತ್ತರ ಪ್ರದೇಶದಲ್ಲಿ 9,903 ಮತ್ತು ತೆಲಂಗಾಣದಲ್ಲಿ 8,490 ವೈದ್ಯಕೀಯ ಸೀಟುಗಳು ಹಂಚಿಕೆಯಾಗಿವೆ.

ತಮಿಳುನಾಡಿನಲ್ಲಿ 2023-24ರಲ್ಲಿ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. 2013-14ರಲ್ಲಿ 45 ವೈದ್ಯಕೀಯ ಕಾಲೇಜುಗಳಿದ್ದು,2023-24ರಲ್ಲಿ 74 ಕ್ಕೆ ಏರಿಕೆಯಾಗಿದೆ. 2013-14ರಲ್ಲಿ ಕರ್ನಾಟಕದಲ್ಲಿ 46 ಇದ್ದ ಮೆಡಿಕಲ್ ಕಾಲೇಜುಗಳ ಸಂಖ್ಯೆ 2023- 24 ರಲ್ಲಿ 70ಕ್ಕೆ ಹೆಚ್ಚಳವಾಗಿವೆ. ಇಡೀ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪ್ರಸ್ತುತ 48 ಖಾಸಗಿ ಮತ್ತು 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ.ಮಹಾರಾಷ್ಟ್ರದಲ್ಲಿ 68, ಉತ್ತರ ಪ್ರದೇಶದಲ್ಲಿ 68, ತೆಲಂಗಾಣದಲ್ಲಿ 56 ಮೆಡಿಕಲ್ ಕಾಲೇಜುಗಳಿವೆ.

ದಕ್ಷಿಣ ಭಾರತದಲ್ಲೇ ಅಧಿಕ

ಇಡೀ ದೇಶದಲ್ಲಿ ಮೂರನೇ ಒಂದರಷ್ಟು ಅಂದರೆ ಶೇ.39.4ರಷ್ಟು ವೈದ್ಯಕೀಯ ಸೀಟುಗಳು ದಕ್ಷಿಣ ಭಾರತದಲ್ಲಿವೆ. ಇತ್ತೀಚಿನ ವರ್ಷಗಳಲ್ಲಿ ಉತ್ತರ ಭಾರತದಲ್ಲಿಯೂ ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚುತ್ತಿದೆ.

ಉದಾಹರಣೆಗೆ 2013-14ರಲ್ಲಿ ಉತ್ತರ ಪ್ರದೇಶದಲ್ಲಿ ಕೇವಲ 200 ವೈದ್ಯಕೀಯ ಸೀಟುಗಳು ಲಭ್ಯವಿದ್ದು, 2023-24ರಲ್ಲಿ 9,803ಕ್ಕೆ ಹೆಚ್ಚಳವಾಗಿದೆ. ಅಂದರೆ 11ವರ್ಷಗಳಲ್ಲಿ ಶೇ.4851ರಷ್ಟು ಹೆಚ್ಚಳವಾಗಿವೆ. ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಶೇ.73.8 ಮತ್ತು ತಮಿಳುನಾಡಿನಲ್ಲಿ ಶೇ.87.4ರಷ್ಟು ಹೆಚ್ಚಳ ಕಂಡಿವೆ. ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿಯೂ ಶೇ.200ರಷ್ಟು ಸೀಟುಗಳ ಹೆಚ್ಚಳವಾಗಿದೆ.

ಕೆಲವೆಡೆ ಬ್ರೇಕ್‌

ಆದರೆ ಈ ವರ್ಷದಲ್ಲಿ ವೈದ್ಯಕೀಯ ಶಿಕ್ಷಣ ಮಂಡಲಿ ಜನಸಂಖ್ಯೆ ಮತ್ತು ದೊಡ್ಡ ದೊಡ್ಡ ರಾಜ್ಯಗಳಿಗೆ ಹೆಚ್ಚಿನ ವೈದ್ಯಕೀಯ ಸೀಟುಗಳನ್ನು ಹಂಚಿಕೆ ಮಾಡುವ ನಿರ್ಧಾರಕ್ಕೆ ಬ್ರೇಕ್ ಹಾಕಿದೆ.

ಇದೇ ಕಾರಣಕ್ಕೆ ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.60 ರಷ್ಟು ಸೀಟುಗಳು ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಮುಕ್ತವಾಗಿವೆ. ಇದರಿಂದ ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ರಾಜ್ಯದ ಹಲವು ಮೆಡಿಕಲ್ ಕಾಲೇಜುಗಳಿಗೆ.ಬೇಡಿಕೆ ಹೆಚ್ಚಾಗಲಿದೆ. ಇದರಿಂದ ಹೊಸ ಮೆಡಿಕಲ್ ಕಾಲೇಜುಗಳಿಗೆ ಹಿನ್ನಡೆ ಆಗುವ ಸಂಭವವಿದ್ದು, ಅಂತಹ ಕಾಲೇಜುಗಳು ವಿದ್ಯಾರ್ಥಿಗಳನ್ನು ಆಕರ್ಷಿಸಲು ಶುಲ್ಕವನ್ನು ಕಡಿಮೆ.ಮಾಡಬಹುದು ಎಂದು ವೈದ್ಯಕೀಯ ಕಾಲೇಜುಗಳ ತಜ್ಞರು ಅಭಿಪ್ರಾಯಪಡುತ್ತಾರೆ.

ಸೌಕರ್ಯ ಕೊರತೆ

ಆರೋಗ್ಯ ಮೂಲಭೂತ ಸೌಕರ್ಯಗಳ ಕೊರತೆ ಇರುವ ಜಿಲ್ಲೆಗಳಿಗೆ ಲಾಭವಾಗುವುದರಿಂದ ಅಂತಹ.ಜಿಲ್ಲೆಗಳಲ್ಲಿ ಹೊಸ ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ರಾಜ್ಯಗಳು ಉತ್ಸುಕವಾಗಿವೆ.

ಆರೋಗ್ಯ ಮೂಲಭೂತ ಸೌಕರ್ಯಗಳ ಕೊರತೆ ಇರುವ ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವುದರಿಂದ ಲಾಭ ಆಗಲಿದೆ ಎನ್ನುವುದು ಅರ್ಧ ಸತ್ಯ ಮಾತ್ರ. ಅನೇಕ ಕಾಲೇಜುಗಳಲ್ಲಿ ಅರ್ಹ ಸಿಬ್ಬಂದಿ ಮತ್ತು ವೈದ್ಯರ ಕೊರತೆ ಇದೆ ಎಂದೂ ಹೇಳಲಾಗುತ್ತಿದೆ.

ಬದಲಾದ ಚಿತ್ರಣ

ಜಿಲ್ಲಾ ಆಸ್ಪತ್ರೆಗಳಿಗೆ ಹೊಂದಿಕೊಂಡಂತೆ ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಬಹುದು ಎಂದು 2018 ರಲ್ಲಿ ಕೇಂದ್ರ ಸರಕಾರ ಯೋಜನೆಯೊಂದನ್ನು ಆರಂಭಿಸಿತ್ತು. ಇದರ

ಪ್ರಕಾರ ಉತ್ತರ ಪ್ರದೇಶಕ್ಕೆ 27 ಮತ್ತು ಕರ್ನಾಟಕಕ್ಕೆ 18 ವೈದ್ಯಕೀಯ ಕಾಲೇಜುಗಳು ಮಂಜೂರಾಗಿದ್ದವು.

ದೇಶದಲ್ಲಿ ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಗಳು ಗರಿಷ್ಠ ಪ್ರಮಾಣ ತಲುಪಿವೆ. ಪ್ರತಿ 750 ನಾಗರೀಕರಿಗೆ ಒಬ್ಬ ವೈದ್ಯ ಇರಬೇಕು ಎನ್ನುವ ಅನುಪಾತವನ್ನು ತಲುಪುವ ಸನಿಹದಲ್ಲಿದ್ದೇವೆ. ಇದರ ನಡುವೆ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲೂ ಗಣನೀಯ ಬದಲಾವಣೆಗಳು ಮಾತ್ರ ಆಗುತ್ತಲೇ ಇವೆ.

(ವಿಶೇಷ ವರದಿ: ಎಚ್.ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ