logo
ಕನ್ನಡ ಸುದ್ದಿ  /  ಜೀವನಶೈಲಿ  /  ನವೋದಯ ವಿದ್ಯಾಲಯದಲ್ಲಿ ವಿವಿಧ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಪೂರ್ಣ ವಿವರ ಇಲ್ಲಿದೆ -Navodaya Vidyalaya Recruitment

ನವೋದಯ ವಿದ್ಯಾಲಯದಲ್ಲಿ ವಿವಿಧ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಪೂರ್ಣ ವಿವರ ಇಲ್ಲಿದೆ -Navodaya Vidyalaya Recruitment

Raghavendra M Y HT Kannada

Mar 29, 2024 06:22 PM IST

google News

ನವೋದಯ ವಿದ್ಯಾಲಯದಲ್ಲಿ ವಿವಿಧ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗಾಗಿ ಸಂಪೂರ್ಣ ಮಾಹಿತಿ ಇಲ್ಲಿದೆ.

    • ನವೋದಯ ವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎನ್‌ಟಿಎ ವೆಬ್‌ಸೈಟ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ನವೋದಯ ವಿದ್ಯಾಲಯದಲ್ಲಿ ವಿವಿಧ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗಾಗಿ ಸಂಪೂರ್ಣ ಮಾಹಿತಿ ಇಲ್ಲಿದೆ.
ನವೋದಯ ವಿದ್ಯಾಲಯದಲ್ಲಿ ವಿವಿಧ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗಾಗಿ ಸಂಪೂರ್ಣ ಮಾಹಿತಿ ಇಲ್ಲಿದೆ.

ನವೋದಯ ವಿದ್ಯಾಲಯ ಸಮಿತಿಯ (ಎನ್‌ವಿಎಸ್) ಬೋಧಕೇತರ ಹುದ್ದೆಗಳ ಭರ್ತಿಗೆ ಮುಂದಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನೇಮಕಾತಿಯನ್ನು ನಡೆಸಲಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಎನ್‌ಟಿಎ ಅಧಿಕೃತ ವೆಬ್‌ಸೈಟ್ exams.nta.ac.in/nvs ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನವೋದಯ ವಿದ್ಯಾಲಯ ಬೋಧಕೇತರ ಹುದ್ದೆಗಳ ನೇಮಕಾತಿ ವಿವರ

ಮಹಿಳಾ ಸ್ಟಾಫ್ ನರ್ಸ್: 121

ಸಹಾಯಕ ಸೆಕ್ಷನ್ ಆಫೀಸರ್: 5 ಹುದ್ದೆಗಳು

ಆಡಿಟ್ ಅಸಿಸ್ಟೆಂಟ್: 12 ಹುದ್ದೆಗಳು

ಜೂನಿಯರ್ ಟ್ರಾನ್ಸ್‌ಲೇಷನ್ ಆಫೀಸರ್: 4 ಹುದ್ದೆಗಳು

ಲೀಗಲ್ ಅಸಿಸ್ಟೆಂಟ್: 1 ಹುದ್ದೆಗಳು

ಸ್ಟೆನೋಗ್ರಾಫರ್: 23 ಹುದ್ದೆಗಳು

ಕಂಪ್ಯೂಟರ್ ಆಪರೇಟರ್: 2 ಹುದ್ದೆಗಳು

ಕ್ಯಾಟರಿಂಗ್ ಸೂಪರ್‌ವೈಸರ್: 78 ಹುದ್ದೆಗಳು

ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್: 381 ಹುದ್ದೆಗಳು

ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್: 128 ಹುದ್ದೆಗಳು

ಲ್ಯಾಬ್ ಅಟೆಂಡೆಂಟ್: 161 ಹುದ್ದೆಗಳು

ಮೆಸ್ ಹೆಲ್ಪರ್: 442 ಹುದ್ದೆಗಳು

ಎಂಟಿಎಸ್: 19 ಹುದ್ದೆಗಳು

ಅರ್ಹತಾ ಮಾನದಂಡ ಮತ್ತು ಇತರ ಸಂಬಂಧಿತ ಮಾಹಿತಿಯನ್ನು ತಿಳಿದುಕೊಳ್ಳಲು, ಆಸಕ್ತ ಅಭ್ಯರ್ಥಿಗಳು ವಿವರವಾದ ಅಧಿಸೂಚನೆಯನ್ನು navodaya.gov.in ವೆಬ್‌ಸೈಟ್‌ ಅನ್ನು ಪರಿಶೀಲಿಸಬಹುದು. ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಮಾಹಿತಿಯನ್ನು ಪಡೆಯಬಹುದು.

ಎನ್‌ವಿಎಸ್ ಬೋಧಕೇತರ ನೇಮಕಾತಿ 2024: ಪ್ರಮುಖ ದಿನಾಂಕಗಳು ಮತ್ತು ವಿವರಗಳು

ಮಾರ್ಚ್ 22 ರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, 2024ರ ಏಪ್ರಿಲ್ 30 (ಸಂಜೆ 5 ರೊಳಗೆ) ಅರ್ಜಿ ಸಲ್ಲಿಕೆಗೆ ಕೊನೆಯಿ ದಿನವಾಗಿದೆ.

ಶುಲ್ಕ ಪಾವತಿಗೆ ಕೊನೆಯ ದಿನಾಂಕ: ಏಪ್ರಿಲ್ 30 (ಸಂಜೆ 5 ಗಂಟೆ)

ಅರ್ಜಿ ನಮೂನೆಯ ವಿವರಗಳಲ್ಲಿ ತಿದ್ದುಪಡಿ: ಮೇ 2 ರಿಂದ 4.

ಪ್ರವೇಶ ಪತ್ರ ಡೌನ್ಲೋಡ್ ದಿನಾಂಕ: ನಂತರ ಪ್ರಕಟಿಸಲಾಗಿಸುತ್ತದೆ

ಪರೀಕ್ಷೆಯ ದಿನಾಂಕ: ನಂತರ ಪ್ರಕಟಿಸಲಾಗುತ್ತದೆ

ಅಧಿಕೃತ ವೆಬ್‌ಸೈಟ್‌ಗಳು: exams.nta.ac.in/NVS/ ಮತ್ತು navodaya.gov.in

ಸ್ಟಾಫ್ ನರ್ಸ್ ಹುದ್ದೆಗಳಿಗೆ ಅರ್ಜಿ ಶುಲ್ಕ ಮಹಿಳಾ ಅಭ್ಯರ್ಥಿಗಳಿಗೆ 1,500 ರೂಪಾಯಿ ಮತ್ತು ಎಸ್ಸಿ, ಎಸ್ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 500 ರೂಪಾಯಿ. ಇತರೆ ಎಲ್ಲಾ ಹುದ್ದೆಗಳಿಗೆ ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 500 ರೂ., ಇತರೆ ವರ್ಗದ ಅಭ್ಯರ್ಥಿಗಳಿಗೆ 1,000 ರೂಪಾಯಿ ಶುಲ್ಕ ಇರುತ್ತದೆ.

ಅರ್ಜಿ ಸಲ್ಲಿಸಲು ನೇರ ಲಿಂಕ್

ಎನ್‌ಟಿಎ ಅಧಿಸೂಚನೆಗೆ ಸಂಬಂಧಿಸಿದ ಮಾಹಿತಿಗಾಗಿ ಈ ಕೆಳಗೆ ನೀಡಲಾಗಿರುವ ಸಂಖ್ಯೆಗೆ ಕರೆ ಮಾಡಿ ಅಥವಾ ಇಮೇಲ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆ ದೇಶಾದ್ಯಂತ ಎನ್‌ವಿಎಸ್ ಪ್ರಧಾನ ಕಚೇರಿಗಳು, ಪ್ರಾದೇಶಿಕ ಕಚೇರಿಗಳು, ಎನ್ಎಲ್ಐಗಳು ಮತ್ತು ಜವಾಹರ್ ನವೋದಯ ವಿದ್ಯಾಲಯಗಳಲ್ಲಿ (ಜೆಎನ್‌ವಿ) ನೇರ ನೇಮಕಾತಿ ಆಧಾರದ ಮೇಲೆ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುತ್ತದೆ.

ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಯಾವುದೇ ಸಹಾಯಕ್ಕಾಗಿ, ಅಭ್ಯರ್ಥಿಗಳು ಎನ್‌ಟಿಎಯನ್ನು 011-40759000 / 011-69227700 ಗೆ ಸಂಪರ್ಕಿಸಬಹುದು ಅಥವಾ nvsre.nt@nta.ac.in ನಲ್ಲಿ ಇಮೇಲ್ ಮಾಡಬಹುದು. ಇತರ ನವೀಕರಣಗಳಿಗಾಗಿ ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್‌ಸೈಟ್ navodaya.gov.in ಗೆ ಭೇಟಿ ನೀಡಿ ಅಥವಾ ಎನ್‌ಟಿಎ ವೆಬ್‌ಸೈಟ್‌ಗಳಾದ nta.ac.in ಮತ್ತು exams.nta.ac.in ಗೆ ಭೇಟಿ ನೀಡಬಹುದು.

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ bankofindia.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆ ಸ್ಕೇಲ್ 4 ರವರೆಗೆ ವಿವಿಧ ವಿಭಾಗಗಳಲ್ಲಿ ಅಧಿಕಾರಿಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಮಾರ್ಚ್ 27ರ ಬುಧವಾರದಿಂದ ಪ್ರಾರಂಭವಾಗಿದ್ದು, ಏಪ್ರಿಲ್ 10 ರ ಬುಧವಾರ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಕೊನೆಗೊಳ್ಳುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ