logo
ಕನ್ನಡ ಸುದ್ದಿ  /  ಜೀವನಶೈಲಿ  /  Bank Holidays: ನವೆಂಬರ್‌ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜಾ; ಕನ್ನಡ ರಾಜ್ಯೋತ್ಸವದಿಂದ ಕನಕದಾಸ ಜಯಂತಿಯವರೆಗಿನ ರಜಾದಿನಗಳ ಪಟ್ಟಿ

Bank holidays: ನವೆಂಬರ್‌ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜಾ; ಕನ್ನಡ ರಾಜ್ಯೋತ್ಸವದಿಂದ ಕನಕದಾಸ ಜಯಂತಿಯವರೆಗಿನ ರಜಾದಿನಗಳ ಪಟ್ಟಿ

Praveen Chandra B HT Kannada

Oct 26, 2023 07:00 AM IST

ನವೆಂಬರ್‌ 2023 ಬ್ಯಾಂಕ್‌ ರಜೆಗಳ ಕ್ಯಾಲೆಂಡರ್

    • Bank holidays in November 2023: ಈ ನವೆಂಬರ್‌ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಸಾಲುಸಾಲು ರಜಾದಿನಗಳು. ಕನ್ನಡ ರಾಜ್ಯೋತ್ಸವ, ದೀಪಾವಳಿ ಸೇರಿದಂತೆ ಹಲವು ದಿನಗಳು ಬ್ಯಾಂಕ್‌ಗಳಿಗೆ ರಜಾ ಇರುತ್ತದೆ. ನವೆಂಬರ್‌ ತಿಂಗಳ ಬ್ಯಾಂಕ್‌ಗಳ ಹಾಲಿಡೇ ಪಟ್ಟಿ ಇಲ್ಲಿದೆ.
ನವೆಂಬರ್‌ 2023 ಬ್ಯಾಂಕ್‌ ರಜೆಗಳ ಕ್ಯಾಲೆಂಡರ್
ನವೆಂಬರ್‌ 2023 ಬ್ಯಾಂಕ್‌ ರಜೆಗಳ ಕ್ಯಾಲೆಂಡರ್

ಬೆಂಗಳೂರು: ನವೆಂಬರ್‌ ತಿಂಗಳಲ್ಲಿ ಬ್ಯಾಂಕ್‌ಗೆ ಭೇಟಿ ನೀಡುವಂತಹ ಕೆಲಸಕಾರ್ಯಗಳು ಇದ್ದರೆ ಯಾವಾಗ ರಜೆ ಇರುತ್ತದೆ ಎಂದು ತಿಳಿದುಕೊಳ್ಳುವುದು ಉತ್ತಮ. ಕನ್ನಡ ರಾಜ್ಯೋತ್ಸವ, ದೀಪಾವಳಿ, ಕನಕದಾಸ ಜಯಂತಿ ಸೇರಿದಂತೆ ವಿವಿಧ ದಿನಗಳಂದು ಬ್ಯಾಂಕ್‌ಗಳಿಗೆ ರಜಾ ದಿನ ಇರುತ್ತದೆ. ಯಾವಾಗ ಬ್ಯಾಂಕ್‌ಗಳಿಗೆ ನವೆಂಬರ್‌ನಲ್ಲಿ ರಜಾ ದಿನಗಳು ಇರುತ್ತದೆ ಎಂಬ ವಿವರ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಗಂಡು ಹೆಣ್ಣಿನ ಲಿಂಗ ತಾರತಮ್ಯ ನಿವಾರಣೆಗೆ ಪೋಷಕರ ವ್ಯಕ್ತಿತ್ವ, ಆಲೋಚನಾ ಕ್ರಮ ಹೇಗಿರಬೇಕು? ಮಕ್ಕಳ ಉತ್ತಮ ಮನಸ್ಥಿತಿಗೆ ಅಗತ್ಯ ವಿಧಾನಗಳಿವು

ಹಾಲು-ಮೀನು, ಪಾಲಕ್‌-ಪನೀರ್‌ ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ

ಮಳೆಗಾಲದಲ್ಲಿ ಕೇರಳಕ್ಕೆ ಟ್ರಿಪ್‌ ಹೋಗುವ ಪ್ಲಾನ್‌ ಇದ್ರೆ, ಈ 10 ಸಾಂಪ್ರದಾಯಿಕ ತಿನಿಸುಗಳನ್ನು ಟೇಸ್ಟ್‌ ಮಾಡದೇ ಬರಬೇಡಿ

Yoga Asanas: ತೂಕ ಇಳಿಯುವ ಜೊತೆಗೆ ದೇಹ ಫಿಟ್‌ ಆಗಿರಬೇಕಾ? ಈ ಸರಳ ಯೋಗಾಸನಗಳನ್ನ ಮನೆಯಲ್ಲೇ ಅಭ್ಯಾಸ ಮಾಡಿ

ನವೆಂಬರ್‌ 1- ಕನ್ನಡ ರಾಜ್ಯೋತ್ಸವ

ನವೆಂಬರ್‌ 1ರಂದು ಕರ್ನಾಟಕದ್ಯಾಂತ ಬ್ಯಾಂಕ್‌ಗಳಿಗೆ ರಜಾ ದಿನ ಇರುತ್ತದೆ. ಅಂದು, ಕನ್ನಡ ರಾಜ್ಯೋತ್ಸವದ ಸಂಭ್ರಮ ಇರುತ್ತದೆ. ಈ ಬಾರಿ ನವೆಂಬರ್‌ 1 ಬುಧವಾರದಂದು ಬಂದಿದ್ದು, ಬುಧವಾರ ಏನಾದರೂ ಬ್ಯಾಂಕ್‌ ಕೆಲಸಗಳಿದ್ದರೆ ಅದಕ್ಕೂ ಮೊದಲೇ ಮುಗಿಸುವುದು ಉತ್ತಮ. ಬ್ಯಾಂಕ್‌ಗೆ ಹೋಗಿ ಹಣ ಪಾವತಿಸುವುದು ಇತ್ಯಾದಿ ಕೆಲಸಗಳನ್ನು ಅಂದು ಇಟ್ಟುಕೊಳ್ಳಬೇಡಿ.

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ 1 ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು ಕರ್ನಾಟಕವಾಗಿ ನಿರ್ಮಾಣವಾದ ಸಂಕೇತವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸರಕಾರಿ ರಜಾದಿನವೆಂದು ಘೋಷಿಸಲಾಗಿದೆ. ಕರ್ನಾಟಕ ಮಾತ್ರವಲ್ಲದೆ ಜಗತ್ತಿನ ಮೂಲೆಮೂಲೆಯಲ್ಲಿರುವ ಕನ್ನಡಿಗರು ಕನ್ನಡ ರಾಜ್ಯೋತ್ಸವ ಆಚರಿಸುತ್ತಾರೆ. ಕನ್ನಡ ರಾಜ್ಯೋತ್ಸವದ ದಿನದಂದು ಕರ್ನಾಟಕ ಸರಕಾರವು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುತ್ತದೆ.

ನವೆಂಬರ್‌ 14- ದೀಪಾವಳಿ

ದೀಪಾವಳಿ ಹಬ್ಬದ ಪ್ರಯುಕ್ತ ಕರ್ನಾಟಕದಲ್ಲಿ ನವೆಂಬರ್‌ 14ರಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ದೀಪಾವಳಿ, ಬಲಿಪಾಡ್ಯಮಿ, ಲಕ್ಷ್ಮಿ ಪೂಜೆ ಇತ್ಯಾದಿಗಳಿಗೆ ಒಂದೇ ದಿನ ರಜೆ ಇರುತ್ತದೆ.

ನವೆಂಬರ್‌ 30- ಕನಕದಾಸ ಜಯಂತಿ

ಕನಕದಾಸ ಜಯಂತಿ ಪ್ರಯುಕ್ತ ಕರ್ನಾಟಕದಲ್ಲಿ ನವೆಂಬರ್‌ 30ರಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಕನಕದಾಸ ಜಯಂತಿಯಂದು ಸರಕಾರಿ ಕಚೇರಿಗಳಿಗೂ ರಜೆ ಇರುತ್ತದೆ.

ಕರ್ನಾಟಕ ಹೊರತುಪಡಿಸಿ ಇತರೆ ರಾಜ್ಯಗಳಿಗೆ ಇನ್ನಿತರ ದಿನಗಳಲ್ಲೂ ರಜಾ ದಿನ ಇರುತ್ತದೆ. ಆಯಾ ರಾಜ್ಯದ ಆಚರಣೆ, ಪ್ರಮುಖ ದಿನಗಳಿಗೆ ತಕ್ಕಂತೆ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಒಟ್ಟಾರೆ ಭಾರತದಾದ್ಯಂತ ಬ್ಯಾಂಕ್‌ ರಜೆಗಳನ್ನು ಪರಿಗಣಿಸಿದರೆ ಭಾರತದಲ್ಲಿ ನವೆಂಬರ್‌ನಲ್ಲಿ 15 ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಕರ್ನಾಟಕದಲ್ಲಿ ಮೂರು ದಿನ ರಜೆ ಇರುತ್ತದೆ. ಉಳಿದಂತೆ ಭಾನುವಾರ, ಎರಡನೇ ಶನಿವಾರ ಇತ್ಯಾದಿ ರಜೆಗಳು ಎಂದಿನಂತೆ ಇರುತ್ತವೆ.

ನವೆಂಬರ್‌ ತಿಂಗಳಲ್ಲಿ ರಾಷ್ಟ್ರೀಯ ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಮೇಲೆ ತಿಳಿಸಿದ ದಿನಗಳಲ್ಲಿ ರಜೆ ಇರುತ್ತದೆ. ಎಲ್ಲದರೂ ನಿಮ್ಮ ಇಎಂಐ ಪಾವತಿ, ಬಾಕಿ ಉಳಿದ ಡೆಡ್‌ಲೈನ್‌ಗಳು ಈ ರಜಾ ದಿನಗಳಲ್ಲಿ ಬಂದಿದ್ದರೆ ಅದಕ್ಕೆ ಮುಂಚಿತವಾಗಿಯೇ ಬ್ಯಾಂಕ್‌ ವ್ಯವಹಾರ ಮುಗಿಸಿ. ಈಗ ಆನ್‌ಲೈನ್‌ ಬ್ಯಾಂಕಿಂಗ್‌ ಹೆಚ್ಚು ಜನಪ್ರಿಯತೆ ಪಡೆದಿದ್ದು, ಆನ್‌ಲೈನ್‌ ವ್ಯವಹಾರಗಳನ್ನೂ ಎಚ್ಚರಿಕೆಯಿಂದ ನಿರ್ವಹಿಸಲು ಕಲಿಯಿರಿ. ಈ ಮೂಲಕ ಬ್ಯಾಂಕ್‌ಗಳಿಗೆ ನೇರವಾಗಿ ಹೋಗುವುದನ್ನು ತಪ್ಪಿಸಬಹುದು.

    ಹಂಚಿಕೊಳ್ಳಲು ಲೇಖನಗಳು