logo
ಕನ್ನಡ ಸುದ್ದಿ  /  Karnataka  /  Special Court For Each District: Prosecution Of Pocso And Sexual Offenses Is Preferred Said Home Minister In Karnataka Legislative Council

Special court for each district: ಪ್ರತಿ ಜಿಲ್ಲೆಗೂ ವಿಶೇಷ ಕೋರ್ಟ್; ಪೋಕ್ಸೋ ಮತ್ತು ಲೈಂಗಿಕ ಅಪರಾಧಗಳ ವಿಚಾರಣೆಯೇ ಆದ್ಯತೆ

HT Kannada Desk HT Kannada

Dec 26, 2022 04:17 PM IST

ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ

  • Special court for each district: ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ನಡೆಸಲು ಈಗಾಗಲೇ ಪ್ರತಿ ಜಿಲ್ಲೆಗೆ ಒಂದು ವಿಶೇಷ ನ್ಯಾಯಾಲಯ ಸ್ಥಾಪನೆ ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಪರಿಷತ್‌ಗೆ ತಿಳಿಸಿದ್ದಾರೆ. 

ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ
ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ (HT_PRINT)

ಬೆಳಗಾವಿ: ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ವಿಚಾರಣೆ ನಡೆಸಲು ಈಗಾಗಲೇ ಪ್ರತಿ ಜಿಲ್ಲೆಗೆ ಒಂದು ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bangalore News: ಶೂನ್ಯ ಮಳೆಯೊಂದಿಗೆ ಏಪ್ರಿಲ್ ತಿಂಗಳು ಮುಗಿಸಿದ ಬೆಂಗಳೂರು; 1983ರ ಬಳಿಕ ಇದೇ ಮೊದಲು; ವರದಿ

Tumkur News: ತುಮಕೂರಲ್ಲಿ ಕಾಡು ಪ್ರಾಣಿಗಳಿಗೆ ನೀರು ಹಂಚುವ ಜಲದಾನಿಗಳು, ಅರಣ್ಯ ಇಲಾಖೆ ಸಾಥ್

ಕರ್ನಾಟಕ ಹವಾಮಾನ ಮೇ 2: ಬೆಂಗಳೂರು ಸೇರಿ ರಾಜ್ಯದಲ್ಲಿ ಇನ್ನೂ 3 ದಿನ ರಣ ಬಿಸಿಲು; ಇಂದು 25 ಜಿಲ್ಲೆಗಳಿಗೆ ಶಾಖದ ಅಲೆಯ ಎಚ್ಚರಿಕೆ

Kalburgi News: ಬಿಜೆಪಿ ಮೀಸಲಾತಿ ವಿರೋಧಿ, ಸುಳ್ಳು ಹೇಳುವ ನರೇಂದ್ರ ಮೋದಿಯವರ ನಿಜಬಣ್ಣ ಬಯಲು: ಸಿಎಂ ಸಿದ್ದರಾಮಯ್ಯ ಕಟುಟೀಕೆ

ಬೆಳಗಾವಿಯ ಸುವರ್ಣ ಸೌಧದಲ್ಲಿ ಅವರು, ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಉತ್ತರಿಸುತ್ತ ಈ ವಿಚಾರ ತಿಳಿಸಿದರು. ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಪೊಕ್ಸೋ ಕಾಯ್ದೆಯನ್ನು ಅನುಷ್ಠಾನಗೊಳಿಸಲಾಗಿದೆ. ಈ ಪ್ರಕರಣಗಳಲ್ಲಿ ನೊಂದವರ ಪರವಾಗಿ ನ್ಯಾಯಾಲಯಗಳಲ್ಲಿ ಸಮರ್ಥವಾಗಿ ವಾದ ಮಂಡಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

ಈಗಾಗಲೇ ಮಹಿಳಾ ಸಹಾಯವಾಣಿ, ಮಕ್ಕಳ ಸಹಾಯವಾಣಿ, ಸ್ಪಂದನಾ ಸಹಾಯವಾಣಿಗಳು ಈ ವಿಚಾರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಪೊಲೀಸರ ಗಸ್ತು ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಎಫ್‌ಐಆರ್ ದಾಖಲಿಸಿದ ಬಳಿಕ ವಿಳಂಬ ಮಾಡದೇ ಆರೋಪ ಪಟ್ಟಿ ಕೂಡ ಸಲ್ಲಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

ಪೋಕ್ಸೋ ಕಾಯ್ದೆ ಪ್ರಕಾರ ದಾಖಲಾದ ಪ್ರಕರಣಗಳಲ್ಲಿ ಜಾಮೀನು ಸಿಗುವುದಿಲ್ಲ. ಬಿಡುಗಡೆಯಾಗುವುದು ಕಡಿಮೆ. ಶಿಕ್ಷೆ ಪ್ರಮಾಣ ಹೆಚ್ಚು. ಪರಿಚಿತರಿಂದ ಮಕ್ಕಳ ಮೇಲೆ ದೌರ್ಜನ್ಯ ನಡೆಯುವುದು ಹೆಚ್ಚಿದ್ದು, ಪೊಲೀಸ್ ಇಲಾಖೆ ಸಾಮಾಜಿಕ ಜಾಗೃತಿ ಮೂಡಿಸಲು ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಕೆಎಸ್‌ಆರ್‌ಪಿ ಕರಾಟೆ ಕಲಿತಾ ತರಗತಿಯನ್ನು ನಡೆಸುತ್ತಿದೆ. ಚೆನ್ನಮ್ಮ ಪಡೆ, ಓಬವ್ವ ಪಡೆ, ಶರಾವತಿ ಪಡೆ ಹೆಸರಲ್ಲಿ ಕರಾಟೆ ತರಬೇತಿಯನ್ನು ನೀಡಲಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ 2019-20ರಲ್ಲಿ 700 ಲಕ್ಷ ರೂ. ಮತ್ತು 2020-21ರಲ್ಲಿ 100 ಲಕ್ಷ ರೂಪಾಯಿ ಅನುದಾನವನ್ನು ನಿರ್ಭಯ ಯೋಜನೆ ಅಡಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆ ಅನುದಾನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎರಡು ಹಂತದಲ್ಲಿ 800 ಪೊಲೀಸ್ ಠಾಣೆಗಳಲ್ಲಿ ಹೆಲ್ಫ್ ಡೆಸ್ಕ್ ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಸದರಿ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 250 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಗಮನಿಸಬಹುದಾದ ಸುದ್ದಿಗಳು


Protests in Belagavi: ಪ್ರತಿಭಟನೆಗಳ ಕಾವಿನಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ; ಪ್ರತಿಭಟನೆಯ ಟೆಂಟ್‌ಗಳೆಷ್ಟಿವೆ ಅಲ್ಲಿ?

Protests at Belagavi: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಪ್ರತಿಭಟನೆಗಳ ಕಾವು ತಟ್ಟಿದೆ. ಸರ್ಕಾರದ ಮೇಲೆ ಅನೇಕ ಒತ್ತಡಗಳು ಸೃಷ್ಟಿಯಾಗಿವೆ. ಅಧಿವೇಶನದ ಸಂದರ್ಭದಲ್ಲಿ ಈ ಪರಿ ಪ್ರತಿಭಟನೆ ದಾಖಲಾಗಿರುವುದು ಗಮನಸೆಳೆದಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

Karnataka cabinet expansion: ದೆಹಲಿಗೆ ಹೊರಟ್ರು ಸಿಎಂ ಬೊಮ್ಮಾಯಿ; ಸಚಿವ ಸಂಪುಟ ವಿಸ್ತರಣೆ, ಚುನಾವಣಾ ಸಿದ್ಧತೆ ವಿಚಾರ ಮುನ್ನೆಲೆಗೆ

Karnataka cabinet expansion: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ದೆಹಲಿಗೆ ಹೊರಟಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಆಕಾಂಕ್ಷಿಗಳ ಆಸೆ ಗರಿಗೆದರಿದೆ. ಚುನಾವಣಾ ಸಿದ್ಧತೆಯ ವಿಚಾರವನ್ನೂ ವರಿಷ್ಠರ ಜತೆಗೆ ಚರ್ಚಿಸಲಿದ್ದಾರಂತೆ ಸಿಎಂ ಬೊಮ್ಮಾಯಿ!. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

World Economic League Table 2022: 15 ವರ್ಷದಲ್ಲಿ ವರ್ಲ್ಡ್‌ ಎಕನಾಮಿಕ್‌ ಲೀಗ್‌ನಲ್ಲಿ ಭಾರತ ನಂ.3; ಕ್ಷಿಪ್ರ ಬೆಳವಣಿಗೆಯಲ್ಲಿದೆ ನಮ್ಮ ದೇಶ

India will be No 3 in WELT 2037: ವರ್ಲ್ಡ್‌ ಎಕನಾಮಿಕ್‌ ಲೀಗ್‌ ಟೇಬಲ್‌ನಲ್ಲಿ ಭಾರತ ಮೂರನೇ ಸ್ಥಾನಕ್ಕೇರಲಿದೆ. ಬೆಳವಣಿಗೆಯ ದರ ಇದೇ ಇದ್ದರೆ ಇನ್ನು 15 ವರ್ಷದಲ್ಲಿ ಇದು ಈಡೇರಲಿದೆ ಎಂದು ವರದಿ ಹೇಳಿದೆ. ಈ ವರದಿಯ ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು