logo
ಕನ್ನಡ ಸುದ್ದಿ  /  ಜೀವನಶೈಲಿ  /  Success Story: ವೈದ್ಯ ವೃತ್ತಿ ಬಿಟ್ಟು ಐಎಎಸ್‌ ಆಫೀಸರ್‌ ಆದ ಮುದ್ರಾ ಸಕ್ಸಸ್‌ ಸ್ಟೋರಿ, ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ಸ್ಫೂರ್ತಿದಾಯಕ

Success Story: ವೈದ್ಯ ವೃತ್ತಿ ಬಿಟ್ಟು ಐಎಎಸ್‌ ಆಫೀಸರ್‌ ಆದ ಮುದ್ರಾ ಸಕ್ಸಸ್‌ ಸ್ಟೋರಿ, ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ಸ್ಫೂರ್ತಿದಾಯಕ

Praveen Chandra B HT Kannada

Aug 30, 2023 06:45 AM IST

Success Story: ವೈದ್ಯ ವೃತ್ತಿ ಬಿಟ್ಟು ಐಎಎಸ್‌ ಆಫೀಸರ್‌ ಆದ ಮುದ್ರಾ ಸಕ್ಸಸ್‌ ಸ್ಟೋರಿ

    • UPSC Success Story: ಆಲ್‌ ಇಂಡಿಯಾ ರಾಕಿಂಗ್‌ನಲ್ಲಿ 53ನೇ ಸ್ಥಾನ ಪಡೆದ ಐಎಎಸ್‌ ಮುದ್ರಾ ಗೈರೊಲಾ (IAS Mudra Gairola) ಸಕ್ಸಸ್‌ ಸ್ಟೋರಿ ಕೂಡ ಸ್ಪೂರ್ತಿದಾಯಕ. ವಿಶೇಷವೆಂದರೆ, ಇವರು ವೈದ್ಯವೃತ್ತಿ ಬಿಟ್ಟು ಐಎಎಸ್‌ ಆಯ್ಕೆ ಮಾಡಿಕೊಂಡವರು.
Success Story: ವೈದ್ಯ ವೃತ್ತಿ ಬಿಟ್ಟು ಐಎಎಸ್‌ ಆಫೀಸರ್‌ ಆದ ಮುದ್ರಾ ಸಕ್ಸಸ್‌ ಸ್ಟೋರಿ
Success Story: ವೈದ್ಯ ವೃತ್ತಿ ಬಿಟ್ಟು ಐಎಎಸ್‌ ಆಫೀಸರ್‌ ಆದ ಮುದ್ರಾ ಸಕ್ಸಸ್‌ ಸ್ಟೋರಿ (Instagram IAS Mudra Gairola)

ಭಾರತದಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆಯುವವರಿಗೆ ಹಲವು ಯಶೋಗಾಥೆಗಳು ಸ್ಪೂರ್ತಿ ತುಂಬುತ್ತವೆ. ಇದೇ ರೀತಿ ಆಲ್‌ ಇಂಡಿಯಾ ರಾಕಿಂಗ್‌ನಲ್ಲಿ 53ನೇ ಸ್ಥಾನ ಪಡೆದ ಐಎಎಸ್‌ ಮುದ್ರಾ ಗೈರೊಲಾ (IAS Mudra Gairola) ಸಕ್ಸಸ್‌ ಸ್ಟೋರಿ ಕೂಡ ಸ್ಪೂರ್ತಿದಾಯಕ. ವಿಶೇಷವೆಂದರೆ, ಇವರು ವೈದ್ಯವೃತ್ತಿ ಬಿಟ್ಟು ಐಎಎಸ್‌ ಆಯ್ಕೆ ಮಾಡಿಕೊಂಡವರು. ಮೆಡಿಕಲ್‌ ವಿದ್ಯಾರ್ಥಿಯಾಗಿದ್ದ ಇವರು ಐಎಎಸ್‌ ಆಗಿ ಆಯ್ಕೆಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಳೆಗಾಲದಲ್ಲಿ ಕೇರಳಕ್ಕೆ ಟ್ರಿಪ್‌ ಹೋಗುವ ಪ್ಲಾನ್‌ ಇದ್ರೆ, ಈ 10 ಸಾಂಪ್ರದಾಯಿಕ ತಿನಿಸುಗಳನ್ನು ಟೇಸ್ಟ್‌ ಮಾಡದೇ ಬರಬೇಡಿ

Yoga Asanas: ತೂಕ ಇಳಿಯುವ ಜೊತೆಗೆ ದೇಹ ಫಿಟ್‌ ಆಗಿರಬೇಕಾ? ಈ ಸರಳ ಯೋಗಾಸನಗಳನ್ನ ಮನೆಯಲ್ಲೇ ಅಭ್ಯಾಸ ಮಾಡಿ

ಡಯಾಬಿಟಿಸ್‌ ಬಗ್ಗೆ ಚಿಂತೆ ಬೇಡ; ಸಕ್ಕರೆ ಮಟ್ಟವನ್ನು ನಿಯಂತ್ರಿಸಿ, ಆರೋಗ್ಯ ಕಾಪಾಡಿಕೊಳ್ಳಲು ಮಧುಮೇಹಿಗಳು ತಪ್ಪದೇ ಪಾಲಿಸಬೇಕಾದ ನಿಯಮಗಳಿವು

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಕರ್ಣಪ್ರಯಾಗ್‌ ಮೂಲದ ಇವರು ಐಎಎಸ್‌ ಅಧಿಕಾರಿಯಾಗಬೇಕೆಂಬ ಕನಸಿನಲ್ಲಿ ತನ್ನ ಮೆಡಿಕಲ್‌ ಅಧ್ಯಯನವನ್ನು ಬಿಟ್ಟರು. ತನ್ನ ಅಪ್ಪನಂತೆ ತಾನೂ ಐಎಎಸ್‌ ಅಧಿಕಾರಿಯಾಗಬೇಕೆಂದು ಕನಸು ಕಂಡರು. ಈ ರೀತಿಯ ಮೊದಲ ಪ್ರಯತ್ನದಲ್ಲಿ ಇವರು ಯಶಸ್ಸು ಕಾಣಲಿಲ್ಲ. ಸಂದರ್ಶನದ ಹಂತದಲ್ಲಿ ಫೇಲ್‌ ಆದರು.

ತನ್ನ ತಂದೆಯಂತೆ ಐಎಎಸ್‌ ಅಧಿಕಾರಿಯಾಗಬೇಕೆಂದರೆ ಸಾಕಷ್ಟು ಸಮಯವನ್ನು ಅಧ್ಯಯನಕ್ಕೆ ನೀಡಬೇಕೆಂದು ಅವರಿಗೆ ಅರಿವಾಯಿತು. ತನ್ನ ಮೆಡಿಕಲ್‌ ಅಧ್ಯಯನವನ್ನು ಬಿಟ್ಟು ಯುಪಿಎಸ್‌ಸಿ ಅಧ್ಯಯನ ಆರಂಭಿಸಿದರು. ಶಾಲಾ ಕಾಲೇಜು ಹಂತದಲ್ಲಿಯೇ ಇವರು ರಾಂಕ್‌ ಸ್ಟುಡೆಂಟ್‌. ಆದರೆ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಗೆಲುವು ಸುಲಭವಾಗಿರಲಿಲ್ಲ.

ಡಿಎನ್‌ಎ ವರದಿ ಪ್ರಕಾರ ಇಂಟರ್‌ಮೀಡಿಯೆಟ್‌ ಮುಗಿಸಿದ ಬಳಿಕ ಇವರು ಬಿಡಿಎಸ್‌ ಅಂದರೆ ಬ್ಯಾಚುಲರ್‌ ಆಫ್‌ ಡೆಂಟಲ್‌ ಸರ್ಜರಿ ಕೋರ್ಸ್‌ ಆಯ್ಕೆ ಮಾಡಿಕೊಂಡರು. ಮುಂಬೈ ಮೆಡಿಕಲ್‌ ಕಾಲೇಜಿನಲ್ಲಿ ಓದುತ್ತ ಬಿಡಿಎಸ್‌ನಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡರು. ಪದವಿ ಮುಗಿಸಿದ ಬಳಿಕ ಅವರು ದೆಹಲಿಗೆ ಮರಳಿದರು. ಎಂಡಿಎಸ್‌ಗೆ ಪ್ರವೇಶ ಪಡೆದರು. ಆದರೆ, ಇವರ ತಂದೆಗೆ ತನ್ನ ಮಗಳು ಐಎಎಸ್‌ ಅಧಿಕಾರಿಯಾಗಬೇಕೆಂಬ ಕನಸಿತ್ತು.

ಇವರಿಗೂ ಮನಸ್ಸಿನಲ್ಲಿ ಐಎಎಸ್‌ ಅಧಿಕಾರಿಯಾಗಬೇಕೆಂಬ ಕನಸಿತ್ತು. ವೈದ್ಯಕೀಯ ವೃತ್ತಿಯ ಮೇಲೂ ಆಸೆ ಇತ್ತು. ಕೊನೆಗೆ ಐಎಎಸ್‌ ಕನಸಿಗೆ ಒತ್ತು ನೀಡಿದರು. ತನ್ನ ಎಂಡಿಎಸ್‌ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸಿದರು. ಮೊದಲ ಪ್ರಯತ್ನದಲ್ಲಿ ಸಂದರ್ಶನ ಹಂತದಲ್ಲಿ ವಿಫಲರಾದರು. 2019ರಲ್ಲಿ ಮರಳಿ ಯತ್ನವ ಮಾಡಿದರು. ಆದರೆ, ಅಂತಿಮ ಸುತ್ತಿನಲ್ಲಿ ವಿಫಲವಾದರು.

ಮತ್ತೆ 2020ರಲ್ಲಿ ಪ್ರಯತ್ನ ನಡೆಸಿದರು. ಆದರೆ, ಈ ಸಮಯದಲ್ಲಿ ಮೇನ್‌ ಪರೀಕ್ಷೆ ಪಾಸ್‌ ಆಗಲು ಇವರಿಂದ ಸಾಧ್ಯವಾಗಿಲ್ಲ. 2021ರಲ್ಲಿ ಮತ್ತೆ ಪ್ರಯತ್ನ ನಡೆಸಿದರು. 165ನೇ ರಾಂಕ್‌ ಪಡೆದರು. ಆದರೆ, ಈ ರಾಂಕ್‌ ಪಡೆದರೆ ಐಪಿಎಸ್‌ ಅಧಿಕಾರಿಯಾಗಬಹುದು, ಐಎಎಸ್‌ ಅಧಿಕಾರಿಯಾಗಲು ಸಾಧ್ಯವಿಲ್ಲ. ಹೀಗಾಗಿ, 2022ರಲ್ಲಿ ಮತ್ತೆ ಯುಪಿಎಸ್‌ಸಿ ಪರೀಕ್ಷೆ ಬರೆದರು. ಈ ಬಾರಿ 53ನೇ ರಾಂಕ್‌ ಪಡೆದರು ಐಎಎಸ್‌ ಆಫೀಸರ್‌ ಆಗಿ ಆಯ್ಕೆಯಾದರು.

ಮೆಡಿಕಲ್‌ ವಿದ್ಯಾರ್ಥಿಯಾಗಿದ್ದರೂ, ಶಾಲಾ ಕಾಲೇಜುಗಳಲ್ಲಿ ರಾಂಕ್‌ ಪಡೆದಿದ್ದರೂ ಇವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಹಲವು ವರ್ಷ ಕಾಯಬೇಕಾಯಿತು. ಹಲವು ವೈಫಲ್ಯಗಳನ್ನು ಕಾಣಬೇಕಾಯಿತು. ಆದರೆ, ಯಶಸ್ಸಿನತ್ತ ಲಕ್ಷ್ಯವಿಟ್ಟ ಇವರು ಹಲವು ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿಫಲವಾದರೂ ಕೊನೆಗೆ ಯಶಸ್ಸು ಪಡೆದು ಐಎಎಸ್‌ ಅಧಿಕಾರಿಯಾದರು.

    ಹಂಚಿಕೊಳ್ಳಲು ಲೇಖನಗಳು