logo
ಕನ್ನಡ ಸುದ್ದಿ  /  ಜೀವನಶೈಲಿ  /  Diwali 2022 Sweet Recipe: ಈ ದೀಪಾವಳಿಗೆ ಮಕ್ಕಳಿಗೆ ಇಷ್ಟವಾಗೋ ‘ಫೇಣಿ ಖೀರ್‌’ ಒಮ್ಮೆ ಮಾಡಿ ನೋಡಿ; ಮಾಡಲು ಬೇಕು ಕೇವಲ ನಾಲ್ಕೇ ಐಟಂ..

Diwali 2022 Sweet Recipe: ಈ ದೀಪಾವಳಿಗೆ ಮಕ್ಕಳಿಗೆ ಇಷ್ಟವಾಗೋ ‘ಫೇಣಿ ಖೀರ್‌’ ಒಮ್ಮೆ ಮಾಡಿ ನೋಡಿ; ಮಾಡಲು ಬೇಕು ಕೇವಲ ನಾಲ್ಕೇ ಐಟಂ..

HT Kannada Desk HT Kannada

Oct 15, 2022 12:30 PM IST

google News

ಈ ದೀಪಾವಳಿಗೆ ಮಕ್ಕಳಿಗೆ ಇಷ್ಟವಾಗೋ ‘ಫೇಣಿ ಖೀರ್‌’ ಒಮ್ಮೆ ಮಾಡಿ ನೋಡಿ; ಮಾಡಲು ಬೇಕು ಕೇವಲ ನಾಲ್ಕೇ ಐಟಂ..

    • ಕಡಿಮೆ ಸಮಯದಲ್ಲಿ, ಸ್ವಾದಿಷ್ಟವಾದ ಖಾದ್ಯವನ್ನು ಮಾಡಲು ಬಯಸಿದರೆ ಫೇಣಿ ಖೀರ್‌ ಅತ್ಯುತ್ತಮ ಆಯ್ಕೆ. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ, ಅವರಿಗೂ ಈ ರೆಸಿಪಿ ತುಂಬ ಇಷ್ಟವಾಗುವುದರಲ್ಲಿ ಎರಡನೇ ಮಾತಿಲ್ಲ.
ಈ ದೀಪಾವಳಿಗೆ ಮಕ್ಕಳಿಗೆ ಇಷ್ಟವಾಗೋ ‘ಫೇಣಿ ಖೀರ್‌’ ಒಮ್ಮೆ ಮಾಡಿ ನೋಡಿ; ಮಾಡಲು ಬೇಕು ಕೇವಲ ನಾಲ್ಕೇ ಐಟಂ..
ಈ ದೀಪಾವಳಿಗೆ ಮಕ್ಕಳಿಗೆ ಇಷ್ಟವಾಗೋ ‘ಫೇಣಿ ಖೀರ್‌’ ಒಮ್ಮೆ ಮಾಡಿ ನೋಡಿ; ಮಾಡಲು ಬೇಕು ಕೇವಲ ನಾಲ್ಕೇ ಐಟಂ..

How To Make Pheni Kheer: ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ. ಈಗಾಗಲೇ ಸಿದ್ಧತೆಯೂ ಜೋರಾಗಿದೆ. ಮನೆಯ ಶುಚಿ ಕೆಲಸ ಮುಗಿಸಿ, ನಿತ್ಯದ ಪೂಜೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಇದೇ ಹಬ್ಬದ ಈ ದಿನಗಳಲ್ಲಿ ಮನೆಯಲ್ಲಿ ನಿತ್ಯ ಒಂದಲ್ಲ ಒಂದು ಸಿಹಿ ತಿನಿಸು ಇದ್ದದ್ದೇ. ಹಾಗಾದರೆ, ಈ ಹಬ್ಬದ ಸಮಯದಲ್ಲಿ ನೀವೇಕೆ ಈ ರೆಸಿಪಿಯೊಂದನ್ನು ಟ್ರೈ ಮಾಡಬಾರದು. ಇದರ ಹೆಸರು ಫೇಣಿ ಖೀರ್.‌

ಕಡಿಮೆ ಸಮಯದಲ್ಲಿ, ಸ್ವಾದಿಷ್ಟವಾದ ಖಾದ್ಯವನ್ನು ಮಾಡಲು ಬಯಸಿದರೆ ಫೇಣಿ ಖೀರ್‌ ಅತ್ಯುತ್ತಮ ಆಯ್ಕೆ. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ, ಅವರಿಗೂ ಈ ರೆಸಿಪಿ ತುಂಬ ಇಷ್ಟವಾಗುವುದರಲ್ಲಿ ಎರಡನೇ ಮಾತಿಲ್ಲ. ಹಾಗಾದರೆ, ಈ ಫೇಣಿ ಖೀರ್‌ ಮಾಡುವುದು ಹೇಗೆ? ಇದನ್ನು ಮಾಡಲು ಬೇಕಾಗುವ ಸಾಮಾಗ್ರಿ ಮತ್ತು ಮಾಡುವ ವಿಧಾನ ಇಲ್ಲಿದೆ.

ಫೇಣಿ ಖೀರ್ ಮಾಡಲು ಬೇಕಾಗುವ ಸಾಮಾಗ್ರಿಗಳು-

1/2 ಕಪ್ ಫೇಣಿ

2 ಕಪ್ ಹಾಲು

ರುಚಿಗೆ ಸಕ್ಕರೆ

1 ಟೀಸ್ಪೂನ್ ಸಿಪ್ಪೆ ತೆಗೆದ ಬಾದಾಮಿ

ಫೇಣಿ ಖೀರ್ ಮಾಡುವುದು ಹೇಗೆ?

- ಫೇಣಿ ಖೀರ್ ಮಾಡಲು, ಮೊದಲು ಒಂದು ಪಾತ್ರೆಯಲ್ಲಿ ಹಾಲು ಸುರಿಯಿರಿ.

- ನಂತರ ಮಧ್ಯಮ ಉರಿಯಲ್ಲಿ ಸುಮಾರು 3-4 ನಿಮಿಷಗಳ ಕಾಲ ಕುದಿಸಿ.

- ಇದರ ನಂತರ, ನಿಮಗೆಷ್ಟು ಸಿಹಿ ಬೇಕೋ ಅಷ್ಟು ಸಕ್ಕರೆ ಸೇರಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತೆ ಹಾಲು ಕೆಲ ನಿಮಿಷ ಕುದಿಸಿ

- ನಂತರ ನೀವು ಅದಕ್ಕೆ ಸಿಪ್ಪೆ ಸುಲಿದ ಬಾದಾಮಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 1 ನಿಮಿಷ ಕುದಿಸಿ

- ಬಳಿಕ ಆ ಕುದಿಯುವ ಹಾಲಿಗೆ ಫೇಣಿಯನ್ನು ಸೇರಿಸಿ.

- ನಂತರ ನೀವು ಅದನ್ನು ಸುಮಾರು 5 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ ಮತ್ತು ಗ್ಯಾಸ್ ಆಫ್ ಮಾಡಿ.

- ಈಗ ನಿಮ್ಮ ರುಚಿಕರ ಫೇಣಿ ಖೀರ್ ಸಿದ್ಧ.

- ನಂತರ ನೀವು ಅದನ್ನು ಫ್ರಿಜ್‌ನಲ್ಲಿ ತಣ್ಣಗಾಗಿಸಿ ಮತ್ತು ಗೋಡಂಬಿಯಿಂದ ಅಲಂಕರಿಸಿ ಸೇವಿಸಿ..

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ