logo
ಕನ್ನಡ ಸುದ್ದಿ  /  ಜೀವನಶೈಲಿ  /  Volkswagen Virtus: ಫೋಕ್ಸ್‌ವ್ಯಾಗನ್ ವರ್ಟೂಸ್‌ ಕಾರಿಗೆ 1.17 ಲಕ್ಷ ರೂ.ವರೆಗೆ ರಿಯಾಯಿತಿ: ಡಿ.31ಕ್ಕೆ ಆಫರ್ ಕ್ಲೋಸ್​

Volkswagen Virtus: ಫೋಕ್ಸ್‌ವ್ಯಾಗನ್ ವರ್ಟೂಸ್‌ ಕಾರಿಗೆ 1.17 ಲಕ್ಷ ರೂ.ವರೆಗೆ ರಿಯಾಯಿತಿ: ಡಿ.31ಕ್ಕೆ ಆಫರ್ ಕ್ಲೋಸ್​

HT Kannada Desk HT Kannada

Dec 04, 2023 02:43 PM IST

ಫೋಕ್ಸ್‌ವ್ಯಾಗನ್ ವರ್ಟೂಸ್‌ ಕಾರು

    • ಫೋಕ್ಸ್‌ವ್ಯಾಗನ್ ವರ್ಟೂಸ್‌ (Volkswagen Virtus) ಕಾರು ಖರೀದಿಸಲು ಬಯಸುವವರು 1.17 ಲಕ್ಷ ರೂ.ವರೆಗೆ ಭರ್ಜರಿ ರಿಯಾಯಿತಿ ಪಡೆಯಬಹುದಾಗಿದೆ. ಈ ಡಿಸ್ಲೌಂಟ್​ ಈ ತಿಂಗಳ ಅಂತ್ಯ ಅಂದರೆ ಡಿಸೆಂಬರ್​ 31 ರವರೆಗೆ ಮಾತ್ರ ಲಭ್ಯವಿರುತ್ತದೆ.
ಫೋಕ್ಸ್‌ವ್ಯಾಗನ್ ವರ್ಟೂಸ್‌ ಕಾರು
ಫೋಕ್ಸ್‌ವ್ಯಾಗನ್ ವರ್ಟೂಸ್‌ ಕಾರು

2023ರ ಅಂತ್ಯಕ್ಕೆ ನಾವು ಬಂದಿದ್ದು, ಅನೇಕ ಆಟೋಮೊಬೈಲ್ ಕಂಪನಿಗಳು ತನ್ನ ಉತ್ಪನ್ನಗಳ ಮೇಲೆ ಗಮನಾರ್ಹ ರಿಯಾಯಿತಿಗಳನ್ನು ನೀಡುತ್ತಿವೆ. ಜನಪ್ರಿಯ ಕಾರು ತಯಾರಿಕಾ ಕಂಪನಿಯಾದ ಫೋಕ್ಸ್‌ವ್ಯಾಗನ್ ಇಂಡಿಯಾ (Volkswagen India) ವರ್ಷಾಂತ್ಯದ ಕೊಡುಗೆಗಳನ್ನು ಈಗಾಗಲೇ ಘೋಷಿಸಿದೆ.

ಟ್ರೆಂಡಿಂಗ್​ ಸುದ್ದಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಫೋಕ್ಸ್‌ವ್ಯಾಗನ್ ವರ್ಟೂಸ್‌ (Volkswagen Virtus) ಕಾರು ಖರೀದಿಸಲು ಬಯಸುವವರು 1.17 ಲಕ್ಷ ರೂ.ವರೆಗೆ ಭರ್ಜರಿ ರಿಯಾಯಿತಿ ಪಡೆಯಬಹುದಾಗಿದೆ. ಈ ಡಿಸ್ಲೌಂಟ್​ ಈ ತಿಂಗಳ ಅಂತ್ಯ ಅಂದರೆ ಡಿಸೆಂಬರ್​ 31 ರವರೆಗೆ ಮಾತ್ರ ಲಭ್ಯವಿರುತ್ತದೆ.

ಫೋಕ್ಸ್‌ವ್ಯಾಗನ್ ವರ್ಟೂಸ್‌ ಕಾರು ಕಂಫರ್ಟ್‌ಲೈನ್, ಹೈಲೈನ್, ಟಾಪ್‌ಲೈನ್, ಜಿಟಿ, ಜಿಟಿ ಪ್ಲಸ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಸೌಂಡ್ ಎಡಿಷನ್ ಸೇರಿದಂತೆ ಅನೇಕ ರೂಪಾಂತರಗಳಲ್ಲಿ ಲಭ್ಯವಿದೆ. ಈ ಕಾರಿನ ಮೇಲೆ 50,000 ರೂಪಾಯಿವರೆಗೆ ನಗದು ರಿಯಾಯಿತಿ, 20,000 ರೂ ಎಕ್ಸ್​ಚೇಂಜ್​ ಬೋನಸ್​, 17,00 ರೂ.ಕಾರ್ಪೊರೇಟ್ ರಿಯಾಯಿತಿ ಮತ್ತು 30,000 ರೂ.ವರೆಗೆ ವಿಶೇಷ ಪ್ರಯೋಜನಗಳಿವೆ.

ಯಾಂತ್ರಿಕವಾಗಿ, ಫೋಕ್ಸ್‌ವ್ಯಾಗನ್ ವರ್ಟೂಸ್‌ ಅನ್ನು ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಅವು ಯಾವುವೆಂದರೆ 1.0 ಲೀಟರ್ TSI ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ TSI ಪೆಟ್ರೋಲ್ ಎಂಜಿನ್.

ಈಗ ಬಿಡುಗಡೆಯಾಗಿರುವುದು ಫೋಕ್ಸ್‌ವ್ಯಾಗನ್ ವರ್ಟೂಸ್​​ ಕಾರಿನ ಎರಡನೇ ಮಾದರಿಯಾಗಿದೆ. ಮೊದಲನೆಯದು 114bhp ಮತ್ತು 178Nm ಪವರ್​ ಔಟ್​ಪುಟ್​, ಸಿಕ್ಸ್ ಸ್ಪೀಡ್​ ಮ್ಯಾನುವಲ್​ ಮತ್ತು ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್​ ಟ್ರಾನ್ಸ್​ಮಿಶನ್​ ಹೊಂದಿತ್ತು. 2ನೇಯದು ಸಿಕ್ಸ್ ಸ್ಪೀಡ್​ ಮ್ಯಾನುವಲ್​ ಮತ್ತು ಸೆವೆನ್​ ಸ್ಪೀಡ್​ DSG ಗೇರ್‌ಬಾಕ್ಸ್‌, 148bhp ಮತ್ತು 250Nm ಪವರ್​ ಔಟ್​ಪುಟ್ ಹೊಂದಿದೆ.

    ಹಂಚಿಕೊಳ್ಳಲು ಲೇಖನಗಳು