logo
ಕನ್ನಡ ಸುದ್ದಿ  /  ಜೀವನಶೈಲಿ  /  Kia Ev9 Price: ಟೆಸ್ಟ್ ಡ್ರೈವ್ ಪಾಸಾದ ಕಿಯಾ ಇವಿ9; ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿರುವ ಎಲೆಕ್ಟ್ರಿಕ್ ಕಾರಿನ ಬೆಲೆ ಹೀಗಿದೆ

Kia EV9 Price: ಟೆಸ್ಟ್ ಡ್ರೈವ್ ಪಾಸಾದ ಕಿಯಾ ಇವಿ9; ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿರುವ ಎಲೆಕ್ಟ್ರಿಕ್ ಕಾರಿನ ಬೆಲೆ ಹೀಗಿದೆ

Raghavendra M Y HT Kannada

Feb 04, 2024 08:07 AM IST

ಕಿಯಾ ಇವಿ9 ಎಲೆಕ್ಟ್ರಿಕ್‌ ಕಾರು ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಬರಲಿದೆ. ಈ ಕಾರಿನ ಬೆಲೆ ಮತ್ತು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.

  • Kia EV9 electric SUV: ಕಿಯಾ ಇವಿ9 ಎಲೆಕ್ಟ್ರಿಕ್‌ ಕಾರು ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಬರಲಿದೆ. 'ಟೆಸ್ಟ್ ಡ್ರೈವ್ ಪಾಸಾದ ಕಾರಿನ ಬೆಲೆ, ವೈಶಿಷ್ಟ್ಯಗಳನ್ನ ತಿಳಿಯೋಣ.

ಕಿಯಾ ಇವಿ9 ಎಲೆಕ್ಟ್ರಿಕ್‌ ಕಾರು ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಬರಲಿದೆ. ಈ ಕಾರಿನ ಬೆಲೆ ಮತ್ತು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.
ಕಿಯಾ ಇವಿ9 ಎಲೆಕ್ಟ್ರಿಕ್‌ ಕಾರು ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಬರಲಿದೆ. ಈ ಕಾರಿನ ಬೆಲೆ ಮತ್ತು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.

ಬೆಂಗಳೂರು: ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡುತ್ತಿರುವ ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ (Kia Motors) ಎಲೆಕ್ಟ್ರಿಕ್ ವಾಹನ ವಿಭಾಗದ ಮೇಲೆ ಹೆಚ್ಚು ಕೇಂದ್ರೀಕರಿಸಿದೆ. ಇದರ ಭಾಗವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಿಯಾ ಇವಿ9 ಎಲೆಕ್ಟ್ರಿಕ್ ಎಸ್‌ಯುವಿ (Kia EV9 Electric SUV) ಭಾರತದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

ಟ್ರೆಂಡಿಂಗ್​ ಸುದ್ದಿ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

IDIOT Syndrome: ಏನಿದು ಈಡಿಯಟ್‌ ಸಿಂಡ್ರೋಮ್‌? ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ

ಈ ಪ್ರಸಿದ್ಧ ಆಟೋಮೊಬೈಲ್ ಕಂಪನಿಯು ಕಳೆದ ವರ್ಷವೇ 2024 ರಲ್ಲಿ ಭಾರತದಲ್ಲಿ ಕಿಯಾ ಇವಿ9 ಎಲೆಕ್ಟ್ರಿಕ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ಈಗ ವಿನ್ಯಾಸ ಹಾಗೂ ವೈಶಿಷ್ಟ್ಯಗಳೊಂದಿಗೆ ಕಿಯಾ ಇವಿ9 ಹೊರಬಂದಿದೆ. ಈ ಎಲೆಕ್ಟ್ರಿಕ್ ಕಾರು ಭಾರತೀಯ ರಸ್ತೆಗಳಲ್ಲಿ ಟೆಸ್ಟ್ ಡ್ರೈವ್ ಮಾಡುತ್ತಿರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಈ ಎಲೆಕ್ಟ್ರಿಕ್ ವಾಹನದ ವಿಶೇಷಗಳೇನು ಎಂಬ ವಿವರಗಳನ್ನು ತಿಳಿಯೋಣ.

ಕಿಯಾ ಇವಿ9 ಎಲೆಕ್ಟ್ರಿಕ್ ಎಸ್‌ಯುವಿ ವೈಶಿಷ್ಟ್ಯಗಳು

ಕಿಯಾ ಇವಿ9 ಪ್ರೀಮಿಯಂ ಕಾರು. ಹೊಸ ಕಾರಿನಲ್ಲಿ ಬ್ಲಾಂಕ್ಡ್ ಆಫ್ ಗ್ರಿಲ್, ವರ್ಟಿಕಲ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಇಂಟಿಗ್ರೇಟೆಡ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು, ಸ್ಲೀಕ್ ಎಲ್ಇಡಿ ಟೈಲ್‌ಲೈಟ್‌ಗಳು, ಫ್ಲಶ್ ಫಿಟೆಡ್ ಡೋರ್ ಹ್ಯಾಂಡಲ್‌ಗಳು ಬರಲಿವೆ. ಇದು 21 ಇಂಚಿನ ಡ್ಯುಯಲ್ ಟೋನ್ ಚಕ್ರಗಳನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಕಾರಿನ ಒಳಭಾಗವು ತುಂಬಾ ವಿಶಾಲವಾಗಿದೆ. ಮಿನಿಮಲ್ಟೀಸ್ ವಿನ್ಯಾಸ, 4 ಸ್ಪೋಕ್ ಸ್ಟೀರಿಂಗ್ ವೀಲ್, ಪನೋರಮಿಕ್ ಸನ್‌ರೂಫ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ದೊಡ್ಡ ಡಿಸ್‌ಪ್ಲೇ ಇದೆ. ಕಿಯಾ ಮೋಟಾರ್ಸ್ ಈ ಕಿಯಾ ಇವಿ9 ಎಲೆಕ್ಟ್ರಿಕ್ ಎಸ್‌ಯುವಿಯನ್ನು e-GMP (ಎಲೆಕ್ಟ್ರಿಕ್ ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್) ನಲ್ಲಿ ನಿರ್ಮಿಸಲಾಗಿದೆ. ಇದರ ಉದ್ದ 5,000 ಮಿಮೀ. ವೀಲ್‌ಬೇಸ್ 3,1000 ಮಿಮೀ ಇದ್ದು, ಗಾತ್ರದಲ್ಲಿಈ ಕಾರು ತುಂಬಾ ದೊಡ್ಡದಾಗಿದೆ!

ಅಂತಾರಾಷ್ಟ್ರೀಯ ಕಿಯಾ ಇವಿ9 76.1ಕೆಡಬ್ಲ್ಯೂಹೆಚ್, 99.8 ಕೆಡಬ್ಲ್ಯೂಹೆಚ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ. ಒಮ್ಮೆ ಜಾರ್ಚ್ ಮಾಡಿದರೆ 540 ಕಿಲೋ ಮೀಟರ್ ಓಡುವ ಸಾಮರ್ಥ್ಯ ಹೊಂದಿದೆ. ಕಿಯಾ ಎಲೆಕ್ಟ್ರಿಕ್ ವಾಹನಕ್ಕೆ 800 ವೋಲ್ಟ್ ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಲಭ್ಯವಿದೆ. ಭಾರತದಲ್ಲಿ ಯಾವ ಬ್ಯಾಟರಿ ಪ್ಯಾಕ್ ಇರಲಿದೆ ಎಂಬುದನ್ನು ಕಾದು ನೋಡಬೇಕು.

ಇವಿ9 ಎಲೆಕ್ಟ್ರಿಕ್ ಎಸ್‌ಯುವಿ ಬೆಲೆ ಎಷ್ಟು?

ಇವಿ9 ಎಲೆಕ್ಟ್ರಿಕ್ ಎಸ್‌ಯುವಿ ಬೆಲೆಯ ವಿವರಗಳು ಪ್ರಸ್ತುತ ಲಭ್ಯವಿಲ್ಲ. ಆದರೆ ಇದು ಪ್ರೀಮಿಯಂ ಕಾರ್ ಆಗಿರುವುದರಿಂದ. ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ 40 ಲಕ್ಷಕ್ಕೂ ಹೆಚ್ಚು ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸುತ್ತವೆ. ಇವಿ9 ಎಲೆಕ್ಟ್ರಿಕ್ ಎಸ್‌ಯುವಿಯ ಇತರ ವೈಶಿಷ್ಟ್ಯಗಳು ಮತ್ತು ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಕಂಪನಿಯು ಶೀಘ್ರದಲ್ಲೇ ಈ ಕಾರಿನ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ.

ಇವಿ9 ಎಲೆಕ್ಟ್ರಿಕ್ ಎಸ್‌ಯುವಿ ಎಲೆಕ್ಟ್ರಿಕ್ SUV ಅನ್ನು ಕಂಪನಿಯು ಜನವರಿ 2023 ರಲ್ಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿತ್ತು. ಅಂದಿನಿಂದ ಈ ಮಾದರಿಯ ಬಗ್ಗೆ ಉತ್ತಮ ಆಸಕ್ತಿ ಇದೆ. ವಾಸ್ತವವಾಗಿ, ಈ ಮಾದರಿಯನ್ನು 2025 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಿಯಾ ಮೋಟಾರ್ಸ್ ಆ ಸಮಯದಲ್ಲಿ ಹೇಳಿತ್ತು. ಆದರೆ ಈಗ 2025ರ ಬದಲಾಗಿ 2024 ರಲ್ಲೇ ಭಾರತೀಯ ಮಾರುಕಟ್ಟೆಗೆ ತರಲಾಗುತ್ತದೆ ಎಂದು ಹೇಳಿದೆ.

ಟಾಟಾ ಮೋಟಾರ್ಸ್ ಪ್ರಾಬಲ್ಯ ಹೊಂದಿರುವ ಭಾರತದ ಇವಿ ವಿಭಾಗದಲ್ಲಿ ಶೇಕಡಾ 15 ಪ್ರತಿಶತ ಮಾರುಕಟ್ಟೆ ಪಾಲನ್ನು ಪಡೆಯುವ ಗುರಿಯನ್ನು ಕಿಯಾ ಮೋಟಾರ್ಸ್ ಹೊಂದಿದೆ. ಗುರಿಯ ಭಾಗವಾಗಿ, ಕಂಪನಿಯು ಭಾರತದಲ್ಲಿ ಇವಿಗಳನ್ನು ಪ್ರಾರಂಭಿಸುವ ಯೋಜನೆಗಳನ್ನು ರೂಪಿಸುತ್ತಿದೆ. (This copy first appeared in Hindustan Times Kannada website. To read more like this please logon to kannada.hindustantime.com).

    ಹಂಚಿಕೊಳ್ಳಲು ಲೇಖನಗಳು