logo
ಕನ್ನಡ ಸುದ್ದಿ  /  ಕರ್ನಾಟಕ  /  Vijayapura Crime: ವಿಜಯಪುರದಲ್ಲಿ ವರ್ಷದಲ್ಲೇ 41 ವಂಚನೆ ಪ್ರಕರಣ: ಇನ್‌ಸ್ಟಂಟ್ ಹಣದ ಬೆನ್ನು ಹತ್ತಿ ಆದೀರಿ ಹೈರಾಣ

Vijayapura Crime: ವಿಜಯಪುರದಲ್ಲಿ ವರ್ಷದಲ್ಲೇ 41 ವಂಚನೆ ಪ್ರಕರಣ: ಇನ್‌ಸ್ಟಂಟ್ ಹಣದ ಬೆನ್ನು ಹತ್ತಿ ಆದೀರಿ ಹೈರಾಣ

HT Kannada Desk HT Kannada

Oct 12, 2023 07:00 AM IST

ವಿಜಯಪುರ ಜಿಲ್ಲೆಯಲ್ಲಿ ಆನ್‌ ಲೈನ್‌ ವಂಚನೆ ಹೆಚ್ಚಾಗಿದ್ದು ಎಚ್ಚರವಿರುವಂತೆ ಎಸ್ಪಿ ಋಷಿಕೇಷ ಸೋನವಾಣೆ ಸೂಚಿಸಿದ್ದಾರೆ.

    • Vijayapura Online frauds  ವಿಜಯಪುರ ಜಿಲ್ಲೆಯಲ್ಲಿ ಹಣ ಹೂಡಿಕೆ, ನೌಕರಿ ಸೇರಿಂದತೆ ಯಾವುದೇ ಕಂಪನಿಗಳಿಂದ ಆಮಿಷಗಳು ಬಂದ ಸಂದರ್ಭದಲ್ಲಿ ಆಯಾ ಕಂಪನಿಗಳ ದಾಖಲೆಗಳ ಪರಿಶೀಲನೆ, ಆ ಬಗ್ಗೆ ಮಾಹಿತಿ ಕೊರತೆಯಿಂದ ಜನತೆಯನ್ನು ಮರುಳು ಮಾಡಿ ಅವರಿಂದ ಹಣ ಕಿತ್ತುಕೊಳ್ಳುವುದೇ ಬಂಡವಾಳನ್ನಾಗಿಸಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಆನ್‌ ಲೈನ್‌ ವಂಚನೆ ಹೆಚ್ಚಾಗಿದ್ದು ಎಚ್ಚರವಿರುವಂತೆ ಎಸ್ಪಿ ಋಷಿಕೇಷ ಸೋನವಾಣೆ ಸೂಚಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಆನ್‌ ಲೈನ್‌ ವಂಚನೆ ಹೆಚ್ಚಾಗಿದ್ದು ಎಚ್ಚರವಿರುವಂತೆ ಎಸ್ಪಿ ಋಷಿಕೇಷ ಸೋನವಾಣೆ ಸೂಚಿಸಿದ್ದಾರೆ.

ವಿಜಯಪುರ: ಗಡಿ ಜಿಲ್ಲೆ ವಿಜಯಪುರ ಜಿಲ್ಲೆಯಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಮಾಯಕರೇ ಹೆಚ್ಚು ಹಣ ಕಳೆದುಕೊಳ್ಳುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

ನಿಮ್ಮ ಹಣ ಬ್ಯಾಂಕ್ ಅಲ್ಲಿ ಇರಿಸಿದರೆ ಇಷ್ಟೇ ಬಡ್ಡಿ ಬರಲಿದೆ. ಅದರ ಬದಲಿ ನಮ್ಮಲ್ಲಿ ಹೂಡಿಕೆ ಮಾಡಿ, ಶೇ.10 ರಿಂದ ಶೇ.20 ರಷ್ಟು ಲಾಭ ಕೊಡುತ್ತೇವೆ, ನಿಮಗೊಂದು ಪರ್ಯಾಯ ಆದಾಯ ಮೂಲವಾಗುತ್ತದೆ, ಒಂದು ಮನೆ ಕಟ್ಟಿದರೆ 40 ಲಕ್ಷ ರೂ. ಬೇಕು, ಬಾಡಿಗೆ ಕೊಟ್ಟರೂ 10 ಸಾವಿರ ರೂ. ಬರುವುದು ಅಪರೂಪ, ಕೇವಲ ಎರಡು ಲಕ್ಷ ಹಾಕಿದರೆ ಸಾಕು ಕುಳತಲ್ಲೇ ಆದಾಯ, ಸಾಲ ಮಾಡಿ ಮನೆ ಕಟ್ಟುವ ಬದಲಿ ಲಕ್ಷ ರೂ. ಹೂಡಿಕೆ ಮಾಡಿ ಆದಾಯ ಗಳಿಸಿ... ಇದೇ ಬಣ್ಣದ ಮಾತುಗಳಿಗೆ ಮರಳಾಗಿ ಕೈ ಸುಟ್ಟುಕೊಂಡವರು ಅನೇಕ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬಡ್ಡಿ ದರಕ್ಕೆ ಸಾಲ ನೀಡಿ, ಹಣ ವಾಪಸ್ ಆಗದೇ ವಂಚನೆಗೆ ಒಳಗಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಆನ್ ಲೈನ್ ಮೂಲಕ ಬರುವ ನಾನಾ ಆಮೀಷಗಳಿಗೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ.

ಇಂತಹ ಆಮಿಷಗಳನ್ನು ತೋರಿಸಿ ಅಕೌಂಟ್‌ಗಳಿಂದ ಹಣ ವರ್ಗಾವಣೆ, ಹ್ಯಾಕ್ ಮಾಡುವುದು ಸೇರಿ ನಾನಾ ರೀತಿಯ ವಂಚನೆ ಪ್ರಕರಣಗಳು ಪ್ರತಿನಿತ್ಯ ಒಂದಲ್ಲೊಂದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿವೆ.

ಈಗ ಇದೆಲ್ಲದರ ಮಧ್ಯೆ ನಗರ ಪ್ರದೇಶಗಳಲ್ಲಿ ಕಂಪನಿಯೊಂದರ ಹೆಸರು ಹೇಳಿಕೊಂಡು ಕ್ರಿಪ್ಟೊ ಟ್ರೇಡಿಂಗ್ & ಮೈನಿಂಗ್ ಹೆಸರಿನಲ್ಲಿ ಹೆಚ್ಚಿನ ಹಣದ ಆಸೆ ತೋರಿಸಿ ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿರುವ ಘಟನೆಗಳು ಸಹ ಹೆಚ್ಚಾಗಿವೆ.

ಒಂದು ವರ್ಷದಲ್ಲಿ 41 ಪ್ರಕರಣ

ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ & ಮೈನಿಂಗ್, ಪಾರ್ಟ್ ಟೈಮ್ ಜಾಬ್, ಶೇರ್ ಮಾರ್ಕೇಟ್ ಟ್ರೇಡಿಂಗ್, ಬ್ಯಾಂಕ್ ಕೆ.ವೈ.ಸಿ ಅಪಡೆಟ್, ಗೂಗಲ್ ಮ್ಯಾಪ್ ಲೊಕೇಷನ್ ರಿವೈವ್ & ರೇಟಿಂಗ್, ಫೇಸಬುಕ್ ಇನ್ಸ್ಟಾಗ್ರಾಮ್ ಮಾರ್ಟ್‌, ಆನ್‌ಲೈನ್ ಜೋತಿಷ್ಯ ಮತ್ತು ವಾಸ್ತು, ಕ್ರೆಡಿಟ್ ಡೆಬಿಟ್ ಕಾರ್ಡ್‌ ಒಟಿಪಿ, ಕಂಪನಿ ಫ್ರಾಂಚೈಸಿ & ಡೀಲರ್ ಶಿಪ್, ಮೊಬೈಲ್ ಲೋನ್ ಆ್ಯಪ್ ಗಳ ಹೆಸರಿನಲ್ಲಿ ಜಿಲ್ಲೆಯಾದ್ಯಂತ ಇದುವರೆಗೆ 41 ಪ್ರಕರಣಗಳು ದಾಖಲಾಗಿವೆ.

ಈ 41 ಪ್ರಕರಣಗಳಲ್ಲಿ ಒಟ್ಟು 2,95,11,323 ರೂ. ಗಳು ವಂಚನೆಯಾಗಿದ್ದು, ಈ ಪೈಕಿ ನೊಂದ ದೂರುದಾರರ ಬ್ಯಾಂಕ್ ಖಾತೆಗೆ 1,08,24,887 ರೂ. ಮರಳಿ ಜಮಾ ಆಗಿದೆ. ಇನ್ನುಳಿದಂತೆ ಆರೋಪಿತರ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 99,76,252 ರೂ.ಗಳನ್ನು ಡೇಬಿಟ್ ಪ್ರೀಜ್ ಮಾಡಿಸಿದ್ದು, ಈ ಹಣವನ್ನು ನ್ಯಾಯಾಲಯದ ಆದೇಶ ಪಡೆದುಕೊಂಡು ದೂರುದಾರರಿಗೆ ಮರಳಿ ಕೊಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಎಸ್.ಪಿ ಋಷಿಕೇಶ ಸೋನಾವಣೆ ಮಾಹಿತಿ ನೀಡಿದರು.

ಇನ್ನು ವಂಚನೆಗೊಳಗಾಗದ 23 ಜನ ನೊಂದ ದೂರುದಾರರು ಗೋಲ್ಡನ್ ಅವರ್ (1 ಗಂಟೆ)ನಲ್ಲಿ ನೇರವಾಗಿ ಪೊಲೀಸ್ ಠಾಣೆಗೆ / MHA National Cyber Crime Portal Helpline No: 1930, ವರದಿ ಮಾಡಿದ್ದು, ಸುಮಾರು 11,76,016 ರೂ. ಗಳು ವಂಚನೆಯಾಗಿತ್ತು, ಇದನ್ನು ತನಿಖೆ ನಡೆಸಿದ ಪೊಲೀಸರು ದೂರುದಾರರಿಗೆ 9,40,566 ರೂ. ಗಳನ್ನು ಮರಳಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಸಿದ್ದಾರೆ.

ಜಾಗೃತಿ ಕೊರತೆ

ಇತ್ತೀಚಿನ ದಿನಗಳಲ್ಲಿ ದಾಖಲೆ, ಹಣ ಸೇರಿ ನಾನಾ ರೀತಿಯಲ್ಲಿ ವಂಚನೆ ಪ್ರಕರಣಗಳು ಪ್ರತಿನಿತ್ಯ ಸಾರ್ವಜನಿಕ ವಲಯಗಳಲ್ಲಿ ಹೆಚ್ಚಾಗುತ್ತಿವೆ. ಈ ಬಗ್ಗೆ ಅನೇಕ ಬಾರಿ ಬಹಿರಂಗಗೊಂಡರೂ ಸಾರ್ವಜನಿಕರು ಪದೇ ಪದೆ ವಂಚನೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಜಾಗೃತಿ ಕೊರತೆಯೇ ಪ್ರಮುಖ ಎನ್ನಲಾಗಿದೆ.

ಹಣ ಹೂಡಿಕೆ, ನೌಕರಿ ಸೇರಿಂದತೆ ಯಾವುದೇ ಕಂಪನಿಗಳಿಂದ ಆಮಿಷಗಳು ಬಂದ ಸಂದರ್ಭದಲ್ಲಿ ಆಯಾ ಕಂಪನಿಗಳ ದಾಖಲೆಗಳ ಪರಿಶೀಲನೆ, ಆ ಬಗ್ಗೆ ಮಾಹಿತಿ ಕೊರತೆಯಿಂದ ಜನತೆಯನ್ನು ಮರಳು ಮಾಡಿ ಅವರಿಂದ ಹಣ ಕಿತ್ತುಕೊಳ್ಳುವುದೇ ಬಂಡವಾಳನ್ನಾಗಿಸಿಕೊಂಡಿದ್ದಾರೆ.

ವಂಚನೆಯಿಂದ ಪಾರಾಗಲು ಹೀಗೆ ಮಾಡಿ

ಈ ರೀತಿಯ ವಂಚನೆ ಪ್ರಕರಣಗಳಿದಂದ ಪಾರಾಗಲು ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಷ ಸೋನವಾಣೆ ಕೆಲವು ಸಲಹೆ ನೀಡಿದ್ದಾರೆ.

  • ಅಪರಿಚಿತರೊಂದಿಗೆ ನಿಮ್ಮ ಬ್ಯಾಂಕಿಂಗ್ ಮಾಹಿತಿಗಳಾದ ಡೆಬಿಟ್ /ಕ್ರೆಡಿಟ್ ಕಾರ್ಡ್‌ ನಂಬರ್‌, ಮುಕ್ತಾಯದ ಅವಧಿ, ಸಿವಿವಿ, ಓಟಿಪಿ, ಯುಪಿಐ ಪಿನ್ ಮತ್ತು ಎಂಪಿನ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.
  • ಅಪರಿಚಿತ ಮೂಲದ ಎಸ್.ಎಂ.ಎಸ್, ವ್ಯಾಟ್ಸಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಸ್ವೀಕರಿಸುವ ಸಂದೇಶ, ಇ-ಮೇಲ್ ಗಳಲ್ಲಿ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ
  • ಆನ್‌ಲೈನ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಅನಧಿಕೃತ ಆ್ಯಪ್ ಗಳನ್ನು ಬಳಸಬೇಡಿ
  • ಹೆಚ್ಚಿನ ಲಾಭ ನೀಡುವುದಾಗಿ ಆಮಿಷ ಒಡ್ಡುವ ಆನ್‌ ಲೈನ್ ಮೂಲದ ವೆಬ್ ಸೈಟ್ /ಆ್ಯಪ್ ಗಳ ಮೂಲಕ ಹಣ ಹೂಡಿಕೆ ಮಾಡಬೇಡಿ
  • ಆನ್‌ ಲೈನ್ ಮೂಲಕ ಉದ್ಯೋಗ ಕೊಡಿಸುವುದಾಗಿ ಹಣದ ಬೇಡಿಕೆ ಇಟ್ಟಲ್ಲಿ, ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಬೇಡಿ.
  • ನಿಮಗೆ ಲಾಟರಿ, ಉಡುಗೊರೆ ಇತ್ಯಾದಿ ಬಂದಿದೆ ಎಂದು ಪ್ರಚೋದಿಸಿ, ಅವುಗಳನ್ನು ಪಡೆಯಲು ವಿವಿಧ ಶುಲ್ಕ ಪಾವತಿಸಬೇಕೆಂದು ಹಣದ ಬೇಡಿಕೆ ಇಟ್ಟಲ್ಲಿ ಹಣವನ್ನು ಪಾವತಿಸಬೇಡಿ.
  • ನಿಮ್ಮ ಬ್ಯಾಂಕ್ ಖಾತೆಗೆ, ಸಾಮಾಜಿಕ ಜಾಲತಾಣದ ಖಾತೆಗಳಿಗೆ ಕಠಿಣ ಪಾಸವರ್ಡಗಳನ್ನು ಬಳಸಿ,
  • ಅಲ್ಲದೇ Two Factor Authentication ಕೂಡಾ ಅಳವಡಿಸಿಕೊಳ್ಳಿ.
  • ಯುಪಿಐ ಕ್ಯೂಆರ್ ಕೋಡ್‌ ಗಳು ಕೇವಲ ಹಣ ಸಂದಾಯಕ್ಕಾಗಿ ಮಾತ್ರ ಇದ್ದು, ಹಣ ಸ್ವೀಕರಿಸಲು ಅಲ್ಲ.
  • ಕೃತಕ ಬುದ್ಧಿಮತ್ತೆ (Artificial Intelligence) ಮುಖಾಂತರ ವ್ಯಕ್ತಿಗಳ ನಕಲು ವಿಡಿಯೋ ಕಾಲ್ ಮಾಡಿ ವಂಚಿಸಲಾಗುತ್ತಿದ್ದು ಇಂತಹ ಕರೆಗಳ ಬಗ್ಗೆ ಜಾಗೃತಿ ವಹಿಸಿ.
  • ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ದೂರು ನೀಡಲು ಉಚಿತ ಸಹಾಯವಾಣಿ ಸಂಖ್ಯೆ: 1930 ಗೆ ಕರೆ ಮಾಡಿ ದೂರನ್ನು ನೊಂದಾಯಿಸಿ

(ಸಮೀ ಉಸ್ತಾದ್‌, ವಿಜಯಪುರ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ