logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Exit Polls: ಜೀ ನ್ಯೂಸ್ ಮ್ಯಾಟ್ರಿಜ್ ಮತದಾನಕ್ಕೂ ಮುನ್ನ, ಮತಗಟ್ಟೆ ಸಮೀಕ್ಷೆಯಲ್ಲಿ ಕೈ ಕಮಲ ಗೆಲ್ಲುವ ಸ್ಥಾನಗಳ ಭಾರಿ ಬದಲಾವಣೆ

Karnataka Exit Polls: ಜೀ ನ್ಯೂಸ್ ಮ್ಯಾಟ್ರಿಜ್ ಮತದಾನಕ್ಕೂ ಮುನ್ನ, ಮತಗಟ್ಟೆ ಸಮೀಕ್ಷೆಯಲ್ಲಿ ಕೈ ಕಮಲ ಗೆಲ್ಲುವ ಸ್ಥಾನಗಳ ಭಾರಿ ಬದಲಾವಣೆ

Raghavendra M Y HT Kannada

May 10, 2023 09:40 PM IST

ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ

  • ಜೀ ನ್ಯೂಸ್ ಮತ್ತು ಮ್ಯಾಟ್ರಿಜ್ ನೀಡಿರುವ ಮತಗಟ್ಟೆ ಸಮೀಕ್ಷೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದೆ. ಆದರೆ ಚುನಾವಣೆಗೂ ಮುನ್ನ ನೀಡಿದ್ದ ಸಮೀಕ್ಷೆಗಿಂತ ಬಾರಿ ಬದಲಾವಣೆಯ ಅಂಕಿ ಅಂಶ ನೀಡಿರುವುದು ಗಮನಾರ್ಹ.

ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ
ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಚುನಾವಣಾ ಮತಗಟ್ಟೆ ಸಮೀಕ್ಷೆಯಲ್ಲಿ (Karnataka Exit Polls) ಕಾಂಗ್ರೆಸ್ (Congress) ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬಹುದು ಎಂದು ಜೀ ನ್ಯೂಸ್-ಮ್ಯಾಟ್ರಿಜ್ (Zee News-Matrize) ಹೇಳಿದೆ.

ಟ್ರೆಂಡಿಂಗ್​ ಸುದ್ದಿ

Hubli News: ಅಂಜಲಿ ಹತ್ಯೆ, ಹುಬ್ಬಳ್ಳಿಯಲ್ಲಿ ಇಂದು ಪರಮೇಶ್ವರ್‌ ಸಭೆ, ಸಿಬಿಐ ತನಿಖೆಗೆ ಜೋಶಿ ಆಗ್ರಹ

CET Results2024: ಕರ್ನಾಟಕ ಸಿಇಟಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ, ನಿಮ್ಮ ಅಂಕ ನೋಡುವುದು ಹೀಗೆ

Bangalore News: ತಮಿಳುನಾಡಿನಲ್ಲಿ ಗುಂಡು ತಗುಲಿ ಬೆಂಗಳೂರಿನ ಯೋಧ ಸಾವು

Hassan Scandal: ಗೃಹ ಇಲಾಖೆ ಬೇರೆಯವರಿಂದ ಹೈಜಾಕ್‌‌, ಪ್ರಜ್ವಲ್‌ ರೇವಣ್ಣ ಪ್ರಕರಣ ಮುಚ್ಚಿಹಾಕಲು ಎಸ್‌ಐಟಿ ಸಿದ್ಧತೆ, ಅಶೋಕ ಆರೋಪ

ಜೀ ನ್ಯೂಸ್-ಮ್ಯಾಟ್ರಿಜ್ ಅಭಿಪ್ರಾಯ ಸಮೀಕ್ಷೆಯ ಪ್ರಕಾರ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 103-118 ಸ್ಥಾನಗಳನ್ನು ಗೆಲ್ಲಲಿದ್ದು, 113 ಸಂಖ್ಯೆಯ ಮ್ಯಾಜಿಕ್ ಸಂಖ್ಯೆಯನ್ನು ದಾಟಬಹುದು ಎಂದು ತನ್ನ ಸಮೀಕ್ಷೆಯಲ್ಲಿ ಅಂದಾಜಿಸಿದೆ.

ಮತ್ತೊಂದೆಡೆ ಬಿಜೆಪಿ 74 ರಿಂದ 94 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವ ನಿರೀಕ್ಷೆಯಿದೆ. ಜೆಡಿಎಸ್ 25 ರಿಂದ 33 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಈ ಸಮೀಕ್ಷೆ ಭವಿಷ್ಯ ನುಡಿದಿದ್ದು, ಇತರರು 2 ರಿಂದ 5 ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ಸಮೀಕ್ಷೆಯಲ್ಲಿ ತಿಳಿಸಿದೆ.

ಮತ ಹಂಚಿಕೆಯ ಪ್ರಮಾಣದ ಬಗ್ಗೆಯೂ ಜೀ ನ್ಯೂಸ್ - ಮ್ಯಾಟ್ರಿಜ್ ಹೇಳಿದ್ದು, ಕಾಂಗ್ರೆಸ್ ಶೇಕಡಾ 41 ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿದೆ. ಬಿಜೆಪಿ ಶೇಕಡಾ 36 ರಷ್ಟು ಹಾಗೂ ಜೆಡಿಎಸ್ ಶೇ. 17 ರಷ್ಟು ಮತಗಳನ್ನು ಗಳಿಸಲಿದೆ ಎಂದು ಹೇಳಿದೆ. ಆದರೆ ಪಕ್ಷೇತರ, ಸ್ವತಂತ್ರ ಅಭ್ಯರ್ಥಿಗಳು ಸುಮಾರು 6 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ ಎಂದಿದೆ.

ಚುನಾವಣಾ ಪೂರ್ವ ಸಮೀಕ್ಷೆ ಏನು ಹೇಳಿತ್ತು?

ಜೀ ನ್ಯೂಸ್-ಮ್ಯಾಟ್ರಿಜ್ ಚುನಾವಣಾ ಪೂರ್ವ ಸಮೀಕ್ಷೆಯನ್ನು ನೀಡಿತ್ತು. ಇದರಲ್ಲಿ ಭಾರತೀಯ ಜನತಾ ಪಾರ್ಟಿ ಮುನ್ನಡೆ ಪಡೆಯಲಿದೆ ಎಂದು ಹೇಳಿತ್ತು. ಮತದಾನಕ್ಕೂ ಮುನ್ನ ಜೀ ನ್ಯೂಸ್-ಮ್ಯಾಟ್ರಿಜ್ ಸಮೀಕ್ಷೆ ಮತಗಟ್ಟೆಯಲ್ಲಿ ಕೊಟ್ಟ ವರದಿಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸುವ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸೋಮವಾರ (ಮೇ 8) ಪ್ರಕಟವಾದ ಸಮೀಕ್ಷೆಯಲ್ಲಿ ಭವಿಷ್ಯ ನುಡಿದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಸೀಟುಗಳ ಲೆಕ್ಕಾಚಾರದಲ್ಲಿ ಬಿಜೆಪಿಯ ನಂತರದ ಸ್ಥಾನ ಪಡೆಯಲಿವೆ ಎಂದಿತ್ತು.

ಜೀ ನ್ಯೂಸ್-ಮ್ಯಾಟ್ರಿಜ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಬಿಜೆಪಿ 103-115 ಸ್ಥಾನ, ಕಾಂಗ್ರೆಸ್ 79-91, ಜೆಡಿಎಸ್‌ 26-36 ಹಾಗೂ ಇತರೆ 1-3 ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದಿತ್ತು. ಆದರೆ ಇದೀಗ ಮತಗಟ್ಟೆ ಸಮೀಕ್ಷೆಯಲ್ಲಿ ಕಾಂಗ್ರೆಸ್ 103-118 ಸ್ಥಾನಗಳನ್ನು ಗೆಲ್ಲಲಿದ್ದು, ಮ್ಯಾಜಿಕ್ ಸಂಖ್ಯೆ 113 ಅನ್ನು ದಾಟಲಿದೆ ಎಂದು ಹೇಳಿದೆ. ಕೇವಲ ಮೂರ್ನಾಲ್ಕು ದಿನಗಳಲ್ಲೇ ಈ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಚಿತ್ರಣ ಬದಲಾಗಿದೆ.

ಮತದಾನಕ್ಕೂ ಮುನ್ನ ನೀಡಿದ್ದ ಮತ ಹಂಚಿಕೆಯಲ್ಲಿ ಬಿಜೆಪಿ ಶೇ. 42 ರಷ್ಟು ಮತಗಳನ್ನು ಪಡೆಯಲಿದೆ ಎಂದಿತ್ತು. ಕಾಂಗ್ರೆಸ್ ಶೇ. 40, ಜೆಡಿಎಸ್ ಶೇ. 15, ಇತರೆ ಶೇ 3 ರಷ್ಟು ಮತಗಳನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ ಎಂದು ತನ್ನ ಪ್ರಿ ಪೋಲ್ ಸರ್ವೇಯಲ್ಲಿ ತಿಳಿಸಿತ್ತು.

ಚುನಾವಣೆ ಪೂರ್ವ ಹಾಗೂ ಚುನಾವಣೆಯ ನಂತರದ ಜೀ ನ್ಯೂಸ್-ಮ್ಯಾಟ್ರಿಜ್ ಸಮೀಕ್ಷೆಯಲ್ಲಿ ಭಾರಿ ಬದಲಾವಣೆಯನ್ನು ತೋರಿಸಿದೆ. ಇದು ಕೇವಲ ಸಮೀಕ್ಷೆಗಳು ಅಷ್ಟೇ. ಇದೇ ಅಂತಿಮವಲ್ಲ. ಮೇ 13 ರಂದು ಹೊರಬೀಳಲಿರುವ ಫಲಿತಾಂಶದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 80 ಹಾಗೂ ಜೆಡಿಎಸ್ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿದ್ದವು. ಆದರೆ ಎರಡೂ ಪಕ್ಷಗಳು ಕೆಲವು ಶಾಸಕರು ರೆಬಲ್ ಆಗಿ ಮೈತ್ರಿ ಸರ್ಕಾರ ಪತನಗೊಳಿಸಿದ್ರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ