logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಾರ್ಚ್‌ 7 ರಿಂದ ಯುಪಿಎಸ್‌ಸಿಯ 1930 ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ; ಲಿಂಕ್ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ

ಮಾರ್ಚ್‌ 7 ರಿಂದ ಯುಪಿಎಸ್‌ಸಿಯ 1930 ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ; ಲಿಂಕ್ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ

Raghavendra M Y HT Kannada

Mar 03, 2024 03:09 PM IST

ಮಾರ್ಚ್ 7 ರಿಂದ ಯುಪಿಎಸ್‌ಸಿಯ 1,930 ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದೆ.

    • UPSC Recruitment 2024: ನರ್ಸಿಂಗ್ ಆಫೀಸರ್ ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿ ಮುಂದಾಗಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮಾರ್ಚ್ 7 ರಿಂದ upsconline.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಮಾರ್ಚ್ 7 ರಿಂದ ಯುಪಿಎಸ್‌ಸಿಯ 1,930 ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದೆ.
ಮಾರ್ಚ್ 7 ರಿಂದ ಯುಪಿಎಸ್‌ಸಿಯ 1,930 ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದೆ.

ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ upsconline.nic.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನೌಕರರ ರಾಜ್ಯ ವಿಮಾ ನಿಗಮದಲ್ಲಿ 1,930 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಗುರುವಾರದಿಂದ (ಮಾರ್ಚ್ 7, 2024) ಪ್ರಾರಂಭವಾಗುತ್ತದೆ. ಮಾರ್ಚ್ 27ರ ಬುಧವಾರ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳನ್ನು ಇಲ್ಲಿ ತಿಳಿಯೋಣ.

ಟ್ರೆಂಡಿಂಗ್​ ಸುದ್ದಿ

Yoga Asanas: ತೂಕ ಇಳಿಯುವ ಜೊತೆಗೆ ದೇಹ ಫಿಟ್‌ ಆಗಿರಬೇಕಾ? ಈ ಸರಳ ಯೋಗಾಸನಗಳನ್ನ ಮನೆಯಲ್ಲೇ ಅಭ್ಯಾಸ ಮಾಡಿ

ಡಯಾಬಿಟಿಸ್‌ ಬಗ್ಗೆ ಚಿಂತೆ ಬೇಡ; ಸಕ್ಕರೆ ಮಟ್ಟವನ್ನು ನಿಯಂತ್ರಿಸಿ, ಆರೋಗ್ಯ ಕಾಪಾಡಿಕೊಳ್ಳಲು ಮಧುಮೇಹಿಗಳು ತಪ್ಪದೇ ಪಾಲಿಸಬೇಕಾದ ನಿಯಮಗಳಿವು

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

ಯುಪಿಎಸಿ 1,930 ನರ್ಸಿಂಗ್ ಆಫೀಸರ್‌ಗಳ ನೇಮಕಾತಿಗೆ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮಾರ್ಚ್ 7, 2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 27, 2024

ತಿದ್ದುಪಡಿ ವಿಂಡೋ: ಮಾರ್ಚ್ 28 ರಿಂದ ಏಪ್ರಿಲ್ 3, 2024.

ಯುಪಿಎಸಿ 1,930 ನರ್ಸಿಂಗ್ ಆಫೀಸರ್‌ಗಳ ಹುದ್ದೆಗಳಿಗೆ ಅರ್ಹತಾ ಮಾನದಂಡಗಳು

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿವರವಾದ ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬಹುದು.

ಯುಪಿಎಸಿ 1,930 ನರ್ಸಿಂಗ್ ಆಫೀಸರ್‌ಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್ upsconline.nic.in ಭೇಟಿ ನೀಡಿ
  • ಮುಖಪುಟದಲ್ಲಿ ಲಭ್ಯವಿರುವ ಯುಪಿಎಸ್‌ಸಿ ನರ್ಸಿಂಗ್ ಆಫೀಸರ್ ನೇಮಕಾತಿ 2024 ಲಿಂಕ್ ಅನ್ನು ಕ್ಲಿಕ್ ಮಾಡಿ
  • ಹೊಸ ಪುಟ ತೆರೆಯುತ್ತದೆ, ಅಲ್ಲಿ ಅಭ್ಯರ್ಥಿಗಳು ತಮ್ಮ ಹೆಸರನ್ನ ನೋಂದಾಯಿಸಿಕೊಳ್ಳಬೇಕು
  • ನೋಂದಣಿ ಮಾಡಿಕೊಂಡ ನಂತರ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ
  • ಅರ್ಜಿ ಶುಲ್ಕವನ್ನು ಪಾವತಿಸಿ
  • ಶಲ್ಕ ಪಾವತಿಸಿದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ

ಇದನ್ನೂ ಓದಿ: ಉದ್ಯೋಗ ಸಂದರ್ಶನದಲ್ಲಿ ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಬೇಕಾ; ನಿಮ್ಮ ರೆಸ್ಯೂಮ್‌ನಲ್ಲಿ ಈ 7 ಪವರ್‌ಫುಲ್ ಪದಗಳು ಇರಲಿ

ಹೆಚ್ಚಿನ ಅಗತ್ಯಕ್ಕಾಗಿ ಅರ್ಜಿಸಲ್ಲಿಸಿದ ಹಾರ್ಡ್ ಕಾಪಿಯೊಂದನ್ನು ಡೌನ್‌ಲೋಡ್ ಮಾಡಿ ನಿಮ್ಮ ಬಳಿ ಇರಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ ಅನ್ನು ಪರಿಶೀಲಿಸಿ.

ಬಿಎಂಟಿಸಿಯಲ್ಲಿ 2,500 ಕಂಡಕ್ಟರ್‌ಗಳ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ-ಬಿಎಂಟಿಸಿಯಲ್ಲಿ 2500 ಕಂಡಕ್ಟರ್‌ಗಳ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಮಾರ್ಚ್ 10 ರಿಂದ ನಿರ್ವಾಹಕ ಹುದ್ದೆಗಳಿಗೆ (ಗ್ರೇಡ್ 3) ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿಲ್ 10 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದಾಗಿದ್ದು, ಒಟ್ಟು 2500 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಉತೀರ್ಣರಾಗಿ ಹುದ್ದೆಗೆ ಆಯ್ಕೆಯಾಗುವ ನಿರ್ವಾಹಕರಿಗೆ ಪ್ರತಿ ತಿಂಗಳು 18,660-25,300 ರೂಪಾಯಿವರೆಗೆ ವೇತನನ್ನು ನೀಡಲಾಗುತ್ತದೆ. ಬಿಎಂಟಿಸಿ ನೇಮಕಾತಿ ಅಧಿಸೂಚನೆ 2024 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ. ಅಭ್ಯರ್ಥಿ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂಬುದನ್ನು ಖಚಿತ ಪಡಿಸಿಕೊಂಡು ಅರ್ಜಿ ಸಲ್ಲಿಸಿ.

    ಹಂಚಿಕೊಳ್ಳಲು ಲೇಖನಗಳು