AAP Star campaigners: ಕರ್ನಾಟಕ ಚುನಾವಣೆ; ದೆಹಲಿ ಸಿಎಂ ಕೇಜ್ರಿವಾಲ್, ಹರ್ಭಜನ್ ಸಿಂಗ್ ಸೇರಿ ಎಎಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ
Apr 21, 2023 09:22 PM IST
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (ಫೋಟೋ-ಫೈಲ್) (Twitter/@AamAadmiParty)
ಆಮ್ ಆದ್ಮಿ ಪಾರ್ಟಿ ವಿಧಾನಸಭೆ ಚುನಾವಣೆಗೆ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬಾ ಸಿಎಂ ಮಾನ್, ಬಜ್ಜಿ ಸೇರಿದಂತೆ ಹಲವರು ಪಟ್ಟಿಯಲ್ಲಿದ್ದಾರೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿ ಭರ್ಜರಿ ಪ್ರಚಾರಕ್ಕೆ ಪ್ಲಾನ್ ಮಾಡುತ್ತಿರುವ ಹೊಸ ರಾಷ್ಟ್ರೀಯ ಪಕ್ಷ ಎಎಪಿ ತನ್ನ ಚುನಾವಣಾ ಸ್ಟಾರ್ ಕ್ಯಾಂಪೇನರ್ ಗಳ ಪಟ್ಟಿ ಬಿಡುಗಡೆ ಮಾಡಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇರ್ಜಿವಾಲ್ ಸೇರಿದಂತೆ ಅಲ್ಲಿನ ಇತರೆ ನಾಯಕರು, ಪಂಜಾಬ್ ಸಿಎಂ ಭಗವಂತ್ ಮಾನ್, ಸಂಜಯ್ ಸಿಂಗ್, ರಾಘವ್ ಚಡ್ಡಾ ಹಾಗೂ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಸೇರಿ ಒಟ್ಟು 40 ಸದಸ್ಯರು ಪಟ್ಟಿಯಲ್ಲಿದ್ದಾರೆ.
ಲಿಸ್ಟ್ ನಲ್ಲಿ ಇರುವ ರಾಷ್ಟ್ರ ಮಟ್ಟದ ಇತರೆ ನಾಯಕರ ವಿವರ ಹೀಗಿದೆ
ಅತಿಶಿ ಮರ್ಲೆನಾ, ಸೌರಬ್ ಭಾರದ್ವಜ್, ದಿಲೀಪ್ ಪಾಂಡೆ, ಉಪೇಂದ್ರ ಗಾಂವ್ಕರ್, ಇಮ್ರಾನ್ ಹುಸೇನ್, ಪ್ರಹ್ಲಾದ್ ಸಹಾನೀ, ಶೆಹನಾಜ್ ಹಿಂದೂಸ್ಥಾನಿ, ಎಸ್ ಎ ಎನ್ ಅಸಿಗರನ್, ಸೆಸಿಲ್ಲೆ ರೊಡ್ರಿಗಸ್
ಕರ್ನಾಟಕದಿಂದ ಆಮ್ ಆದ್ಮಿ ಪಕ್ಷದ ಸ್ಟಾರ್ ಪ್ರಚಾರಕರು
ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ರಾಜ್ಯದಿಂದ ಸ್ಟಾರ್ ಪ್ರಚಾರಕರಾಗಿದ್ದಾರೆ. ಉಳಿದಂತೆ ಡಾ ಮುಖ್ಯಮಂತ್ರಿ ಚಂದ್ರು, ಟೆನ್ನಿಸ್ ಕೃಷ್ಣ, ಸಂಚಿತ್ ಸಹಾನೀ, ರವಿಚಂದ್ರ ನೆರಬೆಂಚಿ, ಜಾಫರ್ ಮೋಹಿದಿನ್, ವಿಜಯ್ ಶರ್ಮಾ, ಲಕ್ಷ್ಮೀಕಾಂತ್ ರಾವ್, ರೋಹನ್ ಐನಾಪುರ, ವಿವೇಕನಂದ್ ಸಾಲಿನ್ಸ್, ಎಸ್ ಎಸ್ ಬೆನಕನಹಳ್ಳಿ, ರುದ್ರಯ್ಯ ನವಲಿ ಹಿರೇಮಠ, ಡಾ ವೆಂಕಟೇಶ್ ಪಟ್ಟಿಯಲ್ಲಿ ಇದ್ದಾರೆ.
ಇನ್ನು ಎಎಪಿಯ ಇತರೆ ಸ್ಟಾರ್ ಪ್ರಚಾರಕರ ವಿವರ ಹೀಗಿದೆ
ಡಾ ವಿಶ್ವನಾಥ್ ಬಿ ಎಲ್, ಚನ್ನಪ್ಪ ಗೌಡ, ಉಮಾ ಶಂಕರ್, ಕೆ ದಿವಾಕರ್, ಕುಶಲ ಸ್ವಾಮಿ, ಉಷಾ ಮೋಹನ್, ಸುಶ್ಮಾ ವೀರ್, ಡಾ ಪೂಜಾ ರಮೇಶ್, ಡಾ ತಿಪ್ಪೇಸ್ವಾಮಿ ವಿ, ಡಾ ಸತೀಶ್ ಕುಮಾರ್, ಅಬ್ದುಲ್ ರಜಾಕ್, ಗುರುಮೂರ್ತಿ, ಅಕ್ರಮ್ ಸೇಠ್ ಸ್ಟಾರ್ ಕ್ಯಾಂಪೇನರ್ ಗಳಾಗಿದ್ದಾರೆ.
ಒಟ್ಟಾರೆ, ಆಮ್ ಆದ್ಮಿ ಪಕ್ಷದಿಂದ ದೆಹಲಿ ಹಾಗೂ ಕರ್ನಾಟಕ ಸೇರಿ 40 ಮಂದಿ ಸ್ಟಾರ್ ಪ್ರಚಾರಕರು ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾರ್ವತಿಕ ಚುನಾವಣಾ ಪ್ರಚಾರವನ್ನ ನಡೆಸಲಿದ್ದಾರೆ.