logo
ಕನ್ನಡ ಸುದ್ದಿ  /  ಕರ್ನಾಟಕ  /  Stray Dogs Attack In Basavakalyan: ಬಸವಕಲ್ಯಾಣದಲ್ಲಿ ಬೀದಿ ನಾಯಿ ಕಾಟ; ಗಂಭೀರ ಗಾಯಕ್ಕೀಡಾಗಿರುವ 2 ವರ್ಷದ ಬಾಲೆ

Stray dogs attack in Basavakalyan: ಬಸವಕಲ್ಯಾಣದಲ್ಲಿ ಬೀದಿ ನಾಯಿ ಕಾಟ; ಗಂಭೀರ ಗಾಯಕ್ಕೀಡಾಗಿರುವ 2 ವರ್ಷದ ಬಾಲೆ

HT Kannada Desk HT Kannada

Nov 25, 2022 07:11 AM IST

ಬಸವಕಲ್ಯಾಣ ನಗರದ ಗಾಡವಾನ್‌ ಗಲ್ಲಿಯಲ್ಲಿ ಎರಡು ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ದಾಳಿಗೆ ಒಳಗಾದ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಸ್ಥಳೀಯರು ನಗರಸಭೆ ಕಮಿಷನರ್‌ಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದರು. ಒಳಚಿತ್ರದಲ್ಲಿರುವುದು ಗಾಯಗೊಂಡ ಬಾಲಕಿ.

  • Stray dogs attack in Basavakalyan: ಬಸವಕಲ್ಯಾಣ ನಗರದ ಗಾಡವಾನ್‌ ಗಲ್ಲಿಯಲ್ಲಿ ಎರಡು ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ದಾಳಿಗೆ ಒಳಗಾದ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. 

ಬಸವಕಲ್ಯಾಣ ನಗರದ ಗಾಡವಾನ್‌ ಗಲ್ಲಿಯಲ್ಲಿ ಎರಡು ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ದಾಳಿಗೆ ಒಳಗಾದ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಸ್ಥಳೀಯರು ನಗರಸಭೆ ಕಮಿಷನರ್‌ಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದರು. ಒಳಚಿತ್ರದಲ್ಲಿರುವುದು ಗಾಯಗೊಂಡ ಬಾಲಕಿ.
ಬಸವಕಲ್ಯಾಣ ನಗರದ ಗಾಡವಾನ್‌ ಗಲ್ಲಿಯಲ್ಲಿ ಎರಡು ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ದಾಳಿಗೆ ಒಳಗಾದ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಸ್ಥಳೀಯರು ನಗರಸಭೆ ಕಮಿಷನರ್‌ಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದರು. ಒಳಚಿತ್ರದಲ್ಲಿರುವುದು ಗಾಯಗೊಂಡ ಬಾಲಕಿ.

ಬೀದರ್:‌ ಜಿಲ್ಲೆಯ ಬಸವಕಲ್ಯಾಣದ ವಿವಿಧೆಡೆ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಬಸವಕಲ್ಯಾಣ ನಗರದ ಗಾಡವಾನ್‌ ಗಲ್ಲಿಯಲ್ಲಿ ಎರಡು ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ದಾಳಿಗೆ ಒಳಗಾದ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

CET Results2024: ಕರ್ನಾಟಕ ಸಿಇಟಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ, ನಿಮ್ಮ ಅಂಕ ನೋಡುವುದು ಹೀಗೆ

Hassan Scandal: ಗೃಹ ಇಲಾಖೆ ಬೇರೆಯವರಿಂದ ಹೈಜಾಕ್‌‌, ಪ್ರಜ್ವಲ್‌ ರೇವಣ್ಣ ಪ್ರಕರಣ ಮುಚ್ಚಿಹಾಕಲು ಎಸ್‌ಐಟಿ ಸಿದ್ಧತೆ, ಅಶೋಕ ಆರೋಪ

Karnataka Rains: ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಹೊಸದುರ್ಗ,ಚನ್ನಗಿರಿಯಲ್ಲಿ ಭಾರೀ ಮಳೆ, ನಿಮ್ಮೂರಲ್ಲಿ ಎಷ್ಟು ಮಳೆಯಾಗಿದೆ ?

Bangalore News: ಬೆಂಗಳೂರು ರಸ್ತೆಗಳಲ್ಲಿ ಮರ ಬೀಳುವ ಸನ್ನಿವೇಶವಿದೆಯಾ, ಈ ನಂಬರ್‌ಗಳಿಗೆ ಕರೆ ಮಾಡಿ

ಬೀದಿ ನಾಯಿಗಳ ದಾಳಿಗೆ ಒಳಗಾದ ಬಾಲಕಿಯನ್ನು ಅಸ್ಮಾ ಸಮೀರ್‌ ಶೇಕ್‌ ಎಂದು ಗುರುತಿಸಲಾಗಿದೆ. ಬಸವಕಲ್ಯಾಣದ ಗಾಡವಾನ್‌ ಗಲ್ಲಿಯಲ್ಲಿ ನಿನ್ನೆ ಈ ಘಟನೆ ನಡೆದಿದ್ದು, ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆಯನ್ನು ಪಾಲಕರು ಕೊಡಿಸಿದ್ದಾರೆ.

ಬಾಲಕಿ ಮನೆಯ ಸಮೀಪದ ಅಂಗಡಿ ಕಡೆಗೆ ಬೀದಿಯಲ್ಲಿ ಹೋಗುತ್ತಿರುವಾಗ ಬೀದಿ ನಾಯಿಗಳು ದಾಳಿ ನಡೆಸಿದವು. ಅಲ್ಲಿದ್ದವರು ಕೂಡಲೇ ನಾಯಿಗಳನ್ನು ಓಡಿಸುವಷ್ಟರಲ್ಲಿ ಮಗು ಗಂಭೀರ ಗಾಯಗೊಂಡಿದೆ. ಬಾಲಕಿಯ ತಲೆ, ಮುಖವನ್ನು ಬೀದಿ ನಾಯಿಗಳು ಕಚ್ಚಿ ಹರಿದಿವೆ. ಒಟ್ಟು ಮೂವತ್ತಾರು ಹೊಲಿಗೆ ಹಾಕಲಾಗಿದೆ ಎಂದು ಬಾಲಕಿಯ ಕುಟುಂಬ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಾಲಕಿ ಗಂಭೀರ ಗಾಯಗೊಂಡಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಕರೆದೊಯ್ಯಲು ಆಕೆಯ ಕುಟುಂಬದವರು ತೀರ್ಮಾನಿಸಿದ್ದಾರೆ.

ಬಸವಕಲ್ಯಾಣ ನಗರಸಭೆಯ ವಿರುದ್ಧ ಆಕ್ರೋಶ

ಬಸವ ಕಲ್ಯಾಣದ ವಿವಿಧ ಬೀದಿಗಳಲ್ಲಿ ಬೀದಿ ನಾಯಿಗಳ ಉಪಟಳ ತೀವ್ರವಾಗಿದೆ. ಈ ಕುರಿತು ನಗರಸಭೆಯ ಅಧಿಕಾರಿಗಳಿಗೆ ಹೇಳಿದರೂ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಕೂಡಲೇ, ಸ್ಥಳೀಯರು ಮತ್ತೆ ನಗರಸಭೆಗೆ ಹೋಗಿ ಕಮಿಷನರ್‌ಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ನಗರಸಭೆ ಆಡಳಿತ ನಿರ್ಲಕ್ಷ್ಯ ಧೋರಣೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬೀದಿ ನಾಯಿಯಗಳನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಬೇಕು. ಅವುಗಳ ಬರ್ತ್‌ ಕಂಟ್ರೋಲ್‌ಗೆ ಕ್ರಮ ತೆಗೆದುಕೊಳ್ಳಿ ಎಂದು ಸ್ಥಳೀಯರು ಆಗ್ರಹಿಸಿದರು.

ಗಮನಿಸಬಹುದಾದ ಕೆಲವು ಸುದ್ದಿಗಳು

ಬಾಲ್ ಆಧಾರ್ ಕಾರ್ಡ್ ನವೀಕರಣ ಕಡ್ಡಾಯಗೊಳಿಸಿದೆ ಯುಐಡಿಎಐ; ಅಪ್ಡೇಟ್‌ ಮಾಡುವುದು ಹೇಗೆ?

How to update Baal Aadhaar Card: ಬಾಲ್‌ ಆಧಾರ್ ಎಂದು ಕರೆಯಲ್ಪಡುವ ಮಕ್ಕಳ ಆಧಾರ್ ಕಾರ್ಡ್‌ಗೆ ಸಂಬಂಧಿಸಿ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಇತ್ತೀಚೆಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.‌

ಗ್ಯಾಸ್‌ ಸಂಪರ್ಕದೊಂದಿಗೆ 50 ಲಕ್ಷ ರೂ. ವಿಮೆ; ಪ್ರೀಮಿಯಂ ಪಾವತಿಸಬೇಕಾಗಿಲ್ಲ- ಇದು ನಿಮಗೆ ಗೊತ್ತೆ?

LPG Cylinder Insurance Scheme: ಇಂದು ಭಾರತದ ಪ್ರತಿ ಮನೆಗೂ ಗ್ಯಾಸ್ ಸಿಲಿಂಡರ್ ಸಂಪರ್ಕವಿದೆ. ಆದರೆ ನಮ್ಮಲ್ಲಿ ಅನೇಕರಿಗೆ ಗ್ಯಾಸ್ ಸಿಲಿಂಡರ್‌ಗಳಿಗೆ ಸಂಬಂಧಿಸಿದ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದಿಲ್ಲ. ವಾಸ್ತವವಾಗಿ ಗ್ಯಾಸ್ ಸಂಪರ್ಕಕ್ಕೆ ಸಂಬಂಧಿಸಿ ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸುವುದು ಗ್ಯಾಸ್ ವಿತರಕರ ಕರ್ತವ್ಯವಾಗಿದೆ. ನೀವೂ ತಿಳಿಯಿರಿ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.‌

ಮುಂದೆ ರಾಹುವಿನ ಹಾದಿ! ಜೀವನದಲ್ಲಿ ಅಶುಭದ ಕರಿಛಾಯೆಯಿಂದ ಹೊರಬರಲಿದ್ದಾರೆ 5 ರಾಶಿಚಕ್ರದವರು

Rahu Gochar 2023: ಮುಂದಿನ ವರ್ಷ ಅಕ್ಟೋಬರ್ 30 ರಂದು ರಾಹು ಸಂಕ್ರಮಣ ನಡೆಯಲಿದೆ. ರಾಹು ಮೀನ ರಾಶಿಯನ್ನು ಪ್ರವೇಶಿಸುವರು. ಪರಿಣಾಮವಾಗಿ, ಅನೇಕ ರಾಶಿಚಕ್ರ ಚಿಹ್ನೆಗಳು ಉತ್ತಮ ಅವಧಿಯನ್ನು ಪ್ರಾರಂಭಿಸುತ್ತವೆ. ಈ ಪಟ್ಟಿಯಲ್ಲಿ ಯಾರಿದ್ದಾರೆ ಎಂದು ನೋಡೋಣ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ