logo
ಕನ್ನಡ ಸುದ್ದಿ  /  ಜೀವನಶೈಲಿ  /  Tesla Car: ಭಾರತದಲ್ಲಿ ಮೊದಲ ಬಾರಿ ತಯಾರಾಗುತ್ತಿದೆ ಟೆಸ್ಲಾ ಕಾರು; 17 ಲಕ್ಷ ಮೌಲ್ಯದ ಈ ಕಾರಿನ ಕುರಿತು ಒಂದಿಷ್ಟು ಮಾಹಿತಿ

Tesla Car: ಭಾರತದಲ್ಲಿ ಮೊದಲ ಬಾರಿ ತಯಾರಾಗುತ್ತಿದೆ ಟೆಸ್ಲಾ ಕಾರು; 17 ಲಕ್ಷ ಮೌಲ್ಯದ ಈ ಕಾರಿನ ಕುರಿತು ಒಂದಿಷ್ಟು ಮಾಹಿತಿ

Reshma HT Kannada

Nov 25, 2023 07:15 AM IST

ಟೆಸ್ಲಾ ಕಾರು (ಸಾಂದರ್ಭಿಕ ಚಿತ್ರ)

    • ಕಾರು ಕ್ರೇಜ್‌ ನಿಮಗಿದ್ದರೆ ಇಲ್ಲಿ ಕೇಳಿ, ಭಾರತದಲ್ಲಿ ಮೊದಲ ಬಾರಿ ಟೆಸ್ಲಾ ಕಾರೊಂದು ತಯಾರಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇದರ ಬೆಲೆ ಅಂದಾಜು 16.67 ಲಕ್ಷ. ಈ ಕಾರಿನ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.
ಟೆಸ್ಲಾ ಕಾರು (ಸಾಂದರ್ಭಿಕ ಚಿತ್ರ)
ಟೆಸ್ಲಾ ಕಾರು (ಸಾಂದರ್ಭಿಕ ಚಿತ್ರ) (Gaadiwaadi.com)

ಕಾರು ಪ್ರಿಯರು ಈ ಸುದ್ದಿ ಕೇಳಿದರೆ ಖಂಡಿತ ಖುಷಿ ಪಡುತ್ತಾರೆ. ಟೆಸ್ಲಾ ಕಾರು ಭಾರತದಲ್ಲೇ ತಯಾರಾಗಲು ಸನ್ನದ್ಧವಾಗಿದೆ. ಮುಂದಿನ 24 ತಿಂಗಳ ಅವಧಿಯಲ್ಲಿ ಟೆಸ್ಲಾವು ತನ್ನ ಉತ್ಪಾದನಾ ಘಟಕವನ್ನು ಭಾರತದಲ್ಲಿ ಆರಂಭ ಮಾಡಲಿದೆ.

ಟ್ರೆಂಡಿಂಗ್​ ಸುದ್ದಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಅಮೆರಿಕನ್‌ ಇವಿ ಮಾರುಕಟ್ಟೆಯು ಕಳೆದು ಕೆಲವು ವರ್ಷಗಳಿಂದ ಜೀರೋ ಎಮಿಷನ್‌ ಪ್ಯಾಸೆಂಜರ್‌ ವಾಹನವನ್ನು ತಯಾರಿಸಿ ಮಾರಾಟ ಮಾಡುತ್ತಿದೆ.

2024ರ ಜನವರಿಯಲ್ಲಿ ನಡೆಯಲಿರುವ ವೈಬ್ರೆಂಟ್‌ ಗುಜರಾತ್‌ ಗ್ಲೋಬಲ್‌ ಶೃಂಗಸಭೆಯಲ್ಲಿ ಈ ಟೆಸ್ಲಾ ಕಾರು ಮಾರುಕಟ್ಟೆ ಪ್ರವೇಶದ ಬಗ್ಗೆ ಪ್ರಕಟಣೆ ಹೊರಡಿಸಬಹುದು ಎಂದು ಹೇಳಲಾಗುತ್ತಿದೆ. ತಮಿಳುನಾಡು, ಮಹಾರಾಷ್ಟ್ರ ಮತ್ತು ಗುಜರಾತ್‌ನಂತಹ ರಾಜ್ಯಗಳು ಈಗಾಗಲೇ ಸ್ಥಾಪನೆಯಾಗಿರುವ ಸಂಪನ್ಮೂಲ ಮೂಲಗಳಿಂದ ಭವಿಷ್ಯದ ಕಾರ್ಖಾನೆಯನ್ನು ಸ್ಥಾಪಿಸಲು ಚಾಲನೆಯಲ್ಲಿವೆ. ಹಲವು ಜಾಗತಿಕ ಹಾಗೂ ದೇಶಿಯ ವಾಹನ ತಯಾಕರು ಅಲ್ಲಿಂದ ಉತ್ಪನ್ನಗಳನ್ನು ಹೊರ ತರುತ್ತಿದ್ದಾರೆ.

ಉತ್ಪಾದನಾ ಘಟಕ ಸ್ಥಾಪನೆಗೆ ಟೆಸ್ಲಾ ಕಂಪನಿಯು ಕನಿಷ್ಠ 2 ಶತಕೋಟಿ ಹೂಡಿಕೆ ಮಾಡುವುದರ ಮೇಲೆ ಕೇಂದ್ರೀಕರಿಸುತ್ತಿದೆ ಎಂದು ಹೇಳಲಾಗುತ್ತದೆ. ಆರ್ಥಿಕತೆಯ ಪ್ರಮಾಣ ಹಾಗೂ ಬೆಲೆಗಳನ್ನು ಸ್ಪರ್ಧಾತ್ಮಕವಾಗಿಸಲು ಟೆಸ್ಲಾವು ಬ್ಯಾಟರಿಗಳು ಪ್ಯಾಕ್‌ಗಳು ಮತ್ತು ಸಂಬಂಧಿತ ಭಾಗಗಳನ್ನು ದೇಶೀಯವಾಗಿ ಮತ್ತು ಭವಿಷ್ಯದಲ್ಲಿ ಉತ್ಪಾದಿಸಲು ಸಹ ಎದುರು ನೋಡುತ್ತಿವೆ.

ಈ ಬಗ್ಗೆ ಯಾವುದೇ ಅಧಿಕೃತ ಧೃಢೀಕರಣ ಇನ್ನೂ ಮಾಡಲಿಲ್ಲವಾದರೂ ಸ್ಥಳೀಯ ಅಧಿಕಾರಿಗಳು ಮತ್ತು ಟೆಸ್ಲಾ ನಡುವಿನ ಸಂಬಂಧವು ಇತ್ತೀಚಿನ ದಿನಗಳಲ್ಲಿ ಖಂಡಿತವಾಗಿಯೂ ಸುಧಾರಿಸಿರುವುದನ್ನು ಗಮನಿಸಬಹುದಾಗಿದೆ. ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ 2023ರ ಮಧ್ಯದಲ್ಲಿ ಭಾರತದಲ್ಲಿ ಭಾರಿ ಹೂಡಿಕೆ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಟೆಸ್ಲಾ ಕಂಪನಿಯು ಹೊಸ ಕಾರ್ಖಾನೆಗಳನ್ನು ಸ್ಥಾಪಿಸುವುದರ ಜೊತೆಗೆ ಜಗತ್ತಿನಾದ್ಯಂತ ತನ್ನ ಅಸ್ತಿತ್ವವನ್ನು ವೇಗವಾಗಿ ವಿಸ್ತರಿಸುತ್ತಿದೆ.

ಸದ್ಯ ಟೆಸ್ಲಾವು ಅಮೆರಿಕ, ಚೀನಾ ಹಾಗೂ ಜರ್ಮನಿಯಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ಉತ್ಪಾದಿಸುತ್ತಿದೆ. ಭಾರತೀಯ ಇವಿ ಮಾರುಕಟ್ಟೆಯು ಉತ್ತಮ ಆರಂಭವನ್ನು ಪಡೆದುಕೊಂಡಿದೆ, ಆದರೆ ಇದು ವ್ಯಾಪಕ ಗ್ರಾಹಕರ ನೆಲೆಯನ್ನು ಆಕರ್ಷಿಸಲು ಬಹಳ ದೂರದಲ್ಲಿದೆ. ಮುಂದಿನ ಮೂರು ವರ್ಷಗಳಲ್ಲಿ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ, ಮಹೀಂದ್ರಾ, ಹೋಂಡಾ, ಕಿಯಾ ಮತ್ತು ಟೊಯೋಟಾದಂತಹ ಮುಖ್ಯವಾಹಿನಿಯ ಬ್ರ್ಯಾಂಡ್‌ಗಳು ಹೊಸ ಮಾದರಿಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿರುವುದರಿಂದ ಇವುಗಳ ನಡುವೆ ಟೆಸ್ಲಾ ಗಮನಾರ್ಹ ಚಟುವಟಿಕೆಯನ್ನು ಕಾಣಬಹುದು.

ಐಷಾರಾಮಿ ಕಾರುಗಳ ವಿಭಾಗದಲ್ಲಿ ಹಲವರು ಈಗಾಗಲೇ ಇವಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಹಲವು ಇದನ್ನು ಮೆಚ್ಚಿ ಖರೀದಿಸುತ್ತಿದ್ದಾರೆ. ವರದಿಗಳ ಪ್ರಕಾರ ಭಾರತದಲ್ಲಿ ತಯಾರಾದ ಮೊದಲ ಟೆಸ್ಲಾ ಕಾರಿನ ಬೆಲೆ ಅಂದಾಜು 16.67 ಲಕ್ಷ ಎನ್ನಲಾಗುತ್ತಿದೆ.

    ಹಂಚಿಕೊಳ್ಳಲು ಲೇಖನಗಳು