logo
ಕನ್ನಡ ಸುದ್ದಿ  /  ಜೀವನಶೈಲಿ  /  Itr Verification: ಆದಾಯ ತೆರಿಗೆ ರಿಟರ್ನ್‌ ದೃಢೀಕರಣದ ಕೊನೆಯ ದಿನ ಮಿಸ್‌ ಆಯ್ತಾ, ವೇರಿಫೈ ಮಾಡದೆ ಇದ್ದರೆ ಏನಾಗುತ್ತದೆ, ಇಲ್ಲಿದೆ ಮಾಹಿತಿ

ITR Verification: ಆದಾಯ ತೆರಿಗೆ ರಿಟರ್ನ್‌ ದೃಢೀಕರಣದ ಕೊನೆಯ ದಿನ ಮಿಸ್‌ ಆಯ್ತಾ, ವೇರಿಫೈ ಮಾಡದೆ ಇದ್ದರೆ ಏನಾಗುತ್ತದೆ, ಇಲ್ಲಿದೆ ಮಾಹಿತಿ

Praveen Chandra B HT Kannada

Aug 31, 2023 02:00 PM IST

ITR verification: ಆದಾಯ ತೆರಿಗೆ ರಿಟರ್ನ್‌ ದೃಢೀಕರಣ ಮಾಡದೆ ಇದ್ದರೆ ಏನಾಗುತ್ತದೆ?

  • ITR verification last day 2023: ತೆರಿಗೆ ಪಾವತಿದಾರರು ತಮ್ಮ ಐಟಿಆರ್‌ ಅನ್ನು 30 ದಿನದೊಳಗೆ ವೇರಿಫಿಕೇಷನ್‌ ಮಾಡಬೇಕು. ವೇರಿಫಿಕೇಷನ್‌ ಮಾಡಲು ನೀಡಲಾದ ಈ ಸಮಯದಲ್ಲಿ ದೃಢೀಕರಣ ಮಾಡದೆ ಇದ್ದರೆ ಏನಾಗುತ್ತದೆ ಎಂದು ತಿಳಿಯೋಣ.

ITR verification: ಆದಾಯ ತೆರಿಗೆ ರಿಟರ್ನ್‌ ದೃಢೀಕರಣ ಮಾಡದೆ ಇದ್ದರೆ ಏನಾಗುತ್ತದೆ?
ITR verification: ಆದಾಯ ತೆರಿಗೆ ರಿಟರ್ನ್‌ ದೃಢೀಕರಣ ಮಾಡದೆ ಇದ್ದರೆ ಏನಾಗುತ್ತದೆ?

ಐಟಿಆರ್‌ ಅಥವಾ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಿದ ಬಳಿಕ ಅಂತಿಮ ಹಂತವಾದ ಐಟಿಆರ್‌ ವೇರಿಫಿಕೇಷನ್‌ ಅನ್ನು ಕೆಲವರು ಅದೇ ಸಮಯದಲ್ಲಿ ಮಾಡಿ ಮುಗಿಸುತ್ತಾರೆ. ಆದರೆ, ಕೆಲವು ಮಂದಿ ಮಾತ್ರ ಇನ್ನಷ್ಟು ದಿನ ಕಾಯುತ್ತಾರೆ. ಮುಂದೆ ನೋಡಿಕೊಂಡಾಯ್ತು ಎಂದುಕೊಳ್ಳುತ್ತಾರೆ. ಜುಲೈ 31ರವರೆಗೆ ಐಟಿಆರ್‌ ಅನ್ನು ದಂಡ ಇಲ್ಲದೆ ಸಲ್ಲಿಸಲು ಅವಕಾಶವಿತ್ತು. ಐಟಿಆರ್‌ ಸಲ್ಲಿಸಿದ ಬಳಿಕದ 30 ದಿನದವರೆಗೆ ವೇರಿಫಿಕೇಷನ್‌ ಮಾಡಲು ಅವಕಾಶ ನೀಡಲಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಈಗಾಗಲೇ ಆದಾಯ ತೆರಿಗೆ ಇಲಾಖೆಯು ಆಗಸ್ಟ್‌ 29ರಂದೇ ಐಟಿಆರ್‌ ವೇರಿಫಿಕೇಷನ್‌ ಮಾಡಲು ನೆನಪಿಸಿತ್ತು. ನಿಗದಿತ ಸಮಯದೊಳಗೆ ವೇರಿಫಿಕೇಷನ್‌ ಮಾಡದೆ ಇದ್ದರೆ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿತ್ತು.

ಐಟಿಆರ್‌ ದೃಢೀಕರಣ ಏಕೆ ಅಗತ್ಯ?

ಆದಾಯ ತೆರಿಗೆ ರಿಟರ್ನ್‌ ಅನ್ನು ಇ-ವೇರಿಫೈ ಮಾಡುವುದು ಅಗತ್ಯ. ಈ ವೇರಿಫಿಕೇಷನ್‌ ಪ್ರಕ್ರಿಯೆ ಮುಗಿಸಿದ ಬಳಿಕ ಮಾತ್ರ ನೀವು ರಿಫಂಡ್‌ ಪ್ರಕ್ರಿಯೆಗೆ ಅರ್ಹತೆ ಪಡೆಯುವಿರಿ.

ಐಟಿಆರ್‌ ವೇರಿಫಿಕೇಷನ್‌ ಡೆಡ್‌ಲೈನ್‌ನಲ್ಲಿ ನೀವು ದೃಢೀಕರಣ ಮಾಡಿಲ್ಲವೇ?

ಐಟಿಆರ್‌ ವೇರಿಫಿಕೇಷನ್‌ ಡೆಡ್‌ಲೈನ್‌ನಲ್ಲಿ ನೀವು ದೃಢೀಕರಣ ಮಾಡಿಲ್ಲ ಎಂದಾದರೆ ನೀವು ದಂಡ ಪಾವತಿಸಬೇಕು. ಈ ರೀತಿ ನಿಗದಿತ ಸಮಯದೊಳಗೆ ದೃಢೀಕರಣ ಮಾಡದೆ ಇದ್ದರೆ 5 ಸಾವಿರ ರೂ.ವರೆಗೆ ದಂಡ ಪಾವತಿಸಬೇಕಾಗುತ್ತದೆ.

ಐಟಿಆರ್‌ ದೃಢೀಕರಣ ಹೇಗೆ?

ಆನ್‌ಲೈನ್‌ ಮೂಲಕ ಭರ್ತಿ ಮಾಡಿರುವ ಐಟಿಆರ್‌ ಅನ್ನು ವಿವಿಧ ರೀತಿಯಲ್ಲಿ ವೇರಿಫೈ ಮಾಡಬಹುದು. ನಿಮ್ಮಲ್ಲಿ ಡಿಜಿಟಲ್‌ ಸಿಗ್ನೇಚರ್‌ ಇದ್ದರೆ ಈ ಮೂಲಕ ದೃಢೀಕರಣ ಮಾಡಬಹುದು. ಪರ್ಯಾಯವಾಗಿ ನೀವು ನಿಮ್ಮ ಬ್ಯಾಂಕ್‌ ಖಾತೆಯ (ಇಂಟರ್‌ನೆಟ್‌ ಬ್ಯಾಂಕಿಂಗ್‌ ಅಥವಾ ಡಿಮ್ಯಾಟ್‌ ಖಾತೆ) ಮೂಲಕ ಒಟಿಪಿ ನೆರವಿನಿಂದ ವೇರಿಫೈ ಮಾಡಬೇಕು. ಪರ್ಯಾಐವಾಗಿ ನೀವು ನಿಮ್ಮ ಆಧಾರ್‌ ಸಂಖ್ಯೆಯ ಮೂಲಕವೂ ಐಟಿಆರ್‌ ವೇರಿಫೈ ಮಾಡಬೇಕು. ಬೆಂಗಳೂರಿನಲ್ಲಿರುವ ಸೆಂಟ್ರಲ್‌ ಪ್ರೊಸೆಸಿಂಗ್‌ ಸೆಂಟರ್‌ಗೆ ಐಟಿಆರ್‌ V ಪ್ರತಿಗೆ ಸಹಿ ಹಾಕಿ ಕಳುಹಿಸುವ ಮೂಲಕವೂ ವೇರಿಫೈ ಮಾಡಬಹುದು.

ನಿಮಗಿನ್ನೂ ಆದಾಯ ತೆರಿಗೆ ರಿಫಂಡ್‌ ದೊರಕಿಲ್ವ, ರಿಫಂಡ್‌ ದೊರಕದೆ ಇದ್ದರೆ ಏನು ಮಾಡಬೇಕು?

ನೀವು ಕೂಡ ಐಟಿ ರಿಟರ್ನ್‌ ಅನ್ನು ತಡವಾಗಿಯೂ ಸಲ್ಲಿಸಬಹುದು. ಈ ರೀತಿ ತಡವಾಗಿ ಐಟಿಆರ್‌ ಸಲ್ಲಿಸಲು ಡಿಸೆಂಬರ್‌ 31ರವರೆಗೆ ಅವಕಾಶವಿದೆ. ಆದರೆ, ಅದಕ್ಕೆ ದಂಡ ಪಾವತಿಸಲು ರೆಡಿ ಇರಬೇಕು

ಯಾರ ವಾರ್ಷಿಕ ಆದಾಯ 5 ಲಕ್ಷ ರೂಪಾಯಿಗಿಂತ ಹೆಚ್ಚು ಇರುತ್ತದೆಯೋ ಅವರು ತಡವಾದ ಐಟಿಆರ್‌ ಸಲ್ಲಿಕೆಗಾಗಿ 5 ಸಾವಿರ ರೂಪಾಯಿ ಪಾವತಿಸಿ ಐಟಿಆರ್‌ ಸಲ್ಲಿಸಬಹುದು.

ಯಾರ ವಾರ್ಷಿಕ ಆದಾಯ 5 ಲಕ್ಷ ರೂಪಾಯಿಗಿಂತ ಕಡಿಮೆ ಇದೆಯೋ ಅವರು ತಡವಾದ ಐಟಿಆರ್‌ ಸಲ್ಲಿಕೆಗಾಗಿ 1 ಸಾವಿರ ರೂಪಾಯಿ ದಂಡ ನೀಡಿ ಐಟಿಆರ್‌ ಸಲ್ಲಿಸಬಹುದು.

ಎಲ್ಲಾದರೂ ನೀವು ಪಾವತಿಸಬೇಕಾದ ತೆರಿಗೆ ಬಾಕಿ ಉಳಿದರೆ ಅದಕ್ಕೆ ಬಡ್ಡಿ ವಿಧಿಸಲೂ ಅವಕಾಶವಿದೆ. ಪ್ರತಿತಿಂಗಳ ಬಾಕಿ ಬಡ್ಡಿಯನ್ನು ಸೇರಿಸಿ ಒಟ್ಟು ಮೊತ್ತವನ್ನು ನೀವು ಪಾವತಿಸಬೇಕು.

    ಹಂಚಿಕೊಳ್ಳಲು ಲೇಖನಗಳು