logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Assembly Session: ಕಾರಂಜಾ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರಕ್ಕಿಲ್ಲ ಕಾನೂನಾತ್ಮಕ ಅವಕಾಶ; ಅಧಿವೇಶನದಲ್ಲಿ ಸಚಿವ ಕಾರಜೋಳ

Karnataka Assembly Session: ಕಾರಂಜಾ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರಕ್ಕಿಲ್ಲ ಕಾನೂನಾತ್ಮಕ ಅವಕಾಶ; ಅಧಿವೇಶನದಲ್ಲಿ ಸಚಿವ ಕಾರಜೋಳ

HT Kannada Desk HT Kannada

Sep 15, 2022 01:49 PM IST

google News

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ

    • Karnataka legislative council Session: ಕಾರಂಜಾ ವಿಚಾರ ಮುನ್ನೆಲೆಯಲ್ಲಿ ಇರುವಾಗ 2014ರ ಜೂನ್‌ 25ರಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ರು. ಎಂಎಲ್‌ಸಿ ಅರವಿಂದ್ ಕುಮಾರ್‌ ಅವರ ಪಕ್ಷದ ಸರ್ಕಾರವೇ ಇತ್ತು. ಪರಿಹಾರ ಕೊಡಲು ಅವಕಾಶ ಇಲ್ಲ ಎಂಬುದಾಗಿ ಸಂಪುಟದಲ್ಲಿ ನಿರ್ಣಯವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪರಿಷತ್‌ನಲ್ಲಿ ಹೇಳಿದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ

ಬೆಂಗಳೂರು: ಬೀದರ್ ಜಿಲ್ಲೆಯ ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಈಗ ಹೆಚ್ಚುವರಿ ಪರಿಹಾರ ನೀಡಲು ಬರುವುದಿಲ್ಲ. ಅದಕ್ಕೆ ಕಾನೂನಾತ್ಮಕವಾಗಿ ಯಾವುದೇ ಅವಕಾಶ ಕೂಡ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಗುರುವಾರ ವಿಧಾನ ಪರಿಷತ್‌ನಲ್ಲಿ ಹೇಳಿದರು.

ಪ್ರಶ್ನೋತ್ತರ ವೇಳೆಯಲ್ಲಿ ಎಂಎಲ್‌ಸಿ ಅರವಿಂದ್‌ ಕುಮಾರ್‌ ಅವರು ಕೇಳಿದ ಕಾರಂಜಾ ಮುಳುಗಡೆ ಪರಿಹಾರಕ್ಕೆ ಒತ್ತಾಯಿಸಿ ರೈತರು 80 ದಿನಗಳಿಂದ ಧರಣಿ ನಡೆಸುತ್ತಿದ್ದರು ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯಿಸುತ್ತ ಈ ವಿಚಾರ ವಿವರಿಸಿದರು.

ಈಗಾಗಲೇ 69 ಕೋಟಿ ರೂಪಾಯಿ ಪರಿಹಾರ ನೀಡಿದ್ದೇವೆ. ಇನ್ನೂ ಕೆಲವು ರೈತರು ಕೋರ್ಟ್‌ಗೆ ಹೋಗಿಲ್ಲ. ಕೋರ್ಟ್‌ಗೆ ಹೋಗದೆ ಇರುವ ರೈತರು ಸರ್ಕಾರಕ್ಕೆ ಅರ್ಜಿ ಹಾಕಿದವರಿಗೂ ಕೂಡ ಪರಿಹಾರ ಕೊಡಲು ಅವಕಾಶ ಇದೆ. ಆದರೆ, ಅವರು ಮೂರು ತಿಂಗಳ ಒಳಗೆ ಅರ್ಜಿ ಹಾಕಿಕೊಂಡಿಲ್ಲ. ಈಗ 25-30 ವರ್ಷದ ನಂತರ ಧರಣಿ ಕೂತರೆ ಪರಿಹಾರ ಕೊಡಲು ಸಾಧ್ಯವಾ? ಎಂದು ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದರು.

ಸಿದ್ದರಾಮಯ್ಯ ಸರ್ಕಾರವೇ ತೆಗೆದುಕೊಂಡ ತೀರ್ಮಾನ

ಕಾರಂಜಾ ವಿಚಾರ ಮುನ್ನೆಲೆಯಲ್ಲಿ ಇರುವಾಗ 2014ರ ಜೂನ್‌ 25ರಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ರು. ಎಂಎಲ್‌ಸಿ ಅರವಿಂದ್ ಕುಮಾರ್‌ ಅವರ ಪಕ್ಷದ ಸರ್ಕಾರವೇ ಇತ್ತು. ಪರಿಹಾರ ಕೊಡಲು ಅವಕಾಶ ಇಲ್ಲ ಎಂಬುದಾಗಿ ಸಂಪುಟದಲ್ಲಿ ನಿರ್ಣಯವಾಗಿದೆ.

ಧರಣಿ ಮಾಡ್ತಾ ಇದ್ದಾರೆ ಎಂದು ಪರಿಹಾರ ಕೊಡಲು ಸಾಧ್ಯವಿಲ್ಲ. 30-40. ವರ್ಷ ಆಗಿದೆ ಈ ಪ್ರಾಜೆಕ್ಟ್ ಶುರು ಮಾಡಿ. 69 ಕೋಟಿ ಪರಿಹಾರ ತೆಗೆದುಕೊಂಡಿದ್ದಾರೆ. ಇನ್ನಾ ಒಂದು ರೂಪಾಯಿ ಕೊಡಲ ಸಾಧ್ಯವಿಲ್ಲ. ಯಾವುದೇ ಬೇಡಿಕೆ ಪರಿಗಣಿಸಲು ಸಾಧ್ಯವಿಲ್ಲ. ಹೈಕೋರ್ಟ್ ಸಹ ಇದನ್ನು ರಿಜೆಕ್ಟ್ ಮಾಡಿದೆ. ಅಂತರಾಷ್ಟ್ರೀಯ ಕೋರ್ಟ್‌ಗೆ ಹೋಗ್ಬೇಕು ಅಷ್ಟೇ. ಇಂತಹ ಬೇಡಿಕೆಗಳನ್ನ ತರುವಾಗ ಸಂಪೂರ್ಣ ತಿಳಿದು ಮೇಲ್ಮನೆ ತರುವಂತೆ ಸಚಿವರು ಸೂಚಿಸಿದರು.

ಯುಕೆಪಿ ಮತ್ತು ಕಾರಂಜಾ ಹೋಲಿಕೆ ಸಾಧ್ಯವಿಲ್ಲ

ಯುಕೆಪಿ ಮಾದರಿಯಲ್ಲಿ ಕೊಡ್ಬೇಕು ಅಂತ ಇವರ ಹೋರಾಟ ಇದೆ. ಯುಕೆಪಿ ಮಾದರಿಯಲ್ಲಿ ಪರಿಹಾರ ಕೊಡುವುದಕ್ಕೆ ಅವಕಾಶ ಇಲ್ಲ. ಯುಕೆಪಿ ಯೋಜನೆಗೆ ವಿಶ್ವಬ್ಯಾಂಕ್ ನೆರವು ತೆಗೆದುಕೊಂಡಿದ್ದೇವೆ. ವಿಶ್ವ ಬ್ಯಾಂಕ್‌ನವರ ಕಂಡಿಷನ್ ಇದೆ. ಯಾವ ರೀತಿ ಪರಿಹಾರ ಕೊಡಬೇಕು ಎಂಬ ಕಂಡಿಷನ್ ಇದೆ. ಆ ಕಂಡಿಷನ್ ಒಪ್ಪಿಕೊಂಡ ನಂತರ ಅವರು ಸರ್ಕಾರಕ್ಕೆ ಬ್ಯಾಂಕ್‌ ಸಾಲ ಕೊಟ್ಟಿದೆ. ಅದಕ್ಕಾಗಿ ಯುಕೆಪಿಯನ್ನು ಕಾರಂಜಾಕ್ಕೆ ಮಾದರಿಯಾಗಿ ಕಂಪೇರ್ ಮಾಡಲು ಬರಲ್ಲ ಎಂದು ಸಚಿವರು ವಿವರಿಸಿದರು.

ಅನುದಾನದ ಲಭ್ಯತೆ ಮೇಲೆ ಯೋಜನೆ ಅನುಷ್ಠಾನ

ಬಳ್ಳಾರಿ ಗ್ರಾಮಾಂತರದಲ್ಲಿ ಕುಡಿಯುವ ನೀರಿನ ಬಗ್ಗೆ ವೈಎಂ ಸತೀಶ್ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ, ಕುಡಿಯುವ ನೀರಿನ ಯೋಜನೆ ಕೇಳಿದ್ದಾರೆ. ಜಲಸಂಪನ್ಮೂಲ ಇಲಾಖೆ ಇರುವುದು ನೀರಾವರಿ ಸೌಲಭ್ಯ ಒದಗಿಸಲು ಎಂಬುದು ಗಮನದಲ್ಲಿರಲಿ. ಯೋಜನಾ ವೆಚ್ಚ 60 ಕೋಟಿ ರೂ. ಇತ್ತು, ಅನುಮೋದನೆ ಆಗಿತ್ತು ಅಂತ ಹೇಳ್ತಾರೆ. ಆದರೆ, ಯೋಜನೆ ಅನುಮೋದನೆಯೇ ಆಗಿಲ್ಲ ಎಂದರು.

ಈ ಯೋಜನೆ 2019-2020 ಸಾಲಿನ ಬಜೆಟ್‌ನಲ್ಲಿ ಘೋಷಣೆ ಆಯ್ತು. ಯೋಜನೆಗಳು 2013ರಿಂದ ಇವತ್ತಿನವರೆಗೂ ಘೋಷಣೆ ಆಗ್ತಾನೇ ಇದಾವೆ. ನಮ್ಮ ಬಜೆಟ್ ಗೂ ನಾವು ಮಂಜೂರು ಮಾಡುವ ಕಾಮಗಾರಿಗೂ ಎಲ್ಲಿಯೂ ಸಂಬಂಧ ಇಲ್ಲ. ಇವತ್ತಿನ ಕಾರ್ಯಭಾರ 1 ಲಕ್ಷ 2 ಸಾವಿರ ಕೋಟಿ ರೂ.ಗೂ ಹೆಚ್ಚಿದೆ. ನಮಗೆ ಬಜೆಟ್‌ನಲ್ಲಿ ಸಿಗ್ತಾ ಇರುವುದು 18, 19 ಸಾವಿರ ಕೋಟಿ ಮಾತ್ರ. ಹೀಗಾಗಿ ಅನುದಾನದ ಲಭ್ಯತೆ ಆಧಾರದ ಮೇಲೆ ಅಂತ ಹೇಳ್ದೆ. ಹಣ ಇದ್ರೆ ನಾಳೆನೇ ಮಾಡಿಸುತ್ತೇನೆ ಎಂದು ಹೇಳಿದರು.

ಈ ಪ್ರಾಜೆಕ್ಟ್ ಬಜೆಟ್ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಕ್ರಿಯಾ ಯೋಜನೆಗೆ ಸೇರಿ ಅನುದಾನ ಹಂಚಿಕೆಯಾಗಿ ಅನುಮೋದನೆ ಆಗ್ಲೇ ಇಲ್ಲ, ಇವತ್ತಿನವರೆಗೂ ಆಗಿಲ್ಲ. ಆಗಸ್ಟ್ 4ರಂದು ನಮ್ಮ ನಿಗಮ 94ನೇ ಸಭೆಯಲ್ಲಿ ಕ್ಲಿಯರೆನ್ಸ್‌ ಸಲುವಾಗಿ ತೆಗದುಕೊಂಡು ಬಂದೆ‌. ಈಗ ಬೋರ್ಡ್ ಕ್ಲಿಯರೆನ್ಸ್ ಕೊಟ್ಟಿದ್ದೇವೆ. ಇನ್ಮೇಲೆ ಫೈನಾನ್ಸ್‌ನಿಂದ ಅನುದಾನ ಹಂಚಿಕೆಯಾಗ್ಬೇಕು. ಮುಂದಿನ ಪ್ರಕ್ರಿಯೆ ಶುರುವಾಗ್ಬೇಕು. ಅಮೇಲೆ ಟೆಂಡರ್ ಕರೆದು ಈ ಕಾಮಗಾರಿಯನ್ನ ಕೈಗೆತ್ತಿಕೊಳ್ಳಬೇಕು. ಅನುದಾನ ಸಿಕ್ಕ ಮೇಲೆಯೇ ಆಗುವುದು, ಬೇರೆ ಏನು ಮಾಡಲು ಸಾದ್ಯವಿಲ್ಲ ಎಂದು ವಿವರಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ