ಕನ್ನಡ ಸುದ್ದಿ  /  ಕರ್ನಾಟಕ  /  Karnataka Exit Polls: ಎಬಿಪಿ ಸಿವೋಟರ್ ಮತಗಟ್ಟೆ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುನ್ನಡೆ ಮುನ್ಸೂಚನೆ; ಚುನಾವಣಾ ಪೂರ್ವ ಸಮೀಕ್ಷೆ ಏನು ಹೇಳಿತ್ತು

Karnataka Exit Polls: ಎಬಿಪಿ ಸಿವೋಟರ್ ಮತಗಟ್ಟೆ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುನ್ನಡೆ ಮುನ್ಸೂಚನೆ; ಚುನಾವಣಾ ಪೂರ್ವ ಸಮೀಕ್ಷೆ ಏನು ಹೇಳಿತ್ತು

ಎಬಿಪಿ ಸಿವೋಟರ್ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುನ್ನಡೆ ಪಡೆಯಲಿದೆ ಎಂದು ಹೇಳಿದೆ. ಚುನಾವಣಾ ಪೂರ್ವ ಸಮೀಕ್ಷೆ ಏನು ಹೇಳಿತ್ತು ಎಂಬುದರ ಮಾಹಿತಿ ಇಲ್ಲಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election) ಮುಗಿದ ಕೆಲವೇ ಗಂಟೆಗಳಲ್ಲಿ ಮತಗಟ್ಟೆ ಸಮೀಕ್ಷೆ (Karnataka Exit Polls) ಬಹಿರಂಗವಾಗಿದ್ದು, ಬಹುತೇಕ ಸರ್ವೇಗಳು ಕಾಂಗ್ರೆಸ್ (Congress) ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಹೇಳಿವೆ.

ಟ್ರೆಂಡಿಂಗ್​ ಸುದ್ದಿ

ಕಾಂಗ್ರೆಸ್‌ ಮುನ್ನಡೆಯ ಮುನ್ಸೂಚನೆ ಕೊಟ್ಟ ಎಬಿಪಿ-ಸಿವೋಟರ್

ಇವತ್ತಿನ (ಮೇ 10, ಬುಧವಾರ) ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಯಲ್ಲಿ ಎಬಿಪಿ-ಸಿ-ವೋಟರ್ ಮತಗಟ್ಟೆ ಸಮೀಕ್ಷೆಯಲ್ಲಿಯೂ ಕಾಂಗ್ರೆಸ್ ಮುನ್ನಡೆಯ ಮುನ್ಸೂಚನೆ ಸಿಕ್ಕಿದೆ. ಈ ಸಮೀಕ್ಷೆಯ ಪ್ರಕಾರ ಬಿಜೆಪಿ 88 ರಿಂದ 98 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 100-112 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ.

ಇನ್ನೂ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ 21 ರಿಂದ 29 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಒಂದು ವೇಳೆ ಈ ಸಮೀಕ್ಷೆ ನಿಜವೇ ಆದರೆ ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್ ಕಿಂಗ್ ಮೇಕರ್ ಆಗುವುದರಲ್ಲಿ ಅನುಮಾನವೇ ಇಲ್ಲ. ನಾವು ಕಿಂಗ್ ಮೇಕರ್ ಆಗುವುದಿಲ್ಲ ಕಿಂಗ್ ಆಗ್ತೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇಂದಷ್ಟೇ ಹೇಳಿದ್ದರು.

ಹಣಕಾಸಿನ ಅಡೆತಡೆಗಳ ಹೊರತಾಗಿಯೂ ತಮ್ಮ ಪಕ್ಷವು ಸೀಟುಗಳನ್ನು ಗೆಲ್ಲೋ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಮುಂದಿರುತ್ತದೆ. ನಮ್ಮ ಪಕ್ಷ ಕಿಂಗ್ ಆಗಿರುತ್ತದೆಯೇ ಹೊರತು ಕೇವಲ ಕಿಂಗ್ ಮೇಕರ್ ಅಲ್ಲ ಅಂತ ಪ್ರತಿಪಾದಿಸಿದ್ದರು.

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ‘ಕೈ’ ಹೊಡೆತ!

ಎಬಿಪಿ, ಸಿ-ವೋಟರ್ಸ್ ತನ್ನ ಸಮೀಕ್ಷೆಯಲ್ಲಿ ಹೇಳಿರುವ ಇತರೆ ಅಂಶಗಳನ್ನು ನೋಡುವುದಾದರೆ. ಹೇಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಜೆಡಿಎಸ್‌ಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ.

ಇನ್ನ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದ್ದು, ಆನಂತರದ ಸ್ಥಾನದಲ್ಲಿ ಕಾಂಗ್ರೆಸ್ ಇರಲಿದೆ ಎಂದಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್ ಶೋಗಳನ್ನು ನಡೆಸಿದ್ದರು.

ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್-ಬಿಜೆಪಿ ತೀವ್ರ ಪೈಪೋಟಿ

ಮಧ್ಯ ಕರ್ನಾಟಕದಲ್ಲಿ ಬಿಜೆಪಿಗಿಂತ ಸ್ವಲ್ಪ ಮೇಲುಗೈ ಸಾಧಿಸಿದರೆ, ಜನತಾ ದಳ ಇಲ್ಲಿ ಹಿಂದೆ ಬಿದ್ದಿದೆಯಂತೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಕಂಡುಬರುವ ಸಾಧ್ಯತೆ ಇದೆ ಎಂದು ಎಬಿಪಿ-ಸಿ ವೋಟರ್ಸ್ ಸಮೀಕ್ಷೆ ಹೇಳಿದೆ.

ಅದೇ ರೀತಿಯಾಗಿ ಮುಂಬೈ ಕರ್ನಾಟಕ ಭಾಗದಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಆದರೆ ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ. ಇಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.

ಪ್ರದೇಶಬಿಜೆಪಿಕಾಂಗ್ರೆಸ್ಜೆಡಿಎಸ್ಇತರೆ
ಬೆಂಗಳೂರು (32)15-1911-151-40-1
ಹಳೇ ಮೈಸೂರು (33)0-428-3219-230-3
ಮಧ್ಯ ಕರ್ನಾಟಕ (35)12-1618-220-20-1
ಕರಾವಳಿ ಕರ್ನಾಟಕ (21)15-192-600
ಮುಂಬೈ-ಕರ್ನಾಟಕ (50)24-2822-260-10-1
ಹೈದರಾಬಾದ್ ಕರ್ನಾಟಕ (31)11-1513-170-20-3

ಇನ್ನು ಚುನಾವಣೆಗೂ ಮುನ್ನ ಇದೇ ಎಬಿಪಿ ಹಾಗೂ ಸಿ ವೋಟರ್ಸ್ ನಡೆಸಿದ್ದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಹೇಳಿತ್ತು. ಏಪ್ರಿಲ್ 29 ರಿಂದ ಮೇ 5ರ ವರೆಗೆ ನಡೆಸಿದ್ದ ಸಮೀಕ್ಷೆಯಲ್ಲಿ ಕಾಂಗ್ರೆಸ್ 110 ರಿಂದ 122 ಸ್ಥಾನಗಳು, ಬಿಜೆಪಿ 73 ರಿಂದ 85 ಹಾಗೂ ಜೆಡಿಎಸ್ 21 ರಿಂದ 29 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿತ್ತು.

ಆದರೆ ಇಲ್ಲಿ ಪ್ರಮುಖವಾಗಿ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಯಲ್ಲಿ ಜೆಡಿಎಸ್‌ಗೆ ನೀಡಿರುವ ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರಿ ಪೋಲ್ ಸರ್ವೇ ನಲ್ಲೂ ಜೆಡಿಎಸ್‌ಗೆ 21 ರಿಂದ 29 ಸ್ಥಾನಗಳು ಸಿಗಲಿದೆ ಎಂದಿತ್ತು. ರಾಜ್ಯ 73,774 ಮಂದಿಯನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಎಬಿಪಿ, ಸಿ ವೋಟರ್ಸ್ ಸಮೀಕ್ಷೆ ಮಾಹಿತಿ ನೀಡಿತ್ತು.

IPL_Entry_Point