logo
ಕನ್ನಡ ಸುದ್ದಿ  /  ಕರ್ನಾಟಕ  /  Dk Suresh Assets: ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್‌ ಆಸ್ತಿ ವಿವರ; 5 ವರ್ಷದಲ್ಲಿ ಏರಿಕೆ ಪ್ರಮಾಣ ಎಷ್ಟು?

DK Suresh Assets: ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್‌ ಆಸ್ತಿ ವಿವರ; 5 ವರ್ಷದಲ್ಲಿ ಏರಿಕೆ ಪ್ರಮಾಣ ಎಷ್ಟು?

Umesha Bhatta P H HT Kannada

Mar 28, 2024 06:44 PM IST

ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ ಜತೆ ಡಿಕೆ ಸುರೇಶ್‌

    • ಕಳೆದ ಚುನಾವಣೆಯಲ್ಲಿ ಕರ್ನಾಟಕದಿಂದ ಗೆದ್ದಿದ್ದ ಏಕೈಕ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಈ ಬಾರಿ ಮತ್ತೆ ಬೆಂಗಳೂರು ಗ್ರಾಮಾಂತರ ಹುರಿಯಾಳು. ಅವರ ಆಸ್ತಿ ಪ್ರಮಾಣ ಎಷ್ಟಿದೆ. ಇಲ್ಲಿದೆ ವಿವರ..
ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ ಜತೆ ಡಿಕೆ ಸುರೇಶ್‌
ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ ಜತೆ ಡಿಕೆ ಸುರೇಶ್‌

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಲ್ಕನೇ ಬಾರಿಗೆ ಸ್ಪರ್ಧೆ ಮಾಡುತ್ತಿರುವ ಸಂಸದ ಡಿ.ಕೆ.ಸುರೇಶ್‌ ಅವರ ಆಸ್ತಿ ಎಷ್ಟಿದೆ. ಇದೇ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಕೆಲಸ ಮಾಡಿರುವ ಸುರೇಶ್‌ ಅವರ ಆಸ್ತಿ ಐದೇ ವರ್ಷದಲ್ಲಿ ಎಷ್ಟು ಏರಿಕೆಯಾಗಿದೆ. ಅವರ ಸಾಲದ ಪ್ರಮಾಣ ಎಷ್ಟು. ಸ್ಥಿರಾಸ್ಥಿ ಹಾಗೂ ಚರಾಸ್ತಿಗಳು ಏನೇನಿವೆ. ಎಷ್ಟು ಮೌಲ್ಯದ್ದು ಎನ್ನುವ ಮಾಹಿತಿ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ರಾಮನಗರದಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಇತರೆ ನಾಯಕರೊಂದಿಗೆ ನಾಮಪತ್ರ ಸಲ್ಲಿಸಿದ ಡಿ.ಕೆ.ಸುರೇಶ್‌ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ಧಾರೆ. ಚುನಾವಣೆ ಆಯೋಗಕ್ಕೆ ಅವರು ಘೋಷಿಸಿರುವ ಆಸ್ತಿ ಕುರಿತು ಅಫಿಡವಿಟ್‌ನಲ್ಲಿ ಮಾಹಿತಿ ಸಲ್ಲಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್‌ ರೇವಣ್ಣ ಕೇಸ್‌; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ; ಕಾನೂನು ಕ್ರಮಕ್ಕೆ ತಕರಾರು ಇಲ್ಲ

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ

ಕರ್ನಾಟಕ ಹವಾಮಾನ ಮೇ 18; ಉತ್ತರ ಕನ್ನಡ, ತುಮಕೂರು, ಬೆಂಗಳೂರು ಸೇರಿ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಉತ್ತರ ಒಳನಾಡಲ್ಲಿ ಹಲವೆಡೆ ಮಳೆ

ಬೆಂಗಳೂರಿನಲ್ಲಿ ಮೇ 18, 19ಕ್ಕೆ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ; ಆರೆಂಜ್ ಅಲರ್ಟ್ ಘೋಷಣೆ -Bengaluru Rain

ಡಿ.ಕೆ.ಸುರೇಶ್‌ ಅವರು ಒಟ್ಟು ತಮ್ಮ ಆಸ್ತಿಯ ಮೌಲ್ಯವನ್ನು 593 ಕೋಟಿ ರೂ. ಎಂದು ತೋರಿಸಿಕೊಂಡಿದ್ದಾರೆ. ಇದರಲ್ಲಿ 486.33 ಕೋಟಿ ರೂ. ಸ್ಥಿರಾಸ್ಥಿಯೇ ಇದೆ. ಇದರಲ್ಲಿ ತಮ್ಮ ಹಿರಿಯರಿಂದ ಬಂದಿರುವ ಜಮೀನುಗಳು, ತೋಟ ಸೇರಿದೆ. ಇದು ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಸುತ್ತಮುತ್ತ ಇದೆ. ಕೆಲವು ಜಮೀನುಗಳು ವಿವಾದದಲ್ಲಿದ್ದು ಅದನ್ನು ಕೂಡ ಸುರೇಶ್‌ ಉಲ್ಲೇಖಿಸಿದ್ದಾರೆ.

ಇದೇ ರೀತಿ ಬೆಂಗಳೂರಿನಲ್ಲಿ ತಾವು ಸಂಪಾದಿಸಿರುವ ಕಟ್ಟಡಗಳು, ಆಸ್ತಿಗಳ ವಿವರವನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ಹಲವು ಕಡೆ ಪ್ರಮುಖ ಕಟ್ಟಡಗಳು ಸುರೇಶ್‌ ಅವರ ಹೆಸರಿನಲ್ಲಿಯೇ ಇವೆ.

ಇನ್ನು ಸುರೇಶ್‌ ಗಳಿಸಿರುವ ಚರಾಸ್ತಿ 106.71 ಕೋಟಿ ರೂ. ಗಳಿದ್ದು, ಇದರಲ್ಲಿ ಒಡವೆಗಳು1260 ಗ್ರಾಂ ಚಿನ್ನಾಭರಣ, 4.86 ಕೆಜಿ ಬೆಳ್ಳಿ ಸೇರಿವೆ.

ಅಫಿಡವಿಟ್​​ ಪ್ರಕಾರ 2019 ರಿಂದ ಕಳೆದ 5 ವರ್ಷಗಳಲ್ಲಿ ಡಿ.ಕೆ. ಸುರೇಶ್ ಅವರ ಆಸ್ತಿಯಲ್ಲಿ ಸುಮಾರು 259.19 ಕೋಟಿ ರೂಪಾಯಿ ಏರಿಕೆ ಆಗಿದೆ. ಡಿ.ಕೆ.ಸುರೇಶ್‌ ಅವರು 2019 ರಲ್ಲಿದ್ದ ಒಟ್ಟು ಆಸ್ತಿ 333.86 ಕೋಟಿ ರೂ. ಘೋಷಣೆ ಮಾಡಿಕೊಂಡಿದ್ದರು. ಅಂದರೆ ಶೇ. 75 ರಷ್ಟು ಪ್ರಮಾಣ ಏರಿಕೆ ಆಗಿದೆ ಎನ್ನುವ ಅಂಶವನ್ನು ಉಲ್ಲೇಖಿಸಿದ್ದಾರೆ.

ಆದರೆ ಡಿಕೆ ಸುರೇಶ್‌ ಅವರ ಸಾಲದ ಪ್ರಮಾಣ ವೂ ಐದು ವರ್ಷದ ಅವಧಿಯಲ್ಲಿ 150.06 ಕೋಟಿ ರೂ.ಗೆ ಏರಿಕೆ ಕಂಡಿದೆ. ಐದು ವರ್ಷದ ಹಿಂದೆ ಅವರ ಸಾಲದ ಪ್ರಮಾಣ 51 ಕೋಟಿ ರೂ. ಇತ್ತು. ಇದೂ ಕೂಡ ಮೂರು ಪಟ್ಟು ಏರಿಕೆಯಾಗಿರುವುದು ವಿಶೇಷ.

ಸುರೇಶ್‌ ಅವರು ಓದಿರುವುದು ಪಿಯುಸಿವರೆಗೆ ಮಾತ್ರ. ಇದನ್ನೂ ಕೂಡ ತಮ್ಮ ಅಫಿಡವಿಟ್‌ ನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ತಮ್ಮ ವಿರುದ್ದ ಪ್ರಕರಣಗಳ ವಿವರಗಳನ್ನೂ ಓದಗಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ