logo
ಕನ್ನಡ ಸುದ್ದಿ  /  ಕರ್ನಾಟಕ  /  Vigyanika: ಭೋಪಾಲ ವಿಜ್ಞಾನ ಹಬ್ಬದಲ್ಲಿ ಹರಡಿತು ಕನ್ನಡದ ಕಂಪು; ವಿಜ್ಞಾನ ಸಂವಹನದಲ್ಲಿ ಕನ್ನಡದ ಸಾಧನೆ ವ್ಯಕ್ತ - 2 ಕನ್ನಡ ಕೃತಿ ಬಿಡುಗಡೆ

Vigyanika: ಭೋಪಾಲ ವಿಜ್ಞಾನ ಹಬ್ಬದಲ್ಲಿ ಹರಡಿತು ಕನ್ನಡದ ಕಂಪು; ವಿಜ್ಞಾನ ಸಂವಹನದಲ್ಲಿ ಕನ್ನಡದ ಸಾಧನೆ ವ್ಯಕ್ತ - 2 ಕನ್ನಡ ಕೃತಿ ಬಿಡುಗಡೆ

HT Kannada Desk HT Kannada

Jan 23, 2023 06:50 AM IST

'ಕುತೂಹಲಿ' ಕಾರ್ಯಕ್ರಮದ ಅಂಗವಾಗಿ ವಿಜ್ಞಾನ್ ಪ್ರಸಾರ್ ಪ್ರಕಟಿಸಿರುವ 'ಅಡ್ಯನಡ್ಕ ಕೃಷ್ಣ ಭಟ್ ಆಯ್ದ ಬರಹಗಳು' (ಸಂ: ಟಿ. ಜಿ. ಶ್ರೀನಿಧಿ) ಹಾಗೂ 'ಜಾಣಪ್ರಶ್ನೆ' (ಲೇ: ಕೊಳ್ಳೇಗಾಲ ಶರ್ಮ) ಕೃತಿಗಳನ್ನು ಡಾ. ಕಲೈ ಸೆಲ್ವಿ ಲೋಕಾರ್ಪಣೆಗೊಳಿಸಿದರು.

  • Vigyanika: ಇಂಡಿಯಾ ಇಂಟರ್ ನ್ಯಾಶನಲ್ ಸೈನ್ಸ್ ಫೆಸ್ಟಿವಲ್‌ನ ಭಾಗವಾಗಿ ಈ ಸಾಹಿತ್ಯ ಹಬ್ಬ ಜನವರಿ 22 ಮತ್ತು 23ರಂದು ಅಂದರೆ ನಿನ್ನೆ ಮತ್ತು ಇಂದು ನಡೆಯುತ್ತಿದೆ. ಈ ಕಾರ್ಯಕ್ರಮದ ಮೊದಲ ದಿನದಲ್ಲಿ ಕನ್ನಡ ವಿಜ್ಞಾನ ಸಾಹಿತ್ಯದ ಹಲವು ಆಯಾಮಗಳಿಗೆ ವೇದಿಕೆ ದೊರೆತದ್ದು ವಿಶೇಷ.

'ಕುತೂಹಲಿ' ಕಾರ್ಯಕ್ರಮದ ಅಂಗವಾಗಿ ವಿಜ್ಞಾನ್ ಪ್ರಸಾರ್ ಪ್ರಕಟಿಸಿರುವ 'ಅಡ್ಯನಡ್ಕ ಕೃಷ್ಣ ಭಟ್ ಆಯ್ದ ಬರಹಗಳು' (ಸಂ: ಟಿ. ಜಿ. ಶ್ರೀನಿಧಿ) ಹಾಗೂ 'ಜಾಣಪ್ರಶ್ನೆ' (ಲೇ: ಕೊಳ್ಳೇಗಾಲ ಶರ್ಮ) ಕೃತಿಗಳನ್ನು ಡಾ. ಕಲೈ ಸೆಲ್ವಿ ಲೋಕಾರ್ಪಣೆಗೊಳಿಸಿದರು.
'ಕುತೂಹಲಿ' ಕಾರ್ಯಕ್ರಮದ ಅಂಗವಾಗಿ ವಿಜ್ಞಾನ್ ಪ್ರಸಾರ್ ಪ್ರಕಟಿಸಿರುವ 'ಅಡ್ಯನಡ್ಕ ಕೃಷ್ಣ ಭಟ್ ಆಯ್ದ ಬರಹಗಳು' (ಸಂ: ಟಿ. ಜಿ. ಶ್ರೀನಿಧಿ) ಹಾಗೂ 'ಜಾಣಪ್ರಶ್ನೆ' (ಲೇ: ಕೊಳ್ಳೇಗಾಲ ಶರ್ಮ) ಕೃತಿಗಳನ್ನು ಡಾ. ಕಲೈ ಸೆಲ್ವಿ ಲೋಕಾರ್ಪಣೆಗೊಳಿಸಿದರು.

ಭೋಪಾಲ: ವಿಜ್ಞಾನವನ್ನು ಜನಸಾಮಾನ್ಯರಿಗೆ ಯಶಸ್ವಿಯಾಗಿ ತಲುಪಿಸಬೇಕು ಎಂಬ ಆಶಯವಿರುವಾಗ ಆ ಕೆಲಸವನ್ನು ಅವರ ತಾಯ್ನುಡಿಯಲ್ಲೇ ಮಾಡಬೇಕು. ಅದು ತಾಯ್ನುಡಿಯಲ್ಲೇ ಇರಬೇಕಾದ್ದು ನ್ಯಾಯ ಕೂಡ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಮಹಾನಿರ್ದೇಶಕಿ ಡಾ.ಎನ್‌.ಕಲೈ ಸೆಲ್ವಿ ಹೇಳಿದರು.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್‌ ರೇವಣ್ಣ ಕೇಸ್‌; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ; ಕಾನೂನು ಕ್ರಮಕ್ಕೆ ತಕರಾರು ಇಲ್ಲ

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ

ಕರ್ನಾಟಕ ಹವಾಮಾನ ಮೇ 18; ಉತ್ತರ ಕನ್ನಡ, ತುಮಕೂರು, ಬೆಂಗಳೂರು ಸೇರಿ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಉತ್ತರ ಒಳನಾಡಲ್ಲಿ ಹಲವೆಡೆ ಮಳೆ

ಬೆಂಗಳೂರಿನಲ್ಲಿ ಮೇ 18, 19ಕ್ಕೆ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ; ಆರೆಂಜ್ ಅಲರ್ಟ್ ಘೋಷಣೆ -Bengaluru Rain

ಅವರು, ಭೋಪಾಲದ ಮೌಲಾನಾ ಆಜಾದ್‌ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಭಾನುವಾರ ಇಂಡಿಯಾ ಇಂಟರ್ ನ್ಯಾಶನಲ್ ಸೈನ್ಸ್ ಫೆಸ್ಟಿವಲ್ ನಿಮಿತ್ತ ಆಯೋಜನೆಯಾಗಿದ್ದ 'ವಿಜ್ಞಾನಿಕ' (Vigyanika) - ವಿಜ್ಞಾನ ಸಾಹಿತ್ಯ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ಇಂಡಿಯಾ ಇಂಟರ್ ನ್ಯಾಶನಲ್ ಸೈನ್ಸ್ ಫೆಸ್ಟಿವಲ್‌ನ ಭಾಗವಾಗಿ ಈ ಸಾಹಿತ್ಯ ಹಬ್ಬ ಜನವರಿ 22 ಮತ್ತು 23ರಂದು ಅಂದರೆ ನಿನ್ನೆ ಮತ್ತು ಇಂದು ನಡೆಯುತ್ತಿದೆ. ಈ ಕಾರ್ಯಕ್ರಮದ ಮೊದಲ ದಿನದಲ್ಲಿ ಕನ್ನಡ ವಿಜ್ಞಾನ ಸಾಹಿತ್ಯದ ಹಲವು ಆಯಾಮಗಳಿಗೆ ವೇದಿಕೆ ದೊರೆತದ್ದು ವಿಶೇಷ.

ಕನ್ನಡದ ಎರಡು ಕೃತಿ ಬಿಡುಗಡೆ

'ಕುತೂಹಲಿ' ಕಾರ್ಯಕ್ರಮದ ಅಂಗವಾಗಿ ವಿಜ್ಞಾನ್ ಪ್ರಸಾರ್ ಪ್ರಕಟಿಸಿರುವ 'ಅಡ್ಯನಡ್ಕ ಕೃಷ್ಣ ಭಟ್ ಆಯ್ದ ಬರಹಗಳು' (ಸಂ: ಟಿ. ಜಿ. ಶ್ರೀನಿಧಿ) ಹಾಗೂ 'ಜಾಣಪ್ರಶ್ನೆ' (ಲೇ: ಕೊಳ್ಳೇಗಾಲ ಶರ್ಮ) ಕೃತಿಗಳನ್ನು ಡಾ. ಕಲೈ ಸೆಲ್ವಿ ಲೋಕಾರ್ಪಣೆಗೊಳಿಸಿದರು. ವಿಜ್ಞಾನ ಭಾರತಿ ಅಧ್ಯಕ್ಷ ಡಾ. ಶೇಖರ್ ಮಾಂಡೆ, ಸೈನ್ಸ್ ರಿಪೋರ್ಟರ್ ಸಂಪಾದಕ ಹಸನ್ ಜಾವೇದ್ ಖಾನ್ ಉಪಸ್ಥಿತರಿದ್ದರು.

ಚಾಟ್‌ಜಿಪಿಟಿಯಲ್ಲಿ ಭಾರತೀಯ ಭಾಷೆ ಬಳಕೆ ಸಾಧ್ಯವಾಗಲಿ..

ಚಾಟ್‌ಜಿಪಿಟಿಯಲ್ಲಿ ಭಾರತೀಯ ಭಾಷೆ ಬಳಕೆ ಸಾಧ್ಯವಾಗಬೇಕು ಎಂದು ಲೇಖಕ ಕೊಳ್ಳೇಗಾಲ ಶರ್ಮ ಹೇಳಿದರು.

'ನಮ್ಮ ಭಾಷೆ, ನಮ್ಮ ವಿಜ್ಞಾನ' ಕುರಿತು ಆಯೋಜಿಸಲಾಗಿದ್ದ ಸಂವಾದದಲ್ಲಿ ಲೇಖಕ ಕೊಳ್ಳೇಗಾಲ ಶರ್ಮ ಭಾಗವಹಿಸಿ ಮಾತನಾಡಿದ ವೇಳೆ ಈ ವಿಚಾರ ಪ್ರಸ್ತಾಪಿಸಿದರು.

ವಿಜ್ಞಾನ ಸಂವಹನವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಪಾಡ್ಕಾಸ್ಟ್ ಮುಂತಾದ ಹೊಸ ವಿಧಾನಗಳನ್ನು ಬಳಸುವುದು ಅವಶ್ಯ. ಆದರೆ, ಚಾಟ್ ಜಿಪಿಟಿ ಮೊದಲಾದ ಆವಿಷ್ಕಾರಗಳಲ್ಲಿ ನಾವು ಭಾರತೀಯ ಭಾಷೆಗಳನ್ನೂ ಬಳಸುವಂತಾಗಲು ಹೆಚ್ಚುಹೆಚ್ಚು ಪಠ್ಯವೂ ಸೃಷ್ಟಿಯಾಗಬೇಕು. ಇದು ಅಗತ್ಯ ಕೂಡ" ಎಂದು ಲೇಖಕ ಕೊಳ್ಳೇಗಾಲ ಶರ್ಮ ಹೇಳಿದರು.

ವಿಜ್ಞಾನ್ ಪ್ರಸಾರ್‌ನ ಮುಖ್ಯ ವಿಜ್ಞಾನಿ ಡಾ. ಟಿ. ವಿ. ವೆಂಕಟೇಶ್ವರನ್ ಸಂವಾದವನ್ನು ನಡೆಸಿಕೊಟ್ಟರು.

ʻಇಜ್ಞಾನʼ ಪ್ರಯೋಗಗಳ ಅನಾವರಣ

ವಿಜ್ಞಾನ ಸಂವಹನದ ಹೊಸ ಸವಾಲು-ಸಾಧ್ಯತೆ ಎಂಬ ವಿಷಯದ ಕುರಿತಾದ ಗೋಷ್ಠಿಯನ್ನೂ ಆಯೋಜಿಸಲಾಗಿತ್ತು. ಇದರಲ್ಲಿ ಕರ್ನಾಟಕದ 'ಇಜ್ಞಾನ' ಜಾಲಪತ್ರಿಕೆಯ ಟಿ. ಜಿ. ಶ್ರೀನಿಧಿ ಹಾಗೂ ಜಿ. ಎಸ್. ಅಭಿಷೇಕ್ ಭಾಗವಹಿಸಿದ್ದರು.

ಭಾರತೀಯ ಭಾಷೆಗಳಲ್ಲಿ ವಿಜ್ಞಾನದ ಮಾಹಿತಿಯ ಕೊರತೆ ಬಹಳಷ್ಟಿದೆ. ಅದನ್ನು ಕಡಿಮೆ ಮಾಡಲು ತಂತ್ರಾಂಶ ಸಾಧನಗಳನ್ನು ಬಳಸುವ ಅವಶ್ಯಕತೆಯೂ ಇದೆ. ಈ ವಿಚಾರವನ್ನು ಪ್ರಾಯೋಗಿಕ ನಿದರ್ಶನಗಳೊಂದಿಗೆ ಪ್ರಸ್ತುತಪಡಿಸಿದ 'ಇಜ್ಞಾನ' ತಂಡ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ಇಜ್ಞಾನ ಸಂಸ್ಥೆ ನಡೆಸಿದ ಪ್ರಯೋಗದ ವಿವರವನ್ನು ಅಲ್ಲಿ ಶೇರ್‌ ಮಾಡಿಕೊಂಡರು.

ಇಜ್ಞಾನದ ಈ ಯೋಜನೆಯ ಭಾಗವಾಗಿ ಆವರ್ತ ಕೋಷ್ಟಕದ ಮೂಲವಸ್ತುಗಳನ್ನು ಕುರಿತ ಪುಸ್ತಕವನ್ನು ಇದೇ ರೀತಿ ರೂಪಿಸಲಾಗಿತ್ತು. ಅಂದರೆ ಸರಳ ತಂತ್ರಾಂಶ ಸಾಧನಗಳ ನೆರವು ಪಡೆದು ಈ ಪುಸ್ತಕವನ್ನು ರೂಪಿಸಲಾಗಿದೆ. ಇದನ್ನು ಕೂಡ ಅಲ್ಲಿ ಇಜ್ಞಾನ ತಂಡ ಪ್ರಸ್ತುತ ಪಡಿಸಿ ಗಮನಸೆಳೆಯಿತು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ