logo
ಕನ್ನಡ ಸುದ್ದಿ  /  ಕರ್ನಾಟಕ  /  The Frustrated Drop Out: ಇದು ಟೀ ಅಂಗಡಿ ಹೆಸರು- ಇಲ್ಲಿ ಟೀ ಕುಡೀರಿ ಬಿಟ್‌ಕಾಯಿನ್‌ ಕೊಡಿ; ಇನ್ನೆಲ್ಲೋ ಅಲ್ಲ ನಮ್ಮ ಬೆಂಗಳೂರಲ್ಲೇ!

The Frustrated drop out: ಇದು ಟೀ ಅಂಗಡಿ ಹೆಸರು- ಇಲ್ಲಿ ಟೀ ಕುಡೀರಿ ಬಿಟ್‌ಕಾಯಿನ್‌ ಕೊಡಿ; ಇನ್ನೆಲ್ಲೋ ಅಲ್ಲ ನಮ್ಮ ಬೆಂಗಳೂರಲ್ಲೇ!

HT Kannada Desk HT Kannada

Sep 23, 2022 03:59 PM IST

The Frustrated drop out - ಇದು ಟೀ ಅಂಗಡಿ ಹೆಸರು. ಬಿಟ್‌ಕಾಯಿನ್‌ ಕ್ರೇಜ್‌ ಬೆಳೆಸಿಕೊಂಡು ಅಪಾರ ಹಣ ಕಳೆದುಕೊಂಡ ಶುಭಂ ಶೈನಿ ಎಂಬ ಯುವಕನ ಸ್ಟಾರ್ಟಪ್‌ ಇದು.

    • The Frustrated drop out- ಹೆಸರು ನೋಡಿ ಗಾಬರಿ ಬೀಳಬೇಡಿ. ಇದು ಟೀ ಅಂಗಡಿ ಹೆಸರು. ಇಲ್ಲಿ ಟೀ ಕುಡಿದ ಬಳಿಕ ಎಷ್ಟು ಅಂತ ಕೇಳಿ ನೋಡಿ, Bitcion, Doge, Dollarನಲ್ಲೇ ಪಾವತಿಸಿ ಅಂತ ಹೇಳ್ತಾರೆ! ಬೆಂಗಳೂರಲ್ಲೇ ಇದೆಯಾ ಇಂಥದ್ದೊಂದು ಟೀ ಅಂಗಡಿ ಅಂತ ಹುಬ್ಬೇರಿಸಬೇಡಿ ಇಲ್ಲಿದೆ ವಿವರ.
The Frustrated drop out - ಇದು ಟೀ ಅಂಗಡಿ ಹೆಸರು. ಬಿಟ್‌ಕಾಯಿನ್‌ ಕ್ರೇಜ್‌ ಬೆಳೆಸಿಕೊಂಡು ಅಪಾರ ಹಣ ಕಳೆದುಕೊಂಡ ಶುಭಂ ಶೈನಿ ಎಂಬ ಯುವಕನ ಸ್ಟಾರ್ಟಪ್‌ ಇದು.
The Frustrated drop out - ಇದು ಟೀ ಅಂಗಡಿ ಹೆಸರು. ಬಿಟ್‌ಕಾಯಿನ್‌ ಕ್ರೇಜ್‌ ಬೆಳೆಸಿಕೊಂಡು ಅಪಾರ ಹಣ ಕಳೆದುಕೊಂಡ ಶುಭಂ ಶೈನಿ ಎಂಬ ಯುವಕನ ಸ್ಟಾರ್ಟಪ್‌ ಇದು. (Twitter: Postoast)

ಬೆಂಗಳೂರು: ಹೌದು ಖಚಿತವಾಗಿ ಹೇಳ್ತೇವೆ. ಟೀ ಅಂಗಡಿ ಹೆಸರು ನೋಡಿ ಗಾಬರಿ ಬೀಳಬೇಡಿ. ಅದೇ ರೀತಿ ಟೀ ಕುಡಿದ ಬಳಿಕ ಎಷ್ಟು ಎಂದು ಕೇಳಿ ಗಾಬರಿ ಬೀಳಬೇಡಿ. ಇದು ಬೆಂಗಳೂರಿನ ಟೀ ಅಂಗಡಿಯ ಸ್ಟೋರಿ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಎಡಿಎ ರಂಗಮಂದಿರದಲ್ಲಿ ಕಲಾವಿದೆ ವಿದ್ಯಾಶ್ರೀ ಎಚ್‌ಎಸ್ ಅವರ ಭರತನಾಟ್ಯ ರಂಗಾರೋಹಣ ನಾಳೆ

Hassan Scandal; ಹಾಸನ ಹಗರಣದ ಸಂತ್ರಸ್ತೆ ನಾಪತ್ತೆ ಆತಂಕಕಾರಿ, ಪ್ರಜ್ವಲ್‌ ರೇವಣ್ಣ ಬಂಧನ ಯಾವಾಗ, ಫೇಸ್‌ಬುಕ್ ಪೋಸ್ಟಲ್ಲಿ ವಾಸು ಎಚ್‌ವಿ ಕಳವಳ

Bengaluru Rains: ದಾಖಲೆಯ ಬಿಸಿ ಕಂಡ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ; ರಣ ಬಿಸಿಲಿಗೆ ಬೆಂದ ಜನ ಫುಲ್ ಖುಷ್

NEP ಅಥವಾ SEP: ಪದವಿ ಕೋರ್ಸ್ ಪ್ರವೇಶ ಗೊಂದಲ ರಾಜ್ಯವ್ಯಾಪಿ; ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿದ್ಯಾರ್ಥಿಗಳ ಹಪಾಹಪಿ

The Frustrated drop out - ಇದು ಟೀ ಅಂಗಡಿ ಹೆಸರು. ಬಿಟ್‌ಕಾಯಿನ್‌ ಕ್ರೇಜ್‌ ಬೆಳೆಸಿಕೊಂಡು ಅಪಾರ ಹಣ ಕಳೆದುಕೊಂಡ ಶುಭಂ ಶೈನಿ ಎಂಬ ಯುವಕನ ಸ್ಟಾರ್ಟಪ್‌ ಇದು.

ಕಾಲೇಜು ಓದುವಾಗ ಬಿಟ್‌ಕಾಯಿನ್‌ ಕ್ರೇಜ್‌ಗೆ ಬಿದ್ದು ಇದ್ದಬದ್ದ ಹಣವನ್ನೆಲ್ಲ ಅದರಲ್ಲಿ ಹೂಡಿಕೆ ಮಾಡಿದ್ದ ಶುಭಂ ಶೈನಿ, ಎಲ್ಲ ಹಣವನ್ನೂ ಕಳೆದುಕೊಂಡ. ಬಳಿಕ ಅನಿವಾರ್ಯವಾಗಿ ಕಾಲೇಜು ಬಿಡಬೇಕಾಯಿತು. ಕಾಲೇಜು ಡ್ರಾಪ್‌ಔಟ್‌ ಹಣೆಪಟ್ಟಿಯೊಂದಿಗೆ ಹೊರಬಿದ್ದ ಶುಭಂ ಶೈನಿ ಇಂದಿರಾಗಾಂಧಿ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿ.

ಕೇವಲ ಎರಡು ವರ್ಷ ಹಿಂದಿನ ವಿಚಾರ ಇದು. 2020ರ ಕಾಲಾವಧಿ. ಕ್ರಿಪ್ಟೋ ಕರೆನ್ಸಿ ಖರೀದಿಗೆ ಎಂದು ಶುಭಂ ಶೈನಿ ತನ್ನ ಎಲ್ಲ ಪಾಕೆಟ್‌ ಮನಿಯನ್ನು ಬಳಸಿಕೊಂಡಿದ್ದ. ಕ್ರಿಪ್ಟೋ ಮಾರುಕಟ್ಟೆ ಶೇಕಡ 60 ಕುಸಿತ ಕಂಡ ಸಂದರ್ಭ ಅದು. ಕೆಲವೇ ತಿಂಗಳಲ್ಲಿ ಶೇಕಡ 1000 ಜಿಗಿತ ಕಂಡು 1.5 ಲಕ್ಷ ರೂಪಾಯಿ ಹೂಡಿಕೆ, 30 ಲಕ್ಷ ರೂಪಾಯಿ ಆಗಿತ್ತು.

ವ್ಯಾಲೆಟ್‌ನಲ್ಲಿ ಅಷ್ಟೊಂದು ಹಣ ನೋಡಿ, ಇನ್ನು ಪಾಲಕರ ಬಳಿ ಹಣಕೇಳಲಾರೆ ಎಂಬ ತೀರ್ಮಾನಕ್ಕೆ ಬಂದ ಶುಭಂ ಶೈನಿ, ಐಷಾರಾಮಿ ಜೀವನ ಶುರುಮಾಡಿದರು. ಆದರೆ, ಅಂತಿಮ ಸೆಮಿಸ್ಟರ್‌ನಲ್ಲಿದ್ದಾಗ ಕಳೆದ ವರ್ಷ ಸಿಯಾನಿಯ ಕ್ರಿಪ್ಟೋ ಪೋರ್ಟ್‌ಪೋಲಿಯೊ ಶೇಕಡ 90 ಕುಸಿತ ಕಂಡಿತು. 30 ಲಕ್ಷ ರೂಪಾಯಿ ಕುಸಿದು 1 ಲಕ್ಷ ರೂಪಾಯಿ ಆಗಿತ್ತು. ಒಂದೇ ಒಂದು ರಾತ್ರಿ ಬದುಕೇ ಬದಲಾಗಿ ಬಿಡ್ತು. ಪಾಲಕರಲ್ಲಿ ಪುನಃ ಹಣ ಕೇಳುವಂತೆ ಇರಲಿಲ್ಲ. ಸ್ವಾಭಿಮಾನದ ಪ್ರಶ್ನೆ. ಆನ್‌ಲೈನ್‌ ಮೂಲಕ ಆದಾಯ ಗಳಿಕೆಯ ದಾರಿ ಹುಡುಕಿದೆ; ಸಿಗಲಿಲ್ಲ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ಬಳಿ ಹೇಳಿಕೊಂಡಿದ್ದಾರೆ.

ಕೊನೆಗೆ, ಹತಾಶನಾಗಿದ್ದ ಶುಭಂ ಶೈನಿ ಕೆಲಸ ಅರಸಿ ಬೆಂಗಳೂರಿಗೆ ಬಂದರು. 'ದಿ ಫ್ರಸ್ಟ್ರೇಟೆಡ್ ಡ್ರಾಪ್ ಔಟ್' ಎಂಬ ಟೀ ಸ್ಟಾಲ್ ಅನ್ನು ಪ್ರಾರಂಭಿಸಿದರು. ಪ್ಲಾಸ್ಟಿಕ್‌ ಬಳಕೆ ಇಲ್ಲ. ತಂದೂರಿ ಟೀ ಒದಗಿಸುವ ಸ್ಟಾಲ್‌ ಆಗಿ ಗಮನಸೆಳೆಯಿತು. ಟ್ವಿಸ್ಟ್ ಏನೆಂದರೆ, ಈ ಟೀ ಸ್ಟಾಲ್ ಬಿಟ್‌ಕಾಯಿನ್ ಅನ್ನು ಪಾವತಿಯಾಗಿ ಸ್ವೀಕರಿಸುತ್ತದೆ. ಈಗ ಕ್ರಿಪ್ಟೋ ಉತ್ಸಾಹಿಗಳಿಗೆ 'ಹ್ಯಾಂಗ್‌ಔಟ್ ಜಾಯಿಂಟ್' ಆಗಿ ಮಾರ್ಪಟ್ಟಿದೆ.

ಟೀ ಕುಡಿದ ಗ್ರಾಹಕರ ಬಳಿ ಬಿಟ್‌ಕಾಯಿನ್‌, ಡಾಲರ್‌ನಲ್ಲಿ ಪಾವತಿಸಲು ಹೇಳಿದಾಗ ಅನೇಕರು ಅಚ್ಚರಿಗೊಂಡು ಮೂಗಿನ ಮೇಲೆ ಬೆರಳಿಟ್ಟಿದ್ದರು. ಬಳಿಕ ಶೈನಿ ಹೇಳಿದಂತೆ ಕ್ರಿಪ್ಟೋ ವಹಿವಾಟಿನ ಅರಿವು ಪಡೆದುಕೊಂಡವರಿದ್ದಾರೆ. ವಾರಕ್ಕೆ ಕನಿಷ್ಠ 20 ಹೊಸ ಗ್ರಾಹಕರು ಕ್ರಿಪ್ಟೋ ಅರಿವು ಪಡೆದು ಬಳಸಲಾರಂಭಿಸಿದ್ದಾರೆ ಎಂದು ಶೈನಿ ಹೇಳಿದ್ದಾಗಿ ವರದಿ ವಿವರಿಸಿದೆ.

    ಹಂಚಿಕೊಳ್ಳಲು ಲೇಖನಗಳು