ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Grand I10 Nios: ಹ್ಯುಂಡೈನ ಹೊಚ್ಚ ಹೊಸ ಗ್ರಾಂಡ್‌ I10 ನಿಯೋಸ್‌ ಮಾರುಕಟ್ಟೆಗೆ; ಫೀಚರ್ಸ್‌, ದರ ಮತ್ತು ಇತರೆ ವಿವರ

Grand i10 Nios: ಹ್ಯುಂಡೈನ ಹೊಚ್ಚ ಹೊಸ ಗ್ರಾಂಡ್‌ i10 ನಿಯೋಸ್‌ ಮಾರುಕಟ್ಟೆಗೆ; ಫೀಚರ್ಸ್‌, ದರ ಮತ್ತು ಇತರೆ ವಿವರ

Grand i10 Nios: ಹೊಚ್ಚ ಹೊಸ ಗ್ರಾಂಡ್‌ i10 ನಿಯೋಸ್‌ ಅನ್ನು ಹ್ಯುಂಡೈ ಮೋಟಾರ್‌ ಇಂಡಿಯಾ ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಎಕ್ಸ್‌ ಶೋರೂಂ ದರ 5.68 ಲಕ್ಷ ರೂಪಾಯಿ.

ಹೊಚ್ಚ ಹೊಸ ಹ್ಯುಂಡೈ ಗ್ರಾಂಡ್‌ ಐ10 ನಿಯೋಸ್‌
ಹೊಚ್ಚ ಹೊಸ ಹ್ಯುಂಡೈ ಗ್ರಾಂಡ್‌ ಐ10 ನಿಯೋಸ್‌ (Hyundai Motor India)

ಹ್ಯುಂಡೈ ಮೋಟಾರ್‌ ಇಂಡಿಯಾ ಅದರ ಹೊಚ್ಚ ಹೊಸ ಗ್ರಾಂಡ್‌ i10 ನಿಯೋಸ್‌ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಎಕ್ಸ್‌ ಶೋರೂಂ ದರ 5.68 ಲಕ್ಷ ರೂಪಾಯಿ. ಈ ಅಪ್ಡೇಟ್‌ ಆಗಿರುವ ಹ್ಯಾಚ್‌ಬ್ಯಾಕ್‌ ವಾಹನದಲ್ಲಿ ಕೆಲವು ಕಾಸ್ಮೆಟಿಕ್‌ ಅಪ್‌ಗ್ರೇಡ್‌ ಕೂಡಾ ಆಗಿದ್ದು, 30 ಹೊಸ ಫೀಚರ್ಸ್‌ ಮತ್ತು 20 ಹೊಸ ಸೇಫ್ಟಿ ಫೀಚರ್ಸ್‌ ಅಳವಡಿಕೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಹ್ಯುಂಡೈ ಗ್ರಾಂಡ್‌ ಐ10 ನಿಯೋಸ್‌ನ ಎಕ್ಸ್‌ಟೀರಿಯರ್‌ (Grand i10 Nios Exterior)

ಹ್ಯುಂಡೈ ಗ್ರಾಂಡ್‌ ಐ10 ನಿಯೋಸ್‌ ಹೊಚ್ಚ ಹೊಸ ಫ್ರಂಟ್‌ ಡಿಸೈನ್‌ನೊಂದಿಗೆ ಬಂದಿದೆ. ದೊಡ್ಡ ಗಾತ್ರದ ಸೆಂಟ್ರಲ್‌ ಏರ್‌ ಇನ್‌ಟೇಕ್‌ ಮತ್ತು ಮರು ವಿನ್ಯಾಸಗೊಳಿಸಿದ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಹೊಸ ಬಂಪರ್‌ ಅತ್ಯಾಕರ್ಷಕವಾಗಿದೆ. ಹ್ಯಾಚ್‌ಬ್ಯಾಕ್‌ನ ಪ್ರೊಫೈಲ್‌ ಹಾಗೆಯೇ ಇದ್ದು, 15 ಇಂಚಿನ ಡೈಮಂಡ್‌ ಕಟ್‌ ಅಲ್ಲೋಯ್‌ ವ್ಹೀಲ್‌ಗಳು ಮತ್ತು ಶಾರ್ಕ್‌ ಫಿನ್‌ ಆಂಟೆನಾ ಮತ್ತು ಸುಧಾರಿತ ಟೇಲ್‌ಲೈಟ್‌ಗಳು ಹಿಂಭಾಗದಲ್ಲಿದ್ದು ಅದರ ಆಕರ್ಷಣೆಯನ್ನು ಹೆಚ್ಚಿಸಿದೆ.

ಹ್ಯುಂಡೈ ಗ್ರಾಂಡ್‌ ಐ10 ನಿಯೋಸ್‌ನ ಇಂಟೀರಿಯರ್ಸ್‌ ಮತ್ತು ಫೀಚರ್ಸ್‌ (Grand i10 Nios Interior and features)

ಹ್ಯುಂಡೈ ಗ್ರಾಂಡ್‌ ಐ10 ನಿಯೋಸ್‌ನ ಇಂಟೀರಿಯರ್‌ ಕೂಡ ಆಕರ್ಷಣೀಯವಾಗಿದೆ. ಎರಡು ಕಲರ್‌ನ ಅಂದರೆ ಕಪ್ಪು ಮತ್ತು ಗ್ರೇ ಕಲರ್‌ನ ಬಣ್ಣದಲ್ಲಿ ಕಂಗೊಳಿಸುತ್ತಿದೆ. ಸ್ಟಾರ್ಟ್‌ ಮತ್ತು ಸ್ಟಾಪ್‌ ಮಾಡುವುದಕ್ಕೆ ಪುಷ್‌ ಬಟನ್‌, ಇನ್‌ಸ್ಟ್ರುಮೆಂಟ್‌ ಕನ್ಸೋಲ್‌, ಹೊಸ 8 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೋಟೈನ್‌ಮೆಂಟ್‌ ಸಿಸ್ಟಂ, ಇದಕ್ಕೆ ಆಂಡ್ರಾಯ್ಡ್‌ ಅಟೋ ಕನೆಕ್ಟಿವಿಟಿ ಕೂಡ ಇದೆ. ಆಪಲ್‌ ಕಾರ್‌ಪ್ಲೇಗೂ ಕನೆಕ್ಟ್‌ ಆಗುತ್ತದೆ. ಈ ಹ್ಯಾಚ್‌ಬ್ಯಾಕ್‌ನಲ್ಲಿ ಫೂಟ್‌ವೆಲ್‌ ಲೈಟಿಂಗ್‌, ವೈರ್‌ಲೆಸ್‌ ಫೋನ್‌ ಚಾರ್ಜಿಂಗ್‌, ಯುಎಸ್‌ಬಿ ಟೈಪ್‌ ಸಿ ಫಾಸ್ಟ್‌ ಚಾರ್ಜರ್‌, ಕೂಲ್ಡ್‌ ಗ್ಲೋವ್‌ ಬಾಕ್ಸ್‌ ಮತ್ತು ಇತರೆ ಫೀಚರ್‌ಗಳಿವೆ.

ಕಾರು ಉತ್ಪಾದಕ ಕಂಪನಿಯ ಪ್ರಕಾರ, ಈ ಹ್ಯಾಚ್‌ಬ್ಯಾಕ್‌ ಈಗ ನಾಲ್ಕು ಏರ್‌ಬ್ಯಾಗ್‌ ಜತೆಗೆ 20 ಸ್ಟಾಂಡರ್ಡ್‌ ಸೇಫ್ಟಿ ಫೀಚರ್ಸ್‌ ಹೊಂದಿದೆ. ಟಾಪ್‌ ವೇರಿಯೆಂಟ್‌ನಲ್ಲಿ ಆರು ಏರ್‌ಬ್ಯಾಗ್‌ ಇವೆ. ಟೈರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಂ, ಹಿಲ್‌ ಸ್ಟಾರ್ಟ್‌ ಅಸಿಸ್ಟ್‌, ISOFIX ಆಂಕರ್‌ ಮೌಂಟ್ಸ್‌, ಆಟೋ ಹೆಡ್‌ಲ್ಯಾಂಪ್ಸ್‌, ಪಾರ್ಕಿಂಗ್‌ ಸೆನ್ಸರ್‌ ಹೊಂದಿರುವ ರೇರ್‌ ವ್ಯೂವ್‌ ಕ್ಯಾಮೆರಾ ಸೌಲಭ್ಯವೂ ಇದೆ.

ಹ್ಯುಂಡೈ ಗ್ರಾಂಡ್‌ ಐ10 ನಿಯೋಸ್‌ ಪವರ್‌ಟ್ರೈನ್‌ (Grand i10 Nios Powertrain)

ಹ್ಯುಂಡೈ ಗ್ರಾಂಡ್‌ ಐ10 ನಿಯೋಸ್‌ ಅದೇ 1.2 ಲೀಟರ್‌ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್‌ ಇಂಜಿನ್‌ ಹೊಂದಿದೆ. ಆದರೆ ಇದು ಮುಂಬರುವ ಆರ್‌ಡಿಇ ನಿಯಮಗಳಿಗೆ ಅನುಗುಣವಾಗಿ ಅಪ್ಡೇಟ್‌ ಆಗಿರುವ ಎಂಜಿನ್‌. ಇದರ ಮೋಟಾರ್‌ E20 ಇಂಧನ ಕ್ಷಮತೆ ಹೊಂದಿದ್ದು, 82 ಬಿಎಚ್‌ಪಿ ಮತ್ತು 1143ಎನ್‌ಎಂ ಪೀಕ್‌ ಟಾರ್ಕ್‌ ಅನ್ನು ಅಭಿವೃದ್ಧಿಪಡಿಸಬಲ್ಲದು. ಈ ಹ್ಯಾಚ್‌ಬ್ಯಾಕ್‌ನಲ್ಲಿ 5 ಸ್ಪೀಡ್‌ ಮ್ಯಾನುವಲ್‌ ಗೇರ್‌ ಮತ್ತು ಒಂದು ಎಎಂಟಿ ಘಟಕವೂ ಇದೆ. ಸಿಎನ್‌ಜಿ ವೇರಿಯೆಂಟ್‌ನಲ್ಲಿ 68 ಬಿಎಚ್‌ಪಿ ಮತ್ತು 95 ಎನ್‌ಎಂ ಪೀಕ್‌ ಟಾರ್ಕ್‌ ಹಾಗೂ 5 ಸ್ಪೀಡ್‌ ಮ್ಯಾನುವಲ್‌ ಗೇರ್‌ ಬಾಕ್ಸ್‌ ಇದೆ. ಈ ಕಾರಿನ ಇಂಧನ ಕ್ಷಮತೆ ಮ್ಯಾನುವಲ್‌ನಲ್ಲಾದರೆ ಲೀಟರ್‌ ಇಂಧನಕ್ಕೆ 20.7 ಕಿ.ಮೀ. ಹಾಗೂ ಎಎಂಟಿಯಲ್ಲಾದರೆ ಲೀಟರ್‌ ಇಂಧನಕ್ಕೆ 20.1 ಕಿ.ಮೀ. ಇದೆ ಎಂದು ಕಂಪನಿ ಹೇಳಿಕೊಂಡಿದೆ.

IPL_Entry_Point