logo
ಕನ್ನಡ ಸುದ್ದಿ  /  ಜೀವನಶೈಲಿ  /  Business News: ಚಿನ್ನದ ಮೇಲೆ ಹೂಡಿಕೆ ಮಾಡೋ ಪ್ಲ್ಯಾನ್‌ ಇದ್ಯಾ, ಸಾವರಿನ್‌ ಗೋಲ್ಡ್‌ ಬಾಂಡ್‌ ಖರೀದಿಸಬಹುದು ನೋಡಿ

Business News: ಚಿನ್ನದ ಮೇಲೆ ಹೂಡಿಕೆ ಮಾಡೋ ಪ್ಲ್ಯಾನ್‌ ಇದ್ಯಾ, ಸಾವರಿನ್‌ ಗೋಲ್ಡ್‌ ಬಾಂಡ್‌ ಖರೀದಿಸಬಹುದು ನೋಡಿ

HT Kannada Desk HT Kannada

Jan 24, 2024 07:00 AM IST

ಆರ್‌ಬಿಐ ಈ ವರ್ಷ ಮೊದಲ ಸಾವರಿನ್ ಗೋಲ್ಡ್ ಬಾಂಡ್ ವಿತರಣೆಯನ್ನು ಘೋಷಿಸಿದೆ

  • Business News: ಚಿನ್ನದ ಮೇಲೆ ಹೂಡಿಕೆ ಮಾಡಬೇಕು ಎಂದುಕೊಂಡವರು ಪೇಪರ್‌ ಚಿನ್ನವನ್ನು ಖರೀದಿಸಬಹುದು. ಚಿನ್ನದ ಬೆಲೆ ಹೆಚ್ಚಾಗಿರುವ ಈ ಸಮಯದಲ್ಲಿ ಭೌತಿಕ ಚಿನ್ನಕ್ಕಿಂದ ಪೇಪರ್‌ ಚಿನ್ನ ನಿಮಗೆ ಸಹಾಯ ಮಾಡಬಹುದು. 

ಆರ್‌ಬಿಐ ಈ  ವರ್ಷ  ಮೊದಲ ಸಾವರಿನ್ ಗೋಲ್ಡ್ ಬಾಂಡ್ ವಿತರಣೆಯನ್ನು ಘೋಷಿಸಿದೆ
ಆರ್‌ಬಿಐ ಈ ವರ್ಷ ಮೊದಲ ಸಾವರಿನ್ ಗೋಲ್ಡ್ ಬಾಂಡ್ ವಿತರಣೆಯನ್ನು ಘೋಷಿಸಿದೆ

Business News: ಭಾರತದಲ್ಲಿ ಚಿನ್ನಕ್ಕೆ ಒಳ್ಳೆ ಬೇಡಿಕೆ ಇದೆ. ಮಹಿಳೆಯರು ಮಾತ್ರವಲ್ಲ ಪುರುಷರು ಕೂಡಾ ಇದನ್ನು ಬಹಳ ಇಷ್ಟಪಡುತ್ತಾರೆ. ಚಿನ್ನವನ್ನು ಆಭರಣ ಮಾಡಿಸಿ ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ, ತುರ್ತು ಪರಿಸ್ಥಿತಿಯಲ್ಲಿ ನಮಗೆ ಸಹಾಯಕವಾಗುವ ಆರ್ಥಿಕ ಭದ್ರತೆಯ ಸಾಧನವೂ ಆಗಿದೆ. ಹೀಗಾಗಿ, ಚಿನ್ನವನ್ನು ಹೂಡಿಕೆಯ ಸಾಧನವಾಗಿ ನೋಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಹೂಡಿಕೆ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಗಂಡು ಹೆಣ್ಣಿನ ಲಿಂಗ ತಾರತಮ್ಯ ನಿವಾರಣೆಗೆ ಪೋಷಕರ ವ್ಯಕ್ತಿತ್ವ, ಆಲೋಚನಾ ಕ್ರಮ ಹೇಗಿರಬೇಕು? ಮಕ್ಕಳ ಉತ್ತಮ ಮನಸ್ಥಿತಿಗೆ ಅಗತ್ಯ ವಿಧಾನಗಳಿವು

ಹಾಲು-ಮೀನು, ಪಾಲಕ್‌-ಪನೀರ್‌ ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ

ಮಳೆಗಾಲದಲ್ಲಿ ಕೇರಳಕ್ಕೆ ಟ್ರಿಪ್‌ ಹೋಗುವ ಪ್ಲಾನ್‌ ಇದ್ರೆ, ಈ 10 ಸಾಂಪ್ರದಾಯಿಕ ತಿನಿಸುಗಳನ್ನು ಟೇಸ್ಟ್‌ ಮಾಡದೇ ಬರಬೇಡಿ

Yoga Asanas: ತೂಕ ಇಳಿಯುವ ಜೊತೆಗೆ ದೇಹ ಫಿಟ್‌ ಆಗಿರಬೇಕಾ? ಈ ಸರಳ ಯೋಗಾಸನಗಳನ್ನ ಮನೆಯಲ್ಲೇ ಅಭ್ಯಾಸ ಮಾಡಿ

ಚಿನ್ನದ ಬೆಲೆ ಕೆಲವೊಮ್ಮೆ ಕಡಿಮೆ ಆದರೆ ಕೆಲವೊಮ್ಮೆ ಗಗನಕ್ಕೆ ಏರುತ್ತದೆ. ಚಿನ್ನದ ಬೆಲೆ ಏರಿಕೆ ಆದಾಗ, ಅದನ್ನು ಕೊಂಡುಕೊಳ್ಳಲು ಜನರು ಹಿಂದೇಟು ಹಾಕುತ್ತಾರೆ. ಆದರೆ ಜನರು ಅಂಥವರು ಕಡಿಮೆ ಬೆಲೆಗೆ ಚಿನ್ನ ಖರೀದಿಸಿ ಹೂಡಿಕೆ ಮಾಡಬಹುದು. ಕೇಂದ್ರ ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಖರೀದಿಸಿದಿರೆ ಸಾಕು. ಭೌತಿಕ ಚಿನ್ನದ ಬದಲು ಕಾಗದದ ಚಿನ್ನವನ್ನು ಖರೀದಿಸುವುದರಿಂದ ಯಾವುದೇ ನಷ್ಟವಿಲ್ಲ. ಈಗಾಗಲೇ ಮೂರು ಸರಣಿಯ ಚಿನ್ನದ ಬಾಂಡ್‌ಗಳು ಬಂದಿವೆ. ಈಗ ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷ ಮೊದಲ ಸಾವರಿನ್ ಗೋಲ್ಡ್ ಬಾಂಡ್ ವಿತರಣೆಯನ್ನು ಘೋಷಿಸಿದೆ.

ಸಾವರಿನ್‌ ಗೋಲ್ಡ್ ಬಾಂಡ್ ಚಂದಾದಾರಿಕೆ ದಿನಾಂಕ ಹೀಗಿದೆ

2024 ರಲ್ಲಿ ಮೊದಲ ಗೋಲ್ಡ್ ಬಾಂಡ್ ಯೋಜನೆ, ಸಾವರಿನ್ ಗೋಲ್ಡ್ ಬಾಂಡ್ ಸರಣಿ 2023-24 ಸರಣಿ-4 ಚಂದಾದಾರಿಕೆ ಫೆಬ್ರವರಿ 12, 2024 ರಂದು ಪ್ರಾರಂಭವಾಗುತ್ತದೆ. ಆರ್‌ಬಿಐ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಈ ಚಂದಾದಾರಿಕೆ ವಿಂಡೋ ಫೆಬ್ರವರಿ 12 ರಿಂದ 16 ರವರೆಗೆ ಲಭ್ಯವಿರುತ್ತದೆ. ಬಾಂಡ್‌ಗಳನ್ನು ಯಾರು ಖರೀದಿಸುತ್ತಾರೋ ಅವರಿಗೆ ಫೆಬ್ರವರಿ 21, 2024 ರಂದು ನೀಡಲಾಗುತ್ತದೆ. ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಕ್ಲಿಯರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಮಾನ್ಯತೆ ಪಡೆದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಸ್ಟಾಕ್ ಎಕ್ಸ್‌ಚೇಂಜ್‌ಗಳಿಂದ ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಖರೀದಿಸಬಹುದು.

ಸಾವರಿನ್‌ ಚಿನ್ನದ ಬಾಂಡ್‌ಗಳ ಮುಕ್ತಾಯ ಸಮಯ 8 ವರ್ಷಗಳು. 5 ವರ್ಷಗಳ ನಂತರ ಮೆಚ್ಯೂರ್‌ ಆಗುವ ಅವಕಾಶವಿದೆ. ಒಬ್ಬ ವ್ಯಕ್ತಿಯು 4 ಕೆಜಿಯಷ್ಟು ಚಿನ್ನವನ್ನು ಖರೀದಿಸಬಹುದು. ಅಲ್ಲದೆ ಹಿಂದೂ ಅವಿಭಜಿತ ಕುಟುಂಬ 4 ಕೆ.ಜಿ. ಟ್ರಸ್ಟ್‌ಗಳು ಮತ್ತು ಇತರ ಸಂಸ್ಥೆಗಳು 20 ಕೆಜಿಯವರೆಗಿನ ಕಾಗದದ ಚಿನ್ನವನ್ನು ಖರೀದಿಸಲು ಅವಕಾಶವನ್ನು ಹೊಂದಿರುತ್ತದೆ. ಕೇಂದ್ರ ಸರ್ಕಾರವು ಇದಕ್ಕೆ ಬಡ್ಡಿ ನೀಡುತ್ತದೆ. ನಿಮ್ಮ ಹೂಡಿಕೆಯ ಮೇಲೆ ವಾರ್ಷಿಕ 2.50 ಪ್ರತಿಶತ ಬಡ್ಡಿ. ಅಲ್ಲದೆ, ಚಂದಾದಾರಿಕೆ ನಡೆಯುವ 3 ಕೆಲಸದ ದಿನಗಳ ಮೊದಲು ಭಾರತ ಬುಲಿಯನ್ ಮತ್ತು ಜ್ಯುವೆಲ್ಲರಿ ಅಸೋಸಿಯೇಷನ್ ​​ಘೋಷಿಸಿದ ಬೆಲೆಗಳ ಸರಾಸರಿಯಂತೆ ಚಿನ್ನದ ಬಾಂಡ್‌ಗಳ ಬೆಲೆಗಳನ್ನು ನಿಗದಿಪಡಿಸಲಾಗುತ್ತದೆ. ಆನ್‌ಲೈನ್‌ನಲ್ಲಿ ಖರೀದಿಸುವವರಿಗೆ ವಿಶೇಷ ರಿಯಾಯಿತಿಯನ್ನು ಸಹ ನೀಡಲಾಗುತ್ತದೆ. ಆದರೆ ಈ ಚಿನ್ನದ ಬಾಂಡ್‌ಗಳಲ್ಲಿ ಗಳಿಸಿದ ಆದಾಯದ ಮೇಲೆ ಆದಾಯ ತೆರಿಗೆ ಇದೆ ಎಂಬುದನ್ನು ನೆನಪಿನಲ್ಲಿಡಬೇಕು.

ಗಮನಿಸಿ: ಇದು ಮಾಹಿತಿ ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

    ಹಂಚಿಕೊಳ್ಳಲು ಲೇಖನಗಳು