logo
ಕನ್ನಡ ಸುದ್ದಿ  /  ಜೀವನಶೈಲಿ  /  Covid-19 And H3n2: ಕೋವಿಡ್‌-19, ಎಚ್‌3ಎನ್‌2 ನಡುವಿನ ವ್ಯತ್ಯಾಸ ತಿಳಿಯುವುದು ಹೇಗೆ? ಗೊಂದಲ ಪರಿಹಾರಕ್ಕೆ ಇಲ್ಲಿದೆ ತಜ್ಞರ ಉತ್ತರ

Covid-19 and H3N2: ಕೋವಿಡ್‌-19, ಎಚ್‌3ಎನ್‌2 ನಡುವಿನ ವ್ಯತ್ಯಾಸ ತಿಳಿಯುವುದು ಹೇಗೆ? ಗೊಂದಲ ಪರಿಹಾರಕ್ಕೆ ಇಲ್ಲಿದೆ ತಜ್ಞರ ಉತ್ತರ

Reshma HT Kannada

Apr 14, 2023 10:22 AM IST

ಕೋವಿಡ್‌ 19 ಹಾಗೂ ಎಚ್‌3ಎನ್‌2 ನಡುವಿನ ವ್ಯತ್ಯಾಸ

    • Covid-19 and H3N2: ಎಚ್‌3ಎನ್‌2 ಹಾಗೂ ಕೋವಿಡ್-19 ಸಾಂಕ್ರಾಮಿಕವೂ ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವ ಕಾರಣ, ಈ ಎರಡರ ನಡುವಿನ ವ್ಯತ್ಯಾಸವನ್ನು ಗುರುತಿಸಲು ಕಷ್ಟವಾಗಬಹುದು. ಈ ಗೊಂದಲ ನಿವಾರಣೆಗೆ ತಜ್ಞರ ಸಲಹೆ ಇಲ್ಲಿದೆ. 
ಕೋವಿಡ್‌ 19 ಹಾಗೂ ಎಚ್‌3ಎನ್‌2 ನಡುವಿನ ವ್ಯತ್ಯಾಸ
ಕೋವಿಡ್‌ 19 ಹಾಗೂ ಎಚ್‌3ಎನ್‌2 ನಡುವಿನ ವ್ಯತ್ಯಾಸ

ಕಳೆದ ಕೆಲವು ದಿನಗಳಿಂದ ಜ್ವರ, ಆಯಾಸ ಹಾಗೂ ನಿರಂತರ ಕೆಮ್ಮು ಇಂತಹ ರೋಗಲಕ್ಷಣಗಳು ದೇಶದಾದ್ಯಂತ ಹಲವು ಜನರನ್ನು ಬಾಧಿಸುತ್ತಿದೆ. ಆದರೆ ಇದು ಕೋವಿಡ್‌-19 ಲಕ್ಷಣವೇ ಅಥವಾ ಎಚ್‌3ಎನ್‌2 ಆಗಿರಬಹುದೇ? ಎಂಬುದನ್ನು ಕಂಡುಕೊಳ್ಳುವುದು ಪ್ರಶ್ನೆಯಾಗಿಯೇ ಇದೆ.

ಟ್ರೆಂಡಿಂಗ್​ ಸುದ್ದಿ

Personality Test: ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ

Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

National Dengue Day: ಬಿಸಿಲು-ಮಳೆಯ ನಡುವೆ ಹೆಚ್ಚಬಹುದು ಡೆಂಗ್ಯೂ ಪ್ರಕರಣ; ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ

ಸೈಲೆಂಟ್ ಕಿಲ್ಲರ್ ವಿರುದ್ಧ ಹೋರಾಡುವುದು: ಮೈಕ್ರೋ ಲ್ಯಾಬ್ಸ್ ರಾಷ್ಟ್ರವ್ಯಾಪಿ ಅಧಿಕ ರಕ್ತದೊತ್ತಡ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುತ್ತದೆ

ಇನ್ಫ್ಲುಯೆಂಜಾ ʼಎʼನ ಉಪತಳಿಯಾದ ಎಚ್‌3ಎನ್‌2 ಸೋಂಕು ಹಾಗೂ ಕೋವಿಡ್-19‌ ರೋಗಲಕ್ಷಣಗಳು ಒಂದೇ ರೀತಿ ಇವೆ. ಆದರೆ ತಜ್ಞರ ಪ್ರಕಾರ ಎಚ್‌3ಎನ್‌2 ಕಾರಣದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಇದರೊಂದಿಗೆ ಕೋವಿಡ್‌-19 ಪ್ರಕರಣದಲ್ಲೂ ಏರಿಕೆಯಾಗಿದ್ದು, ನಿನ್ನೆ (ಏಪ್ರಿಲ್‌ 13) ಒಂದೇ ದಿನದಲ್ಲಿ 10,000ಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲಾಗಿದ್ದವು.

ʼಜ್ವರದ ಲಕ್ಷಣ ಇದ್ದೂ, ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಪರೀಕ್ಷೆ ನಡೆಸಿದಾಗ ಇನ್ಫ್ಲುಯೆಂಜಾ ಪಾಸಿಟಿವ್‌ ಬರುವುದು ಸಾಮಾನ್ಯವಾಗಿದೆʼ ಎನ್ನುವುದು ತಜ್ಞರ ಮಾತು.

ಪ್ರಮುಖ ವ್ಯತ್ಯಾಸಗಳು

ಈ ಎರಡರ ನಡುವಿನ ವ್ಯತ್ಯಾಸ ತಿಳಿಯಲು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಸುರಕ್ಷಿತ ವಿಧಾನ. ರೋಗಲಕ್ಷಣಗಳನ್ನು ಅವಲಂಬಿಸಿ ವೈದ್ಯರು ಇನ್ಫ್ಲುಯೆಂಜಾ ಅಥವಾ ಕೋವಿಡ್‌-19 ಎಂಬುದು ಕಂಡು ಹಿಡಿಯಲು ಸಹಾಯ ಮಾಡುತ್ತಾರೆ, ಮಾತ್ರವಲ್ಲ ಅದಕ್ಕೆ ಅನುಗುಣವಾಗಿ ಪರೀಕ್ಷೆಗಳನ್ನು ಸೂಚಿಸಬಹುದು.

ದೆಹಲಿ ಮೂಲದ ಹಿರಿಯ ವೈದ್ಯರಾದ ಡಾ. ರಾಹುಲ್‌ ರೋಶನ್‌ ʼಈ ಎರಡೂ ವೈರಸ್‌ಗಳು ಪ್ರಧಾನವಾಗಿ ಉಸಿರಾಟಕ್ಕೆ ಸಂಬಂಧಿಸಿದ ರೋಗಲಕ್ಷಣಗಳನ್ನು ಹೊಂದಿರುತ್ತವೆ. ಜ್ವರ ಕೂಡ ಸಾಮಾನ್ಯವಾಗಿರುತ್ತದೆ. ಆದರೆ ಕೋವಿಡ್‌-19 ಇರುವವರಲ್ಲಿ ವಾಸನೆ ಹಾಗೂ ರುಚಿ ಗ್ರಹಿಕೆ ಸಾಧ್ಯವಾಗುವುದಿಲ್ಲʼ ಎನ್ನುತ್ತಾರೆ.

ಇನ್ಫ್ಲುಯೆಂಜಾವು ಸಾಮಾನ್ಯವಾಗಿ ವಯಸ್ಸಾದವರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ಕೋವಿಡ್‌-19 ಎಲ್ಲಾ ವಯಸ್ಸಿನವರಲ್ಲೂ ಒಂದೇ ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತದೆ. ಇನ್ಫ್ಲುಯೆಂಜಾ ಸೋಂಕಿಗೆ ಒಳಗಾದ ವ್ಯಕ್ತಿಯಲ್ಲಿ 1 ರಿಂದ 4ದಿನಗಳವರೆಗೆ ರೋಗಲಕ್ಷಣಗಳಿರುತ್ತವೆ, ಆದರೆ ಕೋವಿಡ್‌-19 ಸಂದರ್ಭದಲ್ಲಿ ರೋಗಲಕ್ಷಣಗಳು ಗಮನಕ್ಕೆ ಬರಲು 2 ರಿಂದ 14 ದಿನಗಳು ಬೇಕಾಗಬಹುದು.

ದೆಹಲಿ ಮೂಲದ ಆಸ್ಪತ್ರೆಯ ರೆಸ್ಪಿರೇಟರಿ ಮೆಡಿಸಿನ್‌ ವಿಭಾಗದ ಹಿರಿಯ ಸಲಹೆಗಾರ ಡಾ. ಸನ್ನಿ ಕಲ್ರಾ ಅವರ ಪ್ರಕಾರ ʼಕೋವಿಡ್‌-19 ವೇಗವಾಗಿ ರೂಪಾಂತರಗೊಳ್ಳುತ್ತದೆ ಮತ್ತು ಶ್ವಾಸಕೋಶದ ಮೇಲೆ ಆಕ್ರಮಣ ಮಾಡುತ್ತದೆ, ಆದರೆ ಇನ್ಫ್ಲುಯೆಂಜಾವು ಸ್ವಲ್ಪ ತಡವಾಗಿ ಪರಿಣಾಮ ಬೀರಬಹುದುʼ ಎನ್ನುತ್ತಾರೆ.

ʼಕೆಮ್ಮು ಸಾಮಾನ್ಯ ಲಕ್ಷಣವಾಗಿದೆ. ಆದರೆ ಇನ್ಫ್ಲುಯೆಂಜಾ ಸಂದರ್ಭದಲ್ಲಿ ಕೆಮ್ಮು ಹೆಚ್ಚಿರುತ್ತದೆ, ಅಲ್ಲದೆ ಇದು ರೋಗಿಗಳನ್ನು ಹೆಚ್ಚು ದಣಿಸುತ್ತದೆ. ಆದರೆ ಕೋವಿಡ್‌-19 ಸಂದರ್ಭದಲ್ಲಿ ಕೆಮ್ಮು ತುಲನಾತ್ಮಕವಾಗಿ ಸೌಮ್ಯವಾಗಿರುತ್ತದೆʼ ಎನ್ನುತ್ತಾರೆ ತಜ್ಞರು.

ಮೆರೆಂಗೋ ಏಷ್ಯಾ ಆಸ್ಪತ್ರೆಯ ವೈದ್ಯ ಡಾ. ಸಂಜೀವ್‌ ದತ್ತಾ ʼಎಚ್‌3ಎನ್‌2 ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ತೀವ್ರ ಜ್ವರ, ಸೀನುವಿಕೆ, ಒಣಕೆಮ್ಮು ಹಾಗೂ ಗಂಟಲುನೋವಿನಿಂದ ಇದು ಪ್ರಾರಂಭವಾಗುತ್ತದೆ. ಇನ್ನು ಕೋವಿಡ್‌-19 ವಿಚಾರದಲ್ಲಿ ಜ್ವರ, ಕೆಮ್ಮುವಿನ ಜೊತೆಗೆ ದೇಹದ ನೋವು, ತಲೆನೋವು, ಕಿರಿಕಿರಿ, ಆಲಸ್ಯ ಮತ್ತು ನಂತರ ಸೌಮ್ಯರೂಪದಲ್ಲಿ ಕೆಮ್ಮ ಕಿಬ್ಬೊಟ್ಟೆಗೆ ಸಂಬಂಧಿಸಿದ ವಾಕರಿಕೆ, ವಾಂತಿ ಹಾಗೂ ಬಾಯಿರುಚಿ ಇಲ್ಲಿದೇ ಇರುವುದು ಇಂತಹ ರೋಗಲಕ್ಷಣಗಳು ಕಾಣಿಸಬಹುದುʼ ಎನ್ನುತ್ತಾರೆ.

ಆರೋಗ್ಯ ಕಾಪಾಡಿಕೊಳ್ಳಲು ಸಮರ್ಪಕ ಆಹಾರ ಸೇವಿಸಿ

ಪ್ರೊಟೀನ್‌ ಸಮೃದ್ಧವಾಗಿರುವ, ಆರೋಗ್ಯಕರ ಕೊಬ್ಬಿನಾಂಶ ಇರುವ, ಸ್ವಲ್ಪ ಪ್ರಮಾಣದಲ್ಲಿ ಉತ್ತಮ ಕೊಬ್ಬಿನಾಂಶ ಇರುವ ಆಹಾರ ಹಾಗೂ ವಿಟಮಿನ್‌ಯುಕ್ತ ಸಂಪೂರ್ಣ ಆಹಾರ ಸೇವನೆ ಅಗತ್ಯ.

ಪೌಷ್ಟಿಕ ತಜ್ಞೆ ತೃಪ್ತಿ ಟಂಡನ್‌ ಅವರ ಪ್ರಕಾರ ʼನಿಂಬೆಹಣ್ಣಿನಂತಹ ವಿಟಮಿನ್‌ ಸಿ ಅಂಶ ಸಮೃದ್ಧವಾಗಿರುವ ಹಣ್ಣು ಅಥವಾ ತರಕಾರಿಯನ್ನು ದಿನಕ್ಕೊಂದರಂತೆ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಆದರೆ ಈ ಅಭ್ಯಾಸವನ್ನು ರೋಗ ತಗುಲಿದಾಗ ಮಾತ್ರವಲ್ಲ, ವರ್ಷವಿಡೀ ಅನುಸರಿಸಬೇಕುʼ ಎನ್ನುತ್ತಾರೆ.

ಅವರ ಪ್ರಕಾರ ಹಣ್ಣಿನ ಜ್ಯೂಸ್‌ಗಳಿಂತ ಹಣ್ಣಿನ ಸೇವನೆ ಉತ್ತಮ. ʼಒಂದು ಗ್ಲಾಸ್‌ ಜ್ಯೂಸ್‌ಗೆ ಎರಡರಿಂದ ಮೂರು ಹಣ್ಣುಗಳನ್ನು ಬಳಸಿರುತ್ತೇವೆ. ಇದು ದೇಹದಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹೆಚ್ಚಲು ಕಾರಣವಾಗಬಹುದು. ಇದು ಅತಿಯಾದರೆ ಮಧುಮೇಹಕ್ಕೂ ಕಾರಣವಾಗಬಹುದು. ಇದರೊಂದಿಗೆ ಹಣ್ಣು ತಿನ್ನುವುದರಿಂದ ಸಕ್ಕರೆ ಅಂಶ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇರುವುದಿಲ್ಲ, ಅಲ್ಲದೆ ನಾರಿನಾಂಶ ದೇಹಕ್ಕೆ ಸೇರಲು ಇದು ಸಹಕಾರಿ. ಇದಲ್ಲದೆ, ಪ್ರತಿನಿತ್ಯ ಎಳನೀರು, ಒಣಹಣ್ಣು ದ್ವಿದಳ ಧಾನ್ಯಗಳು ಹಾಗೂ ಮೊಳಕೆಕಾಳುಗಳ ಸೇವನೆ ಉತ್ತಮʼ ಎನ್ನುತ್ತಾರೆ ತೃಪ್ತಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು