logo
ಕನ್ನಡ ಸುದ್ದಿ  /  ಕರ್ನಾಟಕ  /  Protests At Belagavi: ಪ್ರತಿಭಟನೆಗಳ ಕಾವಿನಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ; ಪ್ರತಿಭಟನೆಯ ಟೆಂಟ್‌ಗಳೆಷ್ಟಿವೆ ಅಲ್ಲಿ?

Protests at Belagavi: ಪ್ರತಿಭಟನೆಗಳ ಕಾವಿನಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ; ಪ್ರತಿಭಟನೆಯ ಟೆಂಟ್‌ಗಳೆಷ್ಟಿವೆ ಅಲ್ಲಿ?

HT Kannada Desk HT Kannada

Dec 26, 2022 03:43 PM IST

ಬೆಳಗಾವಿಯ ಸುವರ್ಣ ಸೌಧ (ಸಾಂದರ್ಭಿಕ ಚಿತ್ರ)

  • Protests at Belagavi: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಪ್ರತಿಭಟನೆಗಳ ಕಾವು ತಟ್ಟಿದೆ. ಸರ್ಕಾರದ ಮೇಲೆ ಅನೇಕ ಒತ್ತಡಗಳು ಸೃಷ್ಟಿಯಾಗಿವೆ. ಅಧಿವೇಶನದ ಸಂದರ್ಭದಲ್ಲಿ ಈ ಪರಿ ಪ್ರತಿಭಟನೆ ದಾಖಲಾಗಿರುವುದು ಗಮನಸೆಳೆದಿದೆ.

ಬೆಳಗಾವಿಯ ಸುವರ್ಣ ಸೌಧ (ಸಾಂದರ್ಭಿಕ ಚಿತ್ರ)
ಬೆಳಗಾವಿಯ ಸುವರ್ಣ ಸೌಧ (ಸಾಂದರ್ಭಿಕ ಚಿತ್ರ) (Twitter)

ಬೆಳಗಾವಿ: ವಿಧಾನಮಂಡಲದ ಚಳಿಗಾಲದ ಅಧಿವೇಶನ ಈ ಸಲ ಬೆಳಗಾವಿಯಲ್ಲಿ ನಡೆಯತ್ತಿದ್ದು, ಪ್ರತಿಭಟನೆಗಳ ಬಿಸಿ ಅಧಿವೇಶನಕ್ಕೂ, ಸರ್ಕಾರಕ್ಕೂ ತಟ್ಟಿದೆ.

ಟ್ರೆಂಡಿಂಗ್​ ಸುದ್ದಿ

ಮಂಗಳೂರು ವಿಮಾನ ನಿಲ್ಧಾಣಕ್ಕೆ ಬಂದು ಗೊಂದಲಕ್ಕೆ ಒಳಗಾದ ಮಹಿಳೆ, ನೆರವಾದ ಭದ್ರತಾ ಸಿಬ್ಬಂದಿ, ನಾಪತ್ತೆ ಪ್ರಕರಣ ಸುಖಾಂತ್ಯ

ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರಲ್ಲಿ ಹಲಸು, ಮಾವು ಸೇರಿ ವಿವಿಧ ಹಣ್ಣುಗಳ ಮೇಳ, ದಿನಾಂಕ ಮತ್ತು ಇತರೆ ವಿವರ

ಬೆಂಗಳೂರು: ಕೊನೆಗೂ ತೆರಿಗೆ ಕಟ್ಟಲು ಒಪ್ಪಿಕೊಂಡ ಮಂತ್ರಿ ಮಾಲ್; ಬೀಗ ತೆಗೆಯುವಂತೆ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು: ಆತ್ಮಹತ್ಯೆಯ ನಾಟಕವಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಜಿಮ್ ತರಬೇತುದಾರ; ಮನೆಯಲ್ಲೇ ಬಿಬಿಎ ವಿದ್ಯಾರ್ಥಿನಿ ಶಂಕಾಸ್ಪದ ಸಾವು

ಅಧಿವೇಶನ ಶುರುವಾಗಿ ಒಂದು ವಾರ ಕಳೆದಿದೆ. ಸುವರ್ಣ ಸೌಧದ ಸಮೀಪ ನಿತ್ಯವೂ ಪ್ರತಿಭಟನೆಗಳು ನಡೆಯತ್ತಿವೆ. 60ಕ್ಕೂ ಹೆಚ್ಚು ಪ್ರತಿಭಟನೆಯ ಟೆಂಟ್‌ಗಳು ಭರ್ತಿಯಾಗಿದ್ದು, ಗಮನಸೆಳೆದಿವೆ.

ಸುವರ್ಣಸೌಧದ ಸಮೀಪದ ಬಸ್ತವಾಡ ಹಾಗೂ ಕೊಂಡಸಕಪ್ಪದ ಪ್ರತಿಭಟನಾ ಟೆಂಟ್‍ನಲ್ಲಿ ವಿವಿಧ ಸಂಘಟನೆಗಳು ಇಂದು ಕೂಡ ಧರಣಿ ನಡೆಸಿವೆ. ಕೆಲವು ಸಂಘಟನೆಗಳ ಕಾರ್ಯಕರ್ತರು ತಮ್ಮ ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಿನ್ನೆ 62 ಟೆಂಟ್‌ಗಳು ಭರ್ತಿಯಾಗಿದ್ದವು. ಅಲ್ಲದೆ 9 ಸಂಘಟನೆಗಳವರು ಬಂದು ಸರ್ಕಾರಕ್ಕೆ ಮನವಿ ಸಲ್ಲಿಸಿ ತೆರಳಿದ್ದಾರೆ.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದಾಗೆಲ್ಲ ಪ್ರತಿಭಟನೆ, ಮನವಿ ಸಲ್ಲಿಕೆ ಒಂದು ವಾಡಿಕೆಯಾಗಿಬಿಟ್ಟಿದೆ. ಕಳೆದ 16 ವರ್ಷಗಳಿಂದ ಇದು ನಡೆಯುತ್ತಿದ್ದು, ಈ ವರ್ಷ ಸಂಖ್ಯೆ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಮಾಧ್ಯಮ ವರದಿಗಳು ಹೇಳಿವೆ.

ಬಹು ಪ್ರತಿಭಟನೆ ಮತ್ತು ಬೇಡಿಕೆಗಳು

ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳಲ್ಲಿ ಪಂಚಮಸಾಲಿಗಳಿಂದ ಮಾದಿಗ ಸಮಾಜ ಮತ್ತು ಮಡಿವಾಳ ಸಮಾಜದವರೆಗೆ ಉತ್ತಮ ಮೀಸಲಾತಿ ಸೌಲಭ್ಯಗಳಿಗೆ ಆಗ್ರಹಿಸುತ್ತಿರುವ ವಿವಿಧ ಜಾತಿ ಅಥವಾ ಸಮುದಾಯ ಗುಂಪುಗಳು ಸೇರಿವೆ. ನಿರ್ದಿಷ್ಟ ಕಾರ್ಖಾನೆಗಳಿಗೆ ಸಂಪರ್ಕ ಹೊಂದಿದವರಿಂದ ಹಿಡಿದು ವಿವಿಧ ಸರ್ಕಾರಿ ಏಜೆನ್ಸಿಗಳ ಗುತ್ತಿಗೆ ನೌಕರರು, ಸಿವಿಲ್ ಗುತ್ತಿಗೆದಾರರು, ದಾದಿಯರು ಮತ್ತು ಅಂಗನವಾಡಿ ನೌಕರರವರೆಗೆ ಕಾರ್ಮಿಕ ಸಂಘಗಳಿವೆ.

ಸಾರ್ವಜನಿಕ ಆಸ್ತಿ ಕಬಳಿಕೆ ವಿರುದ್ಧ 90 ವರ್ಷದ ರೈತನ ಪ್ರತಿಭಟನೆ!

ಕಣಕಿ ಗ್ರಾಮದಲ್ಲಿ ಸಾರ್ವಜನಿಕ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ರಾಯನಾಪುರ ಗ್ರಾಮದ 90 ವರ್ಷದ ರೈತ ಭೀಮಪ್ಪ ಪ್ರತಿಭಟನೆ ಮಾಡುತ್ತಿದ್ದಾರೆ.

ಪ್ರವಾಹದಲ್ಲಿ ಬೆಳೆ ನಷ್ಟ ಪರಿಹಾರ, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ, ಕಬ್ಬು ರೈತರಿಗೆ ಬಾಕಿ ಪಾವತಿ, ಕೊಪ್ಪೆ, ಮೆಣಸಿನಕಾಯಿ ಮತ್ತು ರಾಗಿಗೆ ಮಾರುಕಟ್ಟೆ ಮಧ್ಯಸ್ಥಿಕೆ, ಮುದ್ದೆ ಚರ್ಮ ರೋಗದಿಂದ ಜಾನುವಾರುಗಳು ಸಾವನ್ನಪ್ಪಿದ ರೈತರಿಗೆ ಪರಿಹಾರ ಪಾವತಿ, ಜೋಳ ಖರೀದಿ, ನೀರಾವರಿ ಯೋಜನೆ ಪೂರ್ಣಗೊಳಿಸಬೇಕು, ಭೂಸ್ವಾಧೀನಕ್ಕೆ ವಿರೋಧ ಇತ್ಯಾದಿ ಅವರ ಬೇಡಿಕೆ ಮುಂದಿಟ್ಟುಕೊಂಡು ವಿವಿಧ ರೈತ ಸಂಘಟನೆಗಳೂ ಪ್ರತಿಭಟನೆ ನಡೆಸುತ್ತಿವೆ.

ದೇವದಾಸಿಯರ ಪುನರ್ವಸತಿಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಸೀತವ್ವ ಜೋಡಟ್ಟಿಯವರಂತೆ ಕೆಲವರಿಂದ ವಿಶಿಷ್ಟ ಪ್ರತಿಭಟನೆ ವ್ಯಕ್ತವಾಗಿದೆ. ಮಾಜಿ ದೇವದಾಸಿಯರ ಉತ್ತಮ ಪುನರ್ವಸತಿಗೆ ಒತ್ತಾಯಿಸಿ ಅವರು ದೇವದಾಸಿ ಕಲ್ಯಾಣ ಸಂಘದ ಸದಸ್ಯರೊಂದಿಗೆ ಕುಳಿತಿದ್ದಾರೆ.

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಆಗ್ರಹಿಸಿ ಧಾರವಾಡ ಹಿರಿಯ ನಾಗರಿಕರ ಒಕ್ಕೂಟದ ವತಿಯಿಂದ ಹೋರಾಟ ನಡೆದಿದೆ. ಹೊರಗುತ್ತಿಗೆ ಕಾರ್ಮಿಕರ ಸೇವೆ ಮುಂದುವರಿಸಿ, ಸೇವಾ ಭದ್ರತೆ, ಕನಿಷ್ಠ ವೇತನ ನೀಡಲು ಆಗ್ರಹಿಸಿ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಕಾಲೇಜುಗಳ ಕಾರ್ಮಿಕ ಸಂಘದಿಂದ ಪ್ರತಿಭಟನೆ ವ್ಯಕ್ತವಾಗಿದೆ.

ಪ್ರಥಮ ಚಿಕಿತ್ಸಾ ಪರಿಣಿತರ ಮೇಲೆ ಮಾಧ್ಯಮಗಳ ಕಿರುಕುಳ ತಪ್ಪಿಸಲು ಒತ್ತಾಯಿಸಿ ರಾಜ್ಯ ವೈದ್ಯಕೀಯ ಪ್ರಥಮ ಚಿಕಿತ್ಸಾ ಪರಿಣಿತರ ಸಂಘದ ಧರಣಿ, ವಸತಿಶಾಲೆ, ವಸತಿನಿಲಯಗಳಲ್ಲಿ ನೌಕರರ ಸೇವಾಭದ್ರತೆ ನೀಡಲು ಆಗ್ರಹಿಸಿ ಗುತ್ತಿಗೆ ನೌಕರರ ಸಂಘದಿಂದ ಪ್ರತಿಭಟನೆ ಹೀಗೆ ಹಲವು ಪ್ರತಿಭಟನೆಗಳಿಗೆ ಅಲ್ಲಿ ವೇದಿಕೆ ಸಿಕ್ಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ