logo
ಕನ್ನಡ ಸುದ್ದಿ  /  ಕರ್ನಾಟಕ  /  Raichur News: ಮುಸ್ಲಿಂ ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರಗಳು ಎಂದು ಬಿಂಬಿಸುವ ಪೋಸ್ಟ್​; ರಾಯಚೂರು ಆರೆಸ್ಸೆಸ್​ ಕಾರ್ಯಕರ್ತ ಅರೆಸ್ಟ್​

Raichur News: ಮುಸ್ಲಿಂ ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರಗಳು ಎಂದು ಬಿಂಬಿಸುವ ಪೋಸ್ಟ್​; ರಾಯಚೂರು ಆರೆಸ್ಸೆಸ್​ ಕಾರ್ಯಕರ್ತ ಅರೆಸ್ಟ್​

Meghana B HT Kannada

Jun 02, 2023 02:47 PM IST

ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ತಂಬಾಕ್ (twitter/@ItsKhan_Saba)

    • RSS worker Raju Tambak: ರಾಜು ತಂಬಾಕ್​ನ ಪೋಸ್ಟ್ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಆರೋಪಿಸಿದ ಪ್ರತಿಭಟನಾಕಾರರು ಲಿಂಗಸೂಗೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆರೋಪಿ ಬಂಧನಕ್ಕೆ 24 ಗಂಟೆಗಳ ಗಡುವು ನೀಡಿದ್ದರು. 
ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ತಂಬಾಕ್ (twitter/@ItsKhan_Saba)
ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ತಂಬಾಕ್ (twitter/@ItsKhan_Saba)

ರಾಯಚೂರು: ಮುಸ್ಲಿಂ ಮಹಿಳೆಯರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಆರೋಪದ ಮೇಲೆ ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರಿನಲ್ಲಿ ಆರೆಸ್ಸೆಸ್​ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ (RSS Worker Arrest) .

ಟ್ರೆಂಡಿಂಗ್​ ಸುದ್ದಿ

ದೊಡ್ಡಬಳ್ಳಾಪುರ: ಹೇಮಂತಗೌಡ ಹತ್ಯೆ ಪ್ರಕರಣದ 2ನೇ ಆರೋಪಿ ಬಂಧನ, ಪೊಲೀಸರ ಮೇಲೆ ಹಲ್ಲೆಗೆತ್ನಿಸಿದ್ದ ಕಾರಣ ಕಾಲಿಗೆ ಗುಂಡೇಟು

ಮಂಗಳೂರು ವಿಮಾನ ನಿಲ್ಧಾಣಕ್ಕೆ ಬಂದು ಗೊಂದಲಕ್ಕೆ ಒಳಗಾದ ಮಹಿಳೆ, ನೆರವಾದ ಭದ್ರತಾ ಸಿಬ್ಬಂದಿ, ನಾಪತ್ತೆ ಪ್ರಕರಣ ಸುಖಾಂತ್ಯ

ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರಲ್ಲಿ ಹಲಸು, ಮಾವು ಸೇರಿ ವಿವಿಧ ಹಣ್ಣುಗಳ ಮೇಳ, ದಿನಾಂಕ ಮತ್ತು ಇತರೆ ವಿವರ

ಬೆಂಗಳೂರು: ಕೊನೆಗೂ ತೆರಿಗೆ ಕಟ್ಟಲು ಒಪ್ಪಿಕೊಂಡ ಮಂತ್ರಿ ಮಾಲ್; ಬೀಗ ತೆಗೆಯುವಂತೆ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

ಬಂಧಿತ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ರಾಜು ತಂಬಾಕ್ (Raju Tambak) ಎಂದು ಗುರುತಿಸಲಾಗಿದೆ. ಈತನ ಸೋಷಿಯಲ್​ ಮೀಡಿಯಾ ಪೋಸ್ಟ್ ವೈರಲ್ ಆದ ನಂತರ ಮುಸ್ಲಿಂ ಸಮುದಾಯದವರು ಗುರುವಾರ (ಜೂನ್​ 1) ಪ್ರತಿಭಟನೆ ನಡೆಸಿ ರಾಜು ತಂಬಾಕ್​ನನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಲಿಂಗಸುಗೂರು ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿತ್ತು.

ರಾಜು ತಂಬಾಕ್​ನ ಪೋಸ್ಟ್ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಆರೋಪಿಸಿದ ಪ್ರತಿಭಟನಾಕಾರರು ಲಿಂಗಸೂಗೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆರೋಪಿ ಬಂಧನಕ್ಕೆ 24 ಗಂಟೆಗಳ ಗಡುವು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲಿಂಗಸೂಗೂರು ಪೊಲೀಸರು ಇಂದು (ಜೂನ್​ 2, ಶುಕ್ರವಾರ) ಆರೋಪಿ ರಾಜು ತಂಬಾಕ್​ನನ್ನು ಅರೆಸ್ಟ್ ಮಾಡಿದ್ದಾರೆ.

ರಾಜು ತಂಬಾಕ್ ಪೋಸ್ಟ್​ ಏನು?

ಇಸ್ಲಾಮಿಕ್ ಬೇಬಿ ಫ್ಯಾಕ್ಟರಿ ಎಂಬ ಹೆಸರಲ್ಲಿ ರಾಜು ತಂಬಾಕ್ ಶೇರ್​ ಮಾಡಿದ್ದ ಪೋಸ್ಟ್​ ನಲ್ಲಿ ಬುರ್ಕಾ ಧರಿಸಿದ ಮೂವರು ಮುಸ್ಲಿಂ ಮಹಿಳೆಯರು ಮಕ್ಕಳನ್ನು ಹೆರುವ ಮಷಿನ್ ರೀತಿ ಬಿಂಬಿಸಲಾಗಿತ್ತು. ಒಬ್ಬ ಪುರುಷ ಆ ಯಂತ್ರವನ್ನು ಆಪರೇಟ್‌ ಮಾಡುತ್ತಿರುವಂತೆ ಪೋಸ್ಟ್​ನಲ್ಲಿ ಇತ್ತು.

ಘಟನೆಯಿಂದ ಲಿಂಗಸೂಗೂರು ಪಟ್ಟಣದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ತನಿಖೆ ಮುಂದುವರೆದಿದೆ.

ಕೆಲವು ಧರ್ಮಗಳು ಭಾರತದ ಹೊರಗಿನವು. ಅವುಗಳೊಂದಿಗೆ ನಾವು ಯುದ್ದ ಮಾಡಿದ್ದೇವೆ. ದೇಶದೊಳಗೆ ಆಗಿರುವ ಜಾತಿಯ ತಾರತಮ್ಯದ ನೋವನ್ನೂ ಅನುಭವಿಸಿದ್ದೇವೆ. ಹಿಂದೆ ನಾವು ಮಾಡಿದ ಇಂತಹ ತಪ್ಪುಗಳಿಗೆ ಈಗಲೂ ಪರಿತಪಿಸುತ್ತಿದ್ದೇವೆ ಎನ್ನುವುದು ಮೋಹನ್‌ ಭಾಗವತ್‌ ಬೇಸರದ ನುಡಿ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ