logo
ಕನ್ನಡ ಸುದ್ದಿ  /  ಜೀವನಶೈಲಿ  /  ಗುಪ್ತಚರ ದಳದ 660 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಗೃಹ ಸಚಿವಾಲಯ; ನೇಮಕಾತಿಯ ಸಂಪೂರ್ಣ ವಿವರ ಇಲ್ಲಿದೆ

ಗುಪ್ತಚರ ದಳದ 660 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಗೃಹ ಸಚಿವಾಲಯ; ನೇಮಕಾತಿಯ ಸಂಪೂರ್ಣ ವಿವರ ಇಲ್ಲಿದೆ

Raghavendra M Y HT Kannada

Apr 01, 2024 09:36 AM IST

google News

ಗುಪ್ತಚರ ದಳದಲ್ಲಿ ಖಾಲಿ ಇರುವ 660 ಹುದ್ದೆಗಳ ಭರ್ತಿಗೆ ಗೃಹ ಸಚಿವಾಲಯ ಅರ್ಜಿ ಆಹ್ವಾನಿಸಿದೆ.

    • ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿಬರುವ ಗುಪ್ತಚರ ದಳದಲ್ಲಿ ಖಾಲಿ ಇರುವ ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರವನ್ನು ಇಲ್ಲಿ ನೀಡಲಾಗಿದೆ.
ಗುಪ್ತಚರ ದಳದಲ್ಲಿ ಖಾಲಿ ಇರುವ 660 ಹುದ್ದೆಗಳ ಭರ್ತಿಗೆ ಗೃಹ ಸಚಿವಾಲಯ ಅರ್ಜಿ ಆಹ್ವಾನಿಸಿದೆ.
ಗುಪ್ತಚರ ದಳದಲ್ಲಿ ಖಾಲಿ ಇರುವ 660 ಹುದ್ದೆಗಳ ಭರ್ತಿಗೆ ಗೃಹ ಸಚಿವಾಲಯ ಅರ್ಜಿ ಆಹ್ವಾನಿಸಿದೆ.

ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಪ್ರತಿಷ್ಠಿತ ಭದ್ರತಾ ಸಂಸ್ಥೆಯಾಗಿರುವ ಗುಪ್ತಚರ ದಳದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ (ACIO) ಯಿಂದ ಹಿಡಿದು ವೈಯಕ್ತಿಕ ಸಹಾಯಕ (PA) ವರೆಗೆ ವಿವಿಧ ವಿಭಾಗಗಳ ಒಟ್ಟು 660 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವೇತನ, ಶೈಕ್ಷಣಿಕ ಅರ್ಹತೆ, ಹುದ್ದೆಗಳು ಸೇರಿ ನೇಮಕಾತಿಗೆ ಸಂಬಂಧಿಸಿ ಪ್ರಮುಖ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಎಸಿಐಒ, ಜಿಯೊ, ಎಸ್ಎ ಮತ್ತು ಇತರ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಿ. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸುವ ಮೂಲಕ ಅರ್ಜಿ ಸಲ್ಲಿಸಬಹುದು. ಉದ್ಯೋಗ ಸುದ್ದಿಯಲ್ಲಿ ಜಾಹೀರಾತು ಪ್ರಕಟವಾದ ದಿನಾಂಕದಿಂದ 60 ದಿನಗಳೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಂದರೆ ಅರ್ಜಿ ಸಲ್ಲಿಕೆಗೆ 2 ತಿಂಗಳ ಕಾಲಾವಕಾಶ ಇರುತ್ತದೆ.

ಗುಪ್ತಚರ ದಳದಲ್ಲಿ ಖಾಲಿ ಇರುವ ಹುದ್ದೆಗಳ ವಿವರ

  • ACIO-I/Exe: 80 ಹುದ್ದೆಗಳು (ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ)
  • ACIO-II/Exe: 136 ಹುದ್ದೆಗಳು
  • JIO-I/Exe: 120 ಹುದ್ದೆಗಳು (ಕಿರಿಯ ಗುಪ್ತಚರ ಅಧಿಕಾರಿ)
  • JIO-II/Exe: 170 ಹುದ್ದೆಗಳು
  • SA/Exe: 100 ಹುದ್ದೆಗಳು
  • JIO-II/Tech: 8 ಹುದ್ದೆಗಳು
  • ACIO-II/ಸಿವಿಲ್ ವರ್ಕ್ಸ್: 3 ಹುದ್ದೆಗಳು
  • JIO-I/MT: 22 ಹುದ್ದೆಗಳು
  • ಹಲ್ವಾಯಿ-ಕಮ್-ಕುಕ್: 10 ಹುದ್ದೆಗಳು

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬಹುದು.

ಗುಪ್ತಚರ ದಳದಲ್ಲಿ ಖಾಲಿ ಇರುವ ಹುದ್ದೆಗಳು ಹಾಗೂ ಇತರೆ ಮಾಹಿತಿ

ಖಾಲಿ ಹುದ್ದೆಗಳ ಸಂಖ್ಯೆ: 660

ಅರ್ಹತೆ: ಶೈಕ್ಷಣಿನ ಅರ್ಹತೆಗಳು ಹುದ್ದೆಗಳ ಆಧಾರದ ಮೇಲೆ ಬದಲಾಗುತ್ತವೆ

ವಯೋಮಿತಿ: 18 ರಿಂದ 56 ವರ್ಷ

ಆಯ್ಕೆ ಪ್ರಕ್ರಿಯೆ: ಮೆರಿಟ್ ಪಟ್ಟಿ, ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ

ಅರ್ಜಿ ಪ್ರಕ್ರಿಯೆ: ಆಫ್‌ಲೈನ್ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 2024ರ ಏಪ್ರಿಲ್ 12 ಶುಕ್ರವಾರ ಅರ್ಜಿ ಸಲ್ಲಿಕೆಗೆ ಕೊನೆಯ ದಿನ

ಅರ್ಜಿ ಶುಲ್ಕ: ಅರ್ಜಿ ಸಲ್ಲಿಕೆಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತವಾಗಿದೆ

ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-i ಗೆ ಸಂಬಂಧಿಸಿದಂತೆ 80 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ಪದವಿ ಪೂರ್ಣಗೊಳಿಸಿರಬೇಕು. ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-ii 136 ಹುದ್ದೆಗಳು ಖಾಲಿ ಇದ್ದು, ಇದಕ್ಕೂ ಪದವಿಯಾಗಿರಬೇಕು. ಕಿರಿಯ ಗುಪ್ತಚರ ಅಧಿಕಾರಿ-i 120 ಹುದ್ದೆಗಳಿದ್ದು, 10ನೇ ತರಗತಿ ಉತ್ತೀರ್ಣ, ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-ii 170 ಹುದ್ದೆಗಳಿದ್ದು, 10ನೇ ತರಗತಿ ಪೂರ್ಣಗೊಳಿಸಿರಬೇಕು.

ಭದ್ರತಾ ಸಹಾಯಕ ವಿಭಾಗದ 100 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಉತ್ತೀರ್ಣರಾಗಿರಬೇಕು. ಜೂನಿಯರ್ ಇಂಟೆಲಿಜೆನ್ಸ್ಯ 8 ಹುದ್ದೆಗಳಿದ್ದು, ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಅಥವಾ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್‌ ಮತ್ತು ಗಣಿತದೊಂದಿಗೆ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು.

ಅರ್ಜಿಗಳನ್ನು ಸಲ್ಲಿಸಬೇಕಾದ ವಿಳಾಸ

ಜಂಟಿ ಉಪ ನಿರ್ದೇಶಕರು / ಜಿ -3, ಗುಪ್ತಚರ ಬ್ಯೂರೋ, ಗುಪ್ತಚರ ಬ್ಯೂರೋ, ಗೃಹ ಸಚಿವಾಲಯ. 35 ಎಸ್‌ಪಿ ಮಾರ್ಗ, ಬಾಪು ಧಾಮ್, ನವದೆಹಲಿ-110021. ಈ ವಿಳಾಸಕ್ಕೆ ಭರ್ತಿ ಮಾಡಿದ ಅರ್ಜಿಯನ್ನು ತಲುಪಬಹುದು. ಉದ್ಯೋಗ ಸುದ್ದಿಯಲ್ಲಿ ಜಾಹೀರಾತು ಪ್ರಕಟವಾದ ದಿನಾಂಕದಿಂದ 60 ದಿನಗಳ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ