logo
ಕನ್ನಡ ಸುದ್ದಿ  /  ಕರ್ನಾಟಕ  /  Basavaraj Bommai Budget: ಕರ್ನಾಟಕದ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರದ ಬಜೆಟ್‌ ವಿವರ; ಗಮನಿಸಬೇಕಾದ ಪ್ರಮುಖ ಅಂಶಗಳು

Basavaraj Bommai Budget: ಕರ್ನಾಟಕದ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರದ ಬಜೆಟ್‌ ವಿವರ; ಗಮನಿಸಬೇಕಾದ ಪ್ರಮುಖ ಅಂಶಗಳು

HT Kannada Desk HT Kannada

Jul 06, 2023 05:00 AM IST

2023 ಫೆಬ್ರವರಿಯಲ್ಲಿ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ್ದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ

  • ಬಸವರಾಜ ಬೊಮ್ಮಾಯಿ ಸರ್ಕಾರ 2023ರ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಲಾಗಿತ್ತು ಎಂಬುದರ ಮಾಹಿತಿ ಇಲ್ಲಿದೆ.

2023 ಫೆಬ್ರವರಿಯಲ್ಲಿ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ್ದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ
2023 ಫೆಬ್ರವರಿಯಲ್ಲಿ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ್ದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬಿಜೆಪಿ ಸರ್ಕಾರದ (BJP Govt) ಕೊನೆಯ ಬಜೆಟ್ (Budget 2023) ಅನ್ನು ಅಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ (Basavaraj Bommai) ಅವರು 2023ರ ಫೆಬ್ರವರಿ 17 ರಂದು 3,09,182 ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದರು.

ಟ್ರೆಂಡಿಂಗ್​ ಸುದ್ದಿ

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

ಕಳೆದ ಆಯವ್ಯಯಕ್ಕೆ ಹೋಲಿಸಿದರೆ ಶೇ.16 ರಷ್ಟು ಬಜೆಟ್ ಗಾತ್ರ ಹೆಚ್ಚಾಗಿದ್ದು, ರಾಜ್ಯ ಆರ್ಥಿಕ ಪ್ರಗತಿಯ ವೇಗ ಉನ್ನತ ಮಟ್ಟದಲ್ಲಾಗುತ್ತಿರುವುದನ್ನು ನಿರೂಪಿಸುತ್ತದೆ ಎಂದು ಬೊಮ್ಮಾಯಿ ಅವರು ಹೇಳಿದ್ದರು.

ಬಿಜೆಪಿ ಸರ್ಕಾರದ ಬಜೆಟ್‌ನಲ್ಲಿ ಪ್ರಮುಖವಾಗಿ ರೈತರಿಗೆ (Farmers) 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುವ ಘೋಷಣೆ ಮಾಡಲಾಗಿತ್ತು. ಜೊತೆಗೆ ಬೆಳೆ ಸಂರಕ್ಷಣೆಗಾಗಿ 175 ಕೋಟಿ ರೂ. ನೀಡಿತ್ತು. ಒಟ್ಟಾರೆಯಾಗಿ ಬಜೆಟ್‌ನ ಪ್ರಮುಖ ಅಂಶಗಳು

ಹಿಂದಿನ ಸರ್ಕಾರ ಬಜೆಟ್‌ನಲ್ಲಿ ಅನ್ನದಾತರಿಗಾಗಿ ಘೋಷಿಸಿದ ಯೋಜನೆಗಳು

  • ಕಿರುಧಾನ್ಯ ಬೆಳೆಗಾಗರರಿಗೆ 10 ಸಾವಿರ ಪ್ರೋತ್ಸಾಹ ಧನ ಘೋಷಣೆ
  • ರೈತರಿಗಾಗಿ ಭೂ ಸಿರಿ ಎಂಬ ನೂತನ ಯೋಜನೆ ಘೋಷಣೆ. ಯೋಜನೆಯಡಿಯಲ್ಲಿ 10 ಸಾವಿರ ರೂ. ಹೆಚ್ಚುವರಿ ಸಹಾಯಧನ
  • ಸಹಸ್ರ ಸರೋವರ ಯೋಜನೆಯಡಿ ರಾಜ್ಯದ 1,000 ಸಣ್ಣ ಸರೋವರಗಳ ಅಭಿವೃದ್ಧಿ
  • ರೈತ ಸಿರಿ ಯೋಜನೆ ಅಡಿ ಕಿರುಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ಪ್ರೋತ್ಸಾಹ ಧನ
  • ಸಹ್ಯಾದ್ರಿ ಸಿರಿ ಯೋಜನೆಯಡಿ ಕರಾವಳಿ, ಮಲೆನಾಡು ಹಾಗೂ ಅರೆ ಮಲೆನಾಡಿನಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗೆ ಒತ್ತು
  • ಅಡಿಕೆ ಬೆಳೆಯ ರೋಗ ನಿರ್ವಹಣೆಗಾಗಿ ನೂತನ ತಂತ್ರಜ್ಞಾನ ಅಭಿವೃದ್ಧಿ ಮಾಡಲು 10 ಲಕ್ಷ ಕೋಟಿ ರೂ ಅನುದಾನ ಘೋಷಣೆ
  • ದ್ರಾಕ್ಷಿ ಬೆಳೆಗಾರರಿಗೆ 100 ಕೋಟಿ ರೂ. ನೆರವು ಯೋಜನೆ ಘೋಷಣೆ
  • ರೇಷ್ಮೆ ಬೆಳೆಯನ್ನು ಇನ್ನೂ 10 ಸಾವಿರ ಹೆಕ್ಟೇರ್​ ಪ್ರದೇಶಕ್ಕೆ ವಿಸ್ತರಣೆ ಮಾಡಲು ತೋಟಗಾರಿಕಾ ಇಲಾಖೆಯಿಂದ ಕ್ರಮ. ಶಿಡ್ಲಘಟ್ಟದಲ್ಲಿ ನಬಾರ್ಡ್ ಯೋಜನೆ ಅಡಿ 75 ಕೋಟಿ ರೂಗಳ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ
  • 32 ಸ್ವಯಂ ಚಾಲಿತ ರೈಲಿಂಗ್ ಘಟಕಗಳ ಸ್ಥಾಪನೆಗೆ 10 ಕೋಟಿ ರೂಪಾಯಿ ಹಾಗೂ ಸಾವಿರ ರೇಷ್ಮೆ ಬೆಳೆಗಾರರಿಗೆ ಶ್ರೆಡ್ಡರ್ಸ್​ಗಳನ್ನು ಒದಗಿಸಲು 12 ಕೋಟಿ ರೂಗಳ ನೆರವು
  • ರಾಜ್ಯದ 9 ಲಕ್ಷ ಹಾಲು ಉತ್ಪಾದಕರಿಗೆ 1,067 ಕೋಟಿ ರೂ. ಪ್ರೋತ್ಸಾಹಧನ
  • ರಾಜ್ಯದ ನೀರಾವರಿ ಯೋಜನೆಗಳಿಗೆ 25 ಸಾವಿರ ಕೋಟಿ ರೂಪಾಯಿ ಅನುದಾನ

ಆರೋಗ್ಯಕ್ಕೆ ಬೊಮ್ಮಾಯಿ ಸರ್ಕಾರದ ಅನುದಾನ

  • 6 ಹೊಸ ಇಎಸ್‌ಐ ಆಸ್ಪತ್ರೆ, ಮನೆ ಮನೆಗೆ ಆರೋಗ್ಯ ಹೆಸರಲ್ಲಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರದ ಜೊತೆಗೆ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಸಂಖ್ಯೆ ಹೆಚ್ಚಳ
  • ಬೆಂಗಳೂರಿನಲ್ಲಿ ಕೈಗೆಟುವ ದರದಲ್ಲಿ ಆರೋಗ್ಯ ಸೇವೆ ಸಿಗಲು 2022-23 ನೇ ಸಾಲಿನಲ್ಲಿ 243 ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್ ಮತ್ತು 27 ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್‌ಗಳಿಗೆ ಅನುಮೋದನೆ
  • ಮಹಾನಗರದ ಆರೋಗ್ಯ ಆಡಳಿತ ವ್ಯವಸ್ಥೆಯನ್ನು ಬೆಂಗಳೂರು ಹೆಲ್ತ್ ಸಿಸ್ಟಮ್ಸ್ ಎಂದು ಪುನರ್ ರಚನೆ ಮಾಡಲು ನಿರ್ಧಾರ
  • 202 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ
  • ಮೈಸೂರಿನಲ್ಲಿ 146 ಕೋಟಿ ರೂ. ವೆಚ್ಚದಲ್ಲಿ ಅಂಗಾಂಗ ಜೋಡಣೆಗೆ ಆಸ್ಪತ್ರೆ
  • ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಘೋಷಣೆ. ಕುಮಟಾ ತಾಲೂಕಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವ ಘೋಷಣೆ
  • ಆರೋಗ್ಯ ಕ್ಷೇತ್ರ ಸುಧಾರಣೆಗಾಗಿ 720 ಕೋಟಿ ರೂ. ಘೋಷಣೆ
  • 65 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ
  • ಕೊಡಗು, ಕಾರವಾರದಲ್ಲಿ 450 ಹಾಸಿಗೆ ಆಸ್ಪತ್ರೆ ನಿರ್ಮಾಣ
  • ಹೆರಿಗೆಯಾದ ತಾಯಂದಿರು, ನವಜಾತ ಶಿಶುಗಳು ಸುರಕ್ಷಿತವಾಗಿ ಮನೆಗೆ ತಲುಪಲು 12.5 ಕೋಟಿ ವೆಚ್ಚದಲ್ಲಿ 'ನಗು-ಮಗು' ವಾಹನ ಸೌಲಭ್ಯ
  • ಚಿತ್ರದುರ್ಗದಲ್ಲಿ 500 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೊಸ ವೈದ್ಯಕೀಯ ಕಾಲೇಜು
  • 6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆಗೆ 'ವಾತ್ಸಲ್ಯ' ಯೋಜನೆ ಘೋಷಣೆ. ಒಟ್ಟಾರೆಯಾಗಿ ರಾಜ್ಯ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ದಾಖಲೆಯ 15,151 ಕೋಟಿ ಅನುದಾನ‌
  • ಹಾವೇರಿಯ ಬಂಕಾಪುರದಲ್ಲಿ ಇಂಜಿನಿಯರಿಂಗ ಕಾಲೇಜು ಸ್ಥಾಪನೆ

ಇತರೆ ಪ್ರಮುಖ ಅಂಶಗಳು

  • ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ಸಾವಿರ ಬಸ್ಸುಗಳನ್ನು 2000ಕ್ಕೆ ಹೆಚ್ಚಳ
  • ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ನಾಲ್ಕು ಸಾವಿರ ಶಿಶು ವಿಹಾರಗಳ ಪ್ರಾರಂಭ
  • ಆಶಾ ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಹಾಯಕರ ಗೌರವಧನ ಒಂದು ಸಾವಿರ ರೂ. ಗಳಿಗೆ ಹೆಚ್ಚಳ
  • ಮಹಿಳಾ ಉದ್ಯಮೆದಾರರಿಗೆ 5 ಕೋಟಿ ರೂಪಾಯಿ ವರೆಗೆ ಶೇಕಡಾ 4ರ ಬಡ್ಡಿದರಲ್ಲಿ ಸಾಲ
  • ಮುಜರಾಯಿ ಇಲಾಖೆಗೆ 1,000 ಕೋಟಿ ರೂಪಾಯಿ ಮೀಸಲು ಸೇರಿದಂತೆ ಇನ್ನೂ ಹತ್ತು ಹಲವು ಯೋಜನೆಗಳನ್ನು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದರು.

ಇದನ್ನೂ ಓದಿ: ಗೃಹಿಣಿ ಶಕ್ತಿ ಯೋಜನೆಯ ಮೊತ್ತ 1 ಸಾವಿರ ರೂ.ಗಳಿಗೆ ಹೆಚ್ಚಳ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ