logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಮನೆಯಿಂದಲೇ ಪಾರ್ಟ್‌ ಟೈಮ್‌ ಕೆಲಸ ನೀಡುವ ಜಾಲದಿಂದ ಮೋಸ; ಏಳು ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಮಹಿಳೆ

Kalaburagi News: ಮನೆಯಿಂದಲೇ ಪಾರ್ಟ್‌ ಟೈಮ್‌ ಕೆಲಸ ನೀಡುವ ಜಾಲದಿಂದ ಮೋಸ; ಏಳು ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಮಹಿಳೆ

HT Kannada Desk HT Kannada

Sep 02, 2023 11:16 AM IST

ಮನೆಯಿಂದಲೇ ಪಾರ್ಟ್‌ ಟೈಮ್‌ ಕೆಲಸ ನೀಡುವ ಜಾಲದಿಂದ ಮೋಸ; ಏಳು ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಮಹಿಳೆ

    • ಕಲಬುರಗಿಯಲ್ಲಿ ಆನ್‌ಲೈನ್‌ ಮೂಲಕ ವಂಚನೆಗೆ ಮಹಿಳೆಯೊಬ್ಬಳು ಒಳಗಾಗಿರುವ ಘಟನೆ ನಡೆದಿದೆ. ಪಾರ್ಟ್‌ ಟೈಮ್‌ ಕೆಲಸ ನೀಡುವ ನೆಪದಲ್ಲಿ 7.15 ಲಕ್ಷ ರೂ. ವಂಚನೆಗೆ ಒಳಗಾಗಿದ್ದಾರೆ.
ಮನೆಯಿಂದಲೇ ಪಾರ್ಟ್‌ ಟೈಮ್‌ ಕೆಲಸ ನೀಡುವ ಜಾಲದಿಂದ ಮೋಸ; ಏಳು ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಮಹಿಳೆ
ಮನೆಯಿಂದಲೇ ಪಾರ್ಟ್‌ ಟೈಮ್‌ ಕೆಲಸ ನೀಡುವ ಜಾಲದಿಂದ ಮೋಸ; ಏಳು ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಮಹಿಳೆ

ಕಲಬುರಗಿ: ಆನ್‌ಲೈನ್‌ ಮೂಲಕ ಹಣ ವಂಚನೆ ಮಾಡುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮನೆಯಿಂದಲೇ ಪಾರ್ಟ್‌ ಟೈಮ್‌ ಕೆಲಸ ಮಾಡಿ ಹಣ ಗಳಿಕೆ ಆಮಿಷವೊಡ್ಡಿ 7.15 ಲಕ್ಷ ರೂ. ಆನ್‌ಲೈನ್‌ ಮೂಲಕ ಮಹಿಳೆಯೊಬ್ಬಳಿಗೆ ವಂಚಿಸಿದ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ.

ಟ್ರೆಂಡಿಂಗ್​ ಸುದ್ದಿ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

Hubli News:ಅಂಜಲಿ ಅಂಬಿಗೇರ ಹತ್ಯೆ, ಹುಬ್ಬಳ್ಳಿ ಐಪಿಎಸ್‌ ಅಧಿಕಾರಿ ರಾಜೀವ್‌ ಸಸ್ಪೆಂಡ್‌, ಪೊಲೀಸ್‌ ಆಯುಕ್ತರ ತಲೆದಂಡ ಸಾಧ್ಯತೆ

ಮನೆಯಲ್ಲಿಯೇ ಕುಳಿತುಕೊಂಡು ಪಾರ್ಟ್ ಟೈಮ್ ಆಗಿ ಕೆಲಸ ಮಾಡುವ ಮೂಲಕ ತಿಂಗಳಿಗೆ 45ರಿಂದ 70 ಸಾವಿರ ರೂ.ಗಳಿಸಬಹುದು ಎಂಬ ಆಮಿಷೆಯೊಡ್ಡಿ ಮಹಿಳೆಯೊಬ್ಬರಿಗೆ 7.15 ಲಕ್ಷ ರೂ. ಆನ್‌ಲೈನ್ ಮೂಲಕ ಪಡೆದುಕೊಂಡು ವಂಚಿಸಲಾಗಿದೆ.

ಕಲಬುರಗಿ ನಗರದ ವಿರೇಂದ್ರ ಪಾಟೀಲ್ ಬಡಾವಣೆಯ ಪ್ರಿಯಾಂಕಾ ಚಿಕ್ಕಣ್ಣ ಸ್ವಾ ಮಿ ಎಂಬುವರೇ ಮೋಸ ಹೋಗಿ ಹಣ ಕಳೆದುಕೊಂಡಿದ್ದಾರೆ. ಪ್ರಿಯಾಂಕಾ ಅವರ ಮೊಬೈಲ್‌ಗೆ ಡಿವಿಯಾನ್ ಮತ್ತು ಮಾಹಿಸಿಂಗ್ ಎಂಬುವರು ಮೆಸೆಜ್ ಕಳುಹಿಸಿ, ಹಣ ಗಳಿಸುವ ಆಸೆ ತೋರಿಸಿದ್ದಾರೆ. ಅವರು ಕೇಳಿದಂತೆ ಮಾಡಿದಾಗ ಮರಳಿ ಪೋನ್ ಫೇ ಮೂಲಕ ಹಣ ಅವರ ಖಾತೆಗೆ ಜಮಾ ಮಾಡುವ ಮೂಲಕ ವಿಶ್ವಾಸ ಗಳಿಸಿಕೊಂಡಿದ್ದಾರೆ. ಆ ಬಳಿಕ ಕೆಲ ಟಾಸ್ಕ್ ನೀಡಿ, ಆ ಗುರಿ ತಲುಪಿದರೆ ಹೆಚ್ಚು ಹಣ ಸಿಗಲಿದೆ ಎಂದು ನಂಬಿಸಿದ್ದಾರೆ. ಟಾಸ್ಕ್ ತಲುಪುವಂತೆ ಮಾಡಲು ಒಂದಿಷ್ಟು ಹಣ ಹಾಕುವಂತೆ ಫ್ಲ್ಯಾನ್‌ ಮಾಡಿದ್ದಾರೆ. ವಾಟ್ಸಾಪ್ ಮತ್ತು ಟೆಲಿಗ್ರಾಂನಲ್ಲಿ ಸಂದೇಶ ಹಾಕಿ ಕ್ರಮೇಣವಾಗಿ 7.15 ಲಕ್ಷ ರೂ.ಗಳನ್ನು ಅವರ ಖಾತೆಗೆ ಜಮಾ ಮಾಡಿಕೊಂಡು ಮೋಸ ಮಾಡಿದ್ದಾರೆ. ವಂಚನೆಗೊಳಗಾದ ಪ್ರಿಯಾಂಕಾ ನಗರದ ಸೆನ್ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ