logo
ಕನ್ನಡ ಸುದ್ದಿ  /  ಕರ್ನಾಟಕ  /  Nalin Kumar Kateel: ದಕ್ಷಿಣ ಕನ್ನಡಕ್ಕೆ ನಳಿನ್ ಕಟೀಲ್ ಎಂಪಿ ಅಭ್ಯರ್ಥಿ, ಗೆಲುವಿಗೆ ಶ್ರಮಿಸಲು ಬಿವೈ ವಿಜಯೇಂದ್ರ ಕರೆ ನೀಡಿದ ವಿಡಿಯೋ ವೈರಲ್‌

Nalin Kumar Kateel: ದಕ್ಷಿಣ ಕನ್ನಡಕ್ಕೆ ನಳಿನ್ ಕಟೀಲ್ ಎಂಪಿ ಅಭ್ಯರ್ಥಿ, ಗೆಲುವಿಗೆ ಶ್ರಮಿಸಲು ಬಿವೈ ವಿಜಯೇಂದ್ರ ಕರೆ ನೀಡಿದ ವಿಡಿಯೋ ವೈರಲ್‌

HT Kannada Desk HT Kannada

Nov 22, 2023 07:18 PM IST

ದಕ್ಷಿಣ ಕನ್ನಡಕ್ಕೆ ನಳಿನ್ ಕುಮಾರ್ ಕಟೀಲ್ ಬಿಜೆಪಿಯ ಅಭ್ಯರ್ಥಿ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ಹೇಳಿದ ವಿಡಿಯೋ ತುಣಕು ವೈರಲ್ ಆಗಿದೆ.

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಇಂದು (ನ.22) ಘೋಷಿಸಿದ್ದಾರೆ. ಅವರ ಗೆಲುವಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.

ದಕ್ಷಿಣ ಕನ್ನಡಕ್ಕೆ ನಳಿನ್ ಕುಮಾರ್ ಕಟೀಲ್ ಬಿಜೆಪಿಯ ಅಭ್ಯರ್ಥಿ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ಹೇಳಿದ ವಿಡಿಯೋ ತುಣಕು ವೈರಲ್ ಆಗಿದೆ.
ದಕ್ಷಿಣ ಕನ್ನಡಕ್ಕೆ ನಳಿನ್ ಕುಮಾರ್ ಕಟೀಲ್ ಬಿಜೆಪಿಯ ಅಭ್ಯರ್ಥಿ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ಹೇಳಿದ ವಿಡಿಯೋ ತುಣಕು ವೈರಲ್ ಆಗಿದೆ.

ಮಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಎಂಬುದು ದೃಢವಾಗಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಪಕ್ಷದ ಸಭೆಯಲ್ಲಿ ಈ ವಿಚಾರವನ್ನು ಇಂದು (ನ.22) ಸ್ಪಷ್ಟಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

ಇದರ ವಿಡಿಯೋ ಈಗ ವೈರಲ್ ಆಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷವಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಮೊಳಗಿದ್ದ ಬಂಡಾಯದ ಧ್ವನಿಗೆ ಹೊಡೆತ ಬಿದ್ದಂತಾಗಿದೆ.

ಬಿವೈ ವಿಜಯೇಂದ್ರ ಅವರ ಭಾಷಣದ ವಿಡಿಯೋದಲ್ಲಿ ಏನಿದೆ

ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದು, ಅವರ ಭಾಷಣದ 24 ಸೆಕೆಂಡ್ ಅವಧಿಯ ವಿಡಿಯೋ ತುಣುಕು ವೈರಲ್ ಆಗಿದೆ. ಇದರಲ್ಲಿ ಅವರು ಹೇಳಿರುವುದು ಇಷ್ಟು -

“ಪಕ್ಷದ ಭಾರತೀಯ ಜನತಾ ಪಾರ್ಟಿಯ ಧ್ವಜವನ್ನು ಎತ್ತರಕ್ಕೆ ಹಾರಿಸಿರತಕ್ಕಂತಹ ಕೀರ್ತಿ ನಮ್ಮ ದಕ್ಷಿಣ ಕನ್ನಡದ ಕಾರ್ಯಕರ್ತರಿಗೆ ಸಲ್ಲುತ್ತದೆ. ಕಾರ್ಯಕರ್ತರಲ್ಲಿ ನಾನು ಮನವಿ ಮಾಡತಕ್ಕಂಥದ್ದು ಮುಂದಿನ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ನಮ್ಮ ಪಕ್ಷದ ಅಭ್ಯರ್ಥಿಯನ್ನು ನಳಿನ್ ಕುಮಾರ್ ಕಟೀಲ್‌ಜಿ ಅವರನ್ನು ಗೆಲ್ಲಿಸತಕ್ಕಂತಹ ಕೆಲಸವನ್ನು ನಾವು ನೀವು ಸೇರಿ ಮಾಡಬೇಕಾಗಿದೆ ಇವತ್ತು.”

ಜಾತಿ ಗಣತಿ ವರದಿ ರಾಜಕೀಯ ಉಪಯೋಗಕ್ಕೆ ಬಿಜೆಪಿ ಅವಕಾಶ ನೀಡೋಲ್ಲ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಂಗಳೂರಿಗೆ ಮೊದಲ ಬಾರಿಗೆ ಬಂದ ಬಿ.ವೈ.ವಿಜಯೇಂದ್ರ ಅವರಿಗೆ ಅದ್ದೂರಿಯ ಸ್ವಾಗತ ಬುಧವಾರ ದೊರಕಿತು. ಈ ಸಂದರ್ಭ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಜಾತಿ ಗಣತಿ ವರದಿ ಬಗ್ಗೆ ನಮ್ಮ ನಿಲುವು ಸ್ಪಷ್ಟ, ಅದಕ್ಕೆ ವಿರೋಧವಿಲ್ಲ. ಜಾತಿಗಣತಿಯು ರಾಜಕೀಯಕ್ಕೆ ಉಪಯೋಗ ಮಾಡಬಾರದು. ಇದಕ್ಕೆ ಬಿಜೆಪಿ ಅವಕಾಶ ನೀಡೋದಿಲ್ಲ’ ಎಂದು ಹೇಳಿದರು.

ಅದ್ದೂರಿ ಸ್ವಾಗತ, 250 ಕೆಜಿ ತೂಕದ ಸೇಬಿನ ಹಾರ

ಮಂಗಳೂರಿಗೆ ಆಗಮಿಸಿದ ವಿಜಯೇಂದ್ರಗೆ ಸಾವಿರಾರು ಕಾರ್ಯಕರ್ತರಿಂದ ರಸ್ತೆಯುದ್ದಕ್ಕೂ ಪುಷ್ಪ ವೃಷ್ಟಿ ಮಾಡಲಾಯಿತು. ಬೊಂಬೆಯಾಟ, ಚೆಂಡೆ, ನಾಸೀಕ್ ಬ್ಯಾಂಡ್ ಮೂಲಕ ಮೆರವಣಿಗೆಯ ಗೌಜಿ ಇತ್ತು. 250 ಕೆ.ಜಿ ತೂಕದ ಸೇಬಿನ ಹಾರ ಹಾಕಿ ವಿಜಯೇಂದ್ರಗೆ ಅದ್ದೂರಿ ಸ್ಬಾಗತ ನೀಡಲಾಯಿತು. ಮಂಗಳೂರಿನ ಸಿ.ವಿ.ನಾಯಕ್ ಹಾಲ್ ಬಳಿ ಕ್ರೇನ್ ಮೂಲಕ ವಿಜಯೇಂದ್ರಗೆ ಸೇಬಿನ ಹಾರದ ಸ್ವಾಗತ ನೀಡಿದ್ದು ವಿಶೇಷ. ಈ ಸಂದರ್ಭ ನೂರಾರು ಬಿಜೆಪಿ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಸೇರಿ ಜಿಲ್ಲೆಯ ಬಿಜೆಪಿ ಶಾಸಕರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ತೆರೆದೆ ವಾಹನದಲ್ಲಿ ಅದ್ಧೂರಿ ಮೆರವಣಿಗೆ ಮಾಡಲಾಯಿತು.

ಭಿನ್ನಾಭಿಪ್ರಾಯ ಮರೆತು ಒಂದಾಗಿ ಹೋಗುತ್ತೇವೆ

ಈ ಸಂದರ್ಭ ಮಾತನಾಡಿದ ವಿಜಯೇಂದ್ರ, ಭಿನ್ನಾಭಿಪ್ರಾಯ ಮರೆತು ಒಂದಾಗಿ ಹೋಗುತ್ತೇವೆ, ಬಿಜೆಪಿಯ ಯಾವ ಶಾಸಕರು, ಮುಖಂಡರು ಕಾಂಗ್ರೆಸ್ ಸೇರುತ್ತಿಲ್ಲ ಎಂದರು. ಯಾರೋ ಒಬ್ಬರು ಇಬ್ಬರು ಹೋದ್ರೆ ಪಕ್ಷ ಕ್ಚೀಣಿಸುದಿಲ್ಲ ಎಂದ ಅವರು, ಜಾತಿ ಗಣತಿ ವರದಿ ಬಗ್ಗೆ ನಮ್ಮ ನಿಲುವು ಸ್ಪಷ್ಟ, ವಿರೋಧ ಇಲ್ಲ ಜಾತಿಗಣತಿ‌ ರಾಜಕೀಯಕ್ಕೆ ಉಪಯೋಗ ಮಾಡಬಾರದು.ಇದಕ್ಕೆ ಬಿಜೆಪಿ ಅವಕಾಶ ನೀಡುದಿಲ್ಲ ಎಂದರು.

ಜಮೀರ್ ಅಹ್ಮದ್ ಖಾನ್ ರನ್ನ ರಸ್ತೆಯಲ್ಲಿ ನಾವು ಓಡಾಡೋಕೆ ಬಿಟ್ಟಿದ್ದೆ ಹೆಚ್ಚು

ಜಮೀರ್ ಅಹ್ಮದ್ ಖಾನ್ ಅವರನ್ನು ರಸ್ತೆಯಲ್ಲಿ ನಾವು ಓಡಾಡೋಕೆ ಬಿಟ್ಟಿದ್ದೇ ಹೆಚ್ಚು ಎಂದ ವಿಜಯೇಂದ್ರ, ಸಂವಿಧಾನ ಬದ್ಧ ಪೀಠಕ್ಕೆ ಜಾತಿ ಧರ್ಮದ ಬಣ್ಣವನ್ನ ಹಚ್ಚಿದ್ದಾರೆ ಎಂದು ಆಪಾದಿಸಿದರು. ಮುಂದಿನ ಅಧಿವೇಶನದಲ್ಲಿ ಜಮೀರ್ ಹೇಗೆ ಪಾಲ್ಗೊಳ್ಳುತ್ತಾರೆ ಎಂದು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದ ವಿಜಯೇಂದ್ರ, ಇದು ದಲಿತ ವಿರೋಧಿ ಸರಕಾರ ಅನ್ನೋದನ್ನ ನೀವು ಸಾಬೀತುಪಡಿಸಿದ್ದೀರಿ ಎಂದು ದೂರಿದರು.

ಬಿಜೆಪಿಯಲ್ಲಿ ಭಿನ್ನಮತ ಇಲ್ಲ

ರಾಜ್ಯಾಧ್ಯಕ್ಷರ ನೇಮಕ ಆಗಿಲ್ಲ ಅನ್ನೋ ಚರ್ಚೆ ಇತ್ತು. ಸಾಕಷ್ಟು ಪೈಪೋಟಿ ಇದೆ ಭಿನ್ನಮತ ಇದೆ ಅನ್ನೋ ಚರ್ಚೆ ನಡೀತಾಯಿತ್ತು ಆಡಳಿತ ಪಕ್ಷದ ಕಾಂಗ್ರೆಸ್ ಮುಖಂಡರು ನಮ್ಮನ್ನ ಟೀಕೆ ಮಾಡ್ತಾಯಿದ್ದರು, ರಾಷ್ಟ್ರೀಯ ನಾಯಕರ ತೀರ್ಮಾನದ ಮೇರೆಗೆ ದೊಡ್ಡ ಜವಾಬ್ದಾರಿಯನ್ನ ನನಗೆ ನೀಡಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತ ಇಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

ನಮ್ಮ ಕರಾವಳಿ ಭಾಗದ ಎಲ್ಲಾ ಕಾರ್ಯಕರ್ತರಿಗೆ ನಾನು ಹೇಳೋದು ಏನು ಅಂದ್ರೆ ರಾಜ್ಯಾಧ್ಯಕ್ಷ ಜವಾಬ್ದಾರಿಯುತ ಸ್ಥಾನ ನನ್ನ ಕರ್ತವ್ಯಯಿದೆ ಹಿಂದಿನ ಯಶಸ್ವಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಂತೆ ನನ್ನ ಜವಾಬ್ದಾರಿ ಕರ್ತವ್ಯ ನಿರ್ವಹಿಸುತ್ತೇನೆ

ರಾಜ್ಯದ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಸರಕಾರ ಆಡಳಿತಕ್ಕೆ ಬಂದರೂ ಇಡೀ ದೇಶದಲ್ಲಿ ತನ್ನ ಜನಪ್ರಿಯತೆ ಕಳೆದುಕೊಂಡಿದೆ. ಇದು ರೈತ ವಿರೋಧಿ ಸರಕಾರ, ಬಡವರ ವಿರೋಧಿ ಸರಕಾರ, ದಲಿತ ವಿರೋಧಿ ಸರಕಾರ ಎಂದು ದೂರಿದರು.

ಮತ ಕೊಟ್ಟ ಜನರು ಪಶ್ಚತ್ತಾಪ ಪಡುತ್ತಿದ್ದಾರೆ ಬರದ ಪರಿಸ್ಥಿತಿಯಿದೆ, ಸರಕಾರ ಯಾವ ರೀತಿ ನಡೆದುಕೊಳ್ಳಬೇಕು ಎಂಬುದೇ ಗೊತ್ತಿಲ್ಲ. ಸರಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ನಿನ್ನೆ ದಿನ ಕಾಂಗ್ರೆಸ್ ಪ್ರಮುಖರ ಸಭೆ ನಡೆಯಿತು ಅಧಿವೇಶನ ಹತ್ತಿರ ಬರುತ್ತಿದೆ, ಬೆಳಗಾಂನಲ್ಲಿ ಅಧಿವೇಶನಕ್ಕೆ ತಯಾರಿ ನಡೆಯುತ್ತಿದೆ ರೈತರ ಪರವಾಗಿ ನಿರ್ಣಯ ತೆಗೆದುಕೊಳ್ತಾರೆ ಅನ್ನೋ ಭರವಸೆ ಇತ್ತು.

ಆದರೆ ನಿನ್ನೆ ಅವರು ಲೋಕ ಸಭಾ ಚುನಾವಣೆ ಗೆಲ್ಲೊದಕ್ಕೆ ತಯಾರಿ ಮಾಡಿದ್ರು ಇಂತಹ ಕಷ್ಟಕರ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆದ್ಯತೆ ಏನು ಅಂದ್ರೆ ಬೋರ್ಡ್ ಅಧ್ಯಕ್ಷರನ್ನ ನೇಮಕ ಮಾಡುವಂತದ್ದು ವಿದ್ಯುತ್ ವಿಚಾರವಾಗಿ ಯಡಿಯೂರಪ್ಪ ಮುಖ್ಯಮಂತ್ರಿಇದ್ದಾಗ 7 ತಾಸು ರೈತರಿಗೆ ವಿದ್ಯುತ್ ನೀಡುವಲ್ಲಿ ನಮ್ಮ ಸರಕಾರ ಯಶಸ್ವಿಯಾಗಿದೆ ಆದರೆ ಈಗಿನ ಸರಕಾರದಿಂದ ರೈತರು ಪರದಾಡುತ್ತಿದ್ದಾರೆ.

ಹಿಂಗಾರು ಮುಂಗಾರು ಎಲ್ಲವೂ ವಿಫಲವಾಗಿದೆ ಸರಕಾರ ಮೋಜು ಮಸ್ತಿಯಲ್ಲಿ ತೊಡಗಿದೆ ಎಂದು ದೂರಿದ ಅವರು, ಹೊಸ ಕಾರು ಖರೀದಿ ಬರಗಾಲದಲ್ಲಿ ಇವರಿಗೆ ಆದ್ಯತೆಯಾಗಿದೆ ಎಂದು ಲೇವಡಿ ಮಾಡಿದರು. ತಮ್ಮ ಜವಾಬ್ದಾರಿ ಮರೆತಿರುವ ರಾಜ್ಯ ಸರಕಾರಕ್ಕೆ, ಎಚ್ಚರಿಕೆ ಕೊಡುವ ಕೆಲಸ ಮುಂದಿನ ವಿಧಾನ ಸಭಾ ಅಧಿವೇಶನದಲ್ಲಿ ನೀಡುತ್ತೇವೆ ಎಂದವರು ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ