logo
ಕನ್ನಡ ಸುದ್ದಿ  /  ಜೀವನಶೈಲಿ  /  Thyroid Issue In Men: ಪುರುಷರಲ್ಲೂ ಹೆಚ್ಚುತ್ತಿದೆ ಥೈರಾಯ್ಡ್‌...ಈ ಸಮಸ್ಯೆಗೆ ಕಾರಣಗಳೇನು, ಚಿಕಿತ್ಸೆ ಹೇಗೆ..?

Thyroid Issue in Men: ಪುರುಷರಲ್ಲೂ ಹೆಚ್ಚುತ್ತಿದೆ ಥೈರಾಯ್ಡ್‌...ಈ ಸಮಸ್ಯೆಗೆ ಕಾರಣಗಳೇನು, ಚಿಕಿತ್ಸೆ ಹೇಗೆ..?

HT Kannada Desk HT Kannada

Feb 02, 2023 10:07 PM IST

ಪುರುಷರಲ್ಲಿ ಥೈರಾಯ್ಡ್‌ ಸಮಸ್ಯೆ

    • ಮೊದಲೆಲ್ಲಾ, ಥೈರಾಯ್ಡ್ ಸಮಸ್ಯೆಗಳು ಹೆಚ್ಚಾಗಿ ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತಿತ್ತು. ಈಗ ಪುರುಷರು ಕೂಡಾ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಇದಕ್ಕೆ ಧೂಮಪಾನ, ಮದ್ಯಪಾನದಂತಹ ಅಭ್ಯಾಸಗಳೇ ಕಾರಣ ಎನ್ನುತ್ತಾರೆ ತಜ್ಞರು.
ಪುರುಷರಲ್ಲಿ ಥೈರಾಯ್ಡ್‌ ಸಮಸ್ಯೆ
ಪುರುಷರಲ್ಲಿ ಥೈರಾಯ್ಡ್‌ ಸಮಸ್ಯೆ

ಥೈರಾಯ್ಡ್‌ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇತ್ತೀಚಿನ ದಿಗಗಳಲ್ಲಿ ಪುರುಷರಿಗೆ ಕೂಡಾ ಈ ಸಮಸ್ಯೆ ಹೆಚ್ಚಾಗುತ್ತಿದೆ. ಥೈರಾಯ್ಡ್ ಗ್ರಂಥಿಯು ನಮ್ಮ ದೇಹದ ಕಾರ್ಯ ನಿರ್ವಹಣೆಗೆ ಅಗತ್ಯವಾದ ಪ್ರಮುಖ ಅಂಗವಾಗಿದೆ. ಥೈರಾಯ್ಡ್ ಗ್ರಂಥಿಯಿಂದ ಸ್ರವಿಸುವ ಹಾರ್ಮೋನ್‌ಗಳಿಂದಾಗಿ, ಮಾನವನ ದೇಹದಲ್ಲಿ ಚಯಾಪಚಯ ಕ್ರಿಯೆ ಮತ್ತು ದೇಹದ ಬೆಳವಣಿಗೆ ಸರಿಯಾಗಿ ನಡೆಯುತ್ತದೆ. ದೇಹದ ಅನೇಕ ಕಾರ್ಯಗಳನ್ನು ನಿಯಂತ್ರಿಸುವಲ್ಲಿ ಥೈರಾಯ್ಡ್ ಪ್ರಮುಖ ಪಾತ್ರ ವಹಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

Yoga Asanas: ತೂಕ ಇಳಿಯುವ ಜೊತೆಗೆ ದೇಹ ಫಿಟ್‌ ಆಗಿರಬೇಕಾ? ಈ ಸರಳ ಯೋಗಾಸನಗಳನ್ನ ಮನೆಯಲ್ಲೇ ಅಭ್ಯಾಸ ಮಾಡಿ

ಡಯಾಬಿಟಿಸ್‌ ಬಗ್ಗೆ ಚಿಂತೆ ಬೇಡ; ಸಕ್ಕರೆ ಮಟ್ಟವನ್ನು ನಿಯಂತ್ರಿಸಿ, ಆರೋಗ್ಯ ಕಾಪಾಡಿಕೊಳ್ಳಲು ಮಧುಮೇಹಿಗಳು ತಪ್ಪದೇ ಪಾಲಿಸಬೇಕಾದ ನಿಯಮಗಳಿವು

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

ಥೈರಾಯ್ಡ್‌ನಲ್ಲಿನ ಯಾವುದೇ ಸಮಸ್ಯೆಯು ಇಡೀ ದೇಹದ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಹೃದಯ ಬಡಿತ, ಮನಸ್ಥಿತಿ, ದೇಹದಲ್ಲಿನ ಶಕ್ತಿಯ ಮಟ್ಟ, ಚಯಾಪಚಯ ಕ್ರಿಯೆ, ಮೂಳೆ ಆರೋಗ್ಯ, ಗರ್ಭಧಾರಣೆ, ದೇಹದ ಉಷ್ಣತೆ, ಕೊಬ್ಬಿನ ನಿಯಂತ್ರಣ ಮತ್ತು ಇತರ ಅನೇಕ ದೈಹಿಕ ಕಾರ್ಯಗಳು ಅಡ್ಡಿಪಡಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಸಾಮಾನ್ಯವಾಗಿದೆ. ಥೈರಾಯ್ಡ್ ಯಾವುದೇ ಮನುಷ್ಯನ ಜೀವನಶೈಲಿಯನ್ನು ಬದಲಾಯಿಸುತ್ತದೆ. ತೂಕ ಹೆಚ್ಚಾಗುವುದು, ಆಯಾಸ, ಸ್ನಾಯು ದೌರ್ಬಲ್ಯ ಹಾಗೂ ಇನ್ನಿತರ ಬದಲಾವಣೆ ಥೈರಾಯ್ಡ್ ಸಮಸ್ಯೆಯ ಆರಂಭಿಕ ಲಕ್ಷಣಗಳು. ಥೈರಾಯ್ಡ್ ಗ್ರಂಥಿಯು ಕಡಿಮೆ ಹಾರ್ಮೋನ್ ಉತ್ಪಾದಿಸಿದರೆ, ಅದನ್ನು ಹೈಪೋಥೈರಾಯ್ಡ್ ಎಂದು ಕರೆಯಲಾಗುತ್ತದೆ ಮತ್ತು ಅದು ಹೆಚ್ಚು ಉತ್ಪಾದಿಸಿದರೆ ಅದನ್ನು ಹೈಪರ್ ಥೈರಾಯ್ಡ್ ಎಂದು ಕರೆಯಲಾಗುತ್ತದೆ. ಎರಡೂ ಬಹಳ ಅಪಾಯಕಾರಿ, ಆದ್ದರಿಂದ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಥೈರಾಯ್ಡ್ ಸಮಸ್ಯೆ ಉಂಟಾದಾಗ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳದಿದ್ದರೆ, ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು.

ಮೊದಲೆಲ್ಲಾ, ಥೈರಾಯ್ಡ್ ಸಮಸ್ಯೆಗಳು ಹೆಚ್ಚಾಗಿ ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತಿತ್ತು. ಈಗ ಪುರುಷರು ಕೂಡಾ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಇದಕ್ಕೆ ಧೂಮಪಾನ, ಮದ್ಯಪಾನದಂತಹ ಅಭ್ಯಾಸಗಳೇ ಕಾರಣ ಎನ್ನುತ್ತಾರೆ ತಜ್ಞರು. ಥೈರಾಯ್ಡ್ ಸಮಸ್ಯೆಯಿಂದ ಪುರುಷ ಫಲವತ್ತತೆ ಕೂಡಾ ಕುಂಠಿತವಾಗುತ್ತದೆ. ಥೈರಾಯ್ಡ್ ಉತ್ತೇಜಿಸುವ ಹಾರ್ಮೋನುಗಳ ಮಟ್ಟವನ್ನು ಪರೀಕ್ಷಿಸಲು TSH ಪರೀಕ್ಷೆಯನ್ನು ನಡೆಸಲಾಗುತ್ತದೆ. TSH ನ ಸಾಮಾನ್ಯ ವ್ಯಾಪ್ತಿಯು 0.4 mU/L ನಿಂದ 4.0 mU/L.2.0 ಕ್ಕಿಂತ ಹೆಚ್ಚಿನ TSH ಮಟ್ಟವನ್ನು ಹೈಪೋಥೈರಾಯ್ಡ್ ಎಂದು ಪರಿಗಣಿಸಲಾಗುತ್ತದೆ. ಅದೇ ಥೈರಾಯ್ಡ್ ಮಟ್ಟವು 0.4 mU/L ನಿಂದ 4.0 mU/L ಗಿಂತ ಕಡಿಮೆಯಿದ್ದರೆ, ಅದನ್ನು ಹೈಪರ್ ಥೈರಾಯ್ಡ್ ಎಂದು ಪರಿಗಣಿಸಲಾಗುತ್ತದೆ.

ಥೈರಾಯ್ಡ್ ನಿಯಂತ್ರಣ ವಿಧಾನಗಳು

ಥೈರಾಯ್ಡ್ ಮಟ್ಟವನ್ನು ನಿಯಂತ್ರಿಸುವಲ್ಲಿ ಆಹಾರ ಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ. ಮೆಗ್ನೀಸಿಯಮ್, ಅಯೋಡಿನ್, ವಿಟಮಿನ್‌, ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ನಂತಹ ಪೋಷಕಾಂಶಗಳು ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಬೇಕು. ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡಿ. ಒತ್ತಡ ಮತ್ತು ಆತಂಕವನ್ನು ನಿಯಂತ್ರಣದಲ್ಲಿಡಿ. ಮತ್ಸ್ಯಾಸನ, ಉಷ್ಟ್ರಾಸನ, ಧನುರಾಸನ, ವಜ್ರಾಸನಗಳಂತಹ ಯೋಗಾಸನಗಳು ಥೈರಾಯ್ಡ್ ಸಮಸ್ಯೆಯನ್ನು ನಿಯಂತ್ರಿಸಲು ಪ್ರಯೋಜನಕಾರಿ. ಪುರುಷರಲ್ಲಿ ಹೆಚ್ಚುತ್ತಿರುವ ಥೈರಾಯ್ಡ್ ಮಟ್ಟವನ್ನು ನಿಯಂತ್ರಿಸಲು ಧೂಮಪಾನ, ಮದ್ಯಪಾನದಂತಹ ಚಟಗಳನ್ನು ತಪ್ಪಿಸಬೇಕು. ವೈದ್ಯರು ಶಿಫಾರಸು ಮಾಡಿದ ಔಷಧಿಗಳು ಮತ್ತು ಸೂಚನೆಗಳನ್ನು ಅನುಸರಿಸಬೇಕು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು