logo
ಕನ್ನಡ ಸುದ್ದಿ  /  ಕರ್ನಾಟಕ  /  Prajwal Revanna Scandal: ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಸಾಧ್ಯತೆ; ಏನಿದು ಬ್ಲೂ ಕಾರ್ನರ್ ನೋಟಿಸ್

Prajwal Revanna Scandal: ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಸಾಧ್ಯತೆ; ಏನಿದು ಬ್ಲೂ ಕಾರ್ನರ್ ನೋಟಿಸ್

Raghavendra M Y HT Kannada

May 05, 2024 07:00 AM IST

google News

ಮಹಿಳೆಯರ ಮೇಲೆ ಲೈಂಗಿಕರ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ

  • ಅಶ್ಲೀಲ ವಿಡಿಯೊ ಹಾಗೂ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸುವಂತೆ ಸಿಬಿಐಗೆ ಎಸ್ಐಟಿ ಮನವಿ ಮಾಡಿದೆ.

ಮಹಿಳೆಯರ ಮೇಲೆ ಲೈಂಗಿಕರ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ
ಮಹಿಳೆಯರ ಮೇಲೆ ಲೈಂಗಿಕರ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Sex Scandal Case) ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬ್ಲೂ ಕಾರ್ನರ್ ನೋಟಿಸ್ (Blue Corner Notice) ಹೊರಡಿಸುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ನೀಡುವಂತೆ ವಿಶೇಷ ತನಿಖಾ (SIT) ತಂಡ ಸಿಬಿಐಗೆ ಮನವಿ ಮಾಡಿದೆ. ಅದು ಜಾರಿಯಾದ ನಂತರ ಪ್ರಜ್ವಲ್ ಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿ ಪಡೆಯುವ ಭರವಸೆಯನ್ನು ಎಸ್ಐಟಿ ಹೊಂದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ? ಬ್ಲೂ ಕಾರ್ನರ್ ನೋಟಿಸ್ ಎಂದರೇನು?

ಭಾರತದಲ್ಲಿ ಇಂಟರ್ ಪೋಲ್ ವಿಷಯಗಳಿಗೆ ಸಿಬಿಐ ನೋಡಲ್ ಸಂಸ್ಥೆಯಾಗಿದೆ. ಕೆಂಪು, ಹಳದಿ, ನೀಲಿ, ಕಪ್ಪು, ಹಸಿರು, ಕಿತ್ತಳೆ ಮತ್ತು ನೇರಳೆ ಎಂಬ ಏಳು ರೀತಿಯ ನೋಟಿಸ್ ಗಳನ್ನು ಇಂಟರ್ ಪೋಲ್ ಬಳಸುತ್ತದೆ. ವಾಂಟೆಡ್ ವ್ಯಕ್ತಿಗಳು ಅಥವಾ ಅಪರಾಧಗಳ ಬಗ್ಗೆ ಜಾಗತಿಕವಾಗಿ ಮಾಹಿತಿಯನ್ನು ಹಂಚಿಕೊಳ್ಳಲು ಬ್ಲೂ ಕಾರ್ನರ್ ನೋಟಿಸ್ ಅನ್ನು ಬಳಸಲಾಗುತ್ತದೆ. ಕಾನೂನು ಕ್ರಮ ಜರುಗಿಸಲು ಅಥವಾ ಶಿಕ್ಷೆ ನೀಡಲು ದೇಶಭ್ರಷ್ಟರಿಗೆ ರೆಡ್ ನೋಟಿಸ್ ನೀಡಲಾಗುತ್ತದೆ. ಹಳದಿ ನೋಟಿಸ್ ಎಂಬುದು ಕಾಣೆಯಾದ ವ್ಯಕ್ತಿಗೆ ಜಾಗತಿಕ ಪೊಲೀಸ್ ಎಚ್ಚರಿಕೆಯಾಗಿದೆ.

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಕರ್ನಾಟಕ ಸರ್ಕಾರ ಎರಡು ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ. ಪ್ರಜ್ವಲ್ ಮಹಿಳೆಯರ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿ, ಚಿತ್ರೀಕರಿಸಿದ ಹಲವಾರು ವಿಡಿಯೊಗಳು ವೈರಲ್ ಆಗಿವೆ. ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಶಾಸಕ ಎಚ್.ಡಿ.ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಈ ಸಂಬಂಧ ರೇವಣ್ಣ ಕುಟುಂಬದ ಮಾಜಿ ಮನೆಕೆಲಸದಾಳು ದೂರು ದಾಖಲಿಸಿದ್ದಾರೆ. ಕರ್ನಾಟಕ ಸರ್ಕಾರವು ಪ್ರಜ್ವಲ್ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದರೆ, 20 ವರ್ಷದ ಯುವಕನೊಬ್ಬ ತನ್ನ ತಾಯಿಯನ್ನು ಎಚ್.ಡಿ.ರೇವಣ್ಣ ಅವರ ಸಹಾಯಕ ಅಪಹರಿಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ ನಂತರ ರೇವಣ್ಣ ವಿರುದ್ಧ ಅಪಹರಣದ ಆರೋಪ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ.

ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸುವ ಮೊದಲೇ ಪ್ರಜ್ವಲ್ ಭಾರತವನ್ನು ತೊರೆದಿದ್ದರು. ಏಪ್ರಿಲ್ 26 ರಂದು ತಮ್ಮ ಕ್ಷೇತ್ರದಲ್ಲಿ ಮತದಾನ ನಡೆದ ನಂತರ ಜರ್ಮನಿಗೆ ಹೋಗಿದ್ದಾರೆ. ಜರ್ಮನಿಯಿಂದ ದುಬೈಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಪ್ರಜ್ವಲ್ ಅವರ ಜರ್ಮನಿ ಭೇಟಿಗೆ ಯಾವುದೇ ರಾಜಕೀಯ ಅನುಮತಿಯನ್ನು ಕೋರಲಾಗಿಲ್ಲ. ಅವರು ವೀಸಾ ಅಗತ್ಯವಿಲ್ಲದ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಅಲ್ಲಿಗೆ ಹೋಗಿದ್ದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಪ್ರಜ್ವಲ್ ಅವರ ರಾಜತಾಂತ್ರಿಕ ವೀಸಾ ರದ್ದುಗೊಳಿಸುವಂತೆ ಕೋರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಅಶ್ಲೀಲ ವಿಡಿಯೊದಲ್ಲಿ ಇರುವವರು ಎನ್ನಲಾದ ಮಹಿಳೆಯನ್ನು ಅಪಹರಣ ಮಾಡಿಸಿದ ಆರೋಪದ ಸಂಬಂಧ ಎಚ್‌ಡಿ ರೇವಣ್ಣ (HD Revanna Arrest) ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಮಧ್ಯಂತರ ಜಾಮೀನು ಕೋರಿ ರೇವಣ್ಣ ಜನಪ್ರತಿನಿಧಿಗಳ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ್ದ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಕೂಡಲೇ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಮನೆಯಲ್ಲಿದ್ದ ರೇವಣ್ಣ ಅವರು ವಶಕ್ಕೆ ಪಡೆದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ